80-90ರ ದಶಕದ ಚಿತ್ರಗಳಲ್ಲಿ ಪುರುಷರನ್ನೂ ಕೆಟ್ಟದಾಗಿ ಬೆಂಬಿಸಲಾಗುತ್ತಿತ್ತು: ಜೋಯಾ ಅಖ್ತರ್

ಸಿನಿಮಾಗಳಲ್ಲಿ ತೋರಿಸುವ ದೃಶ್ಯಗಳು ಜನರು ಮನಸ್ಸು ಕೆಡಿಸುತ್ತದೆ. 80ರ ದಶಕದಲ್ಲಿ ಪುರುಷರನ್ನೂ ಕೆಟ್ಟದಾಗಿ ತೋರಿಸಲಾಗಿದೆ.... 

Bollywood Zoya Akhtar talks about male representation in 80 films vcs

ಬಾಲಿವುಡ್ ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ನಿರ್ದೇಶನದ ದಿ ಆರ್ಚೀಸ್‌ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಜೋಯಾ ಸಿನಿಮಾಗಳಾದ ಗಲ್ಲಿ ಬಾಯ್,ದಿಲ್ ಧಡಕ್ನೆ ದೋ ಸಂಗೀತ ಮತ್ತು ಮೇಕಿಂಗ್ ಸಿನಿ ರಸಿಕರನ್ನು ಮೆಚ್ಚಿಸಿದೆ. ಹೀಗಾಗಿ ಜೋಯಾ ಸಿನಿಮಾ ಅಂದ್ರೆ ಏನೋ ಕ್ರಿಯೇಟಿವ್ ಆಗಿರುತ್ತದೆ ಏನೋ ಡಿಫರೆನ್ಸ್‌ ಇರುತ್ತೆ ಎಂದು ಬಿ-ಟೌನ್‌ ಮಾತು. ಸಿನಿಮಾ ಪ್ರಚಾರವನ್ನು ಆರಂಭಿಸಿರುವ ಜೋಯಾ 80-90 ದಶಕದ ಚಿತ್ರರಂಗ ಹೇಗಿತ್ತು ಎಂದು ಮಾತನಾಡಿದ್ದಾರೆ. 

ಜೋಯಾ ಮಾತು:

'ಯಾವುದೇ ಪಾಪ್ಯೂಲರ್ ಕಲ್ಚರ್ ಆದರೂ ಒಬ್ಬ ಮನುಷ್ಯನ ಐಡೆಂಟಿಟಿ ಮತ್ತು ಪರ್ಸನಾಲಿಟಿನ ತೋರಿಸುವ ರೀತಿ ಮುಖ್ಯವಾಗುತ್ತದೆ. ಮಹಿಳೆಯರಿಗೆ ಮಾತ್ರ ಎಂದು ನಾನು ಹೇಳುವುದಿಲ್ಲ. ಬೇರೆ ಕಮ್ಯೂನಿಟಿಗಳಲ್ಲಿ, ವಿಕಲಾಂಗತೆಗಳು ಅನೇಕಬಾರಿ ಪುರುಷರನ್ನೂ ಕೆಟ್ಟದಾಗಿ ತೋರಿಸುತ್ತಿದ್ದರು' ಎಂದು ಜೋಯಾ ಹೇಳಿದ್ದಾರೆ.

Bollywood Zoya Akhtar talks about male representation in 80 films vcs

'80 ಮತ್ತು 90ರ ದಶಕದಲ್ಲಿ ಮೃದುತ್ವವನ್ನು ನೋಡಿಲ್ಲ, ಸಿನಿಮಾದಲ್ಲಿ ಯಾವ ಕಂಟೆನ್ಟ್‌ ಇರಲಿಲ್ಲ. ಅದೆಷ್ಟೋ ದೃಶ್ಯಗಳಲ್ಲಿ ಅವರನ್ನು ಕೆಟ್ಟದಾಗಿ ತೋರಿಸಲಾಗಿತ್ತು. ಇದರಿಂದ ಜನರ ಮನಸ್ಥಿತಿ ಹಾಳಾಗಿದೆ. ತಮ್ಮ ಭಾವನೆಗಳನ್ನು ಹೇಳಿಕೊಳ್ಳುವ ಸ್ವಾತಂತ್ರ್ಯ ಕೂಡ ಮಹಿಳೆಯರಿಗೆ ಇರಲಿಲ್ಲ, ಹೀಗಾಗಿ ಅವರನ್ನು ನೋಡುವ ರೀತಿ ಕೂಡ ಬೇರೆ ಆಗಿತ್ತು. ತೆರೆ ಮೇಲೆ ಜನರಿಗೆ ಏನು ತೋರಿಸುತ್ತೀವಿ ಅನ್ನೋದು ಮುಖ್ಯವಾಗುತ್ತದೆ. ಕೊನೆಯಲ್ಲಿ ನೀವು ಒಂಟಿ ಅಲ್ಲ ಎಂದು ತೋರಿಸಬೇಕು' ಎಂದು ದಿ ಹಿಂದು ಸಂದರ್ಶನದಲ್ಲಿ ಹೇಳಿದ್ದಾರೆ.

DEEPIKA PADUKONE ಬ್ಯಾಗೊಳಗೆ ಮ್ಯಾಜಿಕ್ ಪೆನ್ಸಿಲ್! ಅದನ್ಯಾಕೆ ಡಿಪ್ಪಿ ಬಾಯಲ್ಲಿಟ್ಟು ಕೊಳ್ತಾರೆ?

 ದಿ ಆರ್ಚೀಸ್ ಚಿತ್ರದಲ್ಲಿ ಸುಹಾನಾ ಖಾನ್ (Suhana Khan), ಖುಷಿ ಕಪೂರ್ (Khushi Kapoor) ಮತ್ತು ಅಗಸ್ತ್ಯ ನಂದಾ (Agastya Nanda) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಊಟಿಯಲ್ಲಿ ನಡೆದಿದೆ. ಚಿತ್ರದ ಚಿತ್ರೀಕರಣದ ಜೊತೆಗೆ, ಅಗಸ್ತ್ಯಾ ನಂದಾ ಚಿತ್ರದಲ್ಲಿ ಆರ್ಚಿ ಆಂಡ್ರ್ಯೂಸ್, ಖುಷಿ ಕಪೂರ್ ಬೆಟ್ಟಿ ಮತ್ತು ಸುಹಾನಾ ಖಾನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಬಹಿರಂಗಪಡಿಸಲಾಗಿದೆಈ ಚಿತ್ರದ ಚಿತ್ರೀಕರಣ ಊಟಿಯ ಸುಂದರ ಬಯಲು ಪ್ರದೇಶದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಇದಲ್ಲದೇ ಅದರ ಸುತ್ತಲಿನ ಕೆಲವು ಗಿರಿಧಾಮಗಳಲ್ಲಿ ಚಿತ್ರೀಕರಣ ನಡೆಯಲಿದೆ. 

ನಟಿ ಭಾವನಾ ಮೆನನ್‌ರಿಂದ ಕಲಿಯಬೇಕಾದ ಜೀವನ ಪಾಠಗಳಿದು!

ಶಾರುಖ್ ಖಾನ್ ಅವರ ಮಗಳು ಸುಹಾನಾ  ಬಾಲ್ಯದಿಂದಲೂ ಹಿರೇನ್ ಆಗಬೇಕೆಂದು ಬಯಸಿದ್ದು,  ತಂದೆಯಂತೆ ಇಂಡಸ್ಟ್ರಿಯಲ್ಲಿ ಗೌರವ ಗಳಿಸಬೇಕು ಎಂಬ ಆಸೆ ಇದೆ. ಸುಹಾನಾ ತನ್ನ ಶಾಲೆ ಮತ್ತು ಕಾಲೇಜಿನಲ್ಲಿ ನಾಟಕಗಳಲ್ಲಿಯೂ ಭಾಗವಹಿಸಿದ್ದಾಳೆ. ಅಷ್ಟೇ ಅಲ್ಲ ಕೆಲವು ಕಿರುಚಿತ್ರಗಳಲ್ಲೂ ಕೆಲಸ ಮಾಡಿರುವ ಸುಹಾನಾ ನ್ಯೂಯಾರ್ಕ್‌ನಲ್ಲಿ ಆಕ್ಟಿಂಗ್ ಕೋರ್ಸ್ ಕೂಡ ಮಾಡಿದ್ದಾಳೆ. ಶ್ರೀದೇವಿ ಯಾವಾಗಲೂ ತನ್ನ ಕಿರಿಯ ಮಗಳು ಖುಷಿ ಕಪೂರ್ ಇಂಡಸ್ಟ್ರಿಗೆ ಬರಬೇಕೆಂದು ಬಯಸುತ್ತಿದ್ದರು. ಅವರ ಕನಸು ಈಗ ನನಸಾಗಲಿದೆ ಆದರೆ ಮಗಳನ್ನು ತೆರೆಯ ಮೇಲೆ ನೋಡಲು ಅವರು ಈ ಲೋಕದಲ್ಲಿಲ್ಲ. 
 

Latest Videos
Follow Us:
Download App:
  • android
  • ios