Asianet Suvarna News Asianet Suvarna News

Jawan Prevue: ಶಾರುಖ್ ಖಾನ್ ಹೀರೋನಾ OR ವಿಲನ್ನಾ? ಮೊಟ್ಟೆ ಲುಕ್‌ನಲ್ಲಿ ಕಿಂಗ್ ಖಾನ್ ಎಂಟ್ರಿ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷೆಯ ಜವಾನ್ ಪ್ರಿವ್ಯೂ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಶಾರುಖ್ ಹೀರೋನಾ OR ವಿಲನ್‌ಹಾ? ಎನ್ನುವ ಕುತೂಹಲ ಹೆಚ್ಚಾಗಿದೆ.

Shahrukh Khan starrer jawan prevue released  sgk
Author
First Published Jul 10, 2023, 3:00 PM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ತಮಿಳು ನಿರ್ದೇಶಕ ಅಟ್ಲೀ ಕಾಂಬಿನೇಷನ್‌ನ ಬಹುನಿರೀಕ್ಷೆಯ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಜವಾನ್ ಟ್ರೈಲರ್‌ಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಶಾರುಖ್ ದರ್ಶನ ನೀಡಿದ್ದಾರೆ. ಮತ್ತೆ ಮಾಸ್ ಲುಕ್ ನಲ್ಲಿ ಶಾರುಖ್ ಅಬ್ಬರಿಸಿದ್ದಾರೆ. ಜವಾನ್ ಟೀಸರ್ ನೋಡಿದ ಅಭಿಮಾನಿಗಳು ಈ ಸಿನಿಮಾ ಪಠಾಣ್ ಸಿನಿಮವನ್ನೇ ಮೀರಿಸುವಂತಿದೆ ಎಂದು ಹೇಳುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಜವಾನ್ ಪ್ರಿವ್ಯೂ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಟಾಪ್ ಟ್ರೆಂಡಿಂಗ್‌ನಲ್ಲಿದೆ. ಶಾರುಖ್ ಜೊತೆಗೆ ನಯನತಾರಾ, ದೀಪಿಕಾ ಪಡುಕೋಣೆ ಮತ್ತು ಪ್ರಿಯಮಣಿ ಕೂಡ ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
 
ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯದಲ್ಲಿ 'ಜವಾನ್’ ಸಿನಿಮಾ ಮೂಡಿಬಂದಿದೆ. ಇದು ಆಟ್ಲೀ ನಿರ್ದೇಶನದ ಮೊದಲ ಬಾಲಿವುಡ್ ಸಿನಿಮಾ. ಈ ಮೂಲಕ ಆಟ್ಲೀ ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಮೊದಲ ಬಾಲಿವುಡ್​ ಸಿನಿಮಾದಲ್ಲೇ ಅಬ್ಬರಿಸಲಿದ್ದಾರೆ ಎನ್ನುವುಕ್ಕೆ ‘ಜವಾನ್’ಪ್ರಿವ್ಯೂ ನೋಡಿದ್ರೆ ಗೊತ್ತಾಗುತ್ತಿದೆ. ಅಂದಹಾಗೆ ಜವಾನ್ ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ.

ಸದ್ಯ ರಿಲೀಸ್ ಆಗಿರುವ ಪ್ರಿವ್ಯೂ ನೋಡಿದ್ರೆ ಶಾರುಖ್ ಖಾನ್ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಇಲ್ಲಿ ವಿಲನ್‌ಹಾ ಅಥವಾ ಹೀರೋನಾ ಎನ್ನುವುದು ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆಕ್ಷನ್ ದೃಶ್ಯಗಳು ಹೆಚ್ಚಾಗಿದ್ದು ಪಠಾಣ್ ಬಳಿಕ ಮತ್ತೆ ಶಾರುಖ್ ಮಾಸ್ ಲುಕ್ ನಲ್ಲೇ ದರ್ಶನ ನೀಡಿದ್ದಾರೆ. ಇನ್ನು ‘ಜವಾನ್’ ಸಿನಿಮಾದ ಟೈಟಲ್ ಹೇಳುವಂತೆ ಇದೊಂದು ಯೋಧನ ಕಥೆ. ನಯನತಾರಾ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಮಾಸ್ ಹಿಟ್ ಕೊಡೋಕೆ ಶಾರುಖ್ ಖಾನ್ ಅವರು ಸಿದ್ಧವಾಗಿದ್ದು ಅಟ್ಲಿ ಅವರ ನಿರ್ದೇಶನದ ಮೇಲೂ ಭರವಸೆ ಮೂಡಿದೆ.

Jawan Teaser; ಶಾರುಖ್ ನೋಡಿ ಫ್ಯಾನ್ಸ್ ಫಿದಾ, ಕನ್ನಡದಲ್ಲೂ ಬರ್ತಿದೆ ಕಿಂಗ್ ಖಾನ್- ಅಟ್ಲೀ ಸಿನಿಮಾ

ಅಂದಹಾಗೆ ಜವಾನ್ ಸಿನಿಮಾದಲ್ಲಿ ಮೂವರು ನಟಿಯರು ಮಿಂಚಿದ್ದಾರೆ. ನಯನತಾರಾ, ಪ್ರಿಯಾಮಣಿ ಮತ್ತು ದೀಪಿಕಾ ಪಡುಕೋಣೆ. ಮೂವರು ನಟಿಯರು ಯಾವ ಪಾತ್ರ ಮಾಡಿದ್ದಾರೆ. ಶಾರುಖ್‌ಗೆ ಜೋಡಿಯಾಗಿ ಯಾರು ಕಾಣಿಸಿಕೊಂಡಿದ್ದಾರೆ ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

Jawaan; ಹಾಲಿವುಡ್ ಸಿನಿಮಾ ಕದ್ದಿದ್ದಾರಾ ಅಟ್ಲೀ? ಶಾರುಖ್ ಹೊಸ ಚಿತ್ರದ ಲುಕ್ ಹಿಗ್ಗಾಮುಗ್ಗಾ ಟ್ರೋಲ್

ಸದ್ಯ ಟೀಸರ್ ಮತ್ತು ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಜವಾನ್ ಸಿನಿಮಾ ಸೆಪ್ಟಂಬರ್ ನಲ್ಲಿ ತೆರೆಗೆ ಬರುತ್ತಿದೆ. ಸೆಪ್ಟಂಬರ್ 7ಕ್ಕೆ ರಿಲೀಸ್ ಆಗುತ್ತಿದೆ. ಜವಾನ್ ಸಿನಿಮಾ ಪಠಾಣ್ ಚಿತ್ರವನ್ನು ಮೀರಿಸಿ ಅತೀ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸುತ್ತಾ ಕಾದುನೋಡಬೇಕಿದೆ.  

Latest Videos
Follow Us:
Download App:
  • android
  • ios