Asianet Suvarna News Asianet Suvarna News

ಹೀರಾಮಂಡಿ: ಇದು ಅವಿಭಜಿತ ಭಾರತದ ಅತ್ಯಂತ ಪುರಾತನ ವೇಶ್ಯಾಗೃಹ

ಖ್ಯಾತ ಬಾಲಿವುಡ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು  ತಮ್ಮ ಚೊಚ್ಚಲ ವೆಬ್ ಸೀರಿಸ್ ಹೀರಾಮಂಡಿ: ದಿ ಡೈಮಂಡ್ ಬಜಾರ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದು, ವೆಬ್ ಸಿರೀಸ್‌ನ ಕತೆ ಏನು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ..

Sanjay Leela Bhansali Heerabandi web series is a tale of pre Independence Indias oldest brothel in Lahore akb
Author
First Published Feb 8, 2024, 3:18 PM IST

ಬಾಲಿವುಡ್‌ನ ಖ್ಯಾತ ಐತಿಹಾಸಿಕ ಸಿನಿಮಾಗಳಾದ ಬಾಜಿರಾವ್ ಮಸ್ತಾನಿ, ಪದ್ಮಾವತಿ, ಗಂಗೂಬಾಯಿ ಕತಿಯವಾಡಿ, ಗೋಲಿಯೋಂಕಿ ರಾಸ್‌ಲೀಲಾ, ದೇವದಾಸ್ ಮುಂತಾದ ಹಲವು ಸೂಪರ್‌ಹಿಟ್ ಜನಪ್ರಿಯ ಸಿನಿಮಾಗಳನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ  ಖ್ಯಾತ ಬಾಲಿವುಡ್ ನಿರ್ಮಾಪಕ ಹಾಗೂ ಸಂಗೀತಾ ಸಂಯೋಜಕ ಸಂಜಯ್ ಲೀಲಾ ಬನ್ಸಾಲಿ ಅವರು ಈಗ ವೆಬ್‌ ಸಿರೀಸ್ ಮೂಲಕ ಸಿನಿಮಾ ರಸಿಕರನ್ನು ರಂಜಿಸಲು ಮುಂದಾಗಿದ್ದಾರೆ. ಈ ಬಾರಿ ಅವರು ತಮ್ಮ ಚೊಚ್ಚಲ ವೆಬ್ ಸೀರಿಸ್ ಹೀರಾಮಂಡಿ: ದಿ ಡೈಮಂಡ್ ಬಜಾರ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದು, ಈ ಮೂಲಕ ಒಟಿಟಿಗೆ ಕಾಲಿರಿಸಿದ್ದಾರೆ.ತಮ್ಮ ಚೊಚ್ಚಲ ವೆಬ್ ಸಿರೀಸ್ ಹೀರಾಮಂಡಿ: ದಿ ಡೈಮಂಡ್ ಬಜಾರ್ ಎಂಬ ಒಟಿಟಿ ಸಿರೀಸ್‌ನ್ನು ನಿರ್ಮಿಸುತ್ತಿರುವ ಬನ್ಸಾಲಿ ಈಗಾಗಲೇ ಈ ವೆಬ್ ಸಿರೀಸ್‌ನ ಫಸ್ಟಲುಕ್ ರಿಲೀಸ್ ಮಾಡಿದ್ದಾರೆ.

ಹಲವು ತಾರೆಯರನ್ನು ಹೊಂದಿರುವ ಈ ವೆಬ್ ಸಿರೀಸ್‌ನ ಫಸ್ಟ್ ಲುಕ್ ಈಗಾಗಲೇ ಫೆಬ್ರವರಿ 1 ರಂದು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಈ 'ಹೀರಾಮಂಡಿ: ದಿ ಡೈಮಂಡ್ ಬಜಾರ್' ವೆಬ್ ಸಿರೀಸ್‌ನ ಕತೆ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ..

ಒಂದು ಕಾಲದಲ್ಲಿ ದೇಶದ ಅತ್ಯಂತ ಪುರಾತನ ವೇಶ್ಯಾಗೃಹವಾಗಿದ್ದ ಹೀರಾಮಂಡಿಯಲ್ಲಿರುವ ವೇಶ್ಯೆಯರ ಜೀವನದ ಬಗ್ಗೆ ಬೆಳಕು ಚೆಲ್ಲುವ ಕಥಾಹಂದರವನ್ನು ಈ ವೆಬ್ ಸಿರಿಸ್ ಹೊಂದಿದೆ. ಅಂದಹಾಗೆ ಈ ಹೀರಾಮಂಡಿ ಇರುವುದು ಪಾಕಿಸ್ತಾನದ ಈಗಿನ ರಾಜಧಾನಿ ಲಾಹೋರ್‌ನಲ್ಲಿ. ಇದು ವಿಭಜನೆಗೂ ಮೊದಲು ಭಾರತದ ಅತ್ಯಂತ ಪುರಾತನ ವೇಶ್ಯಾಗೃಹ ಎಂಬ ಕುಖ್ಯಾತಿ ಹೊಂದಿತ್ತು.  ಆದರೆ ಈ ಕುಖ್ಯಾತ ಪ್ರದೇಶಕ್ಕೆ ಇದ್ದ ರಾಜಮನೆತನದ ನಂಟಿನ ಬಗ್ಗೆ ನಿಮಗೆ ಗೊತ್ತಾ? 

ದಿನವೂ 25 ಪುರುಷರೊಂದಿಗೆ ಮಲಗುತ್ತಿದ್ದ ವೇಶ್ಯೆ, ಆ ಕೂಪದಿಂದ ತಪ್ಪಿಸಿಕೊಂಡ ಕಥೆ ಇದು!

ಆರಂಭದಲ್ಲಿ ಶಹಿ ಮೊಹಲ್ಲಾ ಎಂದು ಕರೆಯಲ್ಪಡುತ್ತಿದ್ದ ಹೀರಾ ಮಂಡಿ (Heera Mandi) ಮೊಘಲ್ ಯುಗದ  ಶ್ರೀಮಂತ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದೆ. ಲಾಹೋರ್‌ ವಾಲ್ಲೆಡ್ ಸಿಟಿ ಅಥವಾ ಓಲ್ಡ್ ಸಿಟಿಯಲ್ಲಿ ಇರುವ ಈ ನಗರ 15 ಮತ್ತು 16 ನೇ ಶತಮಾನಗಳಲ್ಲಿ ರೋಮಾಂಚಕ ಸಾಂಸ್ಕೃತಿಕ ಕೇಂದ್ರವಾಗಿತ್ತು, ಅಲ್ಲಿನ ಸುಂದರ ವೇಶ್ಯೆಯರು ಮತ್ತು ನಾಟ್ಯ ಪ್ರದರ್ಶಕರೂ ಶ್ರೀಮಂತರನ್ನು ರಂಜಿಸುತ್ತಿದ್ದರು.

ಹೀರಾ ಮಂಡಿಯನ್ನು ಮೊದಲಿಗೆ ರಾಜರು ಹಾಗೂ ರಾಜಮನೆತನದ ಪರಿಚಾರಕರು ಮತ್ತು ಸೇವಕರಿಗೆ ವಸತಿಗಾಗಿ  ಅಭಿವೃದ್ಧಿಪಡಿಸಲಾಗಿತ್ತು. ಈ ಪ್ರದೇಶವು ಲಾಹೋರ್ ಕೋಟೆಗೆ ಹತ್ತಿರವಾಗಿರುವುದರಿಂದ, ಜನರು ಇದನ್ನು 'ಶಾಹಿ ಮೊಹಲ್ಲಾ' (Royal Neighbourhood) ಎಂದು ಕರೆಯಲು ಪ್ರಾರಂಭಿಸಿದರು. ಶೀಘ್ರದಲ್ಲೇ, ಶಾಹಿ ಮೊಹಲ್ಲಾವು ತವೈಫ್‌ಗಳಿಗೆ ನೆಲೆಯಾಯಿತು ತವೈಫ್‌ಗಳು (tawaifs) ಅಂದರೆ  ರಾಜಮನೆತನದೊಂದಿಗೆ ಸಂಬಂಧ ಹೊಂದಿದ್ದ ವೃತ್ತಿಪರ ಮನೋರಂಜಕರು.
ಮೊಘಲರು ಭಾರತಕ್ಕೆ ಬರುತ್ತಿದ್ದಂತೆ ಈ ತವೈಫ್ ಸಂಸ್ಕೃತಿ ಭಾರತಕ್ಕೂ ವ್ಯಾಪಿಸಿತ್ತು.

ರಾಜ  ದರ್ಬಾರ್‌ನಲ್ಲಿ ಮನೋರಂಜನೆಗಾಗಿ ಹಾಗೂ ನೃತ್ಯ ಪ್ರದರ್ಶನ ನೀಡಲು ಬಹಳ ಸುಂದರವಾಗಿದ್ದ ಮನೋರಂಜನೆಯಲ್ಲಿ ಎತ್ತಿದ ಕೈ ಎನಿಸಿದ್ದ ಮಹಿಳೆಯರನ್ನು ಮೊಘಲರು ಮುಖ್ಯವಾಗಿ ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ್‌ನಿಂದ ಕರೆತರುತ್ತಿದ್ದರು. ಈ ತವೈಫ್‌ಗಳು ಆ ಕಾಲದ ಅತ್ಯುತ್ತಮ ಉಸ್ತಾದ್‌ಗಳಿಂದ (ತರಬೇತುದಾರರು) ಸಂಗೀತ, ಶಿಷ್ಟಾಚಾರ ಮತ್ತು ನೃತ್ಯದಲ್ಲಿ ಚೆನ್ನಾಗಿ ತರಬೇತಿ ಪಡೆದಿರುತ್ತಿದ್ದರು. ಇವರು ಅಂದಿನ ಕಾಲದಲ್ಲಿ ಸಂಗೀತಾ ಹಾಗೂ ನೃತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದರು.

ವೇಶ್ಯಾಗೃಹದಲ್ಲಿ ಸಿಕ್ಕಿಬಿದ್ದ ವೇಶ್ಯೆಯನ್ನು ಬಂಧಿಸುವಂತಿಲ್ಲ: ಸುಪ್ರೀಂ

ಆ ಸಂದರ್ಭಗಳಲ್ಲಿ ಈ ತವೈಫ್‌ಗಳು ವೇಶ್ಯೆರಾಗಿರಲಿಲ್ಲ, ಬದಲಿಗೆರಾಜಮನೆತನದ ಗಣ್ಯರಿಗೆ ಮನೋರಂಜನೆ ನೀಡುವವರಾಗಿದ್ದರು. ರಾಜಮನೆತನದವರು ತಮ್ಮ ಮಕ್ಕಳನ್ನು ಈ ಮಹಿಳೆಯರಿಂದ ಶಿಷ್ಟಾಚಾರ ಮತ್ತು ಪ್ರಚಲಿತ ಸಂಸ್ಕಾರದ ಪಾಠಗಳನ್ನು ಕಲಿಯಲು ಕಳುಹಿಸುತ್ತಿದ್ದರಂತೆ, ಮೊಘಲ್ ರಾಜಮನೆತನದಲ್ಲಿ ತವೈಫ್ ಆಗಿದ್ದ ಅನಾರ್ಕಲಿಯ ಜೊತೆ ರಾಜ ಅಕ್ಬರ್ ಪುತ್ರ ಸಲೀಂ ಸಂಬಂಧ ಹೊಂದಿದ್ದ ವಿಚಾರ ಸೇರಿದಂತೆ ಈ ಲಾಹೋರ್‌ನ ತವೈಫ್‌ಗಳ ಬಗ್ಗೆ ಹಲವಾರು ಕಾಲ್ಪನಿಕ ಮತ್ತು  ಜನಪ್ರಿಯ ನಿರೂಪಣೆಗಳಲ್ಲಿಯೂ ಉಲ್ಲೇಖವಿದೆ.

Latest Videos
Follow Us:
Download App:
  • android
  • ios