ಶಾರುಖ್, ಆಮೀರ್, ಸಲ್ಮಾನ್ರಿಂದ ನಸುಕಿನವರೆಗೆ ಪಾರ್ಟಿ: ಶುರುವಾಯ್ತು ಭಾರಿ ಚರ್ಚೆ!
ಬಾಲಿವುಡ್ನ ಖಾನ್ ತ್ರಯರು ಒಂದೆಡೆ ಸೇರಿ ನಸುಕಿನ ನಾಲ್ಕು ಗಂಟೆಯವರೆಗೆ ಪಾರ್ಟಿ ಮಾಡಿದ್ದಾರೆ. ಇದರ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಬಾಲಿವುಡ್ನ ಖಾನ್ ತ್ರಯರಾಗಿರುವ ಆಮೀರ್ ಖಾನ್, ಸಲ್ಮಾನ್ ಖಾನ್ (Salman Khan) ಹಾಗೂ ಶಾರುಖ್ ಖಾನ್ ಈಗಲೂ ಬಾಲಿವುಡ್ ಆಳುತ್ತಿದ್ದಾರೆ. ಅದರಲ್ಲಿ ಆಮೀರ್ ಖಾನ್ ಅವರ ಚಿತ್ರಗಳು ಒಂದರ ಮೇಲೊಂದು ಫ್ಲಾಪ್ ಆಗಿದ್ದರೆ, ಶಾರುಖ್ ಖಾನ್ ಪಠಾಣ್ ಮೂಲಕ ಮತ್ತೆ ಚಿಗುರಿದ್ದಾರೆ, ಇನ್ನು ಸಲ್ಮಾನ್ ಆಗಾಗ್ಗೆ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಇನ್ನೂ ಒಂದು ಇಂಟರೆಸ್ಟಿಂಗ್ ವಿಷಯ ಏನೆಂದರೆ, ಈ ಮೂವರೂ ಹುಟ್ಟಿದ್ದು ಒಂದೇ ಇಸ್ವಿಯಲ್ಲಿ ಅಂದರೆ 1965ರಲ್ಲಿ. ತಿಂಗಳುಗಳು ಬೇರೆ ಬೇರೆಯಾಗಿದ್ದರೂ ಖಾನ್ ತ್ರಯರು ಮೂವರೂ ಈಗ 58ನೇ ವಯಸ್ಸಿನಲ್ಲಿದ್ದಾರೆ. ಮಾರ್ಚ್ 14 ರಂದು ಜನಿಸಿದ ಅಮೀರ್, ಖಾನ್ ತ್ರಯರ ಪೈಕಿ ಹಿರಿಯನಾದರೆ, ಡಿಸೆಂಬರ್ 27ಕ್ಕೆ ಹುಟ್ಟಿರುವ ಸಲ್ಮಾನ್ ಇಬ್ಬರಿಗಿಂತ ಕಿರಿಯ. ಮೂವರು ಈಗಲೂ ನಾಯಕ ನಟನಾಗಿಯೇ ಮಿಂಚುತ್ತಿದ್ದಾರೆ. 1988 ರಲ್ಲಿ 'ಖಯಾಮತ್ ಸೇ ಖಯಾಮತ್ ತಕ್' ಸಿನಿಮಾದ ಮೂಲಕ ಆಮೀರ್ ಖಾನ್ 'ನಾಯಕ'ನಾದರೆ, 1989 ರಲ್ಲಿ 'ಮೈನೇ ಪ್ಯಾರ್ ಕಿಯಾ' ಚಿತ್ರದ ಮೂಲಕ ಸಲ್ಮಾನ್ 'ಹೀರೋ' ಆದರು. ಇನ್ನೂ ಶಾರುಖ್ (Shah rukh Khan) ಎಂಟ್ರಿಕೊಟ್ಟಿದ್ದು 1992ರಲ್ಲಿ 'ದೀವಾನಾ' ಚಿತ್ರದ ಮೂಲಕ.
ಇನ್ನೂ ಒಂದು ವಿಶೇಷ ಎಂದರೆ, ಸಲ್ಮಾನ್ ಖಾನ್ ಇನ್ನೂ ಅವಿವಾಹಿತ ಆಗಿದ್ದರೆ, ಶಾರುಖ್ ಮತ್ತು ಆಮೀರ್ ಖಾನ್ ಮದುವೆಯಾದದ್ದು ಹಿಂದೂ ಯುವತಿಯರನ್ನೇ. ಶಾರುಖ್ ಒಂದೇ ಮದುವೆಯಾಗಿ ಸುಖ ಸಂಸಾರ ಮಾಡುತ್ತಿದ್ದರೆ, ಆಮೀರ್ ಇಬ್ಬರು ಹಿಂದೂ ಯುವತಿಯರನ್ನು ಮದುವೆಯಾಗಿ (Marriage) ಸದ್ಯ ದೂರವಾಗಿದ್ದಾರೆ. ಕಳೆದ 30 ವರ್ಷಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರೋ ಈ ಖಾನ್ಗಳ ನಡುವೆ ಆಗಾದ್ದಾರೆ ಈ ನಟರು. ಇವರ ಮಧ್ಯೆ ಆಗಾಗ ಭಿನ್ನಾಭಿಪ್ರಾಯ ಬಂದು ಒಬ್ಬರ ಮುಖ ಒಬ್ಬರು ನೋಡಿಕೊಳ್ಳದೇ ಇರುವ ಪರಿಸ್ಥಿತಿ ಬಂದಿದ್ದೂ ಇದೆ. ಆದರೆ, ಈಗ ಕಾಲ ಬದಲಾಗಿದೆ. ಇವರ ನಡುವೆ ಏನೋ ಗುಟ್ಟು ನಡೀತಿದೆ ಎನ್ನಲಾಗುತ್ತಿರುವ ವಿಷಯವೊಂದು ಈಗ ಹೊರಕ್ಕೆ ಬಂದಿದೆ.
DDLJ: ಕಾಜೋಲ್ ಸ್ಕರ್ಟ್ ನೋಡಿ ಕಣ್ಕಣ್ ಬಿಟ್ಟಿದ್ರಂತೆ ನಿರ್ದೇಶಕ, ಅಷ್ಟಕ್ಕೂ ಆಗಿದ್ದೇನು?
ಅದೇನೆಂದರೆ, ಇತ್ತೀಚೆಗೆ ಈ ಮೂವರು ಒಂದೆಡೆ ಸೇರಿದ್ದಾರೆ. ಒಟ್ಟಾಗಿ ಮೂವರೂ ಪಾರ್ಟಿ ಮಾಡಿದ್ದಾರೆ. ಅದೂ ಮುಂಜಾನೆ ನಾಲ್ಕು ಗಂಟೆವರೆಗೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಇತ್ತೀಚಿಗೆ ಈ ಪಾರ್ಟಿ ನಡೆದಿದ್ದು, ಅದು ಈಗ ಬಹಿರಂಗಗೊಂಡಿದೆ. ಸಲ್ಮಾನ್ ಖಾನ್ ಅವರ ಮನೆಯಲ್ಲಿ ಬೆಳಗ್ಗೆ 4 ಗಂಟೆಯ ತನಕವೂ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಈ ಮೂವರು ನಟರೂ ಮೇ 16ರಂದು ವಿಶೇಷವಾಗಿ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಮೇ 16ರಂದು ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ಭೇಟಿಯಾಗಿದ್ದು ಬೆಳಗ್ಗೆ 4 ಗಂಟೆಯ ತನಕವೂ ಪಾರ್ಟಿ ಮಾಡಿದ್ದಾರೆ. ಸೆಲೆಬ್ರಿಟಿಗಳ ಮನೆಯಲ್ಲಿ ಆಗಾಗ ಪಾರ್ಟಿ (party) ನಡೆಯುತ್ತಿರುತ್ತದೆ. ಆದರೆ, ಈ ವಿಚಾರ ಗುಟ್ಟಾಗಿ ಇಡಲಾಗುತ್ತದೆ. ಈಗ ಸಲ್ಮಾನ್ ಖಾನ್ ಆಯೋಜಿಸಿದ್ದ ಪಾರ್ಟಿ ವಿಚಾರ ಲೀಕ್ ಆಗಿದೆ.
'The Kerala Story' ನಿರ್ದೇಶಕ ಸುದೀಪ್ತೋ ಸೇನ್ ಮತ್ತೊಮ್ಮೆ ಆಸ್ಪತ್ರೆಗೆ ದಾಖಲು! ನಡೆದಿದ್ದೇನು
ರಂಜಾನ್ ಸಂದರ್ಭದಲ್ಲಿ ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಒಂದೆಡೆ ಸೇರಿದ್ದರು. ಈ ವೇಳೆ ಶಾರುಖ್ ಖಾನ್ ಮಿಸ್ ಆಗಿದ್ದರು. ಇದರ ಫೋಟೋ ಲೀಕ್ ಆಗಿತ್ತು. ಈ ಫೋಟೋನ ಅವರು ಹಂಚಿಕೊಳ್ಳದೇ ಇದ್ದುದು ಕೂಡ ಚರ್ಚೆಗೆ ಗ್ರಾಸವಾಗಿದೆ. ಆಮೀರ್, ಸಲ್ಮಾನ್ ಹಾಗೂ ಶಾರುಖ್ ಖಾನ್ ಅವರು ತಮ್ಮ ಕೆರಿಯರ್ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದ್ದರೂ ವಿಷಯ ಇನ್ನೂ ಬಹಿರಂಗಗೊಳ್ಳಲಿಲ್ಲ. ನಟರು ತಮ್ಮ ಸಿನಿಮಾ ಕೆರಿಯರ್, ತಪ್ಪುಗಳು, ಸೋಲುಗಳು, ಗೆಲುವುಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಹಳೆಯ ಸಂಗತಿಗಳನ್ನೂ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ. ನ್ಗಳಷ್ಟೇ ಏಕೆ ಚರ್ಚಿಸಿದ್ದಾರೆ ಎನ್ನುವ ಬಗ್ಗೆ ಬಹಳ ದೊಡ್ಡ ಮಟ್ಟದಲ್ಲಿಯೇ ಚರ್ಚೆ ನಡೆದಿದೆ. ಮೂವರು ಬಹಳಷ್ಟು ಸಮಯದ ನಂತರ ಜೊತೆಯಾಗಿ ಸಿಕ್ಕಿದ್ದು ಈ ಸಮಯವನ್ನು ಎಂಜಾಯ್ ಮಾಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್ ಹಾಗೂ ಶಾರುಖ್ ಅವರು ಅಮೀರ್ ಖಾನ್ ಅವರಿಗೆ ಬ್ರೇಕ್ ಕಡಿಮೆ ಮಾಡಿ ಸಿನಿಮಾಗೆ ಬರುವಂತೆ ಸಲಹೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.