Asianet Suvarna News Asianet Suvarna News

ಪಠಾಣ್ ಸಕ್ಸಸ್ ಬಳಿಕ 10 ಕೋಟಿ ಮೌಲ್ಯದ ಕಾರು ಖರೀದಿಸಿದ ಶಾರುಖ್ ಖಾನ್

ಪಠಾಣ್ ಸಕ್ಸಸ್ ಬಳಿಕ ಶಾರುಖ್ ಖಾನ್10 ಕೋಟಿ ಮೌಲ್ಯದ ಕಾರು ಖರೀದಿಸಿದ್ದಾರೆ. 

Shah Rukh Khan buys Rs 10 crore Rolls-Royce Cullinan Black Badge after Pathaan success sgk
Author
First Published Mar 27, 2023, 5:05 PM IST

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಪಠಾಣ್ ಸಕ್ಸಸ್‌ನಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ಶಾರುಖ್ ತೆರೆಮೇಲೆ ಬಂದಿದ್ದು ದೊಡ್ಡ ಮಟ್ಟದ ಸಕ್ಸಸ್ ಗಳಿಸಿದ್ದಾರೆ. ಪಠಾಣ್ ಗೆಲುವು ಶಾರುಖ್ ಮಾತ್ರವಲ್ಲದೇ ಇಡೀ ಬಾಲಿವುಡ್‌ಗೂ ಮುಖ್ಯವಾಗಿತ್ತು. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಪಠಾಣ್ ದೊಡ್ಡ ಬ್ರೇಕ್ ನೀಡಿದೆ. ಜನವರಿ 25ರಂದು ಪಠಾಣ್ ಸಿನಿಮಾ ರಿಲೀಸ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪಠಾಣ್ ಸೂಪರ್ ಸಕ್ಸಸ್ ಬಳಿಕ ಶಾರುಖ್ ದುಬಾರಿ ಕಾರು ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಸಾರುಖ್ ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಕಾರನ್ನು ಖರೀದಿ ಮಾಡಿದ್ದಾರೆ. ರೋಲ್ಸ್ ರಾಯ್ಸ್ ಕುಲ್ಲಿನಾನ್ ಬ್ಲ್ಯಾಕ್ ಬ್ಯಾಡ್ಜ್ ಕಾರು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಸೂಪರ್ ಸ್ಟಾರ್ ಶಾರುಖ್ ಬಳಿ ಈಗಾಗಲೇ ಅನೇಕ ದುಬಾರಿ ಕಾರುಗಳಿವೆ. ಇದೀಗ ರೋಲ್ಸ್ ರಾಯ್ಸ್ ಕುಲ್ಲಿನಾನ್ ಬ್ಲ್ಯಾಕ್ ಬ್ಯಾಡ್ಜ್ ಕಾರು ಸೇರ್ಪಡೆಯಾಗಿದೆ. ಕಿಂಗ್ ಖಾನ್ ತಮ್ಮ ಹೊಸ ಸ್ಟೈಲಿಶ್ ಎಸ್‌ಯುವಿಯನ್ನು 10 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ. ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ದುಬಾರಿ ಕಾರು ಇದಾಗಿದೆ. 

ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್ ಖಾನ್ ಮಾತಿಗೆ ಪ್ರಿಯಾಂಕಾ ಚೋಪ್ರಾ ತಿರುಗೇಟು

ವರದಿಗಳ ಪ್ರಕಾರ ಕಾರಿನ ಶೋರೂಂ ಬೆಲೆ ಸುಮಾರು  8.20 ಕೋಟಿ ರೂಪಾಯಿ ಆದರೆ ಆನ್ ರೋಡ್ 10 ಕೋಟಿಗೆ ಹೆಚ್ಚಿಸುತ್ತವೆ. ಎಸ್‌ಆರ್‌ಕೆ ಅಭಿಮಾನಿಗಳು ಭಾನುವಾರ ಅವರ ಹೊಸ ಕಾರು ಮನ್ನತ್‌ಗೆ ಪ್ರವೇಶಿಸಿದ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಶಾರುಖ್ ಹೊಸ ಕಾರಿಗೆ '555' ನಂಬರ್ ಪ್ಲೇಟ್ ಕೂಡ ಇದೆ. ಶಾರುಖ್ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&

ಶಾರುಖ್ ಖಾನ್ 'ಜವಾನ್' ಚಿತ್ರದ ಪ್ರಮುಖ ದೃಶ್ಯಗಳು ಲೀಕ್; ನೆಕ್ಸ್ಟ್ ಲೆವೆಲ್ ಎಂದ ಫ್ಯಾನ್ಸ್

ಶಾರುಖ್ ಖಾನ್ ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಡಂಕಿ ಮತ್ತು ಜವಾನ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ತಮಿಳು ನಿರ್ದೇಶಕ ಅಟ್ಲೀ ಕುಮಾರ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಹಾಗಾಗಿ ಸೌತ್ ಮಂದಿಗೂ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಯನತಾರಾ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೌತ್ ಸಿನಿಮಾರಂಗದ ಖ್ಯಾತ ನಟ ವಿಜಯ್ ಸೇತುಪತಿ ಕೂಡ ನಟಿಸುತ್ತಿದ್ದಾರೆ. ಡಂಕಿ ಸಿನಿಮಾಗೆ ರಾಜ್ ಕುಮಾರ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 
 

Follow Us:
Download App:
  • android
  • ios