ಕಿಂಗ್ ಖಾನ್ ಶಾರುಖ್ ಖಾನ್ ಪಠಾಣ್ ಸಕ್ಸಸ್‌ ಬಳಿಕ ಜವಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜವಾನ್ ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಶಾರುಖ್ ಖಾನ್‌ಗೆ ತಮಿಳು ಕಲಿಸಿದ್ದಾರೆವಿಜಯ್ ಸೇತುಪತಿ. ಈ ಬಗ್ಗೆ ಶಾರುಖ್ ಪ್ರತಿಕ್ರಿಯೆ ನೀಡಿದ್ದಾರೆ. 

ಕಿಂಗ್ ಖಾನ್ ಶಾರುಖ್ ಖಾನ್ ಪಠಾಣ್ ಸಕ್ಸಸ್‌ ಬಳಿಕ ಜವಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಜವಾನ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಟ್ರೈಲರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಶಾರುಖ್ ಖಾನ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನೋಡಿದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ನಯನತಾರಾ, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಇಬ್ಬರ ಪಾತ್ರಗಳು ಸಹ ಕುತೂಹಲ ಹೆಚ್ಚಿದೆ. 

ಜವಾನ್ ನಲ್ಲಿ ಶಾರುಖ್ ಖಾನ್, ನಯನತಾರಾ ಮತ್ತು ದೀಪಿಕಾ ಜೊತೆಗೆ ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಯೋಗಿ ಬಾಬು ಮತ್ತು ಸುನಿಲ್ ಗ್ರೋವರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಶಾರುಖ್ ಹೈ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಆಟ್ಲೀ ಕುಮಾರ್ ಜವಾನ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ಆಟ್ಲೀ ಮೊದಲ ಬಾರಿಗೆ ಬಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಅಂದಹಾಗೆ ಈ ಸಿನಿಮಾ ಮಾಡುವಾಗ ಕಿಂಗ್ ಖಾನ್ ಶಾರುಖ್ ಖಾನ್ ಸ್ವಲ್ಪ ಸ್ವಲ್ಪ ತಮಿಳು ಕಲಿತಿರುವುದಾಗಿ ಹೇಳಿದ್ದಾರೆ. ವಿಜಯ್ ಸೇತುಪತಿ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ. ತಮಿಳಿನಲ್ಲೇ ವಿಜಯ್ ಸೇತುಪತಿ ಟ್ವೀಟ್ ಮಾಡಿದ್ದಾರೆ. ಸೇತುಪತಿ ಟ್ವೀಟ್‌ಗೆ ಶಾರುಖ್ ಪ್ರತಿಕ್ರಿಯೆ ನೀಡಿದ್ದಾರೆ. ತಮಿಳು ಕಲಿಸಿದ ವಿಜಯ್ ಸೇತುಪತಿಗೆ ಧನ್ಯವಾದ ತಿಳಿಸಿದ್ದಾರೆ. 

Jawan Prevue: ಶಾರುಖ್ ಖಾನ್ ಹೀರೋನಾ OR ವಿಲನ್ನಾ? ಮೊಟ್ಟೆ ಲುಕ್‌ನಲ್ಲಿ ಕಿಂಗ್ ಖಾನ್ ಎಂಟ್ರಿ

ಜವಾನ್ ಪ್ರಿವ್ಯೂ ರಿಲೀಸ್ ಬಳಿಕ ವಿಜಯ್ ಸೇತುಪತಿ ಮಾಡಿದ ಟ್ವೀಟ್‌ಗೆ ಶಾರುಖ್ ಖಾನ್ ಪ್ರತಿಕ್ರಿಯಿಸಿ, ವಿಜಯ್ ಸೇತುಪತಿ ಅವರೊಂದಿಗೆ ಕೆಲಸ ಮಾಡುವುದು ಗೌರವ ಎಂದಿದ್ದಾರೆ. ಜವಾನ್‌ನ ಸೆಟ್‌ಗಳಲ್ಲಿ ಸ್ವಲ್ಪ ತಮಿಳು ಕಲಿಸಿದ್ದಕ್ಕಾಗಿ ಮತ್ತು ಸೆಟ್‌ಗಳಲ್ಲಿ ರುಚಿಕರವಾದ ಆಹಾರವನ್ನು ತಂದಿದ್ದಕ್ಕಾಗಿ ಧನ್ಯವಾದ ಹೇಳಿದರು. 'ಸರ್ ನಿಮ್ಮೊಂದಿಗೆ ಕೆಲಸ ಮಾಡಿದ್ದು ಗೌರವವಾಗಿದೆ. ಸೆಟ್‌ಗಳಲ್ಲಿ ನನಗೆ ಸ್ವಲ್ಪ ತಮಿಳು ಕಲಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ನೀವು ಪಡೆದ ರುಚಿಕರವಾದ ಆಹಾರ. ಲವ್ ಯು ನನ್ಬಾ' ಎಂದು ಹೇಳಿದ್ದಾರೆ. 

ಶಾರುಖ್ ಖಾನ್ ನಿರ್ದೇಶಕ ಆಟ್ಲೀ ಕುಮಾರ್ ಮತ್ತು ಪತ್ನಿ ಪ್ರಿಯಾ ಅವರಿಗೂ ಧನ್ಯವಾದ ತಿಳಿಸಿದ್ದಾರೆ. 'ಸರ್...ಮಾಸ್. ಯು ಆರ್ ದಿ ಮ್ಯಾನ್. ಎಲ್ಲದಕ್ಕೂ ಧನ್ಯವಾದಗಳು' ಎಂದು ಹೇಳಿದ್ದಾರೆ. ಚಿತ್ರತಂಡದ ಅನೇಕರಿಗೆ ಧನ್ಯವಾದ ತಿಳಿಸಿದ್ದಾರೆ.

Scroll to load tweet…

ಅವಳಿ ಮಕ್ಕಳಿಗೆ ಪಠಾಣ್​, ಜವಾನ್​ ಎಂದು ಹೆಸರಿಡ್ಲಾ ಎಂದ ಮಹಿಳೆಗೆ ಶಾರುಖ್​ ಉತ್ತರ!

ಸದ್ಯ ಟೀಸರ್ ಮತ್ತು ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಜವಾನ್ ಸಿನಿಮಾ ಸೆಪ್ಟಂಬರ್ ನಲ್ಲಿ ತೆರೆಗೆ ಬರುತ್ತಿದೆ. ಸೆಪ್ಟಂಬರ್ 7ಕ್ಕೆ ರಿಲೀಸ್ ಆಗುತ್ತಿದೆ. ಜವಾನ್ ಸಿನಿಮಾ ಪಠಾಣ್ ಚಿತ್ರವನ್ನು ಮೀರಿಸಿ ಅತೀ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸುತ್ತಾ ಕಾದುನೋಡಬೇಕಿದೆ.