Asianet Suvarna News Asianet Suvarna News

ಬಾಲಿವುಡ್ ಜಗತ್ತಿಗೆ ಕಾಲಿಡುತ್ತಾರಂತೆ ದಿ ಶೋ ಮ್ಯಾನ್: ಪ್ರೇಮ್ ಜೊತೆ ಸಿನಿಮಾಗೆ ಒಪ್ಪಿದ್ದಾರಂತೆ ಸಲ್ಮಾನ್ ಖಾನ್!

ಸ್ಯಾಂಡಲ್ವುಡ್ ಡೈರೆಕ್ಟರ್ ಜೋಗಿ ಪ್ರೇಮ್ ಏನ್ ಮಾಡಿದ್ರು ಅದು ಡಿಫ್ರೆಂಟ್ ಆಗೇ ಇರುತ್ತೆ. ಸೆನ್ಸೇಷನ್ ಕ್ರಿಯೆಟ್ ಮಾಡುತ್ತೆ. ಈಗ ಪ್ರೇಮ್ ಆಕ್ಷನ್ ಪ್ರಿನ್ಸ್ ಧ್ರುವ ಜೊತೆ ಕೆಡಿ ಸಿನಿಮಾ ಮಾಡುತ್ತಿದ್ದಾರೆ. ಈ ಗ್ಯಾಪ್ನಲ್ಲಿ ಪ್ರೇಮ್ ಅಡ್ಡಾದಿಂದ ಮತ್ತೊಂದು ಸುದ್ದಿ ಲೀಕ್ ಆಗಿದೆ. 

Sandalwood Director Jogi Prem doing a movie with Bollywood actor Salman Khan gvd
Author
First Published Feb 7, 2024, 12:35 PM IST

ಸ್ಯಾಂಡಲ್ವುಡ್ ಡೈರೆಕ್ಟರ್ ಜೋಗಿ ಪ್ರೇಮ್ ಏನ್ ಮಾಡಿದ್ರು ಅದು ಡಿಫ್ರೆಂಟ್ ಆಗೇ ಇರುತ್ತೆ. ಸೆನ್ಸೇಷನ್ ಕ್ರಿಯೆಟ್ ಮಾಡುತ್ತೆ. ಈಗ ಪ್ರೇಮ್ ಆಕ್ಷನ್ ಪ್ರಿನ್ಸ್ ಧ್ರುವ ಜೊತೆ ಕೆಡಿ ಸಿನಿಮಾ ಮಾಡುತ್ತಿದ್ದಾರೆ. ಈ ಗ್ಯಾಪ್ನಲ್ಲಿ ಪ್ರೇಮ್ ಅಡ್ಡಾದಿಂದ ಮತ್ತೊಂದು ಸುದ್ದಿ ಲೀಕ್ ಆಗಿದೆ. ಕೆಡಿ  ನಿರ್ದೇಶಕ ಪ್ರೇಮ್ ಮತ್ತೊಂದು ದೊಡ್ಡ ಪ್ಲಾನ್ ಮಾಡಿದ್ದಾರೆ. ಅದೇ ಬಾಲಿವುಡ್ ಚಿತ್ರಜಗತ್ತಿಗೂ ಕಾಲಿಡೋ ಪ್ಲಾನ್. ಡೈರೆಕ್ಟರ್ ಜೋಗಿ ಪ್ರೇಮ್ ಹಿಂದಿ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ಗೆ ಆಕ್ಷನ್ ಕಟ್ ಹೇಳ್ತಾರೆ. ಈದು ಪ್ರೇಮ್ ಅಡ್ಡಾದಿಂದ ಹೊರ ಬಂದಿರೋ ಸೆನ್ಸೇಷನ್ ನ್ಯೂಸ್. ಇದು ನಿಜ ಆದ್ರು ಆಶ್ಚರ್ಯ ಇಲ್ಲ. ಯಾಕಂದ್ರೆ ಒಂದ್ ಕಾಲದಲ್ಲಿ ಪ್ರೇಮ್ ಡೈರೆಕ್ಷನ್ ಮಾಡ್ಲಿ ಅಂತ ಬಾಲಿವುಡ್ಡೇ ಆಫರ್ ಮಾಡಿತ್ತು.

ಶಿವಣ್ಣನ ಜೋಗಿ ಸಿನಿಮಾ ಬಂದ ಮೇಲೆ ಆ ಸಿನಿಮಾ ನೋಡಿದ ಬಿಟೌನ್ ಇಂಡಸ್ಟ್ರಿಗೆ ಹಿಂದಿಯಲ್ಲಿ ಜೋಗಿ ರಿಮೇಕ್ ಮಾಡಿ ಅಂತ ಆಫರ್ ಕೊಟ್ಟಿದ್ರು. ಆದ್ರೆ ಪ್ರೇಮ್ ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಭಟ್ ಈಗ ಪ್ರೇಮ್ ಬಾಲಿವುಡ್ಗೆ ಗುರಿ ಇಟ್ಟಿದ್ದಾರೆ. ಅದು ಸಲ್ಮಾನ್ ಖಾನ್ ಗೆ ಆಕ್ಷನ್ ಕಟ್ ಹೇಳೋ ದೊಡ್ಡ ಪ್ಲಾನ್ ಮಾಡಿದ್ದಾರಂತೆ. ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ 'ಕೆಡಿ' ಸಿನಿಮಾದಲ್ಲಿ ಬಾಲಿವುಡ್ ದಂಡೇ ಇದೆ. ಬಾಲಿವುಡ್ ದಿಗ್ಗಜ ಸಂಜಯ್ ದತ್, ಶಿಲ್ಪಾ ಶೆಟ್ಟಿ ನಟಿಸುತ್ತಿದ್ದಾರೆ. ಹಾಗೆ ಕೆಡಿ ಐಟಂ ಸಾಂಗ್ ಒಂದಕ್ಕೆ ನೂರಾ ಫತೇಹಿ ಬಂದು ಹೆಜ್ಜೆ ಹಾಕಿ ಹೋಗಿದ್ದಾರೆ. ಈ ಸಿನಿಮಾಗೆ ಬಂದ ಬಾಲಿವುಡ್ ತಾರೆಯರು ಪ್ರೇಮ್ ಬಗ್ಗೆ ಸಲ್ಮಾನ್ ಖಾನ್‌ಗೆ ವರದಿ ಒಪ್ಪಿಸಿರಬಹುದೆಂಬ ಅನುಮಾನ ಇದೆ. 

ಅಷ್ಟೆ ಅಲ್ಲ ಕೆಡಿ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಸಿದ್ಧವಾಗುತ್ತಿರೋದ್ರಿಂದ ಪ್ರೇಮ್ಗೆ ಬಾಲಿವುಡ್ ಲಿಂಗ್ ಚನ್ನಾಗೆ ಸಿಕ್ಕಿದೆ. ಹೀಗಾಗಿ ಪ್ರೇಮ್ ಸಲ್ಲುಗೆ ಆಕ್ಷನ್ ಕಟ್ ಹೇಳಿದ್ರೂ ಆಶ್ಚರ್ಯವೇನಿಲ್ಲ. ಪ್ರೇಮ್ ಪ್ಲಾನ್ ಪಕ್ಕಾ ಇರುತ್ತೆ. ಆದ್ರೆ ಅದು ಶಾಸನ ಆಗೋದು ಸ್ವಲ್ಪ ಕಷ್ಟ. ಈ ಹಿಂದೆ ಆರು ಜನ ಹೀರೋಗಳ ಜೊತೆ ಸಿನಿಮಾ ಮಾಡುತ್ತೇನೆ ಅಂದ್ರು. ಆದ್ರೆ ಅದು ಸಾಧ್ಯ ಆಗ್ಲಿಲ್ಲ. ಭಟ್ ಹಠ ಬಿಡದ ಪ್ರೇಮ್ ಕೆಡಿ ಸಿನಿಮಾದಲ್ಲಿ ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್, ಹಾಗು ಧ್ರುವ ಸರ್ಜಾರನ್ನ ಒಟ್ಟಿಗೆ ಸೇರಿಸಿದ್ದಾರೆ. ಶಿಲ್ಪಾ ಶೆಟ್ಟಿ, ನೂರಾ ಫತೇಹಿಯಂತಹ ಬಿಗ್ ಸ್ಟಾರ್ಸ್ಗಳನ್ನ ಕನ್ನಡದಕ್ಕೆ ಕರೆಸಿದ್ದಾರೆ. 

ಹೀಗಾಗಿ ಪ್ರೇಮ್ಗೆ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡೋದೇನು ಕಷ್ಟದ ವಿಷಯ ಅಲ್ಲ. ಸಲ್ಮಾನ್ ಖಾನ್ ದಕ್ಷಿಣ ಭಾರತ ನಿರ್ದೇಶಕರ ಜೊತೆಗೂ ಸಿನಿಮಾ ಮಾಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಜೊತೆ ಗಾಡ್ ಫಾದರ್ ಸಿನಿಮಾದಲ್ಲಿ ನಟಿಸಿದ್ರು. ಪ್ರಭುದೇವ ನಿರ್ದೇಶನದಲ್ಲಿ ನಟಿಸಿದ್ರು. ಕನ್ನಡದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಭಜರಂಗಿ ಭಾಯಿಜಾನ್ ಸಿನಿಮಾ ಮಾಡಿದ್ರು. ಹೀಗಾಗಿ ಸಲ್ಲುಗೆ ಸೌತ್ ಸಿನಿ ಟ್ಯಾಲೆಂಟ್ಗಳ ಮೇಲೆ ನಂಬಿಕೆ ಹೆಚ್ಚಿದೆ. ಈಗ ಪ್ರೇಮ್ ಡೈರೆಕ್ಷನ್ನಲ್ಲೂ ಸಲ್ಲು ನಟಿಸುತ್ತಾರೆ ಅನ್ನೋದೇ ಟಾಕ್ ಆಫ್ ದಿ ಮ್ಯಾಟರ್ ಆಗಿದೆ. 

ಬಾಲಿವುಡ್ ಅನ್ನೇ ಕನ್ನಡಕ್ಕೆ ಕರೆಸುತ್ತೇನೆ ಎಂದಿದ್ದ ಯಶ್: ರಾಕಿಂಗ್ ಸ್ಟಾರ್ ಚಿತ್ರದಲ್ಲಿ ಶಾರುಖ್ ಖಾನ್!

2024ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'ಕೆಡಿ' ಕೂಡ ಒಂದು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇದೇ ಮೊದಲ ಬಾರಿಗೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೆ ಪ್ರೇಮ್‌ಗೂ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಈ ಕಾರಣಕ್ಕೆ 'ಕೆಡಿ' ಮೇಲೆ ಭಾರತೀಯ ಚಿತ್ರರಂಗ ಕಣ್ಣಿಟ್ಟಿದೆ. ಈ ಸಿನಿಮಾ ಬಳಿಕ ದರ್ಶನ್ ಜೊತೆ ಪ್ರೇಮ್ ಸಿನಿಮಾ ಲೈನಪ್ ಆಗಿದೆ ಅನ್ನೋ ಮಾಹಿತಿ ಇದೆ. ಈ ಮಧ್ಯೆ ಪ್ರೇಮ್ ಸಲ್ಲು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಾರೆ ಅನ್ನೋ ವಿಚಾರ ಈಗ ಹರಿದಾಡುತ್ತಿದೆ. ಹೀಗಾಗಿ ಕೆಡಿ ನಂತರ ಪ್ರೇಮ್ ಮುಂದಿನ ನಡೆ ಮೇಲೆ ಸ್ಯಾಂಡಲ್ವುಡ್ ಕಣ್ಣು ಬಿದ್ದಿದೆ. 

Follow Us:
Download App:
  • android
  • ios