ಸಾವಿನ ಹೊಸ್ತಿಲಲ್ಲಿರೋ ಮಹಿಳೆಯ ಈ ಕೊನೆ ಆಸೆ ಈಡೇರಿಸಿದ ಶಾರುಖ್​ ಖಾನ್​

ಶಾರುಖ್​ ಖಾನ್​ ಅವರ ಅಭಿಮಾನಿ ಕ್ಯಾನ್ಸರ್​ ಪೇಷಂಟ್​ ಒಬ್ಬರ ಕೊನೆಯ ಆಸೆಯನ್ನು ನಟ ಈಡೇರಿಸಿದ್ದಾರೆ. ಏನದು? 
 

Shah Rukh Khan Fulfils Last Wish Of His 60 YO Fan Battling Cancer Performs  Video Call

ಚಿತ್ರನಟರನ್ನು ನೋಡುವ ಹಂಬಲ ಅವರ ಫ್ಯಾನ್ಸ್​ಗೆ ಇದ್ದೇ ಇರುತ್ತದೆ. ನಟರನ್ನು ಆರಾಧ್ಯ ದೈವ ಎಂದು ಪೂಜಿಸುವ ಒಂದು ವರ್ಗವಿದೆ. ಜೀವನದಲ್ಲಿ ಒಮ್ಮೆಯಾದರೂ ತಮ್ಮ ಈ ಆರಾಧ್ಯ ದೈವವನ್ನು ನೋಡುವ ಹಂಬಲ ಅವರಿಗೆ ಇರುತ್ತದೆ. ಇದೇ ಕಾರಣಕ್ಕೆ ಚಿತ್ರ ನಟ-ನಟಿಯರು ಹೋದ ಕಡೆಗಳಲ್ಲಿ ದೊಡ್ಡ ಪ್ರಮಾಣದ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ.  ಅದರಲ್ಲಿಯೂ ಕೆಲವು ಹಿಟ್​ ಚಿತ್ರಗಳನ್ನು ಕೊಟ್ಟರಂತೂ ಮುಗಿದೇ ಹೋಯ್ತು. ಅವರ ಫ್ಯಾನ್ಸ್​ ಸಂಖ್ಯೆ ಹೆಚ್ಚುತ್ತದೆ.  ಇನ್ನು ನಟ ಶಾರುಖ್​ ಖಾನ್​ (Shah Rukh Khan) ಎಂದ ಮೇಲೆ ಕೇಳಬೇಕೆ? ಇವರಿಗೆ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸಕತ್​ ಫ್ಯಾನ್ಸ್​ ಇದ್ದಾರೆ. ಇದೇ ಕಾರಣಕ್ಕೆ ಇವರನ್ನು  ಬಾಲಿವುಡ್ ಕಿಂಗ್ ಎಂದೂ ಕರೆಯಲಾಗುತ್ತದೆ. ಇವರ ಅಭಿಮಾನಿಯೊಬ್ಬ ಇವರನ್ನು ನೋಡುವ ಹಂಬಲದಿಂದ ಇತ್ತೀಚೆಗೆ ಜೀವಭಯ ತೊರೆದು ಕಾಂಪೌಂಡ್​ ಹಾರಿ ಮನೆಯೊಳಕ್ಕೆ ನುಗ್ಗಿದ್ದು ವರದಿಯಾಗಿತ್ತು.

ಅಂಥ ಅಭಿಮಾನಿಗಳನ್ನು ಶಾರುಖ್ ಹೊಂದಿದ್ದಾರೆ. ಆದರೆ ಎಲ್ಲರಿಗೂ ತಮ್ಮ ನೆಚ್ಚಿನ ನಟ-ನಟಿಯರನ್ನು ಲೈವ್ (Live) ಆಗಿ ನೋಡುವ, ಮಾತನಾಡುವ ಭಾಗ್ಯ ಸಿಗುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆಗೆ ತಮ್ಮ ನೆಚ್ಚಿನ ನಟ ಶಾರುಖ್​ ಖಾನ್​ ಅವರನ್ನು ನೋಡುವ ಆಸೆ ಕೊನೆಗೂ ಈಡೇರಿದೆ. ಖುದ್ದು ಶಾರುಖ್​ ಅವರೇ ಈ ಮಹಿಳೆಯ ಎದುರಿಗೆ ಬಂದಿದ್ದಾರೆ. ಅಷ್ಟಕ್ಕೂ ಈ ಮಹಿಳೆ ಯಾರು? ಶಾರುಖ್​  ಏಕೆ ಅವರ ಬಳಿ ಬಂದರು ಎನ್ನುವುದನ್ನು ಇಲ್ಲಿ ಹೇಳ್ತೇವೆ ಕೇಳಿ.

ಈಕೆಯ ಹೆಸರು ಶಿಬಾನಿ ಚಕ್ರವರ್ತಿ (Shibani Chakravarthy). ವಯಸ್ಸು 60. ಖರ್ದಹರ್ ದಕ್ಷಿಣ ಪಲ್ಲಿ ಕಾಳಿಮಂದಿರ್ ಪ್ರದೇಶದ ನಿವಾಸಿ ಶಿಬಾನಿ  ಶಾರುಖ್ ಖಾನ್ ಅವರ ಅಪ್ಪಟ ಅಭಿಮಾನಿ. ಶಾರುಖ್ ಖಾನ್ ಅವರ ಯಾವುದೇ ಸಿನಿಮಾ ಬಂದರೂ ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರು. ಖಾನ್ ಅವರನ್ನು ಆರಾಧಿಸುತ್ತಿದ್ದ ಶಿಬಾನಿ ಚಕ್ರವರ್ತಿ ಅವರು ಕಳೆದ ಕೆಲ ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ಸಮಯದ ಹಿಂದೆ ಕ್ಯಾನ್ಸರ್ ಕಾಯಿಲೆ ತುತ್ತಾದರು. ಇನ್ನೇನು ತಾವು ಬದುಕೋದೆ ಇಲ್ಲ ಎಂದು ವೈದ್ಯರು ಹೇಳಿದಾಗ ತಮ್ಮ ಕೊನೆಯ ಆಸೆಯಾಗಿ ಶಾರುಖ್ ಖಾನ್ ಅವರನ್ನು ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಅದೀಗ ಈಡೇರಿದೆ.

ಡ್ರಗ್ಸ್​ ಕೇಸ್​ನಲ್ಲಿ ಆರ್ಯನ್​ ಜೈಲಲ್ಲಿದ್ದಾಗ ತನಿಖಾಧಿಕಾರಿಗೆ ಶಾರುಖ್​ ಬರೆದ ಪತ್ರ ವೈರಲ್
 
ಪ್ರಿಯಾ ಚಕ್ರವರ್ತಿ ಎಂಬವವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ಅವರು ಶಾರುಖ್ ಖಾನ್ ಬಳಿ ವಿಶೇಷ ಮನವಿ ಮಾಡಿದ್ದರು. ‘ನನ್ನ ತಾಯಿಗೆ ಕ್ಯಾನ್ಸರ್. ಅವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರಿಗೆ ಈಗ 57 ವರ್ಷ ವಯಸ್ಸು. ಶಾರುಖ್​​ ಖಾನ್​ನ ಭೇಟಿ ಮಾಡಬೇಕು ಎಂಬುದು ಅವರ ಕೊನೆಯ ಆಸೆ. ಅವರಿಗೆ ಎಷ್ಟು ದಿನ ಉಳಿದಿದೆಯೋ ಗೊತ್ತಿಲ್ಲ’ ಎಂದು ಪ್ರಿಯಾ ಟ್ವೀಟ್ ಮಾಡಿದ್ದರು. ಶಾರುಖ್  ಈ ಟ್ವೀಟ್​ ನೋಡಿದರು.  ಅವರು ವಿಡಿಯೋ ಕಾಲ್ ಮೂಲಕ ಅಭಿಮಾನಿ ಜೊತೆ ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಶಾರುಖ್ ಖಾನ್ ಅವರು 30 ನಿಮಿಷಗಳ ಕಾಲ ಕ್ಯಾನ್ಸರ್ ರೋಗಿ ಬಳಿ ಮಾತನಾಡಿದ್ದಾರೆ. ಈ ಮೂಲಕ ಅವರು ಕೊನೆಯ ಆಸೆ ಈಡೇರಿಸಿದ್ದಾರೆ.  
 
ಶಾರುಖ್ ಅವರ  ಜೊತೆ ಮಾತನಾಡಿದ್ದರಿಂದ ಪುಳಕಿತಗೊಂಡ ಶಿಬಾನಿ ಅವರು, ಇದು ಕನಸೋ ನನಸೋ ಎಂದು ರೋಮಾಂಚನಗೊಂಡಿದ್ದಾರೆ. ತುಂಬಾ ಆತ್ಮೀಯವಾಗಿ ಮಾತನಾಡಿದ ಶಾರುಖ್, ಶಿಬಾನಿ ಅವರಿಗೆ ಎಲ್ಲಾ ರೀತಿಯ ಆರ್ಥಿಕ ಸಹಾಯ ಮಾಡುವ ವಿಶ್ವಾಸ ನೀಡಿದ್ದಾರೆ. ಅಲ್ಲದೇ, ಅವಕಾಶ ಸಿಕ್ಕರೆ ಭೇಟಿಯಾಗುವುದಾಗಿಯೂ ಹೇಳಿದ್ದಾರೆ ಎಂದು ಶಿಬಾನಿ ಕುಟುಂಬಸ್ಥರು ಹೇಳಿದ್ದಾರೆ. ಇದೇ ವೇಳೆ ಶಿಬಾನಿಗೆ ಬೇಯಿಸಿದ ಮೀನಿನ ಸಾಂಬಾರ್​  (Fish Curry)ತಿನ್ನುವಂತೆ ಶಾರುಖ್​  ಸಲಹೆ ನೀಡಿದ್ದಾರೆ. ತಮ್ಮ ಮಗಳು ಪ್ರಿಯಾಳ ಮದುವೆಯ ಆಸೆಯನ್ನು ಶಿಬಾನಿ ದೇವಿ ವ್ಯಕ್ತಪಡಿಸಿದಾಗ, ಶಾರುಖ್  ತಾವೂ ಮದುವೆಯಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದ್ದಾರೆ.  ಶಾರುಖ್ ಮಾತು ಕೇಳಿ ಶಿಬಾನಿ ದೇವಿಗೆ ಸಂತಸದಿಂದ ಕಣ್ಣೀರು ತಡೆಯಲಾಗಲಿಲ್ಲ.

SRK ಅಂದ್ರೆ ಶೇಖರ್​ ರಾಧಾ ಕೃಷ್ಣ ಎಂದ ನಟ ಶಾರುಖ್​ ಧರ್ಮದ ಬಗ್ಗೆ ಹೇಳಿದ್ದೇನು?

ಸದ್ಯ ಶಾರುಖ್ ಖಾನ್ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳಿಗೆ ತೋರಿಸಿರುವ ಪ್ರೀತಿ ಕಂಡು ಶಾರುಖ್ ಖಾನ್ ಖುಷಿ ಆಗಿದ್ದಾರೆ.
 

Latest Videos
Follow Us:
Download App:
  • android
  • ios