Asianet Suvarna News Asianet Suvarna News

ಡ್ರಗ್ಸ್​ ಕೇಸ್​ನಲ್ಲಿ ಆರ್ಯನ್​ ಜೈಲಲ್ಲಿದ್ದಾಗ ತನಿಖಾಧಿಕಾರಿಗೆ ಶಾರುಖ್​ ಬರೆದ ಪತ್ರ ವೈರಲ್

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ನಲ್ಲಿ ಜೈಲಿನಲ್ಲಿದ್ದಾರೆ ಶಾರುಖ್​ ತನಿಖಾಧಿಕಾರಿಗೆ ಬರೆದ ಪತ್ರ ವೈರಲ್​ ಆಗಿದೆ. ಏನಿದೆ ಅದರಲ್ಲಿ?
 

Aryan will break dont let him be in that jail beg you man
Author
First Published May 19, 2023, 10:19 PM IST

ಶಾರುಖ್​ ಖಾನ್​ (Shah Rukh Khan) ಸದ್ಯ ಪಠಾಣ್​, ಜವಾನ್​ ಚಿತ್ರದ ಗೆಲುವಿನ ಹುರುಪಿನಲ್ಲಿದ್ದರೂ,  ಅವರ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿರುವ ವಿಷಯವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಈ ಘಟನೆ ನಡೆದು ಎರಡು ವರ್ಷಗಳಾಗುತ್ತಾ ಬಂದರೂ ಡ್ರಗ್ಸ್​ ಕೇಸ್​ನ ಒಂದೊಂದೇ ವಿಷಯಗಳು ಈಗ ಬೆಳಕಿಗೆ ಬರುತ್ತಿವೆ. ಅಂದ ಹಾಗೆ ಈ ಡ್ರಗ್ಸ್​ ಕೇಸ್​ 2021ರದ್ದು.  ಕ್ರೂಸ್ ಡ್ರಗ್ಸ್ ಪ್ರಕರಣ (Cruise Drugs Case) ಎಂದು ಇದು ಫೇಮಸ್​ ಆಗಿತ್ತು. ಶಾರುಖ್​ ಪುತ್ರ ಆರ್ಯನ್​ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಅವರ ಮಕ್ಕಳು ಈ ಕೇಸ್​ನಲ್ಲಿ ಸಿಲುಕಿದ್ದರಿಂದ ಇದು ಭಾರಿ ಸದ್ದು ಮಾಡಿತ್ತು.  ಈ ಘಟನೆಯಿಂದ ಶಾರುಖ್​ ಖಾನ್​ ಜರ್ಜರಿತರಾಗಿದ್ದೂ ಸುಳ್ಳಲ್ಲ. ಇಂದಿಗೂ ಇದರ ಕುರಿತು ಚರ್ಚೆಯಾಗುತ್ತಲೇ ಇದೆ. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್​ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು.  ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್​ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್​ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್​ ಕ್ಲೀನ್​ ಚಿಟ್​ ನೀಡಿತ್ತು.

ಅಂತಿಮವಾಗಿ ಅವರು ಅಕ್ಟೋಬರ್ 30 ರಂದು ತಮ್ಮ ತಂದೆಯ ಹುಟ್ಟುಹಬ್ಬದ (Birthday) ಸಮಯದಲ್ಲಿ ಜೈಲಿನಿಂದ ಹೊರಬಂದಿದ್ದರು. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶುಕ್ರವಾರ 6 ಸಾವಿರ ಪುಟಗಳ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಹಲವರು ಇನ್ನೂ ಕೇಸ್​ನಲ್ಲಿ ಒಳಗೇ ಇದ್ದರೆ, ಆರ್ಯನ್​ ಖಾನ್​ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದರು.

ಆದರೆ ಕುತೂಹಲದ ಬೆಳವಣಿಗೆಯಲ್ಲಿ,  ಆರ್ಯನ್‌ ಖಾನ್‌ಗೆ ಕ್ಲೀನ್‌ಚಿಟ್‌ (Cleanchit) ಅಂದರೆ ಅವರ ನಿರಪರಾಧಿ ಎಂದು ಸಾಬೀತು ಮಾಡಲು  ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳದ ಹಿಂದಿನ ಅಧಿಕಾರಿ ಸಮೀರ್‌ ವಾಂಖೇಡೆ 25 ಕೋಟಿ ರೂ. ಲಂಚ ಕೇಳಿದ್ದ ಗಂಭೀರ ಆರೋಪ ಕೇಳಿಬಂದಿತ್ತು.  ಡ್ರಗ್ಸ್‌ ಪ್ರಕರಣದಲ್ಲಿ ತಾವೇ ಹಿಡಿದಿದ್ದ ಆರ್ಯನ್‌ ಖಾನ್‌ಗೆ ಕ್ಲೀನ್‌ಚಿಟ್‌ ಕೊಡಿಸಲು ಸಮೀರ್‌ ವಾಂಖೇಡೆ ತಂತ್ರ ರೂಪಿಸಿದ್ದರು. ಇದಕ್ಕಾಗಿ 25 ಕೋಟಿ ರೂ. ಕೇಳಿದ್ದರು. ಡೀಲ್‌ ಅನ್ನು ಈಗಾಗಲೇ ಬಂಧಿತರಾಗಿರುವ ಮಧ್ಯವರ್ತಿ ಕೆ.ಪಿ. ಗೋಸಾವಿ ಹಾಗೂ ಸ್ಯಾನ್ವಿಲ್‌ ಡಿ’ಸೋಜಾ ಅವರ ಮೂಲಕ ಕುದುರಿಸಿದ್ದರು. ಗೋಸಾವಿ ಹಾಗೂ ಡಿ’ಸೋಜಾ ಕೊನೆಗೆ 18 ಕೋಟಿ ರೂಗೆ ಡೀಲ್‌ ಅಂತಿಮಗೊಳಿಸಿದರು ಹಾಗೂ 50 ಲಕ್ಷ ರೂ. ಟೋಕನ್‌ ಅಡ್ವಾನ್ಸ್‌ ಪಡೆದರು. ಈ ಪೈಕಿ ಕೊಂಚ ಹಣವನ್ನು ಆರ್ಯನ್‌ಗೇ ನಂತರ ಮರಳಿಸಿದ್ದರು ಎಂದು ಸಿಬಿಐ ದಾಖಲು ಮಾಡಿರುವ ಎಫ್‌ಐಆರ್​ನಲ್ಲಿ ಹೇಳಲಾಗಿದೆ.

ಶಾರುಖ್​ ಪುತ್ರನ ಡ್ರಗ್ಸ್​ ಕೇಸ್: ಕೊನೆಗೂ ಮೌನ ಮುರಿದ ಮಾಡೆಲ್​ ಮುನ್ಮುನ್ ಧಮೇಚಾ!

ಇದು ಒಂದೆಡೆಯಾದರೆ, ಮೊನ್ನೆಯಷ್ಟೇ ಮಾಡೆಲ್​ ಮುನ್ಮುನ್ ಧಮೇಚಾ (Munmun Dhamecha) ಅವರೂ ಈ ವಿಷಯವಾಗಿ ಮಾತನಾಡಿದ್ದರು.  ಪ್ರಕರಣದಲ್ಲಿ ಮಾಧ್ಯಮಗಳ ಗಮನ ಸೆಳೆಯುವ ಉದ್ದೇಶದಿಂದ  ವಾಂಖೆಡೆ ಸೆಲೆಬ್ರಿಟಿಗಳ ಮೇಲೆ ಡ್ರಗ್ಸ್​ ಆರೋಪ ಮಾಡಿದ್ದಾರೆ. ತಾನು ಮಾಡೆಲ್ ಎನ್ನುವ ಕಾರಣಕ್ಕೆ ನನ್ನ ವಿರುದ್ಧವೂ ಡ್ರಗ್ಸ್​ ಆರೋಪ ಮಾಡಿದ್ದಾರೆ ಎಂದು ಮುನ್ಮುನ್​ಹೇಳಿದ್ದರು. ವಾಂಖೆಡೆ ದೊಡ್ಡ ಅಧಿಕಾರಿಯಾಗಿದ್ದರಿಂದ ನಾನು ಹೇಳಲು ಭಯಪಟ್ಟಿದ್ದೆ.  ಈ ವಿವರಗಳನ್ನು ಬಹಿರಂಗಪಡಿಸಲು ಇಷ್ಟವಿರಲಿಲ್ಲ. ಈಗ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದು, ಸತ್ಯಾಂಶ ಹೊರಬರುವ ಭರವಸೆ ನನಗಿದೆ. ಅವರು ಕೇವಲ ಮಾಧ್ಯಮ ಪ್ರಚಾರಕ್ಕಾಗಿ ನನ್ನಂತಹ ಅನೇಕ ವ್ಯಕ್ತಿಗಳನ್ನು ತಪ್ಪಾಗಿ ಸಿಲುಕಿಸಿದ್ದಾರೆ. ವಾಂಖೆಡೆಯವರು ಮಾಡೆಲ್‌ಗಳು ಮತ್ತು ಸೆಲೆಬ್ರಿಟಿಗಳನ್ನು ನಿರಂತರವಾಗಿ ಗುರಿಯಾಗಿಸಿಕೊಂಡವರು ಎಂದಿದ್ದರು.

ಇದರ ನಡುವೆಯೇ ಇದೀಗ ಆರ್ಯನ್​ ಖಾನ್​ ಜೈಲಿನಲ್ಲಿ ಇದ್ದಾಗ ಶಾರುಖ್​ ಖಾನ್​  ಸಮೀರ್​ ವಾಂಖೆಡೆ (Sameer wakhende) ಅವರಿಗೆ ಬರೆದಿರುವ ಪತ್ರ ವೈರಲ್​ ಆಗಿದೆ. ಈ ವಿಚಾರವಾಗಿ ಸಮೀರ್ ವಾಂಖೆಡೆ ಮತ್ತು ಶಾರುಖ್ ಖಾನ್ ಹಲವು ಬಾರಿ ಮಾತಾಡಿದ್ದಾರೆ. ಜೊತೆಯೇ ಅವರು ತಮ್ಮ ವಾಟ್ಸ್​ಆ್ಯಪ್​ ಚಾಟ್​ಗಳನ್ನು ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ ಅವರನ್ನು ರಕ್ಷಿಸುವಂತೆ ಸಮೀರ್ ವಾಂಖೆಡೆಗೆ ಮನವಿ ಮಾಡಿರುವ ವಿಚಾರ ಚಾಟ್​ನಿಂದ ಹೊರಬಿದ್ದಿದೆ. ಈ ಪತ್ರದಲ್ಲಿ ಶಾರುಖ್​ ಅವರು, 'ಆರ್ಯನ್, ಅಪರಾಧಿಯಂತೆ ಜೈಲಿನಲ್ಲಿರಲು ಅರ್ಹನಲ್ಲ. ದಯವಿಟ್ಟು  ನಮ್ಮ ಹುಡುಗನನ್ನು ನಿಧಾನವಾಗಿ ನಿಭಾಯಿಸಿ.  ನಾನು ಎಲ್ಲ ಸಮಯದಲ್ಲೂ ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ. ನೀವು ಒಳ್ಳೆಯದನ್ನು ಸಾಧಿಸಲು ಪ್ರಯತ್ನಿಸುತ್ತಿರುವುದದರಿಂದ  ನಿಮಗೆ ಸಹಾಯ ಮಾಡುತ್ತೇನೆ. ಎಲ್ಲಾ ರೀತಿಯಲ್ಲಿಯೂ ಸಹಕಾರ (Co operation) ಕೊಡುತ್ತೇನೆ.  ದಯವಿಟ್ಟು ನನ್ನ ಮತ್ತು ನನ್ನ ಕುಟುಂಬದ ಮೇಲೆ ಕರುಣೆ ತೋರಿ.  ನಾವು ಸರಳವಾದ ಜನರು.  ನನ್ನ ಮಗ ಸ್ವಲ್ಪ ದಾರಿ ತಪ್ಪಿದ್ದಾನೆ, ಆದರೆ ಅವನು ಕಠಿಣ ಅಪರಾಧಿಯಂತೆ ಜೈಲಿನಲ್ಲಿರಲು ಅರ್ಹನಲ್ಲ, ನಿಮಗೂ ತಿಳಿದಿದೆ. ದಯವಿಟ್ಟು ಹೃದಯವಂತರಾಗಿರಿ, ದಯವಿಟ್ಟು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ' ಎಂದು ಪತ್ರದಲ್ಲಿ ಬರೆಯಲಾಗಿದೆ. 

ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌: ಶಾರುಖ್‌ ಖಾನ್‌ ಬಳಿ 25 ಕೋಟಿ ಲಂಚ ಪಡೆಯಲು ಸಮೀರ್‌ ವಾಂಖೇಡೆ ಸಂಚು

ಮಗನನ್ನು ಉಳಿಸಿಕೊಳ್ಳಲು ತಂದೆ ಹರಸಾಹಸಪಟ್ಟಿದ್ದಾರೆ. ಶಾರುಖ್ ಮತ್ತು ಸಮೀರ್ ವಾಂಖೆಡೆ ನಡುವಿನ ಮಾತುಕತೆ ಬಾಂಬೆ ಹೈಕೋರ್ಟ್​ನಲ್ಲಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರ್ಯನ್ ಖಾನ್ ನನ್ನು ಬಂಧಿಸಿದಾಗ ಆರ್ಯನ್ ಖಾನ್ ಅವರನ್ನು ಚಾರ್ಜ್ ಶೀಟ್​ನಲ್ಲಿ ಆರೋಪಿ ದಾಖಲಾಗಿತ್ತು.

Follow Us:
Download App:
  • android
  • ios