ಅಲಿಯಾ ಭಟ್ ಮತ್ತು ರಭಮೀರ್ ಕಪೂರ್ ಮದುವೆಯಲ್ಲಿ ತರಹೇವಾರಿ ಖಾದ್ಯಗಳು ಅತಿಥಿಗಳಿಗಾಗಿ ಸಿದ್ಧವಾಗುತ್ತಿದೆ. ಮೆಕ್ಸಿಕನ್, ಇಟಾಲಿಯನ್, ಮುಘಲೈ, ಪಂಜಾಬಿ ಸೇರಿದಂತೆ ವಿವಿಧ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದ್ದು ಸುಮಾರು 50ಕ್ಕೂ ಹೆಚ್ಚು ಊಟದ ಕೌಂಟರ್ ಇರಲಿದೆಯಂತೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಗ್ರ್ಯಾಂಡ್ ಮದುವೆ ಬಳಿಕ ಬಾಲಿವುಡ್ ಮತ್ತೊಂದು ಮದುವೆಗೆ ಸಿದ್ಧವಾಗಿದೆ. ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್(Ranbir Kapoor and Alia Bhatt) ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಏಪ್ರಿಲ್ 13ರಿಂದ ಇಬ್ಬರ ಮದುವೆ ಸಮಾರಂಭ ಪ್ರಾರಂಭವಾಗುತ್ತಿದೆ. ಅಂದಹಾಗೆ ಇಬ್ಬರ ಮದುವೆ ವಿಚಾರ ಅನೇಕ ತಿಂಗಳಿಂದ ಸದ್ದು ಮಾಡುತ್ತಿದೆ. ಅಲಿಯಾ ಮತ್ತು ರಣಬೀರ್ ಕಪೂರ್ ಮದುವೆ ಸಂಭ್ರಮ ಏಪ್ರಿಲ್ 13 ರಿಂದ 17ರ ವರೆಗೆ ನಡೆಯಲಿದೆ (Ranbir Kapoor and Alia Bhatt wedding date). ಸಂಗೀತ, ಮೆಹಂದಿ ಸಮಾರಂಭಗಳು ಈಗಾಗಲೇ ನಿಗದಿಯಾಗಿದೆ. ಆದರೆ ಈ ತಾರಾಜೋಡಿ ಮದುವೆ ದಿನಾಂಕ ಖಚಿತವಾಗಿ ಬಹಿರಂಗ ಪಡಿಸಿಲ್ಲ. ಇಬ್ಬರ ಮದುವೆ ಸಮಾರಂಭದಲ್ಲಿ ತೀರ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಗೆಸ್ಟ್ ಲಿಸ್ಟ ಕೂಡ ಸಿದ್ದವಾಗಿದ್ದು ಸುಮಾರು 450 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಸದ್ಯ ಅಲಿಯಾ ಮತ್ತು ರಣಬೀರ್ ಮದುವೆ ಊಟದ ಮೆನು(wedding menu) ಕೂಡ ಬಹಿರಂಗವಾಗಿದೆ. ಆಂಗ್ಲ ಮಾಧ್ಯಮ ವರದಿ ಮಾಡಿರುವ ಪ್ರಕಾರ ಅಲಿಯಾ ಮದುವೆಯಲ್ಲಿ ತರಹೇವಾರಿ ಖಾದ್ಯಗಳು ಅತಿಥಿಗಳಿಗಾಗಿ ಸಿದ್ಧವಾಗುತ್ತಿದೆ. ಭಾರತದ ಅಡುಗೆ ಶೈಲಿ ಮಾತ್ರವಲ್ಲದೆ ವಿದೇಶಿ ಊಟದ ಶೈಲಿ ಕೂಡ ಅಲಿಯಾ ಮತ್ತು ರಣಬೀರ್ ಮದುವೆಗಾಗಿ ತಯಾರಾಗುತ್ತಿದೆ. ಮೆಕ್ಸಿಕನ್, ಇಟಾಲಿಯನ್, ಮುಘಲೈ, ಪಂಜಾಬಿ ಸೇರಿದಂತೆ ವಿವಿಧ ಶೈಲಿಯ ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 50ಕ್ಕೂ ಹೆಚ್ಚು ಊಟದ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

Alia Bhatt Ranbir Kapoor Wedding - ನಟಿಯ ಬೆಸ್ಟ್‌ ಫ್ರೆಂಡ್‌ನಿಂದ ಬ್ಯಾಚುಲರ್ ಪಾರ್ಟಿ

ಪ್ರಸಿದ್ಧ ಬಾಣಸಿಗರಿಂದ ರಣಬೀರ್ ಮತ್ತು ಅಲಿಯಾ ಮದುವೆ ಊಟ ತಯಾರಾಗುತ್ತಿದೆ. ರಣಬೀರ್ ಕಪೂರ್ ತಾಯಿ ನೀತು ಕಪೂರ್ ಲಕ್ನೋ ಮತ್ತು ದೆಹಲಿಯಿಂದ ಬಾಣಸಿಗರನ್ನು ಕರೆಸಿದ್ದಾರಂತೆ. ಕಪೂರ್ ಕುಟುಂಬ ದ ನೆಚ್ಚಿನ ಬಾಣಸಿಗರು ರಣಬೀರ್ ಮದುವೆ ಊಟ ತಯಾರಿಸುತ್ತಿದ್ದಾರೆ. ಊಟದಲ್ಲಿ ವೆಜ್ ಮತ್ತು ನಾನ್ ವೆಜ್ ಎರಡು ಇರಲಿದೆ. ಲಕ್ನೋ ವಿಶೇಷದ ಕಬಾಬ್, ಬಿರಿಯಾನಿ ದೆಹಲಿ ವಿಶೇಷ ಚಾಟ್ ಹೀಗೆ ಪ್ರತಿಯೊಂದು ಕೌಂಟರ್ ಸಹ ಇರಲಿದೆಯಂತೆ. ಅಲಿಯಾ ಭಟ್ ಶುದ್ಧ ಸಸ್ಯಹಾರಿ ಹಾಗಾಗಿ ಎರಡು ರೀತಿಯ ಖಾದ್ಯಗಳು ಲಭ್ಯವಿರಲಿದೆ.

ರಣಬೀರ್ ಮತ್ತು ಅಲಿಯಾ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರೂ ಮದುವೆ ವಿಚಾರವಾಗಿ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ ಯಾವ ದಿನಾಂಕದಂದು ನಡೆಯಲಿದೆ ಎನ್ನುವ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಆದರೆ ಅಲಿಯಾ ಭಟ್ ತನ್ನ ಮದುವೆ ಡ್ರೆಸ್ ಅನ್ನು ಮನೀಶ್ ಮಲ್ಹೋತ್ರಾ ಮತ್ತು ಸಬ್ಯಸಾಚಿ(Alia will wear Manish Malhotra and Sabyasachi outfits) ಅವರ ಬಳಿ ಡಿಸೈನ್ ಮಾಡಿಸಿದ್ದಾರೆ.

ಕೊನೆಗೂ ಬಹಿರಂಗವಾಯ್ತು ರಣಬೀರ್ - ಅಲಿಯಾ ಮದುವೆ ದಿನಾಂಕ

ಅಂದಹಾಗೆ ರಣಬೀರ್ ಮತ್ತ ಅಲಿಯಾ ಇಬ್ಬರು ಪೂರ್ವಜರ ಮನೆಯಲ್ಲಿ ಹಸೆಮಣೆ ಏರುತ್ತಿದ್ದಾರೆ. ಪೂರ್ವಜರ ಮನೆ ಎಂದರೆ ರಣಬೀರ್ ಕಪೂರ್ ಪೂರ್ವಜರು ಬದುಕಿ ಬಾಳಿದ ಆರ್ ಕೆ ಮನೆ. ವಿಶೇಷ ಎಂದರೆ ಇದೆ ಮನೆಯಲ್ಲಿ ರಣಬೀರ್ ತಂದೆ-ತಾಯಿ ಅಂದರೆ ರಿಷಿ ಕಪೂರ್ ಮತ್ತು ನೀತು ಕಪೂರ್ ಮದುವೆಯಾಗಿದ್ದರು. ಹಾಗಾಗಿ ಅದೇ ಹಳೆಯ ಮನೆಯಲ್ಲಿ ರಣಬೀರ್ ಕೂಡ ಅಲಿಯಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಅಂದಹಾಗೆ ಈ ತಾರಾ ಜೋಡಿ ಮದುವೆ ಬಳಿಕ ಚಿತ್ರರಂಗದ ಸ್ನೇಹಿತರಿಗಾಗಿ ಏಪ್ರಿಲ್ ಕೊನೆಯ ವಾರದಲ್ಲಿ ಅದ್ದೂರಿಯಾಗಿ ಆರತಕ್ಷತೆಯನ್ನು ಏರ್ಪಡಿಸಿದ್ದಾರಂತೆ.