Asianet Suvarna News Asianet Suvarna News

ನಾನೊಬ್ಳು ಭಾರತೀಯ ನಾರಿ... ಕ್ಯಾಮೆರಾ ಎಲ್ಲೆಲ್ಲೋ ಝೂಮ್​ ಮಾಡ್ಬೇಡಿ... ರಾಖಿ ಗರಂ

ಅರೆಬರೆ ಡ್ರೆಸ್​ ಹಾಕಿಕೊಂಡು ಪ್ರೆಸ್​ಮೀಟ್​ನಲ್ಲಿ ಕಾಣಿಸಿಕೊಂಡಿರೋ ನಟಿ ರಾಖಿ ಸಾವಂತ್​, ಕ್ಯಾಮೆರಾಮೆನ್​ ವಿರುದ್ಧ ಗರಂ  ಆಗಿ ಹೇಳಿದ್ದೇನು?
 

Actress Rakhi Sawant against cameramen who are showing her body suc
Author
First Published Apr 30, 2024, 3:48 PM IST

ನೀವೆಲ್ಲಾ ಎಂಥವರೆಂದು ನನಗೆ ಗೊತ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ನನ್ನ ವಿಡಿಯೋ ನಾನು ನೋಡಿದಾಗ್ಲೇ ತಿಳಿಯುತ್ತೆ... ನೀವೆಲ್ಲಾ ಎಲ್ಲೆಲ್ಲಿ ಕ್ಯಾಮೆರಾ ಝೂಮ್​ ಮಾಡಿ ತೋರಿಸ್ತೀರಿ ಎಂದು. ನಾನೊಬ್ಬಳು ಭಾರತೀಯ ನಾರಿ. ನನ್ನನ್ನು ಹೇಗೇಗೋ ತೋರಿಸ್ಬೇಡಿ ಎಂದು ಕ್ಯಾಮೆರಾಮೆನ್​ ಮೇಲೆ ನಟಿ ರಾಖಿ ಸಾವಂತ್​ ಗರಂ ಆಗಿದ್ದಾರೆ. ಪ್ರೆಸ್​ಮೀಟ್​ ಒಂದರಲ್ಲಿ ಅರೆಬರೆ ಡ್ರೆಸ್​ನಲ್ಲಿ ಕಾಣಿಸಿಕೊಂಡಿರೋ ನಟಿ, ಹೀಗೆ ಹೇಳುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ವಿವಾದಗಳ ರಾಣಿ ರಾಖಿ ಸಾವಂತ್ ರಾಖಿ ಸಾವಂತ್ ಮೈಸೂರಿನ ಯುವಕ ಆದಿಲ್​ ಖಾನ್​ ಅವರನ್ನು ಮದುವೆಯಾಗಿ  ಧರ್ಮ ಬದಲಿಸಿ ಫಾತಿಮಾ ಆಗಿದ್ದರು. 

ನಿಜವಾಗಿ ರಾಖಿ ತಾನು ಆದಿಲ್ ನನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.  ಇಷ್ಟಾದರೂ ಗಂಡನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಅವರನ್ನು ಜೈಲಿಗೆ ಕಳುಹಿಸಿದ್ದ ರಾಖಿ ಸಾವಂತ್​,   ಮೆಕ್ಕಾಕ್ಕೆ ಹೋಗಿ ಉಮ್ರಾ  ನೆರವೇರಿಸಿದ್ದರು. ತಾವೀಗ ರಾಖಿ ಅಲ್ಲ, ಫಾತೀಮಾ (Phatima) ಎಂದು ಕರೆಯಿರಿ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದರು. ತಮ್ಮ ಹೆಸರನ್ನು ಫಾತೀಮಾ ಎಂದು ಬದಲಾಯಿಸಿಕೊಂಡಿರುವುದಾಗಿ ಹೇಳಿದ್ದರು. ಕೆಲ ದಿನಗಳ ಹಿಂದೆ ಈ ಡ್ರಾಮಾ ಕ್ವೀನ್​ ಬಂದೂಕು ಹಿಡಿದು ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧ ಎನ್ನುವ ದಿಲ್​ ದಿಯಾ ಹೈ ಜಾನ್​ ಭೀ ದೇಂಗೆ ಹಾಡನ್ನು ಗುನುಗಿದ್ದರು. ಭಾರತೀಯ ಸೈನಿಕರ ಸಮವಸ್ತ್ರ ತೊಟ್ಟ ನಟಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು. ಬಂದೂಕು ಹಿಡಿದು ಪ್ಯಾಲೆಸ್ತೀನ್​ಗೆ ಹೋಗು. ಅಲ್ಲಿ ನಿನ್ನ ಜೀವ ಕೊಡು, ಹೇಗಿದ್ದರೂ ಮತಾಂತರಗೊಂಡಿರುವೆಯಲ್ಲ, ನಿನ್ನವರು ಅಲ್ಲಿ ಕಾಯುತ್ತಿದ್ದಾರೆ ಹೋಗು ಎಂದು ಹೇಳುತ್ತಿದ್ದಾರೆ. ಸೈನಿಕರ ಸಮವಸ್ತ್ರ ತೊಟ್ಟು ಅವರನ್ನು ಅವಮಾನ ಮಾಡಬೇಡ ಎಂದು ಹಲವರು ನಟಿಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋಗುವೆ ಅಂದಿದ್ರಲ್ಲ, ಅಲ್ಲಿಂದ ನೇರವಾಗಿ ಪ್ಯಾಲಿಸ್ತೀನ್​ಗೆ ಹೋಗಿ ನಿನ್ನವರ ಜೊತೆ ಸೇರಿಕೋ. ಅಲ್ಲಿ ಜೀವ ಕೊಡು ಎಂದು ಗಂಭೀರವಾಗಿ ರಾಖಿ ವಿರುದ್ಧ ಟ್ರೋಲ್​ ಮಾಡಿದ್ದರು.

ರಾಖಿ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು: ಫಾತೀಮಾ ಏನು ನಿನ್ನೀ ಅವತಾರವಮ್ಮಾ ಎಂದ ಫ್ಯಾನ್ಸ್​!

ಇದಾದ ಬಳಿಕ ಅತ್ತ ಆದಿಲ್​ ಖಾನ್​ ಬೇರೆ ಯುವತಿಯ ಜೊತೆ ಮದ್ವೆಯಾಗಿರುವುದಾಗಿ ಘೋಷಿಸುತ್ತಿದ್ದಂತೆಯೇ ಸೋಷಿಯಲ್​ ಮೀಡಿಯಾದಲ್ಲಿ ಬಂದು ಇಲ್ಲಸಲ್ಲದ್ದನ್ನು ಮಾತನಾಡಿದ್ದರು ರಾಖಿ. ಅಷ್ಟಕ್ಕೂ  ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ರಾಖಿ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡದ್ದು ಎಲ್ಲವೂ ಸಿನಿಮೀಯವೇ.

ಕೆಲ ದಿನಗಳ ಹಿಂದೆ ತಮ್ಮ ಪ್ಲಾಸ್ಟಿಕ್​ ಸರ್ಜರಿ ದೇಹವನ್ನು ಪ್ರದರ್ಶಿಸುತ್ತಾ ಮಿನಿ ಸ್ಕರ್ಟ್​ ಧರಿಸಿ ರೀಲ್ಸ್​ ಮಾಡಿರುವ ರಾಖಿ ಅವರ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಸಕತ್​ ಟ್ರೋಲ್​ ಮಾಡಿದ್ದರು. ಇದು ಫಾತೀಮಾ ಅವತಾರವೋ, ರಾಖಿಯ ಅವತಾರವೋ ಎಂದು ಪ್ರಶ್ನಿಸಿದ್ದರು. ಇಷ್ಟು ಬಟ್ಟೆ ಹಾಕುವ ಬದಲು ಅದನ್ನೂ ತೆಗೆದುಬಿಡು, ಏನಂತೆ ಎಂದು ಕೆಲವರು ಪ್ರಶ್ನಿಸಿದ್ದರೆ, ಫಾತೀಮಾ, ಏನು ನಿನ್ನೀ ಅವತಾರವಮ್ಮಾ ಎಂದು ಮತ್ತೆ ಕೆಲವರು ನಟಿಯ ಕಾಲೆಳೆದಿದ್ದರು. 
 

ನಟಿ ಅಮೃತಾ ಆತ್ಮಹತ್ಯೆಗೆ ಭಾರಿ ಟ್ವಿಸ್ಟ್​! ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಸಾವಿನ ರಹಸ್ಯ ಬಯಲು?

Latest Videos
Follow Us:
Download App:
  • android
  • ios