Asianet Suvarna News Asianet Suvarna News

ಆಗ ಹೇಮಾ ಮಾಲಿನಿ, ಈಗ ರಾಣಿ ಮುಖರ್ಜಿ: ಶಾರುಖ್​ ಖಾನ್​ ಜಂಟಲ್​ಮ್ಯಾನ್​ ಅಂದ ಫ್ಯಾನ್ಸ್

 ಹಿಂದೆ ಹೇಮಾಮಾಲಿನಿ ಹಾಗೂ ಈಗ  ರಾಣಿ ಮುಖರ್ಜಿಯವರು ವೇದಿಕೆಯ ಮೇಲೆ ಎಡವಿ ಬೀಳುವುದರಿಂದ ತಡೆದ ನಟ ಶಾರುಖ್​ ಖಾನ್​ಗೆ ಶ್ಲಾಘನೆಗಳ ಮಹಾಪೂರ
 

Shah Rukh Khan helped  Hema Malini and  Rani Mukherjee from falling down suc
Author
First Published Oct 20, 2023, 9:49 PM IST

2015ರ ಸಿನಿಮಾ ಪ್ರಶಸ್ತಿ ಸಮಾರಂಭವದು.   21 ನೇ ಸ್ಕ್ರೀನ್ ಅವಾರ್ಡ್ಸ್ ಸಮಯದಲ್ಲಿ, ಹೇಮಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗುಲಾಬಿ ಬಣ್ಣದ ಸೀರೆಯಲ್ಲಿ ನಟಿ ಹೇಮಾ ಮಾಲಿನಿ ಕಂಗೊಳಿಸುತ್ತಿದ್ದರು. ಹೈಹೀಲ್ಸ್​ ಧರಿಸಿ ವೇದಿಕೆಯ ಮೇಲೆ ಏರುತ್ತಿದ್ದಂತೆಯೇ ಅವರ ಚಪ್ಪಲ್​ ಕಳಚಿಬಿತ್ತು. ಅವರು ಎಡವಿದರು. ಇನ್ನೇನು ಬೀಳುತ್ತಿದ್ದರು. ಆಗ ಅವರ ರಕ್ಷಣೆಗೆ ಅವರ ಹಿಂದೆಯೇ ಇದ್ದ ನಟನೊಬ್ಬ ಓಡೋಡಿ ಬಂದರು. ಚಪ್ಪಲಿಯನ್ನು ಎತ್ತಿದರು, ನಟಿ ಎಡವುದನ್ನು ತಪ್ಪಿಸಿದರು. ಚಪ್ಪಲಿ ಎತ್ತಿ ಅವರ ಹತ್ತಿರ ಇಟ್ಟರು... ಈ ನಟ ಬೇರಾಲ್ಲೂ ಅಲ್ಲ, ಬಾಲಿವುಡ್​​ ಬಾದ್​ಶಾಹ್​ ಶಾರುಖ್​ ಖಾನ್​!

ಮೊನ್ನೆ ಇದೇ ರೀತಿಯ ಘಟನೆ ಮತ್ತೆ ಮರುಕಳಿಸಿತು. ‘ಕುಚ್ ಕುಚ್ ಹೋತಾ ಹೈ (Kuch Kuch Hota Hai) ಚಿತ್ರ ಬಿಡುಗಡೆಯಾಗಿ 25 ವರ್ಷಗಳ ಸಂತಸಕ್ಕಾಗಿ ಇದೇ 16ರಂದು ನಡೆದ ಸಮಾರಂಭದಲ್ಲಿಯೂ ಇದೇ ರೀತಿ ಆಯಿತು. ಈ ಚಿತ್ರದಲ್ಲಿ ನಟ ಶಾರುಖ್​, ರಾಣಿ ಮುಖರ್ಜಿ ಮತ್ತು ಕಾಜೋಲ್​ ನಟಿಸಿದ್ದರು. ಇವರೆಲ್ಲರೂ ಅಂದು ಉಪಸ್ಥಿತರಿದ್ದರು. ರಾಣಿ ಮುಖರ್ಜಿ ಸೀರೆ ಉಟ್ಟಿದ್ದರಾದರೂ ಅವರ ಸೆರಗು ಸಿಕ್ಕಾಪಟ್ಟೆ ಉದ್ದ ಇತ್ತು. ವೇದಿಕೆ ಮೇಲೆ ಹತ್ತುವಾಗ ಅವರು ಎಡವಬಹುದು ಎನ್ನುವ ಕಾರಣಕ್ಕೆ ನಟ ಶಾರುಖ್​ ಖಾನ್​ ಅವರ ಸೀರೆಯ ಸೆರಗನ್ನು ಹಿಡಿದುಕೊಂಡೇ ನಟಿ ಬೀಳದಂತೆ ಕಾಪಾಡಿದರು. ಆಗ ಮೈಮೇಲೆ ಪರಿವೇ ಇಲ್ಲದ್ದಕ್ಕೆ ನಟಿ ರಾಣಿ ಮುಖರ್ಜಿ ಟ್ರೋಲ್​ ಆದರೂ ನಟ ಶಾರುಖ್​ ಅವರನ್ನು ಅಭಿಮಾನಿಗಳು ಹಾಡಿ ಕೊಂಡಾಡಿದರು. 

ಹೇಮಾಮಾಲಿನಿ @75: ಶಾರುಖ್​ ಖಾನ್​ರನ್ನು ರಿಜೆಕ್ಟ್​ ಮಾಡಿದ್ದ ಕನಸಿನ ಕನ್ಯೆಯ ಇಂಟರೆಸ್ಟಿಂಗ್​ ವಿಷ್ಯ ರಿವೀಲ್​!

 ಇದು ಶಾರುಖ್​ ಖಾನ್​ ಅವರ ಔದಾರ್ಯವನ್ನು ತೋರಿಸುತ್ತದೆ ಎಂದೇ ಹೇಳಲಾಗುತ್ತಿದೆ. ಸನ್ನಿವೇಶ ಯಾವುದೇ ಇರಲಿ, ಅದು ಶೂಟಿಂಗ್​ ಸ್ಪಾಟೇ ಆಗಿರಲಿ ಅಥವಾ ಹೊರಗಡೆಯ ಯಾವುದೇ ಕಾರ್ಯಕ್ರಮವಾಗಿರಲಿ... ನಟ ಶಾರುಖ್​ ಖಾನ್​ ತಮ್ಮ ಸುತ್ತಲೂ ಇರುವ ಮಹಿಳೆಯರ ಮೇಲೆ ಅಪಾರ ಕಾಳಜಿ ತೋರುತ್ತಾರೆ, ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆ ಎನ್ನುವ ಮಾತು ಸಿನಿ ಜಗತ್ತಿನಲ್ಲಿ ಸದಾ ಕೇಳಿಬರುತ್ತದೆ. ಈ ಎರಡು ಉದಾಹರಣೆಗಳನ್ನು ಇಟ್ಟುಕೊಂಡು ನಟನ ಫ್ಯಾನ್ಸ್​ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹಾಡಿ ಹೊಗಳುತ್ತಿದ್ದಾರೆ. ಕಿಂಗ್​ ಖಾನ್​ ಎಂದು ಕರೆಯುವುದು ಸುಮ್ಮನೇ ಅಲ್ಲ, ಅವರು ನಿಜವಾದ ಹೀರೋ ಎಂದು ಹೇಳುತ್ತಿದ್ದಾರೆ. 

 ಹೇಮಾಮಾಲಿನಿಯವರ ವಿಷಯದಲ್ಲಿ ಅಂದು ಅವರಿಗೆ  ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ಶಾರುಖ್​ ಖಾನ್​ ಅವರೇ ಪ್ರದಾನ ಮಾಡಿದ್ದರು. ಅವರಿಂದ ಪ್ರಶಸ್ತಿ ಸ್ವೀಕರಿಸುವುದು ಮಾತ್ರವಲ್ಲದೇ ಎಡವಿದ್ದರಿಂದ ಬಚಾವ್​ ಮಾಡಿದ್ದಕ್ಕೆ ಶ್ಲಾಘನೆ ಹಾಗೂ ಧನ್ಯವಾದ ಸಲ್ಲಿಸಿದ್ದ ನಟಿ,  ನೀನು ಇಷ್ಟು ದೊಡ್ಡ ರೀತಿಯಲ್ಲಿ, ದೊಡ್ಡ ರೀತಿಯಲ್ಲಿ ಬೆಳೆದಿದ್ದೀರಿ ಎಂದು ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ. ನಿನಗೆ ನನ್ನ ಆಶೀರ್ವಾದ ಎಂದು ಹೇಮಾ ಮಾಲಿನಿ ಹೇಳಿದ್ದರು. ಅಷ್ಟಕ್ಕೂ ಬಾಲಿವುಡ್​ಗೆ ಎಂಟ್ರಿ ಕೊಡುವ ಪೂರ್ವದಲ್ಲಿ ಶಾರುಖ್​ ಅವರು ಆಡಿಷನ್​ನಲ್ಲಿ ಹೆದರಿದ್ದರಿಂದ ಅವರ ಆಡಿಷನ್​ ಪಡೆಯುತ್ತಿದ್ದ ನಟಿ ಹೇಮಾ ಮಾಲಿನಿ ಅವರನ್ನು ರಿಜೆಕ್ಟ್​ ಮಾಡಿದ್ದರು! ಇದನ್ನು ಖುದ್ದು ನಟಿಯೇ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. 

ರಾಣಿ ಮುಖರ್ಜಿಯ ಸೆರಗು ಹಿಡಿದ ಶಾರುಖ್​: ದೇಹ ಪ್ರದರ್ಶನದಿಂದ ಬಚಾವ್​ ಮಾಡಿದ್ರಿ ಎಂದ ಫ್ಯಾನ್ಸ್​!
 

Follow Us:
Download App:
  • android
  • ios