Shah Rukh Khan: ಮಧ್ಯರಾತ್ರಿ 2 ಗಂಟೆಗೆ ಸಿಎಂಗೆ ಕರೆ ಮಾಡಿ ರಕ್ಷಣೆ ಕೋರಿದ ಕಿಂಗ್‌​ ಖಾನ್​!

ಬೈಕಾಟ್​ ಬಿಸಿ ಅನುಭವಿಸುತ್ತಿರುವ ಪಠಾಣ್​ ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಟ ಶಾರುಖ್​ ಖಾನ್​ ನಡುರಾತ್ರಿ ಅಸ್ಸಾಂ ಮುಖ್ಯಮಂತ್ರಿಗಳಿಗೆ ಕರೆ ಮಾಡಿದ್ದಾರೆ. ಕಾರಣವೇನು?
 

Shah Rukh Khan called Assam CM and asked for protection and security

ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ 25ರಂದು ಬಿಡುಗಡೆಯಾಗಲಿರುವ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಾಗಲೇ ಬಾಕ್ಸ್​ ಆಫೀಸ್​ನಲ್ಲಿ (Box office) ಕೊಳ್ಳೆ ಹೊಡೆದಿರುವ ಪಠಾಣ್​ ಚಿತ್ರವನ್ನು ವೀಕ್ಷಿಸಲು ಫ್ಯಾನ್ಸ್​ ತುದಿಗಾಲಿನಲ್ಲಿ ನಿಲ್ಲುತ್ತಿದ್ದಾರೆ.  ಈಗಾಗಲೇ ಮುಂಗಡ ಟಿಕೆಟ್ ಬುಕಿಂಗ್ ಶುರು ಆಗಿರುವ ಕಾರಣ, ಹಣವನ್ನೂ ಲೆಕ್ಕಿಸದೇ ಅಭಿಮಾನಿಗಳು ತಾ ಮುಂದು, ನಾ ಮುಂದು ಎಂದು ಟಿಕೆಟ್​ ಖರೀದಿ ಮಾಡುತ್ತಿದ್ದಾರೆ. ಯಾವುದೇ ಪ್ರಮೋಷನ್ (Promotion)​ ಮಾಡದೇ ಚಿತ್ರ ಗೆಲ್ಲುವೆ ಎಂದು ಅದೇ ಇನ್ನೊಂದೆಡೆ ಶಾರುಖ್​ ಖಾನ್​ ಕೂಡ ಹೇಳಿಕೊಂಡಿದ್ದಾರೆ. ಇಷ್ಟೆಲ್ಲಾ ಒಳ್ಳೆಯ ರೆಸ್ಪಾನ್ಸ್​ ಇರುವ ನಡುವೆಯೇ ಶಾರುಖ್​ ಖಾನ್​ರಿಗೆ ಢವಢವ ಶುರುವಾಗಿರುವುದು ಬಹುತೇಕ ಖಚಿತವಾಗಿದೆ.

ಇದಕ್ಕೆ ಕಾರಣ, ಮಧ್ಯರಾತ್ರಿ ಎರಡು ಗಂಟೆಯ ಹೊತ್ತಿಗೆ ಶಾರುಖ್​ ಅವರು ಅಸ್ಸಾಂನ ಮುಖ್ಯಮಂತ್ರಿ ಬಿಜೆಪಿಯ ಹಿಮಂತ ಬಿಸ್ವಾ ಶರ್ಮಾ (Himanth Biswa sharma) ಅವರನ್ನು ಕರೆ ಮಾಡಿದ್ದಾರೆ. ಅಷ್ಟಕ್ಕೂ ಈ ಕರೆ ಮಾಡಲು ಕಾರಣ ಏನೆಂದರೆ, ರಕ್ಷಣೆ ಕೊಡಿ ಎಂದು ಮನವಿ ಮಾಡಲು! ಅಸ್ಸಾಂ ಮುಖ್ಯಮಂತ್ರಿಯವರಿಗೆ ರಕ್ಷಣೆಗಾಗಿ ಏಕೆ ಕರೆ ಮಾಡಿದರು ಎಂದು ಅಚ್ಚರಿಯಾಗುತ್ತಿದೆಯೆ? ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಅಸ್ಸಾಂನ (Assam) ಗುಹವಾಟಿಯಲ್ಲಿ 'ಪಠಾಣ್‌' ಚಿತ್ರಕ್ಕೆ ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಚಿತ್ರದಲ್ಲಿ ತನ್ನೆಲ್ಲಾ ಅಂಗಾಂಗಗಳನ್ನು ಕಾಣಿಸುವಂತೆ ಕೇಸರಿ ಬಿಕಿನಿ ತೊಟ್ಟಿದ್ದ ದೀಪಿಕಾ ಪಡುಕೋಣೆ ಬೇಷರಂ ರಂಗ್​ (Besharam Rang) ಎನ್ನುವ ಹಾಡಿಗೆ ಶಾರುಖ್​ ಜೊತೆ ಕುಣಿದಿರುವುದಕ್ಕೆ. ಇದಕ್ಕೆ ಗುವಾಹಟಿಯಲ್ಲಿ ಮಾತ್ರವಲ್ಲದೇ, ಹಿಂದೂ ಸಂಘಟನೆಗಳು ವಿಶ್ವಾದ್ಯಂತವೂ ಭಾರಿ ಪ್ರತಿಭಟನೆ ನಡೆಸಿದ್ದವು. 

'ಪಠಾಣ್'​ ವೀಕ್ಷಿಸಲು ಆಗದಿದ್ರೆ ಸಾಯ್ತೇನೆ: ವಿಡಿಯೋ ಮಾಡಿದ್ದಾನೆ ಈ ಯುವಕ!

ಈ ಚಿತ್ರವನ್ನು ಬೈಕಾಟ್​ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ (trend)ಶುರುವಾಗಿತ್ತು. ಇದು ಎಷ್ಟರಮಟ್ಟಿಗೆ ಹೋಯಿತು ಎಂದರೆ ಇಡೀ ಚಿತ್ರತಂಡವೇ ನಲುಗಿ ಹೋಯಿತು. ಜನರು ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ದಿಗ್ಗಜರು, ಬಿಜೆಪಿ ಅಭಿಮಾನಿಗಳು, ರಾಜಕೀಯ ಧುರೀಣರು ಸೇರಿದಂತೆ ಹಲವರು ಕ್ಷೇತ್ರಗಳವರು ಈ ದೃಶ್ಯಕ್ಕೆ ವಾಚಾಮಗೋಚರವಾಗಿ ಬೈದು, ಅದರ ವಿರುದ್ಧ ಹೇಳಿಕೆಗಳನ್ನು ನೀಡಿದರು. ಇದು ಅಶ್ಲೀಲತೆಯ ಪರಮಾವಧಿ ಎಂದು ಬಣ್ಣಿಸಿದರು. ಹಲವು ಕಡೆಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದು ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಅವರ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ಹೊರಹಾಕಲಾಯಿತು. ಕೊನೆಗೂ ಮಣಿದ ಸೆನ್ಸಾರ್​ ಮಂಡಳಿ ಕೇಸರಿ ಬಿಕಿನಿಯನ್ನು ತೆಗೆಸಿತು. ಕೊನೆಗೆ ದೀಪಿಕಾ ಪಡುಕೋಣೆ ಕೇಸರಿ ಲುಂಗಿಯನ್ನುಟ್ಟು ಈ ಹಾಡಿಗೆ ನರ್ತಿಸಿದರು.  ಲುಂಗಿ ತೊಟ್ಟರೂ ಕೇಸರಿ ಬಣ್ಣವನ್ನೇ ಆಯ್ಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದೂಗಳು ಕಿಡಿ ಕಾರುತ್ತಲೇ ಇದ್ದಾರೆ.

ಇದರಿಂದಾಗಿ ಚಿತ್ರದ ಬಿಡುಗಡೆ ಹತ್ತಿರವಾಗುತ್ತಿದ್ದಂತೆಯೇ ಶಾರುಖ್​ ಖಾನ್​ ಅವರಿಗೆ ಭಯ ಶುರುವಾಗಿದ್ದು, ಕರೆ ಮಾಡಿದ್ದಾರೆ. ಕರೆ ಮಾಡುವುದಕ್ಕೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಮೊನ್ನೆಯಷ್ಟೇ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶಾರುಖ್ ಖಾನ್​ ಯಾರು ಎಂದು ಪ್ರಶ್ನಿಸಿದ್ದರು. ಇದು ನಟನನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಪತ್ರಿಕಾಗೋಷ್ಠಿಯೊಂದರ ಸಂದರ್ಭದಲ್ಲಿ ಗುವಾಹಟಿಯಲ್ಲಿ ನಡೆದ ಗಲಾಟೆಯ ಕುರಿತು ಪತ್ರಕರ್ತರೊಬ್ಬರು ಸಿಎಂ ಅವರನ್ನು ಪ್ರಶ್ನಿಸಿದ್ದರು. ಪಠಾಣ್​ ಹಾಗೂ ಶಾರುಖ್​ ಖಾನ್​ಗೆ ರಕ್ಷಣೆ ಕೊಡುತ್ತೀರಾ ಎಂದು ಕೇಳಿದ್ದರು. ಅದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ (Chief Minister) ಶರ್ಮಾ ಅವರು, 'ಶಾರುಖ್ ಖಾನ್ ಯಾರು? ಅವರು ಯಾರು ಎಂದು ನನಗೆ ಗೊತ್ತಿಲ್ಲ. ಏನಿದು ಪಠಾಣ್​ (Pathaan)? ಅದರ ಬಗ್ಗೆಯೂ ಗೊತ್ತಿಲ್ಲ. ಅಸ್ಸಾಮಿನಲ್ಲಿ ಜನರು  ಅಸ್ಸಾಮಿ ಚಲನಚಿತ್ರಗಳ ಬಗ್ಗೆ ಕಾಳಜಿ ತೋರುತ್ತಾರೆ. ಬೇರೆ ಚಿತ್ರಗಳಿಗೆ ಅಷ್ಟು ಆಸ್ಥೆ ವಹಿಸುವುದಿಲ್ಲ.  ಶಾರುಖ್ ಖಾನ್ ಯಾರು ಎಂದು ತಿಳಿದಿಲ್ಲ ಎಂದಿದ್ದರು.

ಪ್ರಮೋಷನ್​ ಇಲ್ದೇ ಚಿತ್ರ ಗೆಲ್ತೇವೆ! ರಿಯಾಲಿಟಿ ಶೋಗೆ ಹೋಗಲು ಶಾರುಖ್ ನಕಾರ!

ಇದೇ ಕಾರಣಕ್ಕೆ ಮಧ್ಯರಾತ್ರಿ ಕರೆ ಮಾಡಿರುವ ಶಾರುಖ್​ ರಕ್ಷಣೆ ಕೋರಿದ್ದಾರೆ. ಈ ಕುರಿತು ಖುದ್ದು ಮುಖ್ಯಮಂತ್ರಿಗಳು ಟ್ವಿಟರ್​ನಲ್ಲಿ (twitter) ಮಾಹಿತಿ ನೀಡಿದ್ದಾರೆ. 'ಬಾಲಿವುಡ್‌ ನಟ ಶಾರುಖ್ ಖಾನ್ ಅವರು ನನಗೆ ಬೆಳಗಿನಜಾವ 2 ಗಂಟೆಗೆ ಕರೆಮಾಡಿದ್ದರು. ಗುಹವಾಟಿಯಲ್ಲಿ 'ಪಠಾಣ್' ಸಿನಿಮಾಗೆ ವಿರೋಧ ಮಾಡಿದ್ದ ಘಟನೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಘಟನೆ ಬಗ್ಗೆ ನಾವು ವಿಚಾರಣೆ ನಡೆಸುತ್ತೇವೆ ಮತ್ತು ಅಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ' ಎಂದು ಸಿಎಂ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios