Asianet Suvarna News Asianet Suvarna News

ನಟ ವಸಿಷ್ಠ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಹರಿಪ್ರಿಯಾ

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇಂದು (ಡಿಸೆಂಬರ್ 2) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.  

vasishta simha engaged with Actress haripriya in intimate ceremony sgk
Author
First Published Dec 2, 2022, 2:05 PM IST

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ನಟ ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ತಯಾರಾಗಿದ್ದಾರೆ. ಇತ್ತೀಚಿಗಷ್ಟೆ ಇಬ್ಬರ ಪ್ರೀತಿಯ ವಿಚಾರ ಬಹಿರಂಗವಾಗಿತ್ತು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಹೊರಬಂದ ಬೆನ್ನಲ್ಲೇ ಇಂದು (ಡಿಸೆಂಬರ್ 2) ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಇಂದು ಬೆಂಗಳೂರಿನ ಹರಿಪ್ರಿಯಾ ನಿವಾಸದಲ್ಲಿಯೇ ನಿಶ್ಚಿತಾರ್ಥ ಸಮಾರಂಭ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಾರಂಭದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಕುಟುಂಬದವರು ಮಾತ್ರ ಹಾಜರಿದ್ದರು. ಇಂದು ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಜನವರಿ ಅಥವಾ ಫೆಬ್ರವರಿಯಲ್ಲಿ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.  

ಅಂದಹಾಗೆ ಇಬ್ಬರೂ ನಿಶ್ಚಿತಾರ್ಥದ ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ದಿಢೀರ್ ಅಂತ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ವಸಿಷ್ಠ ಸಿಂಹ ಮತ್ತು ಮತ್ತು ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಂಡ ವಿಚಾರವನ್ನು ತಮ್ಮ ವಸಿಷ್ಠ ತಮ್ಮ ಕಾರ್ತಿಕ್ ಕನ್ಫರ್ಮ್ ಮಾಡಿದ್ದಾರೆ. ಈ ವಿಚಾರ ಹೇಗೆ ಎಲ್ಲರಿಗೂ ಗೊತ್ತಾಯಿತು ಎಂದು ತಿಳಿಯುತ್ತಿಲ್ಲ. ಸಂಜೆಯೊಳಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತಮ ಸಿಗಲಿದೆ ಎಂದು ಕಾರ್ತಿಕ್ ಹೇಳಿದರು.   

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿ ವಿಚಾರ ಬಹಿರಂಗವಾದ ನಂತರ ಇಬ್ಬರೂ ದುಬೈ ಪ್ರವಾಸಕ್ಕೆ ಹಾರಿದ್ದರು. ಇಬ್ಬರೂ ಕೊ ಕೈ ಹಿಡಿದು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದಹಾಗೆ ಇಬ್ಬರೂ ಮದುವೆ ಶಾಪಿಂಗ್ ಮಾಡಲು ದುಬೈಗೆ ಹಾರಿದ್ದರು ಎನ್ನಲಾಗಿದೆ. ದುಬೈನಿಂದ ವಾಪಾಸ್ ಬರುತ್ತಿದ್ದಂತೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರ ಸಮ್ಮುಮುಖದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಹರಿಪ್ರಿಯಾ ಮತ್ತು ವಸಿಷ್ಠ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 

ಏರ್ಪೋರ್ಟ್‌ನಲ್ಲಿ ಕೈ ಕೈ ಹಿಡಿದು ಕಾಣಿಸಿಕೊಂಡ ಪ್ರಣಯ ಪಕ್ಷಿಗಳು; ವಿದೇಶಕ್ಕೆ ಹಾರಿದ ಹರಿಪ್ರಿಯಾ-ವಸಿಷ್ಠ

ಹರಿಪ್ರಿಯಾ ಮತ್ತು ವಸಿಷ್ಠ ಇಬ್ಬರೂ ಪ್ರೀತಿ ವಿಚಾರ ಬಹಿರಂಗ ಪಡಿಸುವ ಮೊದಲು ಆಗಾಗ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಆದರೆ ಎಲ್ಲಿಯೂ ಇಬ್ಬರೂ ಪ್ರೀತಿ ಬಗ್ಗೆ ಸುಳಿವು ನೀಡಿರಲಿಲ್ಲ. ಇಬ್ಬರೂ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆದ ಬೆನ್ನಲ್ಲೇ ಇಬ್ಬರ ಫೋಟೋಗಳು ವೈರಲ್ ಆಗುತ್ತಿವೆ. ಅಂದಹಾಗೆ ಇಬ್ಬರೂ ಒಬ್ಬರಿಗೊಬ್ಬರು ಪಾರ್ಟನರ್ ಅಂತ ಕರೆಯುತ್ತಾರೆ. ಈ ಪಾರ್ಟನರ್ ಈಗ ಲೈಫ್ ಪಾರ್ಟನರ್ ಆಗುತ್ತಿದ್ದಾರೆ.  

ವಸಿಷ್ಠ ಸಿಂಹ - ಹರಿಪ್ರಿಯಾ ಮದುವೆಗೆ ದುಬೈನಲ್ಲಿ ಶಾಪಿಂಗ್: ಈಗೆಲ್ಲಿದ್ದಾರೆ ಲವ್ ಬರ್ಡ್ಸ್?

ಇತ್ತೀಚಿಗಷ್ಟೆ ಪರಿಪ್ರಿಯಾ ಮೂಗು ಚುಚ್ಚಿಕೊಂಚಿದ್ದರು. ಈ ವಿಡಿಯೋವನ್ನು ಶೇರ್ ಮಾಡಿದ್ದರು. ಆ ವೇಳೆ ಹರಿಪ್ರಿಯಾ ಜೊತೆ ವಸಿಷ್ಠ ಕೂಡ ಇದ್ದರು. ಮೂಗು ಎಲ್ಲಿ ಚುಚ್ಚಬೇಕೆಂದು ಗುರುತು ಮಾಡಿ ಕೊಟ್ಟಿದ್ದೆ ವಸಿಷ್ಠ. ಮೂಗು ಚುಚ್ಚಿದ ಬಳಿಕ ವಸಿಷ್ಠ ಹರಿಪ್ರಿಯಗೆ ಮುತ್ತು ನೀಡಿ ಸಮಾಧಾನ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಆದರೆ ವಸಿಷ್ಠ ಮುಖ ಎಲ್ಲೂ ರಿವೀಲ್ ಆಗಿರಲಿಲ್ಲ. ಇಬ್ಬರ ಪ್ರೀತಿಯ ವಿಚಾರ ಬಹಿರಂಗವಾದ ಬಳಿಕ ಎಲ್ಲಾ ರಿವೀಲ್ ಆಗುತ್ತಿದೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ. 

 
 

Follow Us:
Download App:
  • android
  • ios