Asianet Suvarna News Asianet Suvarna News

ಐಶ್​ ಮಾತ್ರವಲ್ಲ ಸಲ್ಮಾನ್​ ಹಾರ್ಟ್​ ಬ್ರೇಕ್​ ಮಾಡಿದ್ರು ಈ ನಟಿ! ಅಪ್ಪನ ಕಾರಣದಿಂದ ಮದ್ವೆ ಕ್ಯಾನ್ಸಲ್​

ಐಶ್​ ಮಾತ್ರವಲ್ಲ ಸಲ್ಮಾನ್​ ಹಾರ್ಟ್​ ಬ್ರೇಕ್​ ಮಾಡಿದ್ರು ಈ ನಟಿ! ನಟಿಯ ಅಪ್ಪನ ಕಾರಣದಿಂದ ಮದ್ವೆ ಕ್ಯಾನ್ಸಲ್​ ಆಯಿತು. ಯಾರೀ ಫೇಮಸ್​ ನಟಿ? 
 

Salman Khan wanted to marry actress Juhi Chawla had sent the proposal to her home suc
Author
First Published Jun 15, 2024, 5:05 PM IST

ಬಾಲಿವುಡ್​​ನ ಮೋಸ್ಟ್​ ಎಲಿಬಿಜಬಲ್​ ಬ್ಯಾಚುಲರ್​ ಎಂದು ಎನಿಸಿಕೊಂಡಿರೋ ಸಲ್ಮಾನ್​ ಖಾನ್​ ಅವರಿಗೆ ಈಗ 58. ಮದುವೆಯಾಗದಿದ್ದರೂ ಇವರು ಸಂಬಂಧ ಇಟ್ಟುಕೊಂಡಿರೋ ನಟಿಯರು ಹಲವರು ಎಂದೇ ಹೇಳಲಾಗುತ್ತದೆ. ಐಶ್ವರ್ಯ ರೈ ಕೈಕೊಟ್ಟ ಬಳಿಕ ಸಲ್ಮಾನ್​ ಖಾನ್​ ಮದುವೆಯಿಂದ ದೂರ ಉಳಿದರು ಎನ್ನಲಾಗುತ್ತಿದೆಯಾದರೂ, ಹಲವು ನಟಿಯರು ಸಲ್ಮಾನ್​ ಖಾನ್​ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನೂ ಮಾಡಿದ್ದಾರೆ. ಅದೇನೇ ಇದ್ದರೂ ಈಗ 58ರ ಹರೆಯದಲ್ಲಿಯೂ ಫಿಟ್​ ಆ್ಯಂಡ್​​ ಫೈನ್​ ಆಗಿರೋ ಸಲ್ಮಾನ್​ ಖಾನ್​ ಯುವ ನಟಿಯರ ಜೊತೆ ತೆರೆಯ ಮೇಲೂ ರೊಮ್ಯಾನ್ಸ್​ ಮಾಡುತ್ತಿದ್ದಾರೆ. ಇದೀಗ ಸಿಕಂದರ್​ ಚಿತ್ರದಲ್ಲಿ ತಮಗಿಂತ 30 ವರ್ಷ ಚಿಕ್ಕವರಾಗಿರುವ  ಕನ್ನಡದ ಬೆಡಗಿ, ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಅವರ ಜೊತೆ ರೊಮ್ಯಾನ್ಸ್​ ಮಾಡಲು ರೆಡಿಯಾಗಿದ್ದು, ಇದಾಗಲೇ ಇದರ ಬಗ್ಗೆ ಸಾಕಷ್ಟು  ಟ್ರೋಲ್​ ಕೂಡ ಆಗುತ್ತಿದೆ. . 

 ಅದೇನೇ ಇದ್ದರೂ ಇದೀಗ ನಟನ ಹಳೆಯ ವಿಡಿಯೋ ಒಂದು ಮತ್ತೆ ಸದ್ದು ಮಾಡುತ್ತಿದೆ. ಅದರಲ್ಲಿ ಸಲ್ಮಾನ್​ ಖಾನ್​ ತಾವು ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಬಯಸಿರುವ ಬಗ್ಗೆ ತಿಳಿಸಿದ್ದಾರೆ. ಹಳೆಯ ಸಂದರ್ಶನವೊಂದರಲ್ಲಿ ನಟ, ಜೂಹಿ ಚಾವ್ಲಾ ಕುರಿತು ಮಾತನಾಡಿದ್ದಾರೆ. "ನಾನು ಅವಳನ್ನು ಮದುವೆಯಾಗಲು ಬಯಸಿದ್ದೆ; ಅವಳು ನಿಜವಾಗಿಯೂ ಒಳ್ಳೆಯವಳು. ಮದುವೆ ಪ್ರಪೋಸಲ್​ ಕಳಿಸಿದ್ದಾರೆ. ಆದರೆ  ನನ್ನ ದುರದೃಷ್ಟ.  ಅವಳ ತಂದೆ ಒಪ್ಪಲಿಲ್ಲ. ನಾನು ಅದರ ಬಗ್ಗೆ ಅವರೊಂದಿಗೆ  ಮಾತನಾಡಿದೆ, ಆದರೆ ಅವನು ಇಷ್ಟಪಡಲಿಲ್ಲ. ಅದಕ್ಕೆ ಕಾರಣವೂ ತಿಳಿದಿಲ್ಲ" ಎಂದು ಸಲ್ಮಾನ್​ ಹೇಳಿದ್ದಾರೆ.

58ರ ಸಲ್ಮಾನ್​ ಜೊತೆ 28ರ ರಶ್ಮಿಕಾ ರೊಮ್ಯಾನ್ಸ್​! ಫೋಟೋ ನೋಡಿ ಥೂ ಅಸಹ್ಯ ಅಂತಿದ್ದಾರೆ ಫ್ಯಾನ್ಸ್​

ಅಷ್ಟಕ್ಕೂ ಜೂಹಿ ಚಾವ್ಲಾ ಮತ್ತು ಸಲ್ಮಾನ್​ ಖಾನ್​ ಯಾವುದೇ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಲಿಲ್ಲ. ಆದರೆ ದೀವಾನಾ ಮಸ್ತಾನಾ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 1997 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಲ್ಮಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಷ್ಟೇ. ಜೂಹಿ ಆಮೀರ್ ಖಾನ್ ಅವರೊಂದಿಗೆ ಖಯಾಮತ್ ಸೆ ಕಯಾಮತ್ ತಕ್ ನಂತಹ ಸೂಪರ್‌ ಹಿಟ್ ಚಿತ್ರವನ್ನು ನೀಡಿದ್ದಾರೆ. ಆದರೆ ಸಲ್ಮಾನ್​ ಜೊತೆ ಅವರು ಯಾವುದೇ ಚಿತ್ರದಲ್ಲಿ ಯಾಕೆ ಕಾಣಿಸಿಕೊಂಡಿಲ್ಲ ಎನ್ನುವುದಕ್ಕೆ ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಐಶ್ವರ್ಯ ರೈ ಮಾತ್ರವಲ್ಲದೇ ಜೂಹಿ ಚಾವ್ಲಾರಿಂದಲೂ ಸಲ್ಮಾನ್​ ಖಾನ್​ ಹಾರ್ಟ್​ ಬ್ರೇಕ್​ ಆಗಿದೆ. 

1995 ರಲ್ಲಿ, ಜೂಹಿ ಚಾವ್ಲಾ ಉದ್ಯಮಿ ಜಯ್ ಮೆಹ್ತಾ ಅವರನ್ನು ವಿವಾಹವಾದರು.  1995ರಲ್ಲಿ ಜೂಹಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಜೂಹಿ ನಟನೆಯಿಂದ ದೂರ ಇದ್ದಾರೆ. ಹಾಗಂತ ಸಿನಿಮಾರಂಗದ ನಂಟು ಕಡಿದುಕೊಂಡಿಲ್ಲ. ಆಗಾಗ ಸಿನಿಮಾರಂಗದ ಕಾರ್ಯಕ್ರಮ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. 

ಸಸ್ಯಾಹಾರಿ ಪತ್ರಕರ್ತೆಗೆ ಮಾಂಸ ತಿನ್ನಿಸಿದ್ರಾ ಆಲಿಯಾ! ರಾಮನ ಪಾತ್ರಕ್ಕೆ ರಣಬೀರ್ ಮದ್ಯ ಬಿಟ್ಟಿದ್ದು ಸುಳ್ಳಾ?

Latest Videos
Follow Us:
Download App:
  • android
  • ios