ಟೀಸರ್‌ನಲ್ಲಿ ತೋರಿಸಿರುವಂತೆ ಸಮಂತಾ ಪ್ರೀತಿಸಿದ್ದು, ಮನೆಯವರಿಗೆ ತಿಳಿಯದೇ ಮದುವೆ ಆಗಿದ್ದಾರೆ. ಬಳಿಕ ಸಮಂತಾ ಮೊದಲ ಬಾರಿ ಗಂಡನ ಮನೆಗೆ ಹೋಗಿದ್ದಾರೆ. ಗಂಡನ ಮನೆಯದ್ದು ಕೂಡು ಕುಟುಂಬ. ಅಲ್ಲಿ ಅದೇನು ಆಗುತ್ತೆ? ಸಮಂತಾ ಅಲ್ಲಿ ಅದೇನು ಮಾಡ್ತಾರೆ? ಈ ಸ್ಟೋರಿ ನೋಡಿ..
ಸಮಂತಾ ಈಗ ಮಾ ‘ಇಮಟಿ ಬಂಗಾರಂ’
ಸಮಂತಾ ಋತ್ ಪ್ರಭು (Samantha Ruth Prabhu) ಅದೊಂದು ಕಾಲದಲ್ಲಿ ದಕ್ಷಿಣದ ಸೂಪರ್ ಸ್ಟಾರ್ ನಟಿ ಆಗಿದ್ದವರು. ಆದರೆ ಇತ್ತೀಚೆಗೆ ಅವರೇ ಹೇಳಿಕೊಂಡಂತೆ, ಟಾಲಿವುಡ್‌ನಲ್ಲಿ ಅವರಿಗೆ ಅವಕಾಶಗಳು ಕಡಿಮೆ ಆಗಿವೆಯಂತೆ. ಇದೇ ಕಾರಣಕ್ಕೆ ಅವರು ಹಿಂದಿಯ ವೆಬ್ ಸರಣಿಗಳ ಕಡೆ ಮುಖ ಮಾಡಿದ್ದಾರೆ. ಆದರೆ ವರ್ಷದ ಹಿಂದೆಯೇ ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾ ಘೋಷಣೆ ಆಗಿತ್ತು. ಕೆಲವು ಕಾರಣಗಳಿಂದ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಇದೀಗ ಮಾ ಇಂಟಿ ಬಂಗಾರಂ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟ್ರೇಲರ್‌ನಲ್ಲಿ ಸಮಂತಾ ಎರಡು ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಂಡಿದ್ದಾರೆ.
ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾದ ಟೀಸರ್ ಇಂದು (ಜನವರಿ 09) ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಸಮಂತಾ ಪತಿಯಾಗಿ ಕನ್ನಡದ ನಟ ದಿಗಂತ್ ನಟಿಸಿದ್ದಾರೆ. ಟೀಸರ್‌ನಲ್ಲಿ ತೋರಿಸಿರುವಂತೆ ಸಮಂತಾ ಹಾಗೂ ದಿಗಂತ್ ಪ್ರೀತಿಸಿದ್ದು, ಮನೆಯವರಿಗೆ ತಿಳಿಯದೇ ಮದುವೆ ಆಗಿದ್ದಾರೆ. ಬಳಿಕ ಸಮಂತಾ ಮೊದಲ ಬಾರಿ ಗಂಡನ ಮನೆಗೆ ಹೋಗಿದ್ದಾರೆ. ಗಂಡನ ಮನೆಯದ್ದು ಕೂಡು ಕುಟುಂಬ. ಅಲ್ಲಿ ಎಲ್ಲರೂ ಸೊಸೆ ಹೇಗೆ, ಸೊಸೆಯ ವ್ಯಕ್ತಿತ್ವ ಹೇಗೆ ಎಂದು ಕುತೂಹಲದಿಂದ ಇರುತ್ತಾರೆ. ಸೊಸೆಯ ಪ್ರತಿ ಹೆಜ್ಜೆಗೂ ಟೀಕೆ, ಪರಿಶೀಲನೆ ನಡೆಯುತ್ತಲೇ ಇರುತ್ತದೆ. ಆದರೆ ಸಮಂತಾ ಮಾತ್ರ ಸುಸಂಸ್ಕೃತ ಸೊಸೆಯಂತೆ ನಗು ಮುಖದಿಂದ ಎಲ್ಲರ ಸೇವೆ ಮಾಡುತ್ತಾರೆ. ಮೆಚ್ಚುಗೆ ಪಡೆಯುತ್ತಾರೆ.
ಗರತಿ ಗೌರಮ್ಮನ ಅವತಾರ
ಆದರೆ ಸಮಂತಾರ ಈ ಗರತಿ ಗೌರಮ್ಮನ ಅವತಾರ ಹಗಲು ಹೊತ್ತು ಮಾತ್ರ. ಸಮಂತಾಗೆ ಇನ್ನೊಂದು ಮುಖವೂ ಇದೆ. ಟೀಸರ್‌ನಲ್ಲಿ ತೋರಿಸಿರುವಂತೆ ಸಮಂತಾ ಯಾವ ನಾಯಕರಿಗೂ ಕಡಿಮೆ ಇಲ್ಲದಂತೆ ಫೈಟ್ ಮಾಡುತ್ತಾರೆ, ವಿಲನ್‌ಗಳನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ. ಸೀರೆಯುಟ್ಟರೂ ಕಾಳಿಯಂತೆ ವಿಲನ್‌ಗಳ ಮೇಲೆ ಹಾರಿಹಾರಿ ಬೀಳುತ್ತಾರೆ. ಚುಚ್ಚಿ ಚಚ್ಚಿ ಕೊಂದೇ ಹಾಕುತ್ತಿದ್ದಾರೆ. ಈ ಎಲ್ಲ ಸಾಹಸ ಅತ್ತೆಯ ಮನೆಯಲ್ಲೇ ನಡೆಯುತ್ತಿದೆ. ಮನೆ ಮಂದಿಯ ಕಣ್ಣು ತಪ್ಪಿಸಿ ಈ ಸಾಹಸಗಳನ್ನು ಸಮಂತಾ ಮಾಡುತ್ತಿದ್ದಾರೆ.
ಆದರೆ ಸಮಂತಾರ ಈ ದೆವ್ವತ್ವಕ್ಕೆ ಕಾರಣ ಏನು? ಸಮಂತಾ ಮೇಲೆ ದಾಳಿ ಮಾಡುತ್ತಿರುವ ಆ ಪುಂಡರು ಯಾರು? ಇದೆಲ್ಲ ತಿಳಿಯಬೇಕೆಂದರೆ ಸಿನಿಮಾ ನೋಡಬೇಕು. ಟೀಸರ್‌ನಲ್ಲಿ ಜಸ್ಟ್ ಫ್ಲೇವರ್ ಇದೆ, ಕಥೆಯ ಹಿಂಟ್ ಅಷ್ಟೇ ಇದೆ. ಸಿನಿಮಾ ಅದಷ್ಟು ಬೇಗ ತೆರೆಗೆ ಬರಲಿದೆ ಎಂದಿದೆ ಚಿತ್ರತಂಡ. ಸದ್ಯಕ್ಕೆ ಟೀಸರ್ ನೋಡಿದ ಸಮಂತಾ ಅಭಿಮಾನಿಗಳು ಖುಷಿಯಾಗಿದ್ದಾರೆ.
ಕನ್ನಡಿಗ ಗುಲ್ಶನ್ ದೇವಯ್ಯ
'ಮಾ ಇಂಟಿ ಬಂಗಾರಂ' ಸಿನಿಮಾನಲ್ಲಿ ಸಮಂತಾ ಪತಿಯ ಪಾತ್ರದಲ್ಲಿ ಕನ್ನಡಿಗ ನಟ ದಿಗಂತ್ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಮತ್ತೊಬ್ಬ ಕನ್ನಡಿಗ ಗುಲ್ಶನ್ ದೇವಯ್ಯ ನಟಿಸಿದ್ದಾರೆ. ಈ ಮಾ ಇಂಟಿ ಬಂಗಾರಂ ಸಿನಿಮಾ ನಿರ್ದೇಶನ ಮಾಡಿರುವುದು ನಂದಿನಿ ರೆಡ್ಡಿ. ನಿರ್ಮಾಣ ಮಾಡಿರುವುದು ಸಮಂತಾರ ಪತಿ ರಾಜ್ ನಿಡಿಮೋರು. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆ ಷಿಸಬೇಕಿದೆ.



