Jawaan; ಹಾಲಿವುಡ್ ಸಿನಿಮಾ ಕದ್ದಿದ್ದಾರಾ ಅಟ್ಲೀ? ಶಾರುಖ್ ಹೊಸ ಚಿತ್ರದ ಲುಕ್ ಹಿಗ್ಗಾಮುಗ್ಗಾ ಟ್ರೋಲ್

ಶಾರುಖ್ ಹೊಸ ಸಿನಿಮಾ ಜವಾನ್ ಲುಕ್ ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದರು. ಆದರೆ ಲುಕ್ ರಿಲೀಸ್ ಆಗಿ ಕೆಲವೇ ಕ್ಷಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ನಿರ್ದೇಶಕ ಅಟ್ಲೀ ಕಮಾರ್ ಅವರ ಜವಾನ್ ಸಿನಿಮಾ ಹಾಲಿವುಡ್ ಸಿನಿಮಾದಿಂದ ಕಾಪಿ ಮಾಡಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

is Shah Rukh Khan Look In Jawan Is Copied From Sam Raimis Darkman sgk

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್(Shah Rukh Khan) ಮತ್ತು ತಮಿಳು ನಿರ್ದೇಶಕ ಅಟ್ಲೀ(Atlee) ಕಾಂಬಿನೇಷನ್‌ನ ಬಹುನಿರೀಕ್ಷೆಯ ಸಿನಿಮಾದ ಟೀಸರ್ ಅಂಡ್ ಟೈಟಲ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ವರ್ಷದಿಂದ ಕಾಯುತ್ತಿದ್ದರು. ಇದೀಗ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ. ಸಿನಿಮಾದ ಟೈಟಲ್ ಮತ್ತು ಶಾರುಖ್ ಲುಕ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಜೂನ್ 3 ರಂದು ಶಾರುಖ್ ಅಟ್ಲೀ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಸಿನಿಮಾಗೆ ಜವಾನ್ ಎನ್ನುವ ಟೈಟಲ್ ಫೈನಲ್ ಆಗಿದೆ.

1 ನಿಮಿಷ 30 ಸೆಕೆಂಡ್‌ನ ಜವಾನ್ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿತ್ತು. ಅನೇಕ ವರ್ಷಗಳ ಬಳಿಕ ಶಾರುಖ್ ಅಭಿಮಾನಿಗಳ ಮುಂದೆ ಬರ್ತಿದ್ದು ಶಾರುಖ್ ಹೊಸ ಲುಕ್ ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದರು. ಆದರೆ ಶಾರುಖ್ ಹೊಸ ಸಿನಿಮಾ ಇದೀಗ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ನಿರ್ದೇಶಕ ಅಟ್ಲೀ ಕಮಾರ್ ಅವರ ಜವಾನ್ ಸಿನಿಮಾ ಹಾಲಿವುಡ್ ಸಿನಿಮಾದಿಂದ ಕಾಪಿ ಮಾಡಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಜವಾನ್ ಸಿನಿಮಾದ ಶಾರುಖ್ ಲುಕ್‌ ಅನ್ನು ಹಾಲಿವುಡ್‌ನ ಕ್ಲಾಸಿಕ್ ಹಿಟ್ ಡಾರ್ಕ್‌ಮ್ಯಾನ್ ಸಿನಿಮಾದಿಂದ ಕದಿಯಲಾಗಿದೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

1990ರಲ್ಲಿ ಬಂದ ಲಿಯಾಮ್ ನೀಸನ್ ಅವರ ಲುಕ್ ಅನ್ನು ಅಟ್ಲೀ ಕಾಪಿ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಲಿಯಾಮ್ ನೀಸನ್ ಮತ್ತು ಶಾರುಖ್ ಖಾನ್ ಲುಕ್‌ಅನ್ನು ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಲಿಯಾಮ್ ನೀಸನ್ ಅವರದ್ದು ಸೇಡು ತೀರಿಸಿಕೊಳ್ಳುವ ಪಾತ್ರವಾಗಿತ್ತು. ಜವಾನ್ ಲುಕ್ ಕೂಡ ಹಾಗೆ ಇದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಜವಾನ್ ನಲ್ಲಿ ಶಾರುಖ್ ಮುಖಕ್ಕೆ ಬ್ಯಾಂಡೇಜ್ ಸುತ್ತಿಕೊಂಡಿದ್ದಾರೆ.


Jawan Teaser; ಶಾರುಖ್ ನೋಡಿ ಫ್ಯಾನ್ಸ್ ಫಿದಾ, ಕನ್ನಡದಲ್ಲೂ ಬರ್ತಿದೆ ಕಿಂಗ್ ಖಾನ್- ಅಟ್ಲೀ ಸಿನಿಮಾ

 

ಇನ್ನು ಕೆಲವರು ಅಟ್ಲೀ ಸಿನಿಮಾನೆ ಹಾಗೆ 10 ಸಿನಿಮಾಗಳನ್ನು ಕದ್ದು ಒಂದು ಸಿನಿಮಾ ಮಾಡುತ್ತಾರೆ ಎಂದು ಆರೋಪ ಮಾಡುತ್ತಿದ್ದಾರೆ. ಅಂದಹಾಗೆ ಇದು ಡಾರ್ಕ್‌ಮ್ಯಾನ್ ಸಿನಿಮಾದ ರಿಮೇಕ್ ಆಗಿದ್ಯಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದ್ಯಾವುದರ ಬಗ್ಗೆಯೂ ಸಿನಿಮಾತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜವಾನ್ ಸಿನಿಮಾ 2023ಯಲ್ಲಿ ರಿಲೀಸ್ ಆಗಲಿದೆ ಎಂದು ಬಹಿರಂಗ ಪಡಿಸಿದ್ದಾರೆ. ಜೂನ್ 2ರಂದು ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ರಿಲೀಸ್ ಆಗಲಿದೆ ಎಂದು ಟೀಸರ್ ಮೂಲಕ ತಿಳಿಸಿದ್ದಾರೆ. ಇನ್ನು ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಯನತಾರಾ, ಶಾರುಖ್ ಖಾನ್ ಜೊತೆ ನಟಿಸುತ್ತಿದ್ದಾರೆ.

25 ಲಕ್ಷ ರೂ. ಬೆಲೆಬಾಳುವ ಶಾರುಖ್ ಮನೆಯ ಹೊಸ ನಾಮಫಲಕ ನಾಪತ್ತೆ

ದ್ವಿಪಾತ್ರದಲ್ಲಿ ಶಾರುಖ್?

ಸಿನಿಮಾದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ನಯನತಾರಾ ಇನ್ವೆಸ್ಟಿಗೇಟಿವ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರಂತೆ. ಶಾರುಖ್ ಖಾನ್ ಒಂದು ಪಾತ್ರದಲ್ಲಿ ಗ್ಯಾಂಗ್‌ಸ್ಟರ್ ಮಗನ ಪಾತ್ರದಲ್ಲಿ ಕಾಣಿಸಿಕೊಂಡರೆ ಮತ್ತೊಂದು ಪಾತ್ರದಲ್ಲಿ ತಂದೆಯ ಪಾತ್ರ ಎಂದು ಹೇಳಲಾಗುತ್ತಿದೆ. ಇನ್ನು ನಟಿ ಸಾನ್ಯ ಮಲ್ಹೋತ್ರ ಕೂಡ ಪ್ರಮುಕ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ಜವಾನ್ ಟೀಸರ್‌ನಲ್ಲಿ ಸುಳಿವು ನೀಡಿಲ್ಲ.

ಶಾರುಖ್ ಸಿನಿಮಾ ತೆರೆಗೆ ಬರದೆ ನಾಲ್ಕು ವರ್ಷಗಳಾಗಿದೆ. ಶಾರುಖ್ ಕೊನೆಯದಾಗಿ ಝೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಸೋಲಿನ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಬಂದಿಲ್ಲ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಖಾನ್‌ ಸಿನಿಮಾ ಮಾಡುವುದನ್ನೇ ಬಿಟ್ಟಿದ್ದರು. ಇದೀಗ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

Latest Videos
Follow Us:
Download App:
  • android
  • ios