ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಸಿಕಂದರ್' ಚಿತ್ರ ಈದ್‌ಗೆ ಬಿಡುಗಡೆಯಾಯಿತು. ಎ.ಆರ್. ಮುರುಗದಾಸ್ ನಿರ್ದೇಶನದ ಈ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಪ್ರಚಾರದ ವೇಳೆ ರಶ್ಮಿಕಾ ಕೊರಿಯನ್ ಹಾರ್ಟ್ ಮಾಡಲು ಹೇಳಿದಾಗ ಸಲ್ಮಾನ್ ನಿರಾಕರಿಸಿದರು. ಮಕ್ಕಳು ಇಷ್ಟಪಡುತ್ತಾರೆಂದು ರಶ್ಮಿಕಾ ಹೇಳಿದರೂ, ಸಲ್ಮಾನ್ ಒಪ್ಪಲಿಲ್ಲ. ಎರಡು ವರ್ಷಗಳ ನಂತರ ಬಿಡುಗಡೆಯಾದ ಸಲ್ಮಾನ್ ಚಿತ್ರ ನಿರೀಕ್ಷಿತ ಮಟ್ಟ ತಲುಪಿಲ್ಲ.

ಖ್ಯಾತ ನಟ ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ ಅಭಿನಯದ ‘ಸಿಕಂದರ್’ ಚಿತ್ರ ಈದ್ ಹಬ್ಬಕ್ಕೆ ರಿಲೀಸ್ ಆಗಿತ್ತು. ಎಆರ್ ಮುರುಗದಾಸ್ ನಿರ್ದೇಶನದ ಈ ಆಕ್ಷನ್ ಕಥೆಯುಳ್ಳ ಸಿನೆಮಾ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿತ್ತು. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎದುರು ಸೂಪರ್‌ಸ್ಟಾರ್ ಅವರನ್ನು ನೋಡಲು ಜನ ಕುತೂಹಲದಿಂದ ಕಾದಿದ್ದರು. ಆದರೆ ಸಿಕಂದರ್ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋಲು ಕಂಡಿದ್ದಾರೆ. ಸಿನೆಮಾವನ್ನು ಈಗ ಟ್ರೋಲ್ ಕೂಡ ಮಾಡಲಾಗುತ್ತಿದೆ.

ನನಗೂ ಸಹಾಯ ಬೇಕಿದೆ ನನ್ನ ಪರ ಯಾರೂ ನಿಲ್ಲುತ್ತಿಲ್ಲ; ಬೇಸರ ಹೊರ ಹಾಕಿದ ಸಲ್ಮಾನ್ ಖಾನ್

ಕಳೆದ ಕೆಲವು ದಿನಗಳಿಂದ ಚಿತ್ರತಂಡ ಸಿನೆಮಾ ಪ್ರಚಾರದಲ್ಲಿದೆ. ಸೆಟ್‌ನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಉತ್ತಮ ಬಾಂಧವ್ಯ ಹೊಂದಿದ್ದ ಸಲ್ಲು ಮತ್ತು ರಶ್ಮಿಕಾ ಈ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಟ್ರೇಲರ್‌ ಲಾಂಚ್‌ ಈವೆಂಟ್‌ ನಲ್ಲಿ ಕೊರಿಯನ್‌ ಹಾರ್ಟ್ ಮಾಡಿದ ರಶ್ಮಿಕಾ ಮಂದಣ್ಣನನ್ನು ನೋಡಿ ಸಲ್ಲು ಕೊರಿಯನ್‌ ಹಾರ್ಟ್ ಮಾಡಿ ಪೋಸ್ ಕೊಟ್ಟರು. ಆದರೆ ಮತ್ತೊಮ್ಮೆ ಮಾಡಿ ಎಂದು ರಶ್ಮಿಕಾ ಮಂದಣ್ಣ ಹೇಳಿದಾಗ ಸಲ್ಮಾನ್ ಖಾನ್ ನಿರಾಕರಿಸಿದ್ದಾರೆ.

ನಾಗಶೌರ್ಯನನ್ನೂ ಕಡೆಗಣಿಸಿದ್ದ ರಶ್ಮಿಕಾ ಮಂದಣ್ಣ: ತೆಲುಗಿನಲ್ಲೂ ಹೊತ್ತಿಕೊಂಡಿತ್ತೊಮ್ಮೆ ಕಿಡಿ!

ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಸಲ್ಮಾನ್ ಬಹಿರಂಗಪಡಿಸಿದ್ದು, ರಶ್ಮಿಕಾ ಮಂದಣ್ಣ ಕೂಡ ಜೊತೆಗಿದ್ದರು. ನನಗೆ ಉತ್ತಮವಾದ ಫ್ರೆಂಡ್‌ ಸಿಕ್ಕಿದ್ದಾರೆಂದು ಸಲ್ಲು ಬಗ್ಗೆ ರಶ್ಮಿಕಾ ಹೇಳಿದಾಗ ಸಂದರ್ಶಕಿ ಹೌದು , ನೀವು ಸಲ್ಮಾನ್‌ ಗೆ ಕೊರಿಯನ್ ಹಾರ್ಟ್ ಮಾಡುವುದನ್ನು ಹೇಳಿಕೊಟ್ಟಿದ್ದೀರಿ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ ಖಾನ್ , ನಾನು ಇನ್ನು ಮುಂದೆ ಹಾಗೆ ಮಾಡುವುದಿಲ್ಲ. ಒಮ್ಮೆ ಹಾಗೆ ಮಾಡಿದ್ದಕ್ಕೆ ನಾಲ್ಕು ಜನ ನನಗೆ ಹಾಗೆ ಮಾಡಲು ಹೇಳಿದರು. ಅದು ನನಗೆ ಸರಿ ಕಾಣಿಸಲಿಲ್ಲ ಎಂದರು.

ರಶ್ಮಿಕಾರನ್ನು ಸಲ್ಲೂ ಒಮ್ಮೆ ಕಾರಿನೊಳಕ್ಕೆ ತಳ್ಳಿದ್ದು ಮತ್ತೆ ಹೊರಕ್ಕೆ ಎಳೆದಿದ್ದೇಕೆ? ಏನ್ ಮ್ಯಾಟರ್ ಗುರೂ..!?

ಇದಕ್ಕೆ ಉತ್ತರಿಸಿದ ರಶ್ಮಿಕಾ ನೀವು ಕೊರಿಯನ್‌ ಹಾರ್ಟ್ ಮಾಡಿದರೆ ಮಕ್ಕಳು ನಿಮ್ಮನ್ನು ಹೆಚ್ಚು ಲೈಕ್ ಮಾಡುತ್ತಾರೆ. ನಿಮ್ಮ ಇನ್ನೊಂದು ವ್ಯಕ್ತಿತ್ವ ಇದರಿಂದ ಅನಾವರಣಗೊಳ್ಳುತ್ತದೆ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ಸಲ್ಮಾನ್ ಮಾತ್ರ ಸಾಧ್ಯವೇ ಇಲ್ಲ. ನಾನು ಮಾಡುವುದಿಲ್ಲ ಎಂದು ಉತ್ತರಿಸಿದರು.

ಸಿಕಂದರ್ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶಿಸಿದ್ದಾರೆ. 2 ವರ್ಷಗಳ ಬಳಿಕ ಸಲ್ಲು ಅಭಿನಯದ ಚಿತ್ರ ಹೊರಬಂದಿದ್ದು ಚಿತ್ರ ಅಷ್ಟೇನೂ ಯಶಸ್ಸು ಕಂಡಿಲ್ಲ. ಈ ಹಿಂದೆಯೂ ರಂಜಾನ್ ದಿನವೇ ಬಿಡುಗಡೆಯಾದ ಅವರ ‘ವಾಂಟೆಡ್’, ‘ಬಾಡಿಗಾರ್ಡ್’, ‘ಕಿಕ್’, ‘ದಬಾಂಗ್’ ಮೊದಲಾದ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಲೆಕ್ಕಾಚಾರದಲ್ಲಿ ಸಿಕಂದರ್ ಕೂಡ ತೆರೆ ಕಂಡಿತ್ತು. \

View post on Instagram