ಶಾರುಖ್ ಖಾನ್ 'ಜವಾನ್' ಚಿತ್ರದ ಪ್ರಮುಖ ದೃಶ್ಯಗಳು ಲೀಕ್; ನೆಕ್ಸ್ಟ್ ಲೆವೆಲ್ ಎಂದ ಫ್ಯಾನ್ಸ್
ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಪ್ರಮುಖ ಆಕ್ಷನ್ ದೃಶ್ಯ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಪಠಾಣ್ ಸಕ್ಸಸ್‌ನಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ಶಾರುಖ್ ತೆರೆಮೇಲೆ ಬಂದಿದ್ದು ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು. ಪಠಾಣ್ ಗೆಲುವು ಶಾರುಖ್ ಮಾತ್ರವಲ್ಲದೇ ಇಡೀ ಬಾಲಿವುಡ್‌ಗೂ ಮುಖ್ಯವಾಗಿತ್ತು. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಪಠಾಣ್ ದೊಡ್ಡ ಬ್ರೇಕ್ ನೀಡಿದೆ. ಪಠಾಣ್ ಸೂಪರ್ ಸಕ್ಸಸ್ ಬೆನ್ನಲ್ಲೇ ಶಾರುಖ್ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕಿಂಗ್ ಖಾನ್ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಡಂಕಿ ಮತ್ತು ಜವಾನ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ತಮಿಳು ನಿರ್ದೇಶಕ ಅಟ್ಲೀ ಕುಮಾರ್ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಹಾಗಾಗಿ ಸೌತ್ ಮಂದಿಗೂ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ನಡುವೆ ಜವಾನ್ ಸಿನಿಮಾದ ಪ್ರಮುಖ ದೃಶ್ಯಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಜವಾನ್‌ನಲ್ಲಿ ಶಾರುಖ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಲೀಕ್ ಆಗಿರುವ ದೃಶ್ಯದಲ್ಲಿ ಶಾರುಖ್ ಲುಕ್ ವೈರಲ್ ಆಗಿದೆ. ಒಂದು ದೃಶ್ಯದಲ್ಲಿ ಉದ್ದ ದಾಡಿ ಬಿಟ್ಟಿರುವ ಶಾರುಖ್ ಅವರ ಸಾಲ್ಟ್ ಅಂಡ್ ಪೆಪರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಶಾರುಖ್ ಲೀಕ್ ಆದ ದೃಶ್ಯದಲ್ಲಿ ಫುಲ್ ಮಾಸ್ ಆಗಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಪ್ಯಾಂಟ್ ಮತ್ತು ಶರ್ಟ್ ಧರಿಸಿರುವ ಶಾರುಖ್ ಬೆಲ್ಟ್ ನಲ್ಲಿ ಎದುರಾಳಿಗಳಿಗೆ ಹೊಡೆಯುತ್ತಿದ್ದಾರೆ. ಶಾರುಖ್ ಖಾನ್ ಆಕ್ಷನ್ ದೃಶ್ಯಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಶಾರುಖ್ ವಿಭಿನ್ನ ಲುಕ್ ಕೂಡ ರಿವೀಲ್ ಆಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ.
PATHAAN ಯಶಸ್ಸು ವೈಯಕ್ತಿಕ ಎಂದ ಶಾರುಖ್ ಖಾನ್ ಟ್ವೀಟ್ನಲ್ಲಿ ಏನಿದೆ?
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಶಾರುಖ್ ಅವರ ರೆಡ್ ಚಿಲ್ಲೀಸ್ ಸಂಸ್ಥೆ ತಕ್ಷಣ ಕ್ರಮಕೈಗೊಂಡಿದ್ದು ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಿಸಲಾಗಿದೆ. ಶಾರುಖ್ ನೋಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನೆಕ್ಟ್ಸ್ ಲೆವೆಲ್ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅಪ್ಪನ ಹಾಗೆ ಇದೆ ಎಂದು ಹೇಳುತ್ತಿದ್ದಾರೆ. 'ಪಠಾಣ್ ಕೇವಲ ಟೀಸರ್ ಅಷ್ಟೆ, ಅಸಲಿ ಮಾಸ್ ಆಕ್ಷನ್ ಜವಾನ್‌ನಲ್ಲಿ' ಎಂದು ಹೇಳಿದ್ದಾರೆ.
Shah Rukh Khan ಮನೆಯಲ್ಲಿ ಎಂಟು ಗಂಟೆ ಅಡಗಿಕುಳಿತಿದ್ದ ಆಗಂತುಕರು!
ಜವಾನ್ ಸಿನಿಮಾದಲ್ಲಿ ಶಾರುಖ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಯನತಾರಾ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೌತ್ ಸಿನಿಮಾರಂಗದ ಖ್ಯಾತ ನಟ ವಿಜಯ್ ಸೇತುಪತಿ ಕೂಡ ನಟಿಸುತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳಿರುವ ಜವಾನ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಇದೀಗ ಪ್ರಮುಖ ದೃಶ್ಯಗಳು ಲೀಕ್ ಆಗಿದ್ದು ಸಿನಿಮಾತಂಡಕ್ಕೆ ಆತಂಕವಾಗಿದೆ. ಕಟ್ಟು ನಿಟ್ಟಿನ ಕ್ರಮ ಕೈಗೊಂಡರೂ ಪ್ರಮುಖ ದೃಶ್ಯಗಳು ಸೋರಿಕೆ ಆಗಿವೆ. ಹಾಗಾಗಿ ಮತ್ತಷ್ಟು ಕಟ್ಟುನಿಟ್ಟು ಮಾಡಲಾಗಿದ್ದು ಮೊಬೈಲ್ ಬಳಕೆ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ ಎನ್ನಲಾಗಿದೆ.