ಆಮೀರ್ ಖಾನ್ ಚಿತ್ರ ರಿಜೆಕ್ಟ್ ಮಾಡಿದ ಸಲ್ಲು! ಮಿಡ್ನೈಟ್ ಪಾರ್ಟಿಯಲ್ಲೇನಾಯ್ತು ಅಂತಿದ್ದಾರೆ ಫ್ಯಾನ್ಸ್!
ಮೊನ್ನೆಯಷ್ಟೇ ಖಾನ್ ತ್ರಯರು ನಸುಕಿನವರೆಗೆ ಪಾರ್ಟಿ ಮಾಡಿದ್ರು. ಅದರ ಬೆನ್ನಲ್ಲೇ ಆಮೀರ್ ಖಾನ್ ಚಿತ್ರದ ಆಫರ್ ಅನ್ನು ಸಲ್ಮಾನ್ ಖಾನ್ ತಿರಸ್ಕರಿಸಿದ್ದಾರಂತೆ. ಏನಿದರ ಕಾರಣ?
ಬಾಲಿವುಡ್ ಅನ್ನು ಸಲ್ಮಾನ್ ಖಾನ್ (Salman Khan) , ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಆಳುತ್ತಿದ್ದಾರೆ. ಬಹುತೇಕ ನಿರ್ದೇಶಕರು ಅವರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾರೆ. ಅವರು ಇರುವ ಚಿತ್ರ, ಇದು ಯಶಸ್ಸಿನ ಗ್ಯಾರಂಟಿ ಎಂದು ಪರಿಗಣಿಸಲಾಗುತ್ತಿದ್ದ ಕಾಲವೊಂದಿತ್ತು. ಈ ಮೂವರು ಖಾನ್‌ಗಳ ನಡುವಿನ ಬಾಂಧವ್ಯ ಕೂಡ ತುಂಬಾ ಚೆನ್ನಾಗಿದೆ. ಬಾಲಿವುಡ್ನ ಖಾನ್ ತ್ರಯರು ಎಂದೇ ಇವರು ಖ್ಯಾತನಾಮರು. ಆಮೀರ್ ಖಾನ್ ಅವರ ಚಿತ್ರಗಳು ಒಂದರ ಮೇಲೊಂದು ಫ್ಲಾಪ್ ಆಗಿದ್ದರೆ, ಶಾರುಖ್ ಖಾನ್ ಪಠಾಣ್ ಮೂಲಕ ಮತ್ತೆ ಚಿಗುರಿದ್ದಾರೆ, ಇನ್ನು ಸಲ್ಮಾನ್ ಆಗಾಗ್ಗೆ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಇನ್ನೂ ಒಂದು ಇಂಟರೆಸ್ಟಿಂಗ್ ವಿಷಯ ಏನೆಂದರೆ, ಈ ಮೂವರೂ ಹುಟ್ಟಿದ್ದು ಒಂದೇ ಇಸ್ವಿಯಲ್ಲಿ ಅಂದರೆ 1965ರಲ್ಲಿ. 1988 ರಲ್ಲಿ 'ಖಯಾಮತ್ ಸೇ ಖಯಾಮತ್ ತಕ್' ಸಿನಿಮಾದ ಮೂಲಕ ಆಮೀರ್ ಖಾನ್ 'ನಾಯಕ'ನಾದರೆ, 1989 ರಲ್ಲಿ 'ಮೈನೇ ಪ್ಯಾರ್ ಕಿಯಾ' ಚಿತ್ರದ ಮೂಲಕ ಸಲ್ಮಾನ್ 'ಹೀರೋ' ಆದರು. ಇನ್ನೂ ಶಾರುಖ್ (Shah rukh Khan) ಎಂಟ್ರಿಕೊಟ್ಟಿದ್ದು 1992ರಲ್ಲಿ 'ದೀವಾನಾ' ಚಿತ್ರದ ಮೂಲಕ.
ಇಂಥ ಜಿಗರಿ ದೋಸ್ತ್ಗಳಲ್ಲಿ ಬಿರುಕು ಬಿಟ್ಟಿದ್ಯಾ ಎನ್ನೋ ಸುದ್ದಿ ಈಗ ಹರಿದಾಡುತ್ತಿದೆ. ಇತ್ತೀಚೆಗೆ ಈ ಮೂವರು ಒಂದೆಡೆ ಸೇರಿದ್ದಾರೆ. ಒಟ್ಟಾಗಿ ಮೂವರೂ ಪಾರ್ಟಿ ಮಾಡಿದ್ದಾರೆ. ಅದೂ ಮುಂಜಾನೆ ನಾಲ್ಕು ಗಂಟೆವರೆಗೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಇನ್ನೊಂದು ಸುದ್ದಿಯೂ ಹೊರ ಬಂದಿದೆ. ಅದೇನೆಂದರೆ, ಸಲ್ಮಾನ್ ಖಾನ್ ಅವರು ಆಮೀರ್ ಖಾನ್ (Amir Khan) ಅವರ ಚಿತ್ರ ಮಾಡಲು ನಿರಾಕರಿಸಿದ್ದಾರೆ ಎನ್ನುವುದು! ಹಾಗಿದ್ದರೆ ಮೊನ್ನೆ ತಾನೇ ಮಿಡ್ ನೈಟ್ವರೆಗೆ ಪಾರ್ಟಿ ಮಾಡಿದ್ರಲ್ಲ, ಅಲ್ಲಿ ಏನಾದ್ರೂ ಆಗಿರ್ಬೋದಾ ಅಂತಿದ್ದಾರೆ ಫ್ಯಾನ್ಸ್. ಏನಾಗಿರಬಹುದು ಎಡವಟ್ಟು ಅಂತ ಚರ್ಚೆ ಶುರುವಾಗಿದೆ.
ಶಾರುಖ್, ಆಮೀರ್, ಸಲ್ಮಾನ್ರಿಂದ ನಸುಕಿನವರೆಗೆ ಪಾರ್ಟಿ: ಶುರುವಾಯ್ತು ಭಾರಿ ಚರ್ಚೆ!
ಎಲ್ಲಾದರೂ ಉಂಟೆ ಎಂದು ಕೇಳಬಹುದು. ಆದರೆ ನಿಜಕ್ಕೂ ಸಲ್ಲು ಭಾಯಿ, ಆಮೀರ್ ಅವರ ಚಿತ್ರ ನಿರಾಕರಿಸಿದ್ದಾರಂತೆ. ಆಮೀರ್ ಖಾನ್ ಅವರು ಸ್ಪ್ಯಾನಿಷ್ ಚಿತ್ರ 'ಕ್ಯಾಂಪಿಯೋನ್ಸ್' ಹಿಂದಿ ರಿಮೇಕ್ ಮಾಡುತ್ತಿದ್ದಾರೆ ಮತ್ತು ಅದಕ್ಕೆ 'ಚಾಂಪಿಯನ್ಸ್' (Champions) ಎಂದು ಹೆಸರಿಡಲಾಗಿದೆ. ಈ ವರ್ಷದ ಆರಂಭದಲ್ಲಿ ಚಿತ್ರದ ನಿರ್ಮಾಪಕ ಆಮೀರ್ ಖಾನ್ ಅವರು ಸಲ್ಮಾನ್ ಅವರನ್ನು ಪ್ರಮುಖ ಪಾತ್ರಕ್ಕಾಗಿ ಸಂಪರ್ಕಿಸಿದ್ದರು ಎಂದು ವರದಿಯಾಗಿದೆ. ಆದರೆ ಈ ಚಿತ್ರದ ಆಫರ್ ಅನ್ನು ಸಲ್ಮಾನ್ ಖಾನ್ ತಿರಸ್ಕರಿಸಿದ್ದಾರೆ. ಬಾಲಿವುಡ್ ಹಂಗಾಮಾದ ಇತ್ತೀಚಿನ ವರದಿಯ ಪ್ರಕಾರ, ಆರ್‌ಎಸ್ ಪ್ರಸನ್ನ ನಿರ್ದೇಶನದ ಅವರ ಚಿತ್ರದಲ್ಲಿ, ಆಮೀರ್ ಅವರೊಂದಿಗೆ ಕೆಲಸ ಮಾಡಲು ಸಲ್ಮಾನ್ ರಿಜೆಕ್ಟ್ ಮಾಡಿದ್ದಾರೆ.
ಅಷ್ಟಕ್ಕೂ ಸಲ್ಮಾನ್ ಏನೂ ಬೇಕಂತಲೇ ಹೀಗೆ ಮಾಡಲಿಲ್ಲ. ಅವರು ಕೂಡ ಆಮೀರ್ ಜೊತೆ ಕೆಲಸ ಮಾಡಲು ಸಲ್ಮಾನ್ ಸಾಕಷ್ಟು ಉತ್ಸುಕರಾಗಿದ್ದರು. ಆದರೆ, ಬ್ಯುಸಿ ಶೆಡ್ಯೂಲ್‌ನಿಂದಾಗಿ ಸಲ್ಮಾನ್ ಖಾನ್ ಚಿತ್ರಕ್ಕೆ ನಿರಾಕರಿಸಬೇಕಾಯಿತು ಎನ್ನಲಾಗಿದೆ. ಸಲ್ಮಾನ್ ಈಗಾಗಲೇ ಟೈಗರ್ 3, ಟೈಗರ್ Vs ಪಠಾಣ್ ಸ್ಪೈ ಯೂನಿವರ್ಸ್ ಮತ್ತು ಕಿಕ್‌ನ ಮುಂದುವರಿದ ಭಾಗವನ್ನು ಹೊಂದಿದ್ದಾರೆ. ಅವರು ಈ ವರ್ಷ ಬಿಗ್ ಬಾಸ್ OTT 2 (Bigg Boss) ಮತ್ತು ಬಿಗ್ ಬಾಸ್ ಸೀಸನ್ 17 ಅನ್ನು ಸಹ ಹೋಸ್ಟ್ ಮಾಡಲಿದ್ದಾರೆ. ಆದ್ದರಿಂದ ಇವೆಲ್ಲವುಗಳ ನಡುವೆ ಮತ್ತೊಂದು ಚಿತ್ರ ಒಪ್ಪಲಾರೆ ಎಂದಿದ್ದಾರೆ ಎಂದು ವರದಿಯಾಗಿದೆ.
Aamir Khan: ಮೋದಿ ಹೊಗಳಿದ ಆಮೀರ್ ಖಾನ್ ನೇಪಾಳಕ್ಕೆ ಹಾರಿದ್ಯಾಕೆ?
ವರದಿಗಳನ್ನು ನಂಬುವುದಾದರೆ, ಸಲ್ಮಾನ್ ಖಾನ್ ಅವರ ನಿರಾಕರಣೆಯು ಅಮೀರ್‌ಗೆ ಆಘಾತವನ್ನುಂಟು ಮಾಡಿದೆ, ಮತ್ತು ಅವರು 'ಚಾಂಪಿಯನ್ಸ್' ಚಿತ್ರದ ಪ್ರಮುಖ ಪಾತ್ರಕ್ಕಾಗಿ ರಣಬೀರ್ ಕಪೂರ್ ಅವರನ್ನು ಸಂಪರ್ಕಿಸಿದ್ದಾರೆ. ರಣಬೀರ್ ಕಥೆ ಕೇಳಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಈ ಚಿತ್ರವು 2024 ರಲ್ಲಿ ಥಿಯೇಟರ್‌ಗಳಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ರಣಬೀರ್ (Ranbeer Kapoor) ಅಭಿಮಾನಿಗಳು ಅವರ ಮುಂದಿನ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.