- Home
- Entertainment
- Cine World
- ನಾಗಶೌರ್ಯನನ್ನೂ ಕಡೆಗಣಿಸಿದ್ದ ರಶ್ಮಿಕಾ ಮಂದಣ್ಣ: ತೆಲುಗಿನಲ್ಲೂ ಹೊತ್ತಿಕೊಂಡಿತ್ತೊಮ್ಮೆ ಕಿಡಿ!
ನಾಗಶೌರ್ಯನನ್ನೂ ಕಡೆಗಣಿಸಿದ್ದ ರಶ್ಮಿಕಾ ಮಂದಣ್ಣ: ತೆಲುಗಿನಲ್ಲೂ ಹೊತ್ತಿಕೊಂಡಿತ್ತೊಮ್ಮೆ ಕಿಡಿ!
ರಶ್ಮಿಕಾ ಮಂದಣ್ಣ, ಕನ್ನಡ ಹಾಗೂ ಕರ್ನಾಟಕವನ್ನು ಕಡೆಗಣಿಸಿ ಸಾಕಷ್ಟು ಸುದ್ದಿಯಾದವರು. ಇವರ ಬಗ್ಗೆ ಇಂದಿಗೂ ಕನ್ನಡಿಗರಿಗೆ ತೀವ್ರ ಆಕ್ರೋಶವಿದೆ. ಹೀಗಿರುವಾಗ ಹಿಂದೊಮ್ಮೆ ತೆಲುಗು ಹಿರೋನನ್ನು ನಿರ್ಲಕ್ಷಿಸುವ ಮೂಲಕ ಅವರು ತೆಲುಗು ಇಂಡಸ್ಟ್ರಿಯಲ್ಲೂ ಆಕ್ರೋಶದ ಕಿಡಿ ಹಚ್ಚಿದ್ದರು ಎಂಬ ವಿಚಾರ ನಿಮಗೆ ಗೊತ್ತಾ?

rashmika mandanna
ತಂದೆಗಿಂತ ಹೆಚ್ಚಿನ ವಯಸ್ಸಿನ ಸಲ್ಮಾನ್ ಖಾನ್ ಜೊತೆ ಸಿಖಂದರ್ ಮೂವಿಯಲ್ಲಿ ನಟಿಸಿ ಹಲವು ಚರ್ಚೆಗೆ ಗ್ರಾಸವಾಗುತ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ. ಅಲ್ಲದೇ ನನ್ನೂರು ಹೈದರಾಬಾದ್ ಎನ್ನೋ ಮೂಲಕ ಕನ್ನಡಿಗರ ಕೆಂಗಣ್ಣಿಗೂ ಇತ್ತೀಚೆಗೆ ಗುರಿಯಾಗಿದ್ದರು. ಇವೆಲ್ಲದರ ನಡುವೆ ಮತ್ತೊಂದು ಸಂದರ್ಶನದಲ್ಲಿ ಕರ್ನಾಟಕದ ಬಗ್ಗೆ ಮಾತನಾಡಿ, ಸ್ವಲ್ಪ ಎಲ್ಲರನ್ನೂ ಸಮಾಧಾನ ಮಾಡಿದ್ದರು ಈ ಕೊಡಗಿನ ಕುವರಿ. ತಮ್ಮೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ, ಮೊದಲ ಚಿತ್ರದಲ್ಲಿ ಅವಕಾಶ ಕಲ್ಪಿಸಿದ್ದ ರಕ್ಷಿತ್ ಶೆಟ್ಟಿಯನ್ನು ಮಾತ್ರವಲ್ಲ, ತೆಲಗು ನಟ ನಾಗ ಶೌರ್ಯ ಅವರನ್ನೂ ಕಡೆಗಣಿಸಿದ್ದಾರೆಂದು ಒಮ್ಮೆ ವಿವಾದವಾಗಿತ್ತು. ಅಷ್ಟಕ್ಕೂ ಆಗ ಆಗಿದ್ದೇನು?
ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್ ಪ್ರತಿಭಾವಂತ ನಿರ್ದೇಶಕ, ನಟ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್‌ಅಪ್ ಮಾಡಿಕೊಂಡ ಮೇಲೆ ಸದಾ ಒಂದಲ್ಲೊಂದು ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗೋದು ಕಾಮನ್. ಒಮ್ಮೆ ಸಂದರ್ಶನವೊಂದರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಚರ್ಚೆ ಮಾಡೋದು, ಟ್ರೋಲ್ ಮಾಡೋದನ್ನು ನೋಡಿ ಮೊದಲಿಗೆ ನೋವಾಗುತ್ತಿತ್ತು.ಇದರಿಂದ ಎಷ್ಟೋ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೆ. ಕ್ರಮೇಣ ಇದು ಅಭ್ಯಾಸ ಆಗೆ ಎಂಜಾಯ್ ಮಾಡಲು ಶುರು ಮಾಡಿದೆ, ಎಂದಿದ್ದರು.
ಇದಕ್ಕವರು ಎಷ್ಟರ ಮಟ್ಟಿಗೆ ಅದಕ್ಕೆ ಅಡ್ಜೆಸ್ಟ್ ಅದರೆಂದರೆ ನೆಟ್ಟಿಗರು ಅವರ ಬಗ್ಗೆ ಮಾತಾಡದಿದ್ದರೆ ಮೂಲೆಗುಂಪಾಗ್ತಿದ್ದೀನೇನೋ ಅಂತ ಸಣ್ಣ ಭಯ ಶುರುವಾಗ್ತಿತ್ತೆಂದೂ ಹೇಳಿ ಕೊಂಡಿದ್ದರು. ಅಷ್ಟೇ ಅಲ್ಲ ಈ ಕಮೆಂಟ್‌ಗಾಗಿ ಎಂಬಂತೆ ಒಮ್ಮೆ ಅವರು ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಎಕ್ಸ್ ಬಾಯ್ ಫ್ರೆಂಡ್ ರಕ್ಷಿತ್ ಅವರನ್ನು ವ್ಯಂಗ್ಯವಾಡುವ ಭರದಲ್ಲಿ ತಮ್ಮ ಮೊದಲ ಸಿನಿಮಾದ ಬಗ್ಗೆಯೇ ಅಕ್ಸೆಪ್ಟ್ ಮಾಡಲಾಗದಂಥ ಹೇಳಿಕೆ ನೀಡಿದ್ದರು. ಅದು ಎಲ್ಲರನ್ನೂ ಕೆರಳಿಸಿತ್ತು.
ಆಮೇಲೆ ತಮ್ಮ ಮಾತನ್ನು ತಿರುಚಲಾಗಿದೆ ಎಂದು ಬೇಸರದಲ್ಲೇ ಒಂದು ನೋಟನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಈ ಧಿಮಾಕಿನ ಅವರ ಉತ್ತರಕ್ಕೆ ರಿಷಬ್ ಶೆಟ್ಟಿ ಸೇರಿ ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ನೋವು ತಂದಿತ್ತು. ಕರ್ನಾಟಕದವರೆಲ್ಲ ರಶ್ಮಿಕಾ ಅವರನ್ನು ವಿರೋಧಿಸಲು ಶುರು ಮಾಡಿದರು. ಅವರನ್ನು ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಮಾಡುವ ಮಾತುಗಳೂ ಕೇಳಿ ಬಂದಿದ್ದವು. ರಿಷಭ್ ಅಂತೂ ಕಿರಿಕ್ ಪಾರ್ಟಿ ಆ್ಯನಿವರ್ಸರಿಗೆ ಇತ್ತೀಚೆಗೆ ರಶ್ಮಿಕಾ ಇಲ್ಲದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡು ಈ ಧಿಮಾಕಿಗೆ ಟಾಂಗ್ ಕೊಟ್ಟಿದ್ದರು.
ಈ ಘಟನೆಯ ಸ್ವಲ್ಪ ದಿನಗಳ ಬಳಿಕ ತೆಲುಗು ಇಂಡಸ್ಟ್ರಿಯಲ್ಲೂ ರಶ್ಮಿಕಾ ವಿರುದ್ಧ ಅಸಮಾಧಾನ ಭುಗಿಲೆದ್ದಿತ್ತು. ತೆಲುಗಿನ ಖ್ಯಾತ ಸಿನಿಮಾ ಬರಹಗಾರ ತೋಟಾ ಪ್ರಸಾದ್ ಸಂದರ್ಶನವೊಂದರಲ್ಲಿ ರಶ್ಮಿಕಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಪಾಪ್‌ಕಾರ್ನ್ ಮೀಡಿಯಾ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ಕನ್ನಡ ಮಾತ್ರವಲ್ಲ ತೆಲುಗು ನಟನ ಕುರಿತೂ ಅದೇ ದುರಹಂಕಾರದ ಮಾತುಗಳನ್ನು ಆಡಿದ್ದರು.
ರಶ್ಮಿಕಾ ಒಮ್ಮೆ ಕಿರಿಕ್ ಪಾರ್ಟಿ ಸಿನಿಮಾದ ಹೆಸರ ಹೇಳದೇ ಸನ್ನೆಯಲ್ಲಿ ಚಿತ್ರವನ್ನು ಅವಮಾನಿಸುವಂತೆ ವರ್ತಿಸಿದ್ದರು. ಈ ಬಗ್ಗೆ ಮಾತನಾಡಿದ ತೋಟಾ ಪ್ರಸಾದ್ 'ಒಂದು ವೇಳೆ ರಶ್ಮಿಕಾ ಮಂದಣ್ಣಗೆ ಬ್ರೇಕ್ ಅಪ್ ಆಗಿದ್ದಕ್ಕೆ ರಕ್ಷಿತ್ ಶೆಟ್ಟಿ ಹೆಸರನ್ನು ಹೇಳಲು ಇಷ್ಟವಿಲ್ಲದಿದ್ದರೆ ಅವರ ಹೆಸರು ಹೇಳೋದು ಬೇಡ, ಆದರೆ ಆ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಸರನ್ನು ಹೇಳಬಹುದಿತ್ತೆಂದು ಅಸಾಮಾಧಾನ ಹೊರ ಹಾಕಿದರು.
'ಈಕೆ ಕನ್ನಡ ಮಾತ್ರವಲ್ಲ ತೆಲುಗಿನ ಮೊದಲ ಚಿತ್ರದ ವಿಷಯದಲ್ಲೂ ಈ ರೀತಿ ನಡೆದುಕೊಂಡಿದ್ದರು. ರಕ್ಷಿತ್ ಶೆಟ್ಟಿ ರೀತಿಯೇ ತಮ್ಮ ಮೊದಲ ತೆಲುಗು ಚಿತ್ರದ ನಟನನ್ನು ಕಡೆಗಣಿಸಿದ್ದಳು. ಕಿರಿಕ್ ಪಾರ್ಟಿ (Kirik Party)ಯಲ್ಲಿ ರಕ್ಷಿತ್ ಶೆಟ್ಟಿ ಇರೋ ಕಾರಣ ಅವರ ಹೆಸರನ್ನು ಹೇಳಲಿಲ್ಲವೆನ್ನಬಹುದು. ಆದರೆ ರಶ್ಮಿಕಾ ತೆಲುಗು ಚಿತ್ರರಂಗ ಪ್ರವೇಶಿಸಿದ ಚಲೋ ಚಿತ್ರದ ನಟ ನಾಗಶೌರ್ಯ ಅವರ ಹೆಸರನ್ನೂ ಹೇಳಿರಲಿಲ್ಲ. ಚಲೋ ಚಿತ್ರದ ವಾರ್ಷಿಕೋತ್ಸವದ ಕುರಿತು ಒಮ್ಮೆ ಟ್ವೀಟ್ (Tweet) ಮಾಡಿದ್ದ ರಶ್ಮಿಕಾ, ನಿರ್ದೇಶಕನ ಹೆಸರನ್ನು ಉಲ್ಲೇಖಿಸಿದ್ದರು. ನಟ ನಾಗಶೌರ್ಯ ಹೆಸರನ್ನು ಬಿಟ್ಟಿದ್ದರು. ಎಷ್ಟೇ ಬೆಳೆದರೂ ನಮಗೆ ಮೊದಲು ತುತ್ತು ನೀಡಿದವರನ್ನು ಮರೆಯಬಾರದು, ಕೃತಜ್ಞತೆ ಇರಬೇಕೆಂದು ರಶ್ಮಿಕಾ ವಿರುದ್ಧ ತೋಟಾ ಪ್ರಸಾದ್ ಕಿಡಿ ಕಾರಿದ್ದರು.
ಆಗಲೇ ತೋಟಾ ಪ್ರಸಾದ್ ಅವರು ನಟಿಯನ್ನು ಬ್ಯಾನ್ ಮಾಡೋದ್ರಲ್ಲಿ ಅರ್ಥವಿಲ್ಲವೆಂದಿದ್ದರು. ಜೊತೆಗೆ ಇದೇ ಧಿಮಾಕು ಮುಂದುವರಿದರೆ ಅವರಿಗೆ ಚಿತ್ರರಂಗದಲ್ಲಿ ಭವಿಷ್ಯವೇ ಇರೋದಿಲ್ಲವೆಂದೂ ಹೇಳಿದ್ದರು. ಆದರೆ, ಇಂದು ರಶ್ಮಿಕಾ ಬೆಳೆದ ಪರಿಗೆ ಇಡೀ ಪ್ಯಾನ್ ಇಂಡಿಯಾ ಚಿತ್ರರಂಗವೇ ದಂಗಾಗಿದೆ. ಬಾಲಿವುಡ್‌ನಲ್ಲಿಯೂ ಒಂದಾದ ನಂತರ ಮತ್ತೊಂದು ಚಿತ್ರದ ಅವಕಾಶಗಳನ್ನು ಪಡೆಯುತ್ತಲೇ ಇದ್ದಾರೆ. ಆದರೆ, ಕಾಂಟ್ರೋವರ್ಸಿಯೊಂದಿಗೆ ಒಳ್ಳೇ ಸಂಬಂಧವನ್ನು ಇಟ್ಟುಕೊಂಡಂತೆ ಕಾಣಿಸುತ್ತದೆ.
ಆದರೆ ನಟಿಯನ್ನು ಬ್ಯಾನ್ (Ban) ಮಾಡೋದೆಲ್ಲ ಆಗದ ಮಾತು, ಅದು ನ್ಯಾಯವೂ ಅಲ್ಲ ಅನ್ನೋ ಬಗೆಯ ಮಾತನ್ನು ತೋಟಾ ಪ್ರಸಾದ್ ಹೇಳಿದ್ದಾರೆ. ತೋಟಾ ಪ್ರಸಾದ್ ಮಾತುಗಳು ಸೋಷಿಯಲ್ ಮೀಡಿಯಾ(Sccial media)ದಲ್ಲಿ ವೈರಲ್(Viral) ಆಗಿವೆ. ಮೊದಲು ಕರ್ನಾಟಕದಲ್ಲಿ ರಶ್ಮಿಕಾ ಬಗ್ಗೆ ಅಸಮಾಧಾನ ಇತ್ತು, ಈಗ ಆಂಧ್ರಕ್ಕೆ ಹಬ್ಬಿದೆ, ಇದು ಹೀಗೇ ಮುಂದುವರಿದರೆ ಈ ನಟಿ ಬೇಗ ಇಂಡಸ್ಟ್ರಿಯಿಂದ ಮಾಯವಾಗ್ತಾರೆ ಅಂತ ಜನ ಕಮೆಂಟ್ ಮಾಡುತ್ತಿದ್ದಾರೆ.