ಆಟೋದಲ್ಲಿ ಸವಾರಿ ಮಾಡಿದ ಸಾರಾ ಅಲಿ ಖಾನ್: ಹೀಗೆ ಆಗ್ಬಾರ್ದಿತ್ತು ಅಂತಿದ್ದಾರೆ ಫ್ಯಾನ್ಸ್!
ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಬೀಚ್ ಒಂದರಲ್ಲಿ ಆಟೋ ಹತ್ತಿದ್ದು ಅದರ ಬಗ್ಗೆ ಥಹರೇವಾರಿ ಕಮೆಂಟ್ಗಳು ಸುರಿಮಳೆಯಾಗುತ್ತಿದೆ.
ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ (Sara Ali Khan) ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಬಾಯ್ಫ್ರೆಂಡ್ ವಿಷಯದಲ್ಲಿ ವಿವಾದಕ್ಕೆ ಸಿಲುಕಿದ್ದರು. ನಂತರ ದೇವಸ್ಥಾನಕ್ಕೆ ಹೋಗಿ ವಿವಾದಕ್ಕೆ ಸಿಲುಕಿದ್ದರು. ಸೈಫ್ ಅಲಿ ಪುತ್ರಿ ಎನ್ನುವ ಕಾರಣಕ್ಕೆ ಸ್ಟಾರ್ ಕಿಡ್ ಆಗಿ ಸುಲಭದಲ್ಲಿ ಅವಕಾಶ ಲಭಿಸಿಕೊಂಡಿದ್ದಾರೆ ಎನ್ನುವ ವಿಚಾರದಲ್ಲಿಯೂ ಆಗಾಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೇಳುತ್ತಿರುವ ನಟಿ ಸಾರಾ ಅವರಿಗೆ ದೇವಸ್ಥಾನಕ್ಕೆ ಹೋಗುವ ವಿಷಯದಲ್ಲಿಯೂ ಕಾಲೆಳೆಯಲಾಗಿತ್ತು. ಅದೇನೇ ಆದರೂ ಸಾರಾ ಅಲಿ ಖಾನ್ ನಿಜ ಮತ್ತು ರೀಲ್ ಜೀವನದಲ್ಲಿ ತುಂಬಾ ಕೂಲ್ ಎಂದು ಪರಿಗಣಿಸಲಾಗಿದೆ. ಇದೀಗ ನಟಿ ಮುಂಬೈ ಬೀಚ್ ಒಂದರಲ್ಲಿ ನಟಿ ಎಂಜಾಯ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಆದರೆ ನಟಿ ತನ್ನ ಸ್ನೇಹಿತೆಯ ಜೊತೆ ಆಟೋದಲ್ಲಿ ಪ್ರಯಾಣ ಮಾಡಿದ್ದು, ಅದಕ್ಕೆ ಥಹರೇವಾರಿ ಕಮೆಂಟ್ಸ್ಗಳ ಸುರಿಮಳೆಯಾಗುತ್ತಿದೆ.
ಅಸಲಿಗೆ ನಟಿ ಸ್ನೇಹಿತೆಯ ಜೊತೆ ಬೀಚ್ (Beach) ಒಂದರಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅದಾದ ಬಳಿಕ ಇಬ್ಬರೂ ಸ್ನೇಹಿತೆಯರು ಆಟೋ ಒಂದರಲ್ಲಿ ಪ್ರಯಾಣಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಅರೆ ಈಕೆಗೆ ಏನಾಯ್ತು ಎಂದು ಕೇಳ್ತಿದ್ದಾರೆ. ಆಟೋದಲ್ಲಿ ಹೋದ ಬಗ್ಗೆಯೂ ಕೆಲವರು ಪ್ರಶ್ನಿಸಿದ್ದರೆ, ಇನ್ನು ಕೆಲವರು ಈಕೆಯನ್ನು ಅಲ್ಲಿ ಯಾರೂ ಗಮನಿಸದೇ ಹೋದದ್ದನ್ನೇ ಹೇಳುತ್ತಿದ್ದಾರೆ. ಇಷ್ಟು ದೊಡ್ಡ ನಟಿ ಅದರಲ್ಲಿಯೂ ಸ್ಟಾರ್ ಕಿಡ್ ಆಗಿದ್ದರೂ ಜನರು ಕ್ಯಾರೇ ಅಂತಿಲ್ವಲ್ಲಪ್ಪಾ, ಹೀಗೆಲ್ಲಾ ಆಗ್ಬಾರ್ದಿತ್ತು ಎಂತಿದ್ದಾರೆ. ಇನ್ನು ಕೆಲವರು ತಾನು ಸಿಂಪಲ್ ಎಂದು ತೋರಿಸಲು ಆಟೋದಲ್ಲಿ ಹೋಗಿದ್ದಾಳೆ. ಇಲ್ಲದಿದ್ರೆ ಜೊತೆಗೆ ಕ್ಯಾಮೆರಾಮನ್ ಯಾಕೆ ಇರ್ತಿದ್ದ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಾರಾ ಫ್ಯಾನ್ ಒಬ್ಬರು, ಸುಮ್ಮನೇ ಅವರಷ್ಟಕ್ಕೆ ಅವರನ್ನು ಬಿಟ್ಟುಬಿಡಿ. ಅವರಿಗೂ ಖಾಸಗಿ ಜೀವನ ಇರುತ್ತದೆ. ಅವರು ಹೋದ ಕಡೆಗಳಲ್ಲಿ ಕ್ಯಾಮೆರಾ ತೆಗೆದುಕೊಂಡು ಯಾಕೆ ಹೋಗ್ತೀರಾ ಎಂದು ಪ್ರಶ್ನಿಸಿದ್ದಾರೆ.
Sara Ali Khan: ಬಾಯ್ಫ್ರೆಂಡ್ ಶುಭ್ಮನ್ ಗಿಲ್ ಕುರಿತ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಟಿ
ಇನ್ನು ಕೆಲವರು ಆಟೋದಲ್ಲಿ ನಟಿ ಹೋದ ಬಗ್ಗೆಯೂ ಪ್ರಶ್ನಿಸಿದ್ದಾರೆ. ಅಷ್ಟು ದೊಡ್ಡ ಐಷಾರಾಮಿ ಕಾರು (Car) ಇರುವಾಗ, ಒಂದೇ ಚಿಟಿಕೆಯಲ್ಲಿ ಕಾರಿನ ಡ್ರೈವರ್ ಬಂದು ಇದ್ದ ಜಾಗದಲ್ಲಿಯೇ ಕಾರು ತೆಗೆದುಕೊಂಡು ಬರುವಾಗ ಆಟೋದಲ್ಲಿ ಹೋಗಿ ಪೋಸ್ ಕೊಡುವುದು ಬೇಕಿರಲಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. ತಾವೆಷ್ಟು ಸಿಂಪಲ್ ಎಂದು ತೋರಿಸಲು ಹೀಗೆ ಪೋಸ್ ಕೊಡುತ್ತಿದ್ದಾರೆ ಎನ್ನುವುದು ಅವರ ಅನಿಸಿಕೆ. ಅದೇನೇ ಇದ್ದರೂ ಈ ವಿಡಿಯೋದಲ್ಲಿ ನಟಿ ಯಾವುದೇ ಪರಿವೇ ಇಲ್ಲದೇ ಆಟೋದಲ್ಲಿ ಹೋಗುತ್ತಿರುವುದನ್ನು ಹಾಗೂ ಆ ಕ್ಷಣವನ್ನು ಎಂಜಾಯ್ ಮಾಡುತ್ತಿರುವುದನ್ನು ನೋಡಬಹುದು.
ಅಂದಹಾಗೆ ಸಾರಾ ಅಲಿ ಖಾನ್, ಟೀಂ ಇಂಡಿಯಾ ಆಟಗಾರ ಶುಭ್ಮನ್ ಗಿಲ್ (Shubman Gill) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಮತ್ತೆ ಮುನ್ನೆಲೆಗೂ ಬಂದಿದೆ. ಈ ಹಿಂದೆ ಸದ್ದು ಮಾಡಿ ತಣ್ಣಗಾಗಿದ್ದ ಸುದ್ದಿ ಮತ್ತೆ ಚಿಗುರಿಕೊಂಡಿದೆ. ಇದಕ್ಕೆ ಕಾರಣ ಈಚೆಗೆ ನಟಿ ಸಾರಾ ಕತ್ರೀನಾ ಕೈಫ್ ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಐಪಿಎಲ್‌ನ ಫಿನಾಲೆ ವೀಕ್ಷಿಸಲು ಬಂದಿದ್ದರು. ಇದಕ್ಕೂ ದುಬೈನಲ್ಲಿ ನಡೆದ ಐಐಎಫ್ಎ ಕಾರ್ಯಕ್ರಮದಲ್ಲಿ ಸಾರಾ ಅಲಿ ಖಾನ್ ಹಾಗೂ ವಿಕ್ಕಿ ಕೌಶಲ್ ಜೋಡಿಯಾಗಿ ಕಾಣಿಸಿಕೊಂಡರು. ಕತ್ರೀನಾ ಕೈಫ್ ಹಾಗೂ ಅವರ ಪತಿ ವಿಕ್ಕಿ ಕೌಶಲ್ ಮಧ್ಯೆ ಬಿರುಕಿನ ವರದಿಗಳು ಬಂದ ಬೆನ್ನಲ್ಲೇ ಈಗ ನಟನ ಜೊತೆ ನಟಿ ಸಾರಾ ಕಾಣಿಸಿಕೊಂಡಿರುವುದು ಮತ್ತಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಹಿಂದು ದೇಗುಲದಲ್ಲಿ ನಟಿ ಸಾರಾ ಅಲಿ ಖಾನ್; ಶಕ್ತಿಗಳ ಮೇಲೆ ನಂಬಿಕೆ ಇದೆ, ಜನರ ಕಾಮೆಂಟ್‌ಗಳಿಗೆ ಡೋಂಟ್ ಕೇರ್!