ಒಮ್ಮೆ ಲವರ್ಸ್‌ ಎಂದು ಬಿಂಬಿತರಾದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಹಾಗೂ ನಟಿ ಸಾರಾ ಅಲಿಖಾನ್ ಈಗ ನೋಡಿದ್ರೆ ಪರಸ್ಪರ ಅನ್‌ಫಾಲೋ ಮಾಡುತ್ತಿದ್ದಾರೆ. ಲವ್ ಆಜ್ ಕಲ್ ಸಿನಿಮಾ ಮಾಡಿದ ಸಂದರ್ಭ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಸ್ಟಾರ್‌ಗಳು ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ಗಳ್ನು ಹೊಂದಿದ್ದಾರೆ. ಇಬ್ಬರೂ ಇನ್‌ಸ್ಟಾಗ್ರಾಂನಲ್ಲೂ ಫಾಲೋ ಮಾಡ್ತಿದ್ರು. ಹಠಾತ್ತನೆ ಏನಾಯ್ತೋ ಇಬ್ಬರೂ ಅನ್ ಫಾಲೋ ಮಾಡ್ತಿದ್ದಾರೆ.

ಬ್ಲಾಕ್ ಫ್ರೇಂ ಕನ್ನಡಕ, ಸಿಲ್ವರ್ ಜುಮ್ಕದಲ್ಲಿ ಇಲಿಯಾನ: 'ದಿ ಬಿಗ್‌ ಬುಲ್‌' ಲುಕ್ ವೈರಲ್

ಸಾರಾ ಹಾಗೂ ಕಾರ್ತಿಕ್ ಪರಸ್ಪರ ಡೇಟ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಇದ್ದಾಗ ಅವರೂ ಪರಸ್ಪರ ಸೋಷಿಯಲ್ ಮೀಡಿಯಾದಲ್ಲಿ ಲೈಕ್ ಮಾಡುತ್ತಿದ್ದರು. ಸಾರಾ ಬರ್ತ್‌ಡೇ ಸಂದರ್ಭ ಬ್ಯಾಂಕಾಕ್‌ಗೆ ಹಾರಿದ ಕಾರ್ತಿಕ್ ಸಹ ನಟಿಗೆ ಸರ್ಪೈಸ್ ಕೂಡಾ ಕೊಟ್ಟಿದ್ರು.

ಕೂಲಿ ನಂಬರ್ 1 ಸಿನಿಮಾ ಶೂಟ್‌ಗಾಗಿ ನಟಿ ಬ್ಯಾಂಕಾಕ್‌ನಲ್ಲಿದ್ದರು. ಇನ್ನು ಲವ್ ಆಜ್ ಕಲ್ ಸಿನಿಮಾ ಪ್ರಮೋಷನ್ ಸಂದರ್ಭ ಇಬ್ಬರೂ ಜೊತೆಯಾಗಿ ಇಂಟರ್‌ವ್ಯೂಗಳಲ್ಲಿಯೂ ಭಾಗಿಯಾಗಿದ್ದರು.

ನಿಕ್ ಭಾರತದ ಹುಡಗೀನ ಮದ್ವೆಯಾಗ್ಬಾರ್ದಿತ್ತು: ಪಿಗ್ಗಿ ವಿರುದ್ಧ ಪಾಕಿಗಳ ವಾಗ್ದಾಳಿ

ಆ ನಂತರ ಅವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಸಾರಾ ಅಲಿ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಸದಾ ಪೋಸ್ಟ್ ಹಾಕುತ್ತಲೇ ಇರುತ್ತಾರೆ. ಲವ್ ಆಜ್ ಕಲ್ ನಂತರ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿ ಅಷ್ಟಾಗಿ ಜೊತೆಯಾಗಿ ಕಾಣಿಸಿಲ್ಲ.