ನನಗೆ ವಯಸ್ಸಾಗಿದೆ ಎಂದ ಬಾಲಿವುಡ್ ನಟ ಆಲಿಯಾ ಜೊತೆ ಈ ವಯಸ್ಸಲ್ಲಿ ರೋಮ್ಯಾನ್ಸ್ ಮಾಡಲಾರೆ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಮನದಾಳ
ಮುಂಬೈ(ಏ.9): ಬಾಲಿವುಡ್‌ನ ಈ ತಲೆಮಾರಿನ ನಟಿ ಆಗಿರುವ ಆಲಿಯಾ ಜೊತೆ ಆನ್‌ಸ್ಕ್ರಿನ್‌ನಲ್ಲಿ ರೋಮ್ಯಾನ್ಸ್ ಮಾಡಲು ನನಗೆ ತುಂಬಾ ವಯಸ್ಸಾಗಿದೆ ಎಂದು ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಹೇಳಿದ್ದಾರೆ. ಹಿರಿಯ ನಟರು ಯುವ ನಟಿಯರೊಂದಿಗೆ ಸಿನಿಮಾದಲ್ಲಿ ರೋಮ್ಯಾನ್ಸ್ ಮಾಡುವುದು ಹೊಸದೇನಲ್ಲ, ಆದರೆ ನಟರು ತಮ್ಮ ವಯಸ್ಸನ್ನು ತೆರೆಯ ಮೇಲೆ ಅಳವಡಿಸಿಕೊಳ್ಳಬೇಕು ಎಂದು ಸಂಜಯ್ ದತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗುಡ್ ಟೈಮ್ಸ್ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಸಂಜಯ್ ದತ್, ತಮ್ಮ ಈ ವಯಸ್ಸಿನಲ್ಲಿ ಆನ್ ಸ್ಕ್ರಿನ್‌ನಲ್ಲಿ ಆಲಿಯಾ ಭಟ್ ಜೊತೆ ರೊಮ್ಯಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಯುವ ನಟಿಯರ ಜೊತೆ ತೆರೆಯ ಮೇಲೆ ರೋಮ್ಯಾನ್ಸ್ ಮಾಡುವ ಬಗ್ಗೆ ಸಂಜಯ್ ದತ್ ಅವರ ನಿಲುವಿನ ಬಗ್ಗೆ ಸಂದರ್ಶನದಲ್ಲಿ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಯಸ್ಸಿನಲ್ಲಿ ನಾನು ಆಲಿಯಾ ಭಟ್ ಅವರೊಂದಿಗೆ ರೊಮ್ಯಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಸಂಜಯ್ ದತ್ (Sanjay Dutt) ಮತ್ತು ಆಲಿಯಾ ಭಟ್ (Alia Bhatt) ಕಲಾಂಕ್ (Kalank) ಮತ್ತು ಸಡಕ್ 2 (Sadak 2)ನಂತಹ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸಂಜಯ್ ದತ್ ಅವರು ಕಲಾಂಕ್‌ನಲ್ಲಿ ಮಾಧುರಿ ದೀಕ್ಷಿತ್ ಎದುರು ಜೋಡಿಯಾಗಿದ್ದರೆ, ಆಲಿಯಾ ಭಟ್ (Alia Bhatt), ವರುಣ್ ಧವನ್ (Varun Dhawan) ಎದುರು ಜೋಡಿಯಾಗಿದ್ದರು.
ರಣಬೀರ್-ಅಲಿಯಾ ಮದುವೆ ಊಟದ ಮೆನುವಿನಲ್ಲಿದೆ ತರಹೇವಾರಿ ಖಾದ್ಯಗಳು
ಸಡಕ್ 2 ಸಿನಿಮಾದಲ್ಲಿ ಸಂಜಯ್ ದತ್ ಅವರು ರವಿ (Ravi)ಹೆಸರಿನ ಕ್ಯಾಬ್ ಡ್ರೈವರ್ (cab driver) ಪಾತ್ರವನ್ನು ನಿರ್ವಹಿಸಿದ್ದಾರೆ, ಈ ಸಿನಿಮಾದಲ್ಲಿ ಅವರು ಆರ್ಯ (Aarya) (ಆಲಿಯಾ ಭಟ್) ಳನ್ನು ಕೈಲಾಶಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡುತ್ತಾರೆ. ಸಡಕ್ 2 ಮೂಲಕ ಮಹೇಶ್ ಭಟ್ ಅವರು ಮತ್ತೆ ನಿರ್ದೇಶನಕ್ಕೆ ಬಂದರು. ಆದಾಗ್ಯೂ, ಈ ಸಿನಿಮಾ ವೀಕ್ಷಕರನ್ನು ಆಕರ್ಷಿಸಲು ವಿಫಲವಾಯಿತು ಮತ್ತು ಭಾರೀ ಟೀಕೆಗೆ ಗುರಿಯಾಯಿತು.
ಸಂದರ್ಶನದಲ್ಲಿ ಹೊಸ ತಲೆಮಾರಿನ ನಟರ ಬಗ್ಗೆ ಮಾತನಾಡಿದ ಸಂಜಯ್ ದತ್ , ಈ ತಲೆಮಾರಿನ ನಟರನ್ನು 'ವಿಚಾರ ಕೇಂದ್ರಿತ ಮತ್ತು ಶ್ರಮಶೀಲ ಮಕ್ಕಳು' ಎಂದು ಕರೆದರು. ಅವರು ತುಂಬಾ ಶ್ರಮವಹಿಸುವ ಮಕ್ಕಳು, ಅವರು ತಮ್ಮ ಕೆಲಸದ ಬಗ್ಗೆ ತೀವ್ರ ಕಾಳಜಿಯಿಂದ ಗಮನಹರಿಸುತ್ತಾರೆ ಮತ್ತು ಅವರನ್ನು ನೋಡಲು ಮತ್ತು ಅವರೊಂದಿಗೆ ಕೆಲಸ ಮಾಡಲು ಸಂತೋಷವಾಗುತ್ತದೆ ಎಂದು ಹೇಳಿದರು.
ಹೆಂಡತಿಯ ಪಾದ ಮಸಾಜ್ ಮಾಡುತ್ತಿರುವ Sanjay Dutt ವಿಡಿಯೋ ವೈರಲ್!
ಸಂಜಯ್ ದತ್ ಈಗ ತಮ್ಮ ಚೊಚ್ಚಲ, ಕೆಜಿಎಫ್: ಚಾಪ್ಟರ್ 2 ಗೆ ಸಜ್ಜಾಗುತ್ತಿದ್ದಾರೆ. ಯಶ್ (Yash) ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ (Prashanth Neel) ನಿರ್ದೇಶಿಸಿದ್ದಾರೆ. ಅವರು ಚಿತ್ರದಲ್ಲಿ ವಿರೋಧಿ, ಉಗ್ರ ಅಧೀರನ (Adheera) ಪಾತ್ರವನ್ನು ನಿರ್ವಹಿಸಿದ್ದಾರೆ.
ತಮ್ಮ ಕೆಜಿಎಫ್ ಚಾಪ್ಟರ್ 2 ಸಹನಟ ಯಶ್ ಬಗ್ಗೆ ಮಾತನಾಡಿದ ಸಂಜು ಬಾಬಾ ನಾನು ಯಶ್ ಅವರನ್ನು ನೋಡುತ್ತೇನೆ ಮತ್ತು ನಾನು 20 ರಿಂದ 30 ವರ್ಷಗಳ ಹಿಂದಿನ ನನ್ನನ್ನು ನೋಡುತ್ತೇನೆ ಮತ್ತು ಅವರ ಈ ರೀತಿಯ ಸಾಧನೆಯನ್ನು ನೋಡುವುದು ನನಗೆ ಹೆಮ್ಮೆ ತರುತ್ತದೆ. ದೂರ ಕುಳಿತು ಎಲ್ಲಾ ಹುಡುಗರಾದ ರಣಬೀರ್ (Ranbir), ಯಶ್ (Yash), ರಾಮ್ ಚರಣ್ (Ram Charan) ಮತ್ತು ಜೂ.ಎನ್.ಟಿ.ಆರ್ (JrNTR) ಮತ್ತು ಈ ಎಲ್ಲ ಹುಡುಗರನ್ನು ನೋಡುವುದಕ್ಕೆ ನನಗೆ ಹೆಮ್ಮೆ ಆಗುತ್ತದೆ. ಭಾರತೀಯ ಚಿತ್ರರಂಗದ ನಮ್ಮ ಕುಟುಂಬದಲ್ಲಿ ನಾನು ಅದರ ಭಾಗವಾಗಿರಲು ಹೆಮ್ಮೆಪಡುತ್ತೇನೆ ಎಂದು ಅವರು ಹೇಳಿದ್ದರು.
ಕೆಜಿಎಫ್ ಚಾಪ್ಟರ್ 2 ರ ಹೊರತಾಗಿ, ಸಂಜಯ್ ದತ್, ರಣಬೀರ್ ಕಪೂರ್ ಅವರ ಶಂಶೇರಾ (Shamshera) ಮತ್ತು ಅಕ್ಷಯ್ ಕುಮಾರ್ (Akshay Kumar) ಅವರ ಪೃಥ್ವಿರಾಜ್ (Prithviraj) ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
