Asianet Suvarna News Asianet Suvarna News

ಹರಿಪ್ರಿಯ ಇನ್ನು ಸಿಂಹಪ್ರಿಯ... ಕ್ರಿಯೇಟಿವ್ ಆಗಿ ವಸಿಷ್ಠ ಜೊತೆ ಮದ್ವೆ ಖಚಿತಪಡಿಸಿದ ನಟಿ

ಸ್ಯಾಂಡಲ್‌ವುಡ್‌ನ ಫೇಮಸ್‌ ನಟ ನಟಿಯರಾದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಂದು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಮಧ್ಯೆ ಈಗ ಸ್ವತಃ ನಟಿ ಹರಿಪ್ರಿಯ ಅವರೇ ತಮ್ಮ ಹಾಗೂ ವಸಿಷ್ಠ ಸಿಂಹ ಜೊತೆಗಿನ ಸಂಬಂಧವನ್ನು ವಿಶೇಷವಾಗಿ ಖಚಿತಪಡಿಸಿದ್ದಾರೆ.

sandalwood actress haripriya confirmed her relationship with vasishta simha by creative post in instagram akb
Author
First Published Dec 2, 2022, 8:22 PM IST

ಸ್ಯಾಂಡಲ್‌ವುಡ್‌ನ ಫೇಮಸ್‌ ನಟ ನಟಿಯರಾದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪರಸ್ಪರ ಮದ್ವೆಯಾಗುತ್ತಿದ್ದಾರೆ ಎಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳು ಸೇರಿದಂತೆ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಪ್ರೀತಿಯಲ್ಲಿ ಬಿದ್ದಿರುವ ಇಬ್ಬರು ಇಂದು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಮಧ್ಯೆ ಈಗ ಸ್ವತಃ ನಟಿ ಹರಿಪ್ರಿಯ ಅವರೇ ತಮ್ಮ ಹಾಗೂ ವಸಿಷ್ಠ ಸಿಂಹ ಜೊತೆಗಿನ ಸಂಬಂಧವನ್ನು ವಿಶೇಷವಾಗಿ ಖಚಿತಪಡಿಸಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ (Instagram Post) ಮಾಡಿರುವ ನಟಿ ಹರಿಪ್ರಿಯ(Haripriya) , ಸಿಂಹದ ಮಡಿಲಲ್ಲಿ ಮಲಗಿರುವ ಮಗುವಿನ ಫೋಟೋದ ಜೊತೆ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಬರೆದುಕೊಂಡಿದ್ದಾರೆ. ಸ್ವತಃ ಹರಿಪ್ರಿಯ ಅವರೇ ಈ ಪೋಸ್ಟ್ ಹಾಕಿರುವುದರಿಂದ ಇಷ್ಟು ದಿನ ಹಬ್ಬಿದ ಸುದ್ದಿಗೆ ಖಚಿತತೆ ಸಿಕ್ಕಿದೆ. ಹರಿಪ್ರಿಯ ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್‌ನಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

ಇಂದು ಬೆಂಗಳೂರಿನ(Banglore)  ಹರಿಪ್ರಿಯಾ ನಿವಾಸದಲ್ಲಿಯೇ ನಿಶ್ಚಿತಾರ್ಥ(Engagment) ಸಮಾರಂಭ ನಡೆದಿದೆ ಎಂದು ವರದಿಯಾಗಿತ್ತು. ಈ ಸಮಾರಂಭದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಕುಟುಂಬದವರು ಮಾತ್ರ ಹಾಜರಿದ್ದರು. ಇಂದು ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 
 
 
 
 
 
 
 
 
 
 
 
 
 
 

A post shared by Hariprriya (@iamhariprriya)

 

ವಸಿಷ್ಠ ಸಿಂಹ ಮತ್ತು ಮತ್ತು ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಂಡ ವಿಚಾರವನ್ನು ತಮ್ಮ ವಸಿಷ್ಠ ಕಿರಿಯ ಸಹೋದರ ಕಾರ್ತಿಕ್ ಕನ್ಫರ್ಮ್ ಮಾಡಿದ್ದು. ಈ ವಿಚಾರ ಹೇಗೆ ಎಲ್ಲರಿಗೂ ಗೊತ್ತಾಯಿತು ಎಂದು ತಿಳಿಯುತ್ತಿಲ್ಲ. ಸಂಜೆಯೊಳಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ ಎಂದಿದ್ದರು. ಹಾಗೆಯೇ ಈಗ ಸ್ವತಃ ಹರಿಪ್ರಿಯ ಅವರೇ ತಮ್ಮ ಸಂಬಂಧದ ಬಗ್ಗೆ ಹೀಗೊಂದು ಪೋಸ್ಟ್ ಮಾಡಿರುವುದರಿಂದ ಮದುವೆ ಸುದ್ದಿಗೊಂದು ಅಲ್ಪವಿರಾಮ ಬಿದ್ದಂತಾಗಿದೆ. 

ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿ ವಿಚಾರ ಬಹಿರಂಗವಾದ ನಂತರ ಇಬ್ಬರೂ ದುಬೈಗೆ (dubai) ಹಾರಿದ್ದರು. ಇಬ್ಬರೂ ಕೈ ಕೈ ಹಿಡಿದು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರೂ ಮದುವೆ ಶಾಪಿಂಗ್ ಮಾಡಲು ದುಬೈಗೆ ಹಾರಿದ್ದರು ಎನ್ನಲಾಗಿದೆ. ದುಬೈನಿಂದ ವಾಪಾಸ್ ಬರುತ್ತಿದ್ದಂತೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ ಇಬ್ಬರೂ ಉಂಗುರ (ring change)ಬದಲಾಯಿಸಿಕೊಂಡಿದ್ದಾರೆ. 

ಸೆಲೆಬ್ರಿಟಿಗಳು ದುಬೈಯಲ್ಲೇ ಯಾಕೆ ಮದ್ವೆ ಶಾಪಿಂಗ್‌ ಮಾಡ್ತಾರೆ?

ಹರಿಪ್ರಿಯ ಅವರು ಕನ್ನಡ ಸಿನಿಮಾಗಳ ಜೊತೆಗೆ ಬೇರೆ ಇಂಡಸ್ಟ್ರಿಯಲ್ಲೂ ಸಖತ್ ಫೇಮಸ್ ಆಗಿದ್ದಾರೆ. ತಮಿಳಿನಲ್ಲೂ ಹಿಟ್ ಸಿನಿಮಾ ನೀಡಿದ್ದಾರೆ. ಇತ್ತ ವಸಿಷ್ಠ ಸಿಂಹ ಕೂಡ ಕನ್ನಡದ ಪ್ರತಿಭಾನ್ವಿತ ನಟನಾಗಿದ್ದು, ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಖಡಕ್ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ. ರಾಜಾಹುಲಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ದಯವಿಟ್ಟು ಗಮನಿಸಿ, 6ನೇ ಮೈಲಿ, ಮುಂತಾದ ಸಿನಿಮಾಗಳ ಹಾಡಿಗೆ ಧ್ವನಿಯಾಗಿದ್ದಾರೆ.

ನಟ ವಸಿಷ್ಠ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಹರಿಪ್ರಿಯಾ

ಇತ್ತೀಚಿಗಷ್ಟೆ ಪರಿಪ್ರಿಯಾ ಮೂಗು ಚುಚ್ಚಿಕೊಂಚಿದ್ದು, ಆ ವಿಡಿಯೋವನ್ನು ಶೇರ್ ಮಾಡಿದ್ದರು. ಆ ವೇಳೆ ಹರಿಪ್ರಿಯಾ ಜೊತೆ ವಸಿಷ್ಠ ಕೂಡ ಇದ್ದರು. ಮೂಗು ಎಲ್ಲಿ ಚುಚ್ಚಬೇಕೆಂದು ಗುರುತು ಮಾಡಿ ಕೊಟ್ಟಿದ್ದೆ ವಸಿಷ್ಠ. ಮೂಗು ಚುಚ್ಚಿದ ಬಳಿಕ ವಸಿಷ್ಠ ಹರಿಪ್ರಿಯಗೆ ಮುತ್ತು ನೀಡಿ ಸಮಾಧಾನ ಮಾಡಿದ್ದರು ಎಂದು ಸುದ್ದಿಯಾಗಿತ್ತು. 

ಕೈ ಕೈ ಹಿಡಿದು ಬಂದ ಹರಿಪ್ರಿಯಾ-ವಸಿಷ್ಠ ಸಿಂಹ: ಫೋಟೋ ವೈರಲ್

Follow Us:
Download App:
  • android
  • ios