ಸಾರಾ ಅಲಿ ಖಾನ್ ರಸ್ತೆ ಬದಿಯಲ್ಲಿ ಶಾಪಿಂಗ್​ ಮಾಡಿದ್ದು, ಇದರ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ.  

ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ (Sara Ali Khan) ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಬಾಯ್​ಫ್ರೆಂಡ್​ ವಿಷಯದಲ್ಲಿ ವಿವಾದಕ್ಕೆ ಸಿಲುಕಿದ್ದರು. ನಂತರ ದೇವಸ್ಥಾನಕ್ಕೆ ಹೋಗಿ ವಿವಾದಕ್ಕೆ ಸಿಲುಕಿದ್ದರು. ಸೈಫ್​ ಅಲಿ ಪುತ್ರಿ ಎನ್ನುವ ಕಾರಣಕ್ಕೆ ಸ್ಟಾರ್​ ಕಿಡ್​ ಆಗಿ ಸುಲಭದಲ್ಲಿ ಅವಕಾಶ ಲಭಿಸಿಕೊಂಡಿದ್ದಾರೆ ಎನ್ನುವ ವಿಚಾರದಲ್ಲಿಯೂ ಆಗಾಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೇಳುತ್ತಿರುವ ನಟಿ ಸಾರಾ ಅವರಿಗೆ ದೇವಸ್ಥಾನಕ್ಕೆ ಹೋಗುವ ವಿಷಯದಲ್ಲಿಯೂ ಕಾಲೆಳೆಯಲಾಗಿತ್ತು. ಅದೇನೇ ಆದರೂ ಸಾರಾ ಅಲಿ ಖಾನ್ ನಿಜ ಮತ್ತು ರೀಲ್ ಜೀವನದಲ್ಲಿ ತುಂಬಾ ಕೂಲ್ ಎಂದು ಪರಿಗಣಿಸಲಾಗಿದೆ. ಕಳೆದ ವಾರ ನಟಿ ಮುಂಬೈ ಬೀಚ್​ ಒಂದರಲ್ಲಿ ನಟಿ ಎಂಜಾಯ್​ ಮಾಡುತ್ತಿರುವ ಫೋಟೋ ವೈರಲ್​ ಆಗಿತ್ತು. ಇದರಲ್ಲಿ ನಟಿ ತನ್ನ ಸ್ನೇಹಿತೆಯ ಜೊತೆ ಆಟೋದಲ್ಲಿ ಪ್ರಯಾಣ ಮಾಡಿದ್ದು, ಅದಕ್ಕೆ ಥಹರೇವಾರಿ ಕಮೆಂಟ್ಸ್​ಗಳ ಸುರಿಮಳೆಯಾಗಿತ್ತು. ಈಕೆ ನಟಿ ಎಂದು ಯಾರಿಗೂ ತಿಳಿದೇ ಇಲ್ಲ ಎಂದು ಟ್ರೋಲ್​ ಮಾಡಲಾಗಿತ್ತು. 

ಸೋಲಿನ ಹಾದಿಯಲ್ಲಿದ್ದ ಸಾರಾ ಅಲಿ, ಇತ್ತೀಚೆಗೆ ಬಿಡುಗಡೆಗೊಂಡ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಮೂಲಕ ಸುಧಾರಿಸಿಕೊಂಡಿದ್ದಾರೆ. ಹೀಗಿದ್ದರೂ ಆಕೆ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಈಕೆ ಫೋಟೋ ಮತ್ತು ಒಂದಿಷ್ಟು ಗಾಸಿಪ್​ಗಳಿಂದ ಎಷ್ಟೇ ಟ್ರೋಲ್​ ಆಗುತ್ತಿದ್ದರೂ ಈಕೆಯನ್ನು ಪ್ರೀತಿಸುವ ಒಂದು ವರ್ಗವೂ ಇದೆ. ಹೆಚ್ಚಿನವರು ಈಕೆಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕಳೆದ ವಾರ ಈಕೆ ಬೀಚ್​ (Beach) ಒಂದರಿಂದ ಆಟೋದಲ್ಲಿ ಹೋದ ಸಂದರ್ಭದಲ್ಲಿಯೂ ಹಲವರು ಈಕೆಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದೆ. ಇನ್ನು ಕೆಲವರು ಟ್ರೋಲ್​ ಮಾಡಿ, ಅರೆ ಈಕೆಗೆ ಏನಾಯ್ತು ಎಂದು ಕೇಳಿದ್ದರು, ಈಕೆಯನ್ನು ಅಲ್ಲಿ ಯಾರೂ ಗಮನಿಸದೇ ಹೋದ ವಿಷಯವನ್ನೇ ಕೆದಕಿ, ಇಷ್ಟು ದೊಡ್ಡ ನಟಿ ಅದರಲ್ಲಿಯೂ ಸ್ಟಾರ್​ ಕಿಡ್​ ಆಗಿದ್ದರೂ ಜನರು ಕ್ಯಾರೇ ಅಂತಿಲ್ವಲ್ಲಪ್ಪಾ, ಹೀಗೆಲ್ಲಾ ಆಗ್ಬಾರ್ದಿತ್ತು ಎಂದಿದ್ದರು. ಇನ್ನು ಕೆಲವರು ತಾನು ಸಿಂಪಲ್​ ಎಂದು ತೋರಿಸಲು ಆಟೋದಲ್ಲಿ ಹೋಗಿದ್ದಾಳೆ. ಇಲ್ಲದಿದ್ರೆ ಜೊತೆಗೆ ಕ್ಯಾಮೆರಾಮನ್​ ಯಾಕೆ ಇರ್ತಿದ್ದ ಎಂದು ಪ್ರಶ್ನಿಸಿದ್ದರು.

ಆಟೋದಲ್ಲಿ ಸವಾರಿ ಮಾಡಿದ ಸಾರಾ ಅಲಿ ಖಾನ್​: ಹೀಗೆ ಆಗ್ಬಾರ್ದಿತ್ತು ಅಂತಿದ್ದಾರೆ ಫ್ಯಾನ್ಸ್​!

ಟ್ರೋಲ್​ಗೆ ಕ್ಯಾರೇ ಮಾಡದ ನಟಿಯ ಇನ್ನೊಂದು ವಿಡಿಯೋ ಈಗ ಸಕತ್​ ಸದ್ದು ಮಾಡುತ್ತಿದೆ. ಅದೇನೆಂದರೆ, ಈ ವಿಡಿಯೋದಲ್ಲಿ ಮುಂಬೈನ ಬಾಂದ್ರಾದಲ್ಲಿ ಸಾರಾ ಅಲಿ ಖಾನ್​ ರಸ್ತೆ ಬದಿಯ ಅಂಗಡಿಯಲ್ಲಿ ಶಾಪಿಂಗ್ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ‘ಜರಾ ಹಟ್ಕೆ ಜರಾ ಬಚ್ಕೆ’ (Jara Hatke Jara Bachke) ಸಿನಿಮಾ ಯಶಸ್ಸಿನ ಬಳಿಕವೂ ಈಕೆಗೆ ಸ್ವಲ್ಪವೂ ಅಹಂ ಇಲ್ಲ ಎಂದು ಹಲವು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಈ ವೈರಲ್​ ವಿಡಿಯೋದಲ್ಲಿ ನಟಿ, ನಡೆದುಕೊಂಡು ಹೋಗುವುದನ್ನು ನೋಡಬಹುದು. ಅಷ್ಟೇ ಅಲ್ಲದೇ, ರಸ್ತೆ ಬದಿ ಅಂಗಡಿಯಲ್ಲಿ ಸಾಮಾನ್ಯರಂತೆ ತೆರಳಿ ಬಟ್ಟೆ ಖರೀದಿ ಮಾಡಿದ್ದಾರೆ. ಈ ವಿಡಿಯೋನ ಪಾಪರಾಜಿಗಳು ಹಂಚಿಕೊಂಡಿದ್ದಾರೆ. ಸಾರಾ ಅವರನ್ನು ಎಲ್ಲರೂ ಹೊಗಳಿದ್ದಾರೆ. ಈ ಸರಳತೆ ಹೀಗೆಯೇ ಮುಂದುವರಿಯಲಿ ಎಂದು ಅನೇಕರು ಹೇಳಿದ್ದಾರೆ.

 ಈ ಹಿಂದೆ ಸಾರಾ ಅಲಿ, ದೇಗುಲಕ್ಕೆ ಕಾಲಿಟ್ಟ ಕಾರಣ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಖೇದರ್‌ನಾಥ್‌, ಗುರುದ್ವಾರ, ರಿಷಿಕೇಶ್, ಗಂಗಾ ಘಾಟ್ (Ganga Ghat) ಸೇರಿದಂತೆ ಅನೇಕ ಪವಿತ್ರ ಹಿಂದು ಸ್ಥಳಗಳಿಗೆ ಭೇಟಿ ಕೊಟ್ಟಾಗಲೆಲ್ಲಾ ಸಾರಾ ಟ್ರೋಲ್ ಆಗುವುದು ತುಂಬಾನೇ ಕಾಮನ್ ಅಗಿ ಬಿಟ್ಟಿದೆ. ಜನರಿಗೆ ಏನು ಮಾತನಾಡುತ್ತಾರೆ ಎಂದು ಸುಮ್ಮನಿದ್ದ ನಟಿ ಇತ್ತೀಚಿಗೆ ನಡೆದ ಪ್ರೆಸ್‌ ಮೀಟ್‌ನಲ್ಲಿ ಈ ವಿಚಾರವನ್ನು ಚರ್ಚೆ ಮಾಡಿದ್ದರು. ಜನರು ಹೇಗೆ ಬೇಕಿದರೂ ಕಾಮೆಂಟ್ ಮಾಡಲಿ ನಾನು ನಡೆಯುತ್ತಿರುವ ದಾರಿ ಬಗ್ಗೆ ನಂಬಿಕೆ ಹೆಚ್ಚಿದೆ ದೇವರಲ್ಲಿರುವ ಶಕ್ತಿಯನ್ನು ನಂಬುವೆ ಎಂದು ಮಾತನಾಡಿದ್ದರು.