Asianet Suvarna News Asianet Suvarna News

ದಿನವೂ 25 ಪುರುಷರೊಂದಿಗೆ ಮಲಗುತ್ತಿದ್ದ ವೇಶ್ಯೆ, ಆ ಕೂಪದಿಂದ ತಪ್ಪಿಸಿಕೊಂಡ ಕಥೆ ಇದು!

ಕಾಯುವವರಿಲ್ಲದಿದ್ದರೆ ಹೆಣ್ಣು ಮಕ್ಕಳ ಬಾಳಂತೂ ಬಹಳ ಘೋರ. 12ನೇ ವಯಸ್ಸಿಗೆ ವೇಶ್ಯಾಗೃಹಕ್ಕೆ ಮಾರಾಲ್ಪಟ್ಟು ಅಲ್ಲಿ ಹಲವು ವರ್ಷಗಳ ಕಾಲ ಕಾಮುಕರ ಹಿಡಿತದಲ್ಲಿ ನಲುಗಿ 17ರ ಹರೆಯಕ್ಕೆ ಅಲ್ಲಿಂದ ತಪ್ಪಿಸಿಕೊಂಡು ಇಂದು ತನ್ನಂತೆ ನೊಂದವರ ಏಳ್ಗೆಗಾಗಿ ಶ್ರಮಿಸುತ್ತಿರುವ ವೀರ ನಾರಿಯೊಬ್ಬಳ ಕತೆ ವ್ಯಥೆ ಇದು.

Sold to a brothel at 12, first abortion at 13 This is the story of a girl who escaped from the brothel in Pune akb
Author
First Published Nov 22, 2023, 3:21 PM IST

ಪುಣೆ: ಕೆಲವರಿಗೆ ಬದುಕು ಹೂವಿನ ಹಾಸಿಗೆ ಮತ್ತೆ ಕೆಲವರಿಗೆ ರೌರವ ನರಕ, ಅಪ್ಪ ಅಮ್ಮನೂ ಇಲ್ಲದೇ ಕಾಯುವವರಿಲ್ಲದಿದ್ದರೆ ಹೆಣ್ಣು ಮಕ್ಕಳ ಬಾಳಂತೂ ಬಹಳ ಘೋರ ಇದೇ ರೀತಿ 12ನೇ ವಯಸ್ಸಿಗೆ ವೇಶ್ಯಾಗೃಹಕ್ಕೆ ಮಾರಾಲ್ಪಟ್ಟು ಅಲ್ಲಿ ಹಲವು ವರ್ಷಗಳ ಕಾಲ ಕಾಮುಕರ ಹಿಡಿತದಲ್ಲಿ ನಲುಗಿ 17ರ ಹರೆಯಕ್ಕೆ ಅಲ್ಲಿಂದ ತಪ್ಪಿಸಿಕೊಂಡು ಇಂದು ತನ್ನಂತೆ ನೊಂದವರ ಏಳ್ಗೆಗಾಗಿ ಶ್ರಮಿಸುತ್ತಿರುವ ವೀರ ನಾರಿಯೊಬ್ಬಳ ಕತೆ ವ್ಯಥೆ ಇದು.

ವೇಶ್ಯಾವಾಟಿಕೆಗೆ ಕೆಲವರು ಬೇಕೆಂದೇ ಇಳಿದರೆ ಮತ್ತೆ  ಕೆಲವರಿಗೆ ವಿಧಿಯಾಟ, ಒಮ್ಮೆ ಈ ಪಾಪಿಗಳ ಕೂಪ ಸೇರಿದ ಮೇಲೆ ಮತ್ತೆ ಹೊರಬರುವುದು ಕನಸಿನ ಮತ್ತೆ ಹೋಗಬೇಕೆಂದರು ತಡೆಯಲು ಸಾವಿರ ಕೈಗಳಲ್ಲಿ ಹೊಂಚು ಹಾಕಿ ನಿಂತಿರುತ್ತವೆ. ವಿರೋಧಗಳ ಮೀರಿ ಹೊರಟರೆ ಹೊಡೆದು ಬಡೆದು ಚಿತ್ರಹಿಂಸೆ, ಅಲ್ಲಿ ಹೆಣ ಬೀಳಿಸೋದೊಂದು ಬಾಕಿ ಇಂತಹ ಸ್ಥಿತಿಯಲ್ಲಿ ಇಂದು ಹಲವು ಹೆಣ್ಣು ಮಕ್ಕಳು ಪಡಬಾರದ ಪಾಡು ಪಡುತ್ತಿದ್ದಾರೆ. ಹೀಗೆ ಪಾಡು ಪಟ್ಟು ಹೊರಬಂದ ಹೆಣ್ಣು ಮಗಳೊಬ್ಬಳು ತನ್ನ ಪಾಡು ಹೇಗಿತ್ತು ಅಲ್ಲಿಂದ ತಪ್ಪಿಸಿಕೊಂಡು ಹೊರ ಬಂದಿದ್ದು ಹೇಗೆ ಎಂಬುದನ್ನು ಹೂಮನ್ಸ್ ಆಫ್ ಬಾಂಬೆ ಜೊತೆ ಆಕೆಯೇ ಬಿಚ್ಚಿಟ್ಟಿದ್ದಾಳೆ. ಅದರ ಸಾರಾಂಶ ಇಲ್ಲಿದೆ ನೋಡಿ..

ಅಕ್ರಮವಾಗಿ ಭಾರತ ಪ್ರವೇಶಿಸಿ ಬೆಂಗಳೂರಿಗೆ ಬರುತ್ತಿದ್ದ 14 ಅಕ್ರಮ ಬಾಂಗ್ಲಾ ವಲಸಿಗರು ಸೆರೆ

12ರ ವಯಸ್ಸಿಗೆ ನಾನು ಪುಣೆಯ ವೇಶ್ಯಾಗೃಹಕ್ಕೆ ಮಾರಲ್ಪಟ್ಟೆ. ಪ್ರತಿದಿನವೂ 25ಕ್ಕೂ ಹೆಚ್ಚು ಪುರುಷರೊಂದಿಗೆ ಮಲಗಬೇಕಿತ್ತು. 13ರ ಹರೆಯಕ್ಕೆ ಮೊದಲ ಬಾರಿ ಗರ್ಭಪಾತಕ್ಕೆ ಒಳಗಾದೆ. ಆದರೆ 17ರ ಹರೆಯಕ್ಕೆ ಗ್ರಾಹಕನೋರ್ವನ ಸಹಾಯದಿಂದ  ವೇಶ್ಯಾಗ್ರಹದಿಂದ ತಪ್ಪಿಸಿಕೊಂಡೆ. ನಾನು ಆ ಪಾಪಿಗಳ ಕೂಪದಿಂದ ತಪ್ಪಿಸಿಕೊಂಡು ಬಂದಿದೆ ಒಂದು ರೋಚಕ ಕತೆ. ನನ್ನ ಗ್ರಾಹಕನೋರ್ವನ ಬಳಿ ನಾನು ಇಲ್ಲಿಂದ ತೆರಳಬೇಕು ಎಂದು ಪ್ರತಿಸಲವೂ ಹೇಳುತ್ತಿದೆ.

ನಾನು ಹೀಗೆ ಹೇಳಿ 5 ವರ್ಷಗಳೇ ಕಳೆದಿತ್ತು. ಅಲ್ಲಿ ಕಿರುಕುಳ ಪ್ರತಿದಿನವೂ ಹೆಚ್ಚುತ್ತಿತ್ತು. ಆ ಗ್ರಾಹಕ ನನ್ನ ಮೇಲೆ ಸದಾ ಕರುಣೆ ತೋರುತ್ತಿದ್ದ. ನನ್ನ ನಂಬಿಕೆಗೆ ಆತ ಅರ್ಹನಾಗಿದ್ದ. ಕೊನೆಗೊಂದು ದಿನ ಆತ ಗಣಪತಿ ಹಬ್ಬದ ಸಂದರ್ಭದಲ್ಲಿ ಪುರುಷರ ಧಿರಿಸಿನೊಂದಿಗೆ ನನ್ನ ಬಳಿ ಬಂದ ಆತ ಗಣೇಶ ವಿಸರ್ಜನೆಯ ಮೂರನೇ ದಿನ ಆತನನ್ನು ವೇಶ್ಯಾಗ್ರಹದ ಕೆಳಗೆ ಭೇಟಿಯಾಗಲು ತಿಳಿಸಿ ಹೊರಟು ಹೋದ ಅದರಂತೆ ಅಂದು ನಾನು ಆತನನ್ನು ಗುಂಪಿನಲ್ಲಿ ಗುರುತಿಸಿ ಆತನ ಹಿಂದೆಯೇ ಹೋದೆ ಆತ ಕಾರಿನಲ್ಲಿ ರೈಲು ನಿಲ್ದಾಣ ತಲುಪಿದೆ. ಆತ ನನ್ನನ್ನು ಬಿಡಲು ರೈಲು ನಿಲ್ದಾಣದವರೆಗೂ ಬಂದ  ಆ ಇಡೀ ದಿನ ನಾನಂತೂ ಗಾಬರಿಯಿಂದಲೇ ಇದ್ದೆ ಒಂದು ವೇಳೆ ಆ ಪಾಪಿಗಳ ಕೈಗೆ ನಾ ಮತ್ತೆ ಸಿಕ್ಕಿಬಿದ್ದರೆ ಏನಾಗಬಹುದು ಎಂದು ನಾನು ಯೋಚಿಸುತ್ತಲೇ ಇದ್ದೆ. ಬಹುಶಃ ನನ್ನ ಮನವಿಯನ್ನು ಗಣೇಶ ಕೇಳಿರಬೇಕು ನಾನು ಸುರಕ್ಷಿತವಾಗಿ ಪುಣೆ ಗಡಿ ದಾಟಿದೆ. 

ನಾನು ಬಾಲ್ಯ ಕಳೆದ ನನ್ನ ಹಳ್ಳಿಯ ಗಲ್ಲಿಗೆ ಮರಳಿದಾಗ ನಾನು ಸ್ವಾತಂತ್ರಳಾಗಿದೆ ಅಳಲು ಶುರು ಮಾಡಿದ್ದೆ. ಇಡೀ ಗ್ರಾಮವೇ ನನ್ನ ಮನೆಗೆ ಹರಿದು ಬಂತು. ಪ್ರತಿಯೊಬ್ಬರು ನಾನು ಇಷ್ಟು ದಿನ ಎಲ್ಲಿದೆ ಎಂಬ ಪ್ರಶ್ನೆಯೊಂದಿಗೆ ಬಂದಿದ್ದರು. ನಾನು ಅಲ್ಲಿ ಏನಾಗಿತ್ತು ಎಂಬುದನ್ನು ನನ್ನ ಅಮ್ಮನಿಗೆ ಮಾತ್ರ ತಿಳಿಸಿದ್ದೆ. ನಾನು ಪ್ರತಿಯೊಂದನ್ನು ಆಕೆಗೆ ಹೇಳಿರಲಿಲ್ಲ, ನನ್ನ ಹಣೆಬರಹಕ್ಕೆ ಹೆತ್ತಬ್ಬೆ ಆಕೆಯನ್ನೇ ಬೈದುಕೊಂಡಳು, ತನ್ನ ನಿರ್ಲಕ್ಷ್ಯದಿಂದ ಹೀಗಾಯ್ತು ಎಂದು ಆಕೆ ಆಕೆಯನ್ನೇ ಶಪಿಸಿಕೊಂಡಳು. ನಂತರ ಮಾರನೇ ದಿನವೇ ದೂರು ನೀಡುವುದಕ್ಕಾಗಿ ಆಕೆ ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಳು.  ಆದರೆ ಅಲ್ಲಿದ್ದ ಪೊಲೀಸ್ ಅಧಿಕಾರಿ ನೀವು ಅಂತಹ ಸ್ಥಳಗಳಿಗೆ ನಿಮ್ಮಿಷ್ಟದಿಂದಲೇ ಹೋಗುತ್ತೀರಿ ಎಂದು ನಮ್ಮನ್ನೇ ಕೆಟ್ಟದಾಗಿ ಹಂಗಿಸಿದ, ನೀವೂ ನಿಮ್ಮ ಕೆಲಸ ಸರಿಯಾಗಿ ಮಾಡಿದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ನಾನು ಅವರಿಗೆ ಉತ್ತರಿಸಿದೆ. 

ಬಾಂಗ್ಲಾದ ಮಾನವ ಸ್ಮಗ್ಲರ್ಸ್‌ ವಿರುದ್ಧ ಎನ್‌ಐಎ ಭರ್ಜರಿ ಬೇಟೆ: ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ರೇಡ್‌

ದೂರು ನೀಡಿ 2 ವರ್ಷದ ನಂತರ ನನಗೆ ಬೆದರಿಕೆ ಕರೆಗಳು ಬರಲು ಶುರುವಾದವು.  ಒಬ್ಬನಂತೂ ನಾನು ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ನನ್ನ ಮುಖದ ಮೇಲೆ ನೀರು ಎರಚಿದ್ದ ನಾನಂತೂ ಅದು ಆಸಿಡ್ ಇರಬಹುದೆಂದೂ ಹೆದರಿ ಹೋಗಿದ್ದೆ. ನಿರಂತರ ಭಯದಿಂದಲೇ ನಾವು ಬದುಕುತ್ತಿದ್ದೆವು. ಇದಾಗಿ ಸ್ವಲ್ಪ ಸಮಯದಲ್ಲೇ ನೆರೆಯ ಗ್ರಾಮದವರು ನನ್ನೊಂದಿಗೆ ಮಾತನಾಡುವುದನ್ನು ಬಿಟ್ಟರು. ಅವರು ನಿನ್ನ ಸಹೋದರಿಯರನ್ನು ಯಾರು ಮದುವೆಯಾಗುತ್ತಾರೆ ಎಂದು ಪ್ರಶ್ನಿಸುತ್ತಿದ್ದರು. ನಾನು ತಲೆಕೆಡಿಸಿಕೊಳ್ಳಲಿಲ್ಲ,  ಎರಡೂ ವರ್ಷಗಳ ಕಾಲ ನನ್ನ ರಾತ್ರಿ ಹಗಲುಗಳನ್ನು ಪೊಲೀಸ್ ಸ್ಟೇಷನ್‌ನಲ್ಲೇ ಕಳೆದೆ. ತಪ್ಪಿತಸ್ಥರು ಯಾರೂ ಎಂಬುದು ಎಲ್ಲರಿಗೂ ಗೊತ್ತಿತ್ತು.  ಆದರೆ ಅವರು ಹೊಂದಿದ್ದ ಬಲವಾದ ಸಂಪರ್ಕಗಳಿಂದಾಗಿ ಯಾರು ಅವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿರಲಿಲ್ಲ, ಆದರೆ 2019ರಲ್ಲಿ ಎನ್‌ಜಿಒ ಒಂದರ ಸಹಾಯದಿಂದ ಅವರನ್ನು ಕೊನೆಗೂ ಬಂಧಿಸಲಾಯ್ತು. ಆ ರಾತ್ರಿ ನಾನು ಸುಖವಾಗಿ ನಿದ್ರಿಸಿದೆ. 

ಇಂದು ನಾನೊಂದು ಎನ್‌ಜಿಒ ಜೊತೆ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ಹೀಗೆ ಸಂಕಷ್ಟಕ್ಕೆ ಸಿಲುಕಿ ಪಾರಾಗಿ ಬಂದ ನಾಯಕಿಯರಲ್ಲಿ ನಾನು ಒಬ್ಬಳು. ಈ ಎಂಟು ವರ್ಷಗಳಲ್ಲಿ ನಾನು ಮಾನವ ಕಳ್ಳಸಾಗಣೆ ಜಾಲದಿಂದ 200ಕ್ಕೂ ಅಧಿಕ ಹೆಣ್ಣು ಮಕ್ಕಳನ್ನು ರಕ್ಷಿಸಿದ್ದೇನೆ. ಇದರಲ್ಲಿ 3 ವರ್ಷದ ಮಗುವೂ ಇತ್ತು.  ಇಂದಿಗೂ ಆ ಮಗುವಿನ ತಾಯಿ, ನಿಮ್ಮ ಕಾರಣದಿಂದಾಗಿ ಈಕೆ ಇಂದು ಇಲ್ಲಿದ್ದಾಳೆ ಎಂದು ಹೇಳುತ್ತಿರುತ್ತಾರೆ. 

ನಾನು ನಡೆದು ಬಂದ ಹಾದಿಯ ಹಿಂದಿರುಗಿ ನೋಡಿದರೆ  ನಾನು ಅಲ್ಲಿಂದ ತಪ್ಪಿಸಿಕೊಂಡು ಬರಬಹುದು ಎಂಬ ಊಹೆಯೂ ಇರಲಿಲ್ಲ, ಬಹುಶಃ ನನ್ನ ಇಡೀ ಜೀವನ ಅಲ್ಲೇ ಕಳೆದು ಹೋಗಿರಬಹುದು. ಆದರೆ ನನ್ನ ಇಡೀ ಜೀವನವನ್ನು ಕತ್ತಲೆ ಆಳುವುದಕ್ಕೆ ನಾ ಬಿಡಲಿಲ್ಲ,  ಅದರ ಕಾರಣದಿಂದಲೇ ನಾನು ಇಂದು ಇಲ್ಲಿದ್ದೇನೆ. ಅಲ್ಲದೇ ಘಟನೆ ನಡೆದು ಒಂದು ದಶಕದ ನಂತರ ನಾನು ನನ್ನ ಕತೆಯನ್ನು ನಿಮಗೆ ಹೇಳುತ್ತಿದ್ದೇನೆ. ಬದುಕಿನಲ್ಲೇ ಏನೇ ಸಂಭವಿಸಬಹುದು ಅವೆಲ್ಲದರಿಂದ ನಾವು ಹೊರಗೆ ಬರಲು ಸಾಧ್ಯ ಎಂಬುದನ್ನು ನಾನು ನಿಮಗೆ ಈ ಮೂಲಕ ನೆನಪಿಸುತ್ತಿದ್ದೇನೆ ಎಂದು ಹೇಳುತ್ತಾರೆ. 

Follow Us:
Download App:
  • android
  • ios