Asianet Suvarna News Asianet Suvarna News

ಒಂದು ಮೊಟ್ಟೆ ಕಥೆಗೂ ಶಾರೂಖ್ ಖಾನ್‌ಗೂ ಏನ್‌ ಸಂಬಂಧ?

ವಯಸ್ಸು ಐವತ್ತೆಂಟಾದ್ರೂ ಎಂಟೆಂಟು ಹುಡುಗೀರ ಜೊತೆ ಜವಾನ್‌ನಲ್ಲಿ ಮಿಂಚಿರೋ ಶಾರುಖ್‌ಗೂ ಮೊಟ್ಟೆಯ ಕಥೆಗೂ ಸಂಬಂಧ ಇದೆ. ಅದೇನಿರಬಹುದು?

sandalwood movie ondu motteya kathe connected with jawan of sharukh khan
Author
First Published Sep 15, 2023, 4:09 PM IST

- ನಿತ್ತಿಲೆ
ಬಾಲಿವುಡ್ ಸಿನಿಮಾಗಳೆಲ್ಲ ಕಲೆಕ್ಷನ್ ಇಲ್ಲದೇ ಮಕಾಡೆ ಮಲಗ್ತಿರೋ ಹೊತ್ತಲ್ಲೇ ಬಂದು ಹವಾ ಎಬ್ಬಿಸಿದ್ದು ಈ ಶಾರೂಖ್ ಖಾನ್ ಅನ್ನೋ ನೈಂಟೀಸ್‌ನ ರೊಮ್ಯಾಂಟಿಕ್ ಹೀರೋ. ಈಗ ಮಕ್ಕಳು ಎದೆಯೆತ್ತರ ಬೆಳೆದು ಹೀರೋ, ಹೀರೋಯಿನ್ ಆಗೋ ರೇಂಜಿಗೆ ಬಂದ್ರೂ ಬಾದ್‌ಶಾ ಹವಾ ಕಡಿಮೆ ಆದಂಗಿಲ್ಲ. ಮೊನ್ನೆ ತಾನೇ ಪಠಾಣ್ ಸಿನಿಮಾ ಮಾಡಿ ಕೋಟಿ ಕೋಟಿ ಬಾಚಿಕೊಂಡರು. ಅದಾಗಿ ಜವಾನ್ ಸಿನಿಮಾ ಮಾಡಿ ಸೈ ಅನಿಸಿಕೊಂಡರು. 

ಸದ್ಯಕ್ಕೀಗ ಶಾರೂಖ್‌ಗೆ ಅದೃಷ್ಟ ಒದ್ದುಕೊಂಡು ಬಂದಂಗಿದೆ. ಅಮೀರ್‌ ಅವರಂಥಾ ಪರ್ಫೆಕ್ಷನಿಸ್ಟ್‌ಗಳೇ ಸಿನಿಮಾ ಎಕ್ಕುಟ್ಟು ಹೋಗಿ ಬಾಲ ಮಡಚ್ಕೊಂಡು ಮೂಲೆ ಗುಂಪಾಗಿರೋವಾಗ ನಮ್ ಬಾದ್‌ಶಾ ತಗ್ಗೆದೆಲೆ ಅನ್ನುತ್ತ ಮೋಡಿ ಮಾಡ್ತಿದ್ದಾರೆ. ಸೌತ್ ಸಿನಿಮಾ ಸಕ್ಸಸ್ ಆಗ್ತಿದೆ ಅನ್ನೋವಾಗಲೇ ಆ ಸಿನಿಮಾಗಳ ಫ್ಲೇವರ್‌ನಲ್ಲೇ, ಅಲ್ಲಿನ ನಿರ್ದೇಶಕರ ಕೈಯಲ್ಲೇ ಆ್ಯಕ್ಷನ್ ಕಟ್ ಹೇಳಿಸಿಕೊಂಡು ಜಯಿಸಿಕೊಂಡಿದ್ದಾರೆ. 

ಪುತ್ರಿ ಜೊತೆ ತಿರುಪತಿ ತಿಮ್ಮಪ್ಪನ ಗುಡಿಗೆ ಕಾಲಿಟ್ಟ ಶಾರುಖ್ ಖಾನ್; ನಯನತಾರಾ ನೋಡಿ ನೆಟ್ಟಿಗರು ಶಾಕ್

ಇದೀಗ ಎಲ್ಲ ಕಡೆ ಶಾರೂಖ್ ಮೊಟ್ಟೆಯದ್ದೇ ಕಥೆ. ಅಂದಹಾಗೆ ಇದು ನಮ್ ರಾಜ್‌ ಶೆಟ್ಟಿ ಅವರ ‘ಒಂದು ಮೊಟ್ಟೆಯ ಕಥೆಯಲ್ಲ’. ಶಾರೂಖ್‌ ಖಾನ್‌ ಅನ್ನೋ ಒಂದು ಕಾಲದ ಹೆಣ್ಮಕ್ಕಳ ನಿದ್ದೆ ಕದ್ದ ನಟ ಮೊಟ್ಟೆ ಹೊಡೆಸ್ಕೊಂಡೇ ಕೋಟಿ ಬಾಚಿರೋ ಕಥೆ.

ಶಾರೂಖ್‌ ಖಾನ್‌ ‘ಜವಾನ್’ ಸಿನಿಮಾದಲ್ಲಿ ತಲೆ ಬೋಳಿಸಿಕೊಂಡಿರೋದಕ್ಕೆ ಕಾರಣ ಕೊಟ್ಟಿದ್ದಾರೆ. ಅದನ್ನ ಇನ್ನೊಂದು ಮೊಟ್ಟೆ ಕಥೆ ಅಂತ ಬೇಕಾದ್ರೂ ಕರೀಬಹುದು. ಬೇರೇನೋ ಹೇರ್‌ಸ್ಟೈಲ್‌ ಮಾಡಬೇಕು ಅಂತಿದ್ದ ನಿರ್ದೇಶಕ ಅಟ್ಲೀಗೆ, ‘ಸುಮ್ನಿರಯ್ಯ ಸಾಕು, ಹೇರ್‌ಸ್ಟೈಲ್‌ ನೆವದಲ್ಲಿ ಮೂರ್ನಾಲ್ಕು ಗಂಟೆ ಇನ್ನೊಬ್ಬರ ಕೈಗೆ ತಲೆ ಕೊಟ್ಟು ಕೂರುವಷ್ಟು ಟೈಮಿಲ್ಲ ನಂಗೆ’ ಅನ್ನುತ್ತಲೇ ತಲೇಲಿರೋ ಕೂದಲನ್ನ ನುಣ್ಣಗೆ ಬೋಳಿಸಿಬಿಟ್ರು. ಫ್ರೆಂಡ್ಸ್‌ ಎಲ್ಲ, ‘ರೊಮ್ಯಾಂಟಿಕ್ ಹೀರೋ ಕಣೋ ನೀನು. ಹಿಂಗೆಲ್ಲ ಮೊಟ್ಟೆ ಹೊಡೆಸ್ಕೊಂಡು ಬಂದ್ರೆ ಹುಡುಗೀರು ತಿರುಗಿಯೂ ನೋಡಲ್ಲ ನೋಡ್ತಿರು,’ ಅಂದು ಬಿಟ್ರು. 
ಆದ್ರೆ ನಮ್ ಬಾದ್‌ಶಾ ಇದಕ್ಕೆಲ್ಲ ಅಂಜಲಿಲ್ಲ, ಬೆದರಲಿಲ್ಲ. ‘ನಂಗೆ ನುಣ್ಣಗೆ ತಲೆ ಬೋಳಿಸ್ಕೊಂಡಿರೋ ಹುಡುಗೀರು ಇಷ್ಟ ಆಗ್ತಾರೆ’ ಅಂತ ಬಾಂಬ್‌ ಸಿಡಿಸಿ ತಲೆಗೆ ರೇಸರ್‌ ಹಚ್ಚಿಯೇ ಬಿಟ್ಟರು. ಇದು ಶಾರೂಖ್‌ ಮತ್ತೊಂದು ಮೊಟ್ಟೆಯ ಕಥೆ. 

 

sandalwood movie ondu motteya kathe connected with jawan of sharukh khan

ಹೀಗೆ ಮೊಟ್ಟೆ ಹೊಡೆಸಿಕೊಂಡು ಬಂದರೂ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಈಗಾಗಲೇ ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅಭಿಮಾನಿಗಳಂತೂ ಸಿನಿಮಾ ನೋಡಿ ಖುಷಿಯಾಗಿದ್ದಾರೆ. ಅಟ್ಲಿ ನಿರ್ದೇಶನ, ಕಿಂಗ್ ಖಾನ್ ಆರ್ಭಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ನೋಡುಗರಿಗೆ ಭರ್ಜರಿ ಮನರಂಜನೆ ಉಣಬಡಿಸುತ್ತಿದೆ. ರಾಬಿನ್‌ ಹುಡ್ ಶೈಲಿಯ ಹೀರೊ ಆಗಿ ಶಾರುಖ್ ದರ್ಬಾರ್ ನಡೆಸಿದ್ದಾರೆ. ಡಬಲ್ ರೋಲ್‌ನಲ್ಲಿ ಡಬಲ್ ಕಿಕ್ ಕೊಟ್ಟಿದ್ದಾರೆ. ಚಿತ್ರದಲ್ಲಿ ಭಿನ್ನ ವಿಭಿನ್ನ ಲುಕ್‌ಗಳಲ್ಲಿ ಬಾಲಿವುಡ್ ಬಾದ್‌ಶಾ ಮಿಂಚಿದ್ದಾರೆ. ಅದರಲ್ಲೂ ಬೋಳು ತಲೆಯ ಲುಕ್ ಸಖತ್ ಮಜವಾಗಿದೆ. ಅಭಿಮಾನಿಗಳಿಗೆ ಆ ಲುಕ್ ಇಷ್ಟವಾಗಿದೆ. 

'ಜವಾನ್​'ನ ಜಿಂದಾಬಂದಾ ಹಾಡಿಗೆ ಹುಚ್ಚೆದ್ದು ಕುಣೀತಿದ್ದಾರೆ ಫ್ಯಾನ್ಸ್​- ಒಂದೇ ದಿನ 46 ಮಿಲಿಯನ್​ ವ್ಯೂಸ್​!

‘ಫ್ರೆಂಡ್ಸ್‌ ಹೇಳಿದ ಮಾತು ಪರಮ ಸುಳ್ಳು. ಹುಡುಗಿಯರು ಖಂಡಿತ ಈ ಲುಕ್‌ನಲ್ಲಿ ನನ್ನನ್ನು ಖಂಡಿತ ಇಷ್ಟಪಡುತ್ತಾರೆ ಎಂದುಕೊಂಡಿದ್ದೆ. ಅದು ನಿಜ ಆಯ್ತು. ಅಷ್ಟೇ ಅಲ್ಲ, ತಲೆ ಬೋಳಿಸಿದ ಹುಡುಗರನ್ನು ಹುಡುಗಿಯರಿಗೆ ಇಷ್ಟ ಪಡುತ್ತಾರೆ ಅನ್ನೋದೂ ಸಾಬೀತಾಯ್ತು. ಇನ್ನೊಂದು ವಿಚಾರ ಏನಪ್ಪಾ ಅಂತಂದ್ರೆ ನನಗೂ ತಲೆ ಬೋಳಿಸಿದ ಹುಡುಗಿಯರು ಅಂದ್ರೆ ಇಷ್ಟ,’ ಎಂದು ಕಣ್‌ ಹೊಡೆದಿದ್ದಾರೆ. 

ಈ ಮೂಲಕ ಒಳಗೊಳಗೇ ತಾನು ತಲೆ ಬೋಳಿಸ್ಕೊಂಡಿದ್ದಕ್ಕೂ ಸಾರ್ಥಕ ಆಯ್ತು ಅಂತ ಕಿಂಗ್‌ ಖಾನ್‌ ನಿಟ್ಟುಸಿರು ಬಿಟ್ಟಂತಿದೆ.

Follow Us:
Download App:
  • android
  • ios