Sara Ali Khan: ಬಿಗಿ ಬಂದೋಬಸ್ತ್​ ನಡುವೆ ಸೈಫ್​ ಅಲಿ ಖಾನ್​ ಪುತ್ರಿಯ ಅಮರನಾಥ ಯಾತ್ರೆ

ಇತ್ತೀಚಿನ ದಿನಗಳಲ್ಲಿ ಹಿಂದೂ ಸಂಪ್ರದಾಯ ಆಚರಿಸುವ ಮೂಲಕ ಸಕತ್​ ಸುದ್ದಿಯಲ್ಲಿರುವ ನಟಿ ಸಾರಾ ಅಲಿ ಖಾನ್​ ಬಂದೋಬಸ್ತ್​ ನಡುವೆ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ.
 

Sara Ali Khan undertakes Amarnath Yatra in Jammu and Kashmir amid high security

ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ (Sara Ali Khan) ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಬಾಯ್​ಫ್ರೆಂಡ್​ ವಿಷಯದಲ್ಲಿ ವಿವಾದಕ್ಕೆ ಸಿಲುಕಿದ್ದರು. ನಂತರ ದೇವಸ್ಥಾನಕ್ಕೆ ಹೋಗಿ ವಿವಾದಕ್ಕೆ ಸಿಲುಕಿದ್ದರು. ಇದರ ಹೊರತಾಗಿಯೂ ಕೇದಾರನಾಥಕ್ಕೆ ಭೇಟಿ ಕೊಟ್ಟರು.  ಮುಸ್ಲಿಂ ಯುವತಿಯೊಬ್ಬಳು ಹೀಗೆ ಹಿಂದೂ ದೇವಾಲಯಗಳಿಗೆ ಭೇಟಿ ಕೊಟ್ಟಿದ್ದಕ್ಕೆ ತಮ್ಮವರಿಂದಲೇ ಸಕತ್​ ಆಕ್ರೋಶಕ್ಕೆ ಒಳಗಾದರು ಸಾರಾ ಅಲಿ. ಇದಾಗಲೇ ಸೈಫ್​ ಅಲಿ ಪುತ್ರಿ ಎನ್ನುವ ಕಾರಣಕ್ಕೆ ಸ್ಟಾರ್​ ಕಿಡ್​ ಆಗಿ ಸುಲಭದಲ್ಲಿ ಅವಕಾಶ ಲಭಿಸಿಕೊಂಡಿದ್ದಾರೆ ಎನ್ನುವ ವಿಚಾರದಲ್ಲಿಯೂ ಆಗಾಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೇಳುತ್ತಿರುವ ನಟಿ ಸಾರಾ ಅವರಿಗೆ  ದೇವಸ್ಥಾನಕ್ಕೆ ಹೋಗುವ ವಿಷಯದಲ್ಲಿಯೂ ಕಾಲೆಳೆಯಲಾಗಿತ್ತು. ಆದರೆ ಯಾವ ಟ್ರೋಲ್​​ಗೂ ಸಾರಾ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಆದ್ದರಿಂದಲೇ ಆಕೆಯನ್ನು  ರಿಯಲ್​  ಮತ್ತು ರೀಲ್ ಜೀವನದಲ್ಲಿ ತುಂಬಾ ಕೂಲ್ ಎಂದು ಪರಿಗಣಿಸಲಾಗಿದೆ. 
 
ಇದೀಗ ಸಾರಾ ಅಲಿ ಖಾನ್​ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.  ಸಾರಾ ಅಲಿ ಖಾನ್ (Sara Ali Khan)  ಅಮರನಾಥ ಯಾತ್ರೆ ಕೈಗೊಂಡಿದ್ದು, ಅದರ ವಿಡಿಯೋ ಸಕತ್​ ವೈರಲ್​ ಆಗಿದೆ. ಅಮರನಾಥ ಯಾತ್ರೆಗೆ ಹೋಗುವುದು ಅಷ್ಟು ಸುಲಭದ ಮಾತಲ್ಲ. ಆದರೆ ನಟಿ ಅದನ್ನು ಸಾಧಿಸಿ ತೋರಿಸಿದ್ದಾರೆ.  ಭಾರೀ ಭದ್ರತೆಯ ಮಧ್ಯೆ ಈಕೆ  ಅಮರನಾಥ ದರ್ಶನ ಮಾಡಿದ್ದಾರೆ. ಭದ್ರತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ನಟಿಯ ವಿಡಿಯೋ ವೈರಲ್ ಆಗಿದೆ.  ಯಾರೇ ಏನೇ ಹೇಳಿದರೂ ಎಲ್ಲಿಗೆ ಹೋಗಬೇಕು, ಯಾವ ದೇವರನ್ನು ಭೇಟಿಯಾಗಬೇಕು ಎನ್ನುವುದು  ನನ್ನಿಷ್ಟ ಎನ್ನುವ ಸಾರಾ ಅಲಿ, ಈಗ ಮತ್ತೊಮ್ಮೆ ಕೆಲವರ ಬಾಯಿಗೆ ಆಹಾರವಾಗಿದ್ದಾರೆ. ಆದರೆ ಇದಕ್ಕೂ ಕೂಡ ಈಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ.

Sara Ali Khan: ಬೀದಿ ಸುತ್ತಿ ಬಟ್ಟೆ ಖರೀದಿಸಿದ ನಟಿ; ವಿಡಿಯೋ ನೋಡಿ ಸೋ ಸಿಂಪಲ್​ ಎಂದ ಫ್ಯಾನ್ಸ್​!

ಆದರೆ ಅಮರನಾಥ ಯಾತ್ರೆಗೆ ಭೇಟಿ ನೀಡುವ ಸಾಹಸ ಮಾಡಿರುವುದಕ್ಕೆ ಈಕೆಯ ಫ್ಯಾನ್ಸ್​ ಮಾತ್ರ ಹುಬ್ಬೇರಿಸುತ್ತಿದ್ದಾರೆ. ಇಂಥ ಕಠಿಣ ಹಾದಿಯನ್ನು ನಟಿ ಸವೆಸಿರುವುದು ಗ್ರೇಟ್​ ಎನ್ನುತ್ತಿದ್ದಾರೆ. ಈಕೆ ನಾಯಕಿಯಾಗಿರುವ ‘ಝರಾ ಹಟ್ಕೆ, ಝರಾ ಬಜ್ಕೆ’ (Zara Hatke Zara Bachke) ಚಿತ್ರ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಬೆನ್ನಲ್ಲೇ  ನಟಿ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿ  ಅಮರನಾಥ ಯಾತ್ರೆ ಕೈಗೊಂಡಿರುವುದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ.  ನಟಿಯನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು, ತಮ್ಮ ಮೊಬೈಲ್​​ನಲ್ಲಿ ನಟಿ ಸಾರಾ ನಡೆದುಕೊಂಡು ಹೋಗುವ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಕೆಲವರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮುಂದಿನ ಚಿತ್ರಗಳಿಗೆ ಶುಭವಾಗಲಿ ಎಂದಿದ್ದಾರೆ.
 
 ಇತ್ತೀಚೆಗಷ್ಟೇ ದಕ್ಷಿಣದ ತಾರೆ ಸಾಯಿ ಪಲ್ಲವಿ ಕೂಡ ಅಮರನಾಥ ಯಾತ್ರೆ (Amaranatha Yatra) ಮಾಡಿದ್ದರು. ತಂದೆ ತಾಯಿಗೆ ದೇವರ ದರ್ಶನ ಮಾಡಿಸಬೇಕು ಎನ್ನುವುದು ಅವರ ಕನಸಾಗಿತ್ತಂತೆ. ಹಾಗಾಗಿ ಅಪ್ಪ ಅಮ್ಮನೊಂದಿಗೆ ಸಾಯಿ ಪಲ್ಲವಿ ಅಮರನಾಥ ಯಾತ್ರೆ ಮಾಡಿದ್ದರು. ಆ ದಿವ್ಯ ದರ್ಶನದ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಸಾರಾ ಅಲಿ ಭೇಟಿ ನೀಡಿದ್ದಾರೆ.

ಆಟೋದಲ್ಲಿ ಸವಾರಿ ಮಾಡಿದ ಸಾರಾ ಅಲಿ ಖಾನ್​: ಹೀಗೆ ಆಗ್ಬಾರ್ದಿತ್ತು ಅಂತಿದ್ದಾರೆ ಫ್ಯಾನ್ಸ್​!

ಅಂದಹಾಗೆ ಸಾರಾ ಅಲಿ ಖಾನ್​,  ಟೀಂ ಇಂಡಿಯಾ ಆಟಗಾರ ಶುಭ್​​ಮನ್ ಗಿಲ್ (Shubman Gill) ಜೊತೆ  ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಮತ್ತೆ ಮುನ್ನೆಲೆಗೂ ಬಂದಿದೆ. ಈ ಹಿಂದೆ ಸದ್ದು ಮಾಡಿ ತಣ್ಣಗಾಗಿದ್ದ ಸುದ್ದಿ ಮತ್ತೆ ಚಿಗುರಿಕೊಂಡಿದೆ. ಇದಕ್ಕೆ ಕಾರಣ ಈಚೆಗೆ  ನಟಿ ಸಾರಾ ಕತ್ರೀನಾ ಕೈಫ್ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಐಪಿಎಲ್‌ನ ಫಿನಾಲೆ ವೀಕ್ಷಿಸಲು ಬಂದಿದ್ದರು. ಇದಕ್ಕೂ ದುಬೈನಲ್ಲಿ ನಡೆದ ಐಐಎಫ್​ಎ ಕಾರ್ಯಕ್ರಮದಲ್ಲಿ ಸಾರಾ ಅಲಿ ಖಾನ್ ಹಾಗೂ ವಿಕ್ಕಿ ಕೌಶಲ್ ಜೋಡಿಯಾಗಿ ಕಾಣಿಸಿಕೊಂಡರು. ಕತ್ರೀನಾ ಕೈಫ್ ಹಾಗೂ ಅವರ ಪತಿ ವಿಕ್ಕಿ ಕೌಶಲ್ ಮಧ್ಯೆ ಬಿರುಕಿನ ವರದಿಗಳು ಬಂದ ಬೆನ್ನಲ್ಲೇ ಈಗ ನಟನ ಜೊತೆ ನಟಿ ಸಾರಾ ಕಾಣಿಸಿಕೊಂಡಿರುವುದು ಮತ್ತಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.   

Latest Videos
Follow Us:
Download App:
  • android
  • ios