Asianet Suvarna News Asianet Suvarna News

ರಾಣಿ ಮುಖರ್ಜಿಯ ಸೆರಗು ಹಿಡಿದ ಶಾರುಖ್​: ದೇಹ ಪ್ರದರ್ಶನದಿಂದ ಬಚಾವ್​ ಮಾಡಿದ್ರಿ ಎಂದ ಫ್ಯಾನ್ಸ್​!

ಕುಚ್​ ಕುಚ್​ ಹೋತಾ ಹೈ ಚಿತ್ರದ 25ನೇ ವರ್ಷದ ಉತ್ಸವಕ್ಕೆ ಆಗಮಿಸಿದ್ದ ನಟಿ ರಾಣಿ ಮುಖರ್ಜಿಯವರ ಸೆರಗನ್ನು ಹಿಡಿದುಕೊಂಡಿರುವ ಶಾರುಖ್​ ಅವರ ವಿಡಿಯೋ ವೈರಲ್​ ಆಗಿದೆ. ಫ್ಯಾನ್ಸ್​ ಏನಂದ್ರು?
 

Kuch Kuch Hota Hai screening SRK holds Ranis pallu netizens react suc
Author
First Published Oct 16, 2023, 11:46 AM IST

ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ? ಫಂಕ್ಷನ್​ಗಳಿಗೆ ಹೋಗುವಾಗ ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್​ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್​ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್​ ಆಗಿ ಸಕತ್​ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್​ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್​ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.
 
ಇಲ್ಲೊಂದು ಫಂಕ್ಷನ್​ನಲ್ಲಿ ಇದೇ ರೀತಿ ಆಗಿದೆ. ಇಲ್ಲಿ ಬಾಲಿವುಡ್​ ನಟಿ ರಾಣಿ ಮುಖರ್ಜಿ ಸರಳವಾದ ಸೀರೆ ತೊಟ್ಟು ಸುಂದರಿಯಾಗಿಯೇ ಕಾಣಿಸುತ್ತಾರೆಯಾದರೂ ಅವರ ಸೆರಗು ಮಾತ್ರ ಅತಿ ಉದ್ದಕ್ಕೆ ಬಿಟ್ಟುಕೊಂಡಿದ್ದರು. ಹಿಂದುಗಡೆ ಅವರ ಸೆರಗು ನೆಲವನ್ನು ಗುಡಿಸುತ್ತಾ ಹೋಗುತ್ತಿತ್ತು. ಆ ಸೆರಗಿನ ಮೇಲೆ ಯಾರಾದರೂ ಕಾಲಿಟ್ಟರೆ ಒಂದೋ ಕಾಲಿಟ್ಟವರು ಎಡವಿ ಬೀಳುತ್ತಿದ್ದರು, ಇಲ್ಲದೇ ಹೋದರೆ ನಟಿಯೇ ಎಡವಿ ವೇದಿಕೆಯ ಮೇಲೆ ಬೀಳುತ್ತಿದ್ದರು. ರಾಣಿಯವರ ಹಿಂದೆ ನಟ ಶಾರುಖ್​ ಖಾನ್​ (Shah Rukh Khan) ಬರುತ್ತಿದ್ದರು. ಅವರು ಇದನ್ನು ಗಮನಿಸಿ ರಾಣಿ ಮುಖರ್ಜಿಯವರ ಸೀರೆಯ ಸೆರಗನ್ನು ಹಿಡಿದುಕೊಂಡು ವೇದಿಕೆ ಮೇಲೆ ಏರಿದ್ದು, ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಆದರೆ ಇಷ್ಟಾದರೂ ಶಾರುಖ್​ ಖಾನ್​ ಹಿಗೆ ಮಾಡುತ್ತಿದ್ದುದು ನಟಿಯ ಗಮನಕ್ಕೆ ಬರಲೇ ಇಲ್ಲ. ಆದರೆ ಅಲ್ಲಿದ್ದವರು ಮಾತ್ರ ಅಚ್ಚರಿಯಿಂದ ಶಾರುಖ್​ ಅವರತ್ತ ದೃಷ್ಟಿ ಹಾಯಿಸುತ್ತಿದ್ದು, ಅದನ್ನು ವಿಡಿಯೋದಲ್ಲಿ ನೋಡಬಹುದು.

ಜವಾನ್ ಜೋಡಿ ಶಾರುಖ್​- ದೀಪಿಕಾಗೆ ಮಗು ಹುಟ್ಟಿಸಿದ ಫ್ಯಾನ್ಸ್​! ನಾಮಕರಣವನ್ನೂ ಮಾಡಿದ್ದಾರೆ ನೋಡಿ

ಶಾರುಖ್​ ಖಾನ್​ ಯಾವುದೇ ಬಿಗುಮಾನ, ಅಹಂ ಇಲ್ಲದೇ ಹೀಗೆ ನಟಿಯೊಬ್ಬರ ಸೀರೆ ಸೆರಗನ್ನು ಹಿಡಿದು ಬಂದಿರುವುದಕ್ಕೆ ಅವರ ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ. ಇಡೀ ಇಂಡಸ್ಟ್ರಿಯಲ್ಲಿ ಇವರಷ್ಟು ಸರಳ ವ್ಯಕ್ತಿ ಯಾರೂ ಇಲ್ಲ ಎಂದು ಹಲವರು ಬಣ್ಣಿಸಿದ್ದಾರೆ. ಇದೇ ವೇಳೆ ನಟಿಯ ಬಗ್ಗೆಯೂ ಹಲವರು ಟೀಕೆ ಮಾಡಿದ್ದಾರೆ. ಕೊನೆಯ ಪಕ್ಷ ಮೈಮೇಲಾದರೂ ಎಚ್ಚರಿಕೆ ಇರಬೇಕು, ಇಷ್ಟು ಉದ್ದ ಸೆರಗು ಬಿಟ್ಟುಕೊಂಡು ಬರುವ ಉದ್ದೇಶ ಏನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಫ್ಯಾಷನ್​ ಹೆಸರಿನಲ್ಲಿ ಹೀಗೆಲ್ಲಾ ಮಾಡಿದರೆ ಅವರಿಗೇ ತೊಂದರೆಯಾಗಬಹುದು ಇಲ್ಲವೇ ಮುಜುಗರ ಆಗುವ ಸನ್ನಿವೇಶ ಬರಬಹುದು. ಇಷ್ಟು ಸ್ವಲ್ಪ ತಿಳಿವಳಿಕೆಯೂ ಇಲ್ಲದೇ ಇರುವುದು ಅಚ್ಚರಿಯಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು ಯಾರಾದರೂ ಆಕೆಯ ಸೆರಗಿನ ಮೇಲೆ ಕಾಲಿಟ್ಟಿದ್ದರೆ ಸೆರಗು ಜಾರಿ ಎಲ್ಲಾ ಪ್ರದರ್ಶನವಾಗುತ್ತಿತ್ತು ಅಷ್ಟೇ ಎನ್ನುತ್ತಿದ್ದಾರೆ. ಹಾಗೆ ಆಗಲಿ ಎಂದೇ ಉದ್ದೇಶಪೂರ್ವಕವಾಗಿ ನಟಿ ಹೀಗೆಲ್ಲಾ ಮಾಡಿದಂತೆ ಕಾಣುತ್ತಿದೆ ಎಂದು ಅದಕ್ಕೆ ಇನ್ನು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. 

ಅಷ್ಟಕ್ಕೂ ಈ ಕಾರ್ಯಕ್ರಮ ‘ಕುಚ್ ಕುಚ್ ಹೋತಾ ಹೈ (Kuch Kuch Hota Hai) ಚಿತ್ರ ಬಿಡುಗಡೆಯಾಗಿ 25 ವರ್ಷಗಳ ಸಂತಸಕ್ಕಾಗಿ ನಡೆದದ್ದು.  ಕರಣ್ ಜೋಹರ್ ಅವರ ನಿರ್ದೇಶನದ ಮೊದಲ ಸಿನಿಮಾ ಇದು.  ಇಂದು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ  ನಿನ್ನೆ ಅಂದರೆ ಅಕ್ಟೋಬರ್ 15ರಂದು ಕೇವಲ 25 ರೂಪಾಯಿಗಳಿಗೆ ಅಭಿಮಾನಿಗಳಿಗಾಗಿ ಮುಂಬೈನಲ್ಲಿ ಮೂರು ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ  ಕರಣ್ ಜೋಹರ್ ಜತೆಗೆ ಶಾರುಖ್ ಖಾನ್‌ ಮತ್ತು ರಾಣಿ ಮುಖರ್ಜಿ ಪಾಲ್ಗೊಂಡಿದ್ದರು.  

ನಟ ಶಾರುಖ್​ ಖಾನ್​ಗೆ ಕೊಲೆ ಬೆದರಿಕೆ! ವೈ ಪ್ಲಸ್ ಭದ್ರತೆ ನೀಡಿದ ಸರ್ಕಾರ
 

Follow Us:
Download App:
  • android
  • ios