ಶಾರುಖ್ ಪುತ್ರಿ ಸುಹಾನಾ ಹಿಡಿದಿರುವ ಬ್ಯಾಗ್ ಬೆಲೆ ಕೇಳಿದ್ರೆ ಹೌಹಾರ್ತೀರಾ
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಪುತ್ರಿ ಸುಹಾನಾ ಖಾನ್(Suhana Khan) ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಮುಂಬೈ ರಸ್ತೆಯಲ್ಲಿ ಕಾರಿನಿಂದ ಹೊರಬರುತ್ತಿರುವ ಸುಹಾನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವೈಟ್ ಕ್ರಾಪ್ ಟಾಪ್ ಮತ್ತು ಪಿಂಕ್ ಲೆಗಿನ್ಸ್ ಧರಿಸಿರುವ ಸುಹಾನಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಹೊಸ ಹೇರ್ ಸ್ಟೈಲ್‌ನಲ್ಲಿ ಸುಹಾನಾ ಮಿಂಚಿದ್ದಾರೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಪುತ್ರಿ ಸುಹಾನಾ ಖಾನ್(Suhana Khan) ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಸುಹಾನಾ ಸಿನಿಮಾ ರಿಲೀಸ್ ಆಗಿಲ್ಲ ಆದರೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿಗೆ ಐಪಿಎಲ್ ಪಂದ್ಯ ವೀಕ್ಷಣೆ ಮಾಡಲು ಹೋಗಿದ್ದ ಸುಹಾನಾ ಹಾಟ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಸುಹಾನಾ ಮತ್ತೆ ಸದ್ದು ಮಾಡುತ್ತಿದ್ದಾರೆ. ಮುಂಬೈ ರಸ್ತೆಯಲ್ಲಿ ಕಾರಿನಿಂದ ಹೊರಬರುತ್ತಿರುವ ಸುಹಾನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವೈಟ್ ಕ್ರಾಪ್ ಟಾಪ್ ಮತ್ತು ಪಿಂಕ್ ಲೆಗಿನ್ಸ್ ಧರಿಸಿರುವ ಸುಹಾನಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಹೊಸ ಹೇರ್ ಸ್ಟೈಲ್‌ನಲ್ಲಿ ಸುಹಾನಾ ಮಿಂಚಿದ್ದಾರೆ. ಕಾರಿನಿಂದ ಇಳಿದ ಸುಹಾನಾ ಗಡಿಬಿಡಿಯಲ್ಲಿ ಹೊರಟು ಹೋಗಿದ್ದಾರೆ. ಸುಹಾನಾ ನೋಡಿ ಪಾಪರಾಜಿಗಳು ಏನಿಷ್ಟು ನೆನ್ಷನ್ ಎಂದು ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ ಸುಹಾನಾ ಧರಿಸಿರುವ ಬ್ಯಾಗ್ ಎಲ್ಲರ ಗಮನ ಸೆಳೆದಿದೆ. ಸುಹಾನಾ ಹಿಡಿದಿರುವ ಬಿಳಿ ಬ್ಯಾಗ್‌ನ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಒಂದು ಬ್ಯಾಗ್‌ನ ಬೆಲೆ ಬಹುತೇಕರ ಆರು ತಿಂಗಳ ಸಂಬಳವಾಗಿದೆ. ಹೌದು, ಸುಹಾನಾ ಹಿಡಿದಿರುವ ಬ್ಯಾಗ್ ಅತ್ಯಂತ ದುಬಾರಿ ಬ್ರಾಂಡ್‌ಗಳಲ್ಲಿ ಒಂದಾಗಿರುವ ಲೂಯಿಸ್ ವಿಟಾನ್ (louis vuitton) ಕಂಪನಿಯದು. ಈ ಕಂಪನಿಯ ಹೆಸರು ಕೇಳಿದ ಮೇಲೆ ಬೆಲೆಯ ಬಗ್ಗೆ ಹೇಳಬೇಕಾಗಿಲ್ಲ, ಅಷ್ಟು ದುಬಾರಿ ಕಂಪನಿ ಇದು. ಅಂದಹಾಗೆ ಸುಹಾನಾ ಕೈಯಲ್ಲಿರುವ ಬ್ಯಾಗ್ ಬೆಲೆ 2.8 ಲಕ್ಷ ರೂಪಾಯಿ. ಸೆಲೆಬ್ರಿಟಿಗಳು ಸಾಮಾನ್ಯವಾಗಿ ಐಷಾರಾಮಿ ವಸ್ತುಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಬಟ್ಟೆ, ಚಪ್ಪಲಿ, ಬ್ಯಾಗ್, ಪರ್ಸ್ ಹೀಗೆ ಪ್ರತಿಯೊಂದು ವಿಚಾರದಲ್ಲೂ ಸೆಲೆಬ್ರಿಟಿಗಳು ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.
22 ವರ್ಷದ Shah Rukh ಪುತ್ರಿ ಬೋಲ್ಡ್‌ನೆಸ್‌ನಲ್ಲಿ ಯಾರಿಗೂ ಕಡಿಮೆ ಇಲ್ಲ!
ಸ್ಟಾರ್ ನಟನ ಮಗಳು ಅಂದ್ಮೇಲೆ ದುಬಾರಿ ಜೀವನ ಸಾಮಾನ್ಯ. ಸುಹಾನಾ ಸದ್ಯ ಜೋಯಾ ಅಕ್ತಾರ್ ಅವರ ದಿ ಆರ್ಕೀಸ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸೀರಿಸ್‌ನಲ್ಲಿ ಅನೇಕ ಸ್ಟಾರ್ ಕಿಡ್ ನಟಿಸುತ್ತಿದ್ದಾರೆ. ಸುಹಾನಾ, ಖುಷಿ ಕಪೂರ್, ಅಮಿತಾಬ್ ಬಚ್ಚನ್ ಮೊಮ್ಮಗ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಈ ಸೀರಿಸ್ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ. 2023ಗೆ ಬಿಡುಗಡೆಯಾಗುತ್ತಿದೆ ಅಲ್ಲಿವರೆಗೂ ಕಾಯಲೇಬೇಕು. ಇತ್ತೀಚಿಗಷ್ಟೆ ಈ ಸೀರಿಸ್ ಊಟಿಯಲ್ಲಿ ಚಿತ್ರೀಕರಣ ಮುಕ್ತಾಯ ಗೊಳಿಸಿದೆ. ಚಿತ್ರೀಕರಣ ಮುಗಿಸಿ ಖುಷಿ, ಸುಹಾನಾ ಮತ್ತು ಅಗಸ್ತ್ಯ ನಂದ ಮನೆಗೆ ವಾಪಾಸ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
80-90ರ ದಶಕದ ಚಿತ್ರಗಳಲ್ಲಿ ಪುರುಷರನ್ನೂ ಕೆಟ್ಟದಾಗಿ ಬೆಂಬಿಸಲಾಗುತ್ತಿತ್ತು: ಜೋಯಾ ಅಖ್ತರ್
ಶಾರುಖ್ ಖಾನ್ ಅವರ ಮಗಳು ಸುಹಾನಾ ಬಾಲ್ಯದಿಂದಲೂ ಹಿರೇನ್ ಆಗಬೇಕೆಂದು ಬಯಸಿದ್ದು, ತಂದೆಯಂತೆ ಇಂಡಸ್ಟ್ರಿಯಲ್ಲಿ ಗೌರವ ಗಳಿಸಬೇಕು ಎಂಬ ಆಸೆ ಇದೆ. ಸುಹಾನಾ ತನ್ನ ಶಾಲೆ ಮತ್ತು ಕಾಲೇಜಿನಲ್ಲಿ ನಾಟಕಗಳಲ್ಲಿಯೂ ಭಾಗವಹಿಸಿದ್ದಾಳೆ. ಅಷ್ಟೇ ಅಲ್ಲ ಕೆಲವು ಕಿರುಚಿತ್ರಗಳಲ್ಲೂ ಕೆಲಸ ಮಾಡಿರುವ ಸುಹಾನಾ ನ್ಯೂಯಾರ್ಕ್‌ನಲ್ಲಿ ಆಕ್ಟಿಂಗ್ ಕೋರ್ಸ್ ಕೂಡ ಮಾಡಿದ್ದಾಳೆ. ಶ್ರೀದೇವಿ ಯಾವಾಗಲೂ ತನ್ನ ಕಿರಿಯ ಮಗಳು ಖುಷಿ ಕಪೂರ್ ಇಂಡಸ್ಟ್ರಿಗೆ ಬರಬೇಕೆಂದು ಬಯಸುತ್ತಿದ್ದರು. ಅವರ ಕನಸು ಈಗ ನನಸಾಗಲಿದೆ ಆದರೆ ಮಗಳನ್ನು ತೆರೆಯ ಮೇಲೆ ನೋಡಲು ಅವರು ಈ ಲೋಕದಲ್ಲಿಲ್ಲ.