ಅಭಿಮಾನಿಗಳಿಗೆ ಸಿಹಿ ಸುದ್ದಿ: ನಾಳೆ ಬೆಂಗ್ಳೂರಿಗೆ ಬರ್ತಿದ್ದಾರೆ ಕ್ಯಾನ್ಸರ್ ಗೆದ್ದ ಶಿವಣ್ಣ!
ನಟ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ಅಮೆರಿಕದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿತ್ತು. ನಾನು ಆರೋಗ್ಯವಾಗಿದ್ದೇನೆ, ಆದಷ್ಟು ಬೇಗ ಸಿಗೋಣ ಅಂತ ಈ ಹಿಂದೆ ವಿಡಿಯೋ ಮಾಡಿದ್ದರು ಶಿವಣ್ಣ. ಇದೀಗ ಬೆಂಗಳೂರಿಗೆ ಬರ್ತಿರುವ ಬಗ್ಗೆ ಶಿವರಾಜ್ ಕುಮಾರ್ ವಿಡಿಯೋ ಮಾಡಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಬೆಂಗಳೂರು(ಜ.25): ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಕೊನೆಗೂ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೆರಿಕದಿಂದ ಕರುನಾಡಿಗೆ ಮರಳುತ್ತಿದ್ದಾರೆ. ಶಿವಣ್ಣ ನಾಳೆ(ಜ.26) ರಂದು ಬೆಂಗಳೂರಿಗೆ ಬರುತ್ತಿದ್ದಾರೆ.
ಶಿವರಾಜ್ ಕುಮಾರ್ ಅವರ ಅಗಮನಕ್ಕೆ ಕಾಯುತ್ತಿರುವ ಅಭಿಮಾನಿಗಳಿಗೆ ಗಣರಾಜ್ಯೋತ್ಸವಕ್ಕೆ ಡಬ್ಬಲ್ ಸಂಭ್ರಮ ಮನೆ ಮಾಡಿದೆ. ಕ್ಯಾನ್ಸರ್ ಗೆದ್ದು ಶಿವರಾಜ್ ಕುಮಾರ್ ಕರುನಾಡಿಗೆ ವಾಪಾಸ್ ಆಗುತ್ತಿದ್ದಾರೆ.
ಅದೇ ರೀತಿ ಭೈರತಿ ರಣಗಲ್ ಸಿನಿಮಾ ಕೂಡ ಟಿವಿ ಪರದೆ ಮೇಲೆ ಅಪ್ಪಳಿಸಲಿದೆ. ಈ ಎರಡೂ ಸುದ್ದಿಗಳನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಂಚಿಕೊಂಡಿದ್ದಾರೆ. ನಟ ಶಿವರಾಜ್ ಕುಮಾರ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಶಿವರಾಜ್‌ಕುಮಾರ್ ಸೇಫ್ ಆಗಿದ್ದರ ಹಿಂದಿದೆ ರೋಚಕ ಕತೆ!
ನಟ ಶಿವರಾಜ್ ಕುಮಾರ್ ಇತ್ತೀಚೆಗಷ್ಟೇ ಅಮೆರಿಕದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿತ್ತು. ನಾನು ಆರೋಗ್ಯವಾಗಿದ್ದೇನೆ, ಆದಷ್ಟು ಬೇಗ ಸಿಗೋಣ ಅಂತ ಈ ಹಿಂದೆ ವಿಡಿಯೋ ಮಾಡಿದ್ದರು ಶಿವಣ್ಣ. ಇದೀಗ ಬೆಂಗಳೂರಿಗೆ ಬರ್ತಿರುವ ಬಗ್ಗೆ ಶಿವರಾಜ್ ಕುಮಾರ್ ವಿಡಿಯೋ ಮಾಡಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಶಿವಣ್ಣನಿಗೆ 5 ಗಂಟೆಯಲ್ಲಿ 6 ಆಪರೇಷನ್ 190 ಸ್ಟಿಚ್: ಮಧು ಬಂಗಾರಪ್ಪ
ಕನ್ನಡ ಚಿತ್ರರಂಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅನಾರೋಗ್ಯದಿಂದ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಪ್ರಯಾಣ ಮಾಡಿದ್ದರು. ಆಪರೇಷನ್ ನಂತರ ಒಂದು ತಿಂಗಳ ಕಾಲ ಅಲ್ಲೇ ಉಳಿದುಕೊಂಡು ಚೇತರಿಸಿಕೊಂಡು ಬರುವುದಾಗಿ ಹೇಳಿದ್ದರು. ಅಪರೇಷನ್ ಯಶಸ್ವಿಯಾಗಿ ನಡೆದಿದೆ ಎಂದು ಗೀತಾ ಶಿವರಾಜ್‌ಕುಮಾರ್, ಮಧು ಬಂಗಾರಪ್ಪ ಹಾಗೂ ಡಾ.ಮುರುಗೇಶ್ ಸ್ಪಷ್ಟನೆ ಕೊಟ್ಟಿದ್ದರು. ಅದಾದ ಮೇಲೆ ಶಿವಣ್ಣ ಅಲ್ಲಿ ಇಲ್ಲಿ ಓಡಾಡುತ್ತಿರುವುದು ವಾಕಿಂಗ್ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಫೋಟೋಗಳನ್ನು ನೋಡಿದ ಮೇಲೆ ಶಿವಣ್ಣ ಅಭಿಮಾನಿಗಳಿಗೆ ಸಮಾಧಾನವಾಗಿತ್ತು. ಯಾವ ಆಪರೇಷನ್ ಆಗಿದ್ದು ಏನ್ ಅಗಿದ್ದು ಎಂದು ಮಧು ಬಂಗಾರಪ್ಪ ಹಂಚಿಕೊಂಡಿದ್ದರು.
‘ನನ್ನ ಸಮುದ್ರ ನೀವು’ ಎನ್ನುತ್ತಾ ಫೋಟೋಗೆ ಪೋಸ್ ಕೊಟ್ಟ ಶಿವಣ್ಣ… ಥ್ರಿಲ್ ಆದ ಅಭಿಮಾನಿಗಳು
'ಡಾಕ್ಟರ್ ಅಂದ್ರೆ ನಮ್ಮ ಪಾಲಿನ ದೇವರು. ಡಾಕ್ಟರ್ ಮುರುಗೇಶ್ ಮನೋಹರ್ ಅವರ ಜೊತೆ ಮೊದಲ ಸಲ ಮಾತನಾಡಿದಾಗಲೇ ಧೈರ್ಯ ಬಂತು. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ ಅದನ್ನು ಇಲ್ಲಿಗೆ ನಿಲ್ಲಿಸಬೇಕು. ಶಿವಣ್ಣ ಅವರೇ ಹೇಳಿರುವ ಪ್ರಕಾರ ಇದು bladder replacement bladder reconstruction ಅಂತ. ಮಾಹಿತಿ ಗೊತ್ತಿಲ್ಲದವರು ಕಿಡ್ನಿ ಫೆಲ್ಯೂರ್ ಹಾಗೆ ಹೀಗೆ ಅಂತ ಸುಳ್ಳು ಹಬ್ಬಿಸುತ್ತಿದ್ದಾರೆ. ಶಿವಣ್ಣ ಅವರಿಗೆ ನಿಜಕ್ಕೂ ದೇವರ ಆಶೀರ್ವಾದ ಇದೆ ಏಕೆಂದರೆ ಬ್ರೌನ್‌ನಲ್ಲಿ ಒಂದು ಸ್ಟಂಟ್ ಇದೆ, ಚಿಕ್ಕದಾಗಿ ಹಾರ್ಟ್ ಅಟ್ಯಾಕ್ ಆಗಿತ್ತು, ಕಾಲಿಗೆ ಪೆಟ್ಟಾಗಿತ್ತು ಈಗ ಆಪರೇಷನ್ ನಡೆದಿದೆ. ದಿನದಲ್ಲಿ ಸುಮಾರು 3-4 ಕಿಮೀ. ವಾಕಿಂಗ್ ಮಾಡುತ್ತಾರೆ ಶಿವಣ್ಣ, ಮನೆಯಲ್ಲಿ ಸುಮಾರು 5 ಸಾವಿರ ಹೆಜ್ಜೆ ನಡೆಯುತ್ತಿದ್ದಾರೆ. ಯಾವುದೇ ತೊಂದರೆ ಇಲ್ಲ ಶಿವಣ್ಣ ಆರೋಗ್ಯವಾಗಿದ್ದಾರೆ. 6 ಆಪರೇಷನ್‌ಗಳಲ್ಲಿ ಒಂದೇ ಸಮಯದಲ್ಲಿ ಮಾಡುತ್ತಾರೆ ಅಲ್ಲಿ ಕರುಳಿನ ಒಂದು ಭಾಗವನ್ನು ತೆಗೆದು ಬ್ಲಾಡರ್‌ಗೆ ಕನ್‌ಸ್ಟರ್ಕ್ಟ್ ಮಾಡುತ್ತಾರೆ. ಒಳಗಡೆ ಸುಮಾರು 190 ಹೊಲಗೆಗಳನ್ನು ಹಾಕಲಾಗಿದೆ. 4.30- 5 ಗಂಟೆಗಳಲ್ಲಿ ಡಾಕ್ಟರ್ ಆಪರೇಷನ್ ಮಾಡಿದ್ದಾರೆ. ಮೊದಲು ರೋಮೋಟಿಕ್‌ನಲ್ಲಿ ಆಪರೇಷನ್ ಮಾಡಬೇಕಾ ಅಥವಾ ಮಾನ್ಯುಯಲಿ ಮಾಡಬೇಕಾ ಎಂದು ಯೋಚನೆ ಮಾಡಿದ್ದರು...ಕೊನೆಯಲ್ಲಿ ಕೈಯಲ್ಲಿ ಮಾಡುವುದು ಎಂದು ನಿರ್ಧರಿಸಿದ್ದರು' ಎಂದು ಮಧು ಬಂಗಾರಪ್ಪ ಮಾಧ್ಯಮಗಳ ಜೊತೆ ಮಾತನಾಡಿದ್ದರು.
'ಶಿವಣ್ಣ ಅವರ ಫೋಟೋ ಜೊತೆಗೆ ಡಾಕ್ಟರ್ ಫೋಟೋಗೆ ಪೂಜೆ ಮಾಡಿದ್ದರು. ಅದನ್ನು ನೋಡಿ ಡಾಕ್ಟರ್ ಕಣ್ಣೀರಿಟ್ಟರು, ಶಿವಣ್ಣ ಅವರ ಅಭಿಮಾನಿಗಳು ನಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಖುಷಿ ಪಟ್ಟರು. ಈಗ ವೈದ್ಯರು ನಮಗೆ ಫ್ಯಾಮಿಲಿ ಆದರು. ಅಭಿಮಾನಿಗಳು ನನಗೆ ಕಳಹಿಸುತ್ತಿದ್ದ ಮೆಸೇಜ್ ನೋಡಿದಾಗ ನನಗೆ ಕಣ್ಣಲ್ಲಿ ನೀರು ಬರುತ್ತಿತ್ತು. ಇದು ಸಣ್ಣ ಆಪರೇಷನ್ ಅಲ್ಲವೇ ಅಲ್ಲ ಇದು ದೊಡ್ಡ ಆಪರೇಷನ್. ಶಿವಣ್ಣ ವಯಸ್ಸು 63 ಅಲ್ಲ 36. ಒಳಗೆ ಇರುವ ಗಾಯಗಳು ಸಂಪೂರ್ಣವಾಗಿ ಗುಣಮುಖ ಆಗಬೇಕು. 16ರಂದು ಒಂದು ಟ್ಯೂಬ್ ತೆಗೆಯಲಿದ್ದಾರೆ. ಅದಾದ ಮೇಲೆ ಎಲ್ಲರಂತೆ ನಾರ್ಮಲ್ ಆಗಿರುತ್ತಾರೆ' ಎಂದು ಮಧು ಬಂಗಾರಪ್ಪ ಹೇಳಿದ್ದರು.