ಅಪ್ಪನ ವಯಸ್ಸಿನ ನಟನ ಜೊತೆ ನಟಿ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್​ ಮಾಡಲಿರುವ ವಿಷಯ ಕೇಳಿ ಖುದ್ದು ಅಭಿಮಾನಿಗಳೇ ಕಿಡಿ ಕಾರುತ್ತಿದ್ದಾರೆ.  ಏನಿದು ವಿಷ್ಯ?  

ಬಾಲಿವುಡ್​​ನ ಮೋಸ್ಟ್​ ಎಲಿಬಿಜಬಲ್​ ಬ್ಯಾಚುಲರ್​ ಎಂದು ಎನಿಸಿಕೊಂಡಿರೋ ಸಲ್ಮಾನ್​ ಖಾನ್​ ಅವರಿಗೆ ಈಗ 58. ಅದೇ ಕನ್ನಡದ ಬೆಡಗಿ, ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಅವರಿಗೆ ಈಗ 28 ವರ್ಷ ವಯಸ್ಸು. ಅಂದರೆ ಇಬ್ಬರ ನಡುವೆ ಬರೋಬ್ಬರಿ 30 ವರ್ಷಗಳ ಅಂತರ. ಆದರೆ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್​ ಖಾನ್​ ಈಗ ರೊಮ್ಯಾನ್ಸ್​ ಮಾಡಲಿದ್ದಾರೆ. ಅದು ಸಿಕಂದರ್​ ಚಿತ್ರದಲ್ಲಿ. ಅಪ್ಪನ ವಯಸ್ಸಿನ ನಾಯಕನ ಜೊತೆ ರೊಮ್ಯಾನ್ಸ್​ ಮಾಡುತ್ತಿರುವ ರಶ್ಮಿಕಾರನ್ನು ಸಿನಿ ಪ್ರೇಮಿಗಳು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಸಲ್ಮಾನ್​ ಖಾನ್​ ಅವರನ್ನೂ ಸಕತ್​ ಟ್ರೋಲ್​ ಮಾಡುತ್ತಿದ್ದಾರೆ. 

ಅಷ್ಟಕ್ಕೂ ಈ ರೀತಿ ವಯಸ್ಸಿನ ಅಂತರದಲ್ಲಿ ಚಿತ್ರಗಳಲ್ಲಿ ನಟ-ನಟಿಯರು ನಟಿಸ್ತಾ ಇರೋದು ಇದೇ ಮೊದಲೇನಲ್ಲ. ಅದರಲ್ಲಿಯೂ ಖಾನ್​ ಸ್ಟಾರ್​ ನಟರು ಹಿಂದೆಯೂ ಆಗಷ್ಟೇ ಎಂಟ್ರಿ ಕೊಡೋ ನಟಿಯರ ಜೊತೆ ರೊಮ್ಯಾನ್ಸ್​ ಮಾಡಿದ್ದು ಇದೆ. ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಅಪ್ಪನ ವಯಸ್ಸಿನ ನಟರ ಜೊತೆ ರೊಮ್ಯಾನ್ಸ್​ ಮಾಡಲು, ಬಟ್ಟೆ ಬಿಚ್ಚುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು, ಲಿಪ್​ ಲಾಕ್​ ಮಾಡಲು, ಬೆತ್ತಲಾಗಲು ಚಿಕ್ಕ ವಯಸ್ಸಿನ ನಟಿಯರೂ ಹಿಂದೇಟು ಹಾಕುವುದು ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. ಆದರೆ ರಶ್ಮಿಕಾ ಮಂದಣ್ಣ ಇದಾಗಲೇ ಬಹುದೊಡ್ಡ ಸ್ಟಾರ್​ ಆಗಿದ್ದರೂ ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದು ಈಕೆಯ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಎಲ್ಲದ್ದಕ್ಕೂ ಸೈ ಎಂದು ನಟಿಯರೇ ಒಪ್ಪಿಕೊಂಡಿರುವಾಗ ನಿಮಗೇನು ಎಂದು ಟ್ರೋಲಿಗರಿಗೆ ಕೆಲವಷ್ಟು ಮಂದಿ ತಿರುಗೇಟು ನೀಡುತ್ತಿದ್ದಾರೆ. 

ಕೆಲವು ದಿನಗಳ ಹಿಂದಷ್ಟೆ, ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಸಿನಿಮಾ ಒಂದರಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ರಶ್ಮಿಕಾ ಕೂಡ ಈ ವಿಷಯವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದರು. ಇದೀಗ ಚಿತ್ರದ ಹೆಸರು ರಿವೀಲ್​ ಆಗಿದೆ. ಸಲ್ಮಾನ್​ ಖಾನ್​ ಜೊತೆ ರೊಮ್ಯಾನ್ಸ್​ ಮಾಡಲು ಖುಷಿಯಾಗುತ್ತಿರುವ ವಿಷಯವನ್ನೂ ರಶ್ಮಿಕಾ ಈಗ ಹೇಳಿದ್ದು, ನಟಿಯ ವಿರುದ್ಧವೂ ಹಲವರು ಕೆಂಡಾಮಂಡಲವಾಗಿದ್ದಾರೆ. ಈ ಹಿಂದೆ ಸಲ್ಮಾನ್ ಖಾನ್ ‘ಕಿಸಿ ಕಿ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮಾಡಿದಾಗಲೂ ಸಹ ಪೂಜಾ ಹೆಗ್ಡೆಯನ್ನು ನಾಯಕಿಯನ್ನಾಗಿ ಹಾಕಿಕೊಂಡಿದ್ದಕ್ಕೆ ಇದೇ ಟೀಕೆ ಎದುರಿಸಿದ್ದರು.

ಇನ್ನು ಸಿಕಂಡರ್​ ಚಿತ್ರದ ಕುರಿತು ಹೇಳುವುದಾದರೆ, ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ಸಲ್ಮಾನ್ ಖಾನ್​ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ ಬಂಡವಾಳ ಹೂಡಿದ್ದಾರೆ. ಸಿನಿಮಾವು ಆಕ್ಷನ್ ಥ್ರಿಲ್ಲರ್ ಆಗಿರಲಿದ್ದು, ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಯುವತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಬೆನ್ನ ಹಿಂದೆ ಬಾಲ್ ತೋರಿಸಿದ ಜಾಹ್ನವಿ ಕಪೂರ್, ಥೂ ನೆಟ್ಟಿಗರು ಹಿಂಗಾ ಕಮೆಂಟ್ ಮಾಡೋದು?