ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಸಿಕಂದರ್' ಸಿನಿಮಾವು 2025ರ ರಂಜಾನ್ ಹಬ್ಬಕ್ಕೆ ಬಿಡುಗಡೆಯಾಗಿದೆ. ಆದರೆ, ಚಿತ್ರವು ಕಳಪೆ ವಿಮರ್ಶೆಗಳನ್ನು ಪಡೆದಿದೆ. ನಿರ್ದೇಶಕ ಮುರುಗದಾಸ್ ಅವರ ಕಥೆ ಮತ್ತು ಚಿತ್ರಕಥೆಯು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಹೇಳಲಾಗುತ್ತಿದೆ. ಸಲ್ಮಾನ್, ರಶ್ಮಿಕಾ ಅವರ ಕಾಳಜಿ ವಹಿಸುವ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಚಿತ್ರದ ಭವಿಷ್ಯ ತಿಳಿಯಲು ಕೆಲವು ದಿನ ಕಾಯಬೇಕು.

ಸದ್ಯ ಭಾರತದಲ್ಲಿ ಸಲ್ಮಾನ್ ಖಾನ್ (Salman Khan) ನಟನೆಯ 'ಸಿಕಂದರ್ ಸಿನಿಮಾದ್ದೇ ಸುದ್ದಿ. ಸಿನಿಮಾ ಜಗತ್ತಿನಲ್ಲಿ ನಟ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' (Saikandar) ಸದ್ಯ ಹಾಟ್ ಫೆವರೆಟ್. ನಿನ್ನೆ, ಅಂದರೆ 30 ಮಾರ್ಚ್ 2025ರ ರಂಜಾನ್ ಹಬ್ಬದಂದು ಬಿಡುಗಡೆ ಆಗಿರುವ ಸಿಕಂದರ್ ಚಿತ್ರವು ಉತ್ತಮ ವಿಮರ್ಶೆ ಪಡೆದುಕೊಂಡಿಲ್ಲ. ನಿರ್ದೇಶಕ ಎಆರ್‌ ಮುರುಗದಾಸ್ ಸಿನಿಮಾಜೀವನದಲ್ಲೇ ಇದು ಅತ್ಯಂತ ಕಳಪೆ ಚಿತ್ರ ಎನ್ನಲಾಗುತ್ತಿದೆ. ಸಿನಿಮಾ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಎಲ್ಲವೂ ಸಲ್ಲೂರ ಮೊದಲಿನ ಸಿನಿಮಾಗಳಿಗೆ ಹೋಲಿಸಿದರೆ ಸಾಕಷ್ಟು ಕೆಳಮಟ್ಟದಲ್ಲಿ ಇದೆ ಎಂಬ ಮಾತು ಕೇಳಿ ಬರುತ್ತಿದೆ. ನಿಖರವಾಗಿ ಈ ಸಿನಿಮಾ ಫಲಿತಾಂಶ ತಿಳಿಯಲು ಕನಿಷ್ಠ 3 ದಿನಗಳು ಕಳೆಯಬೇಕು.

ಆದರೆ, ಸದ್ಯ ಸಿಕಂದರ್ ಚಿತ್ರಕ್ಕಿಂತ ಹೆಚ್ಚು ಸುದ್ದಿ ಹಾಗು ಸದ್ದು ಮಾಡುತ್ತಿರುವುದು ನಟ ಸಲ್ಮಾನ್ ಖಾನ್ ಅವರು ನಟಿ ಕನ್ನಡತಿ ರಶ್ಮಿಕಾ ಮಂದಣ್ಣ ಅವರಿಗೆ ತೋರಿಸುತ್ತಿರುವ ಕೇರ್ ಹಾಗೂ ಪ್ರಶಂಸೆ. ಹೌದು ನಟ ಸಲ್ಮಾನ್ ಖಾನ್ ಅವರು ನಟಿ ರಶ್ಮಿಕಾ ಮಂದಣ್ಣ ಅವರು ಡಬಲ್ ಶಿಫ್ಟ್‌ನಲ್ಲಿ ಕೆಲಸ ಮಾಡುವುದನ್ನು ಹಾಗೂ ಹಾರ್ಡ್ ವರ್ಕ್‌ ಅನ್ನು ಹಾಡಿ ಹೊಗಳಿದ್ದಾರೆ. ಅವರಿಬ್ಬರ ಮಧ್ಯೆ 31 ವರ್ಷಗಳ ಗ್ಯಾಪ್ ಇದ್ದರೂ ಕೂಡ ನಟಿ ರಶ್ಮಿಕಾ ಅವರು ಸಲ್ಲೂ ಜೊತೆ ನಾಯಕಿಯಾಗಿ ತಮ್ಮ ಜತೆ ನಟಿಸಿದ್ದು ಸ್ವತಃ ಸಲ್ಮಾನ್‌ ಖಾನ್‌ಗೆ ಅಚ್ಚರಿ ಆಗಿರಬಹುದು. ವಿಷಯ ಏನೋ, ಆದರೆ, ರಶ್ಮಿಕಾ ಬಗ್ಗೆ ಸಲ್ಲೂಗೆ ಒಳ್ಳೆಯ ಒಪಿನಿಯನ್‌ ಅಂತೂ ಇದ್ದೆ ಇದೆ. 

ಮುಂಬೈನಲ್ಲಿ ಹುಟ್ಟೂರಿನ ಬಗ್ಗೆ ಹೇಳಿದ ನಟಿ ರಶ್ಮಿಕಾ ಮಂದಣ್ಣ; ಇನ್ಮೇಲೆ ವಿವಾದಕ್ಕೆ ದಾರಿ ಎಲ್ಲಿದೆ ಹೇಳಿ..!?

ಅದು ಹೇಗೆ ಜಗತ್ತಿಗೆ ಗೊತ್ತಾಗಿದೆ ಎಂದು ನೀವು ಕೇಳಬಹುದು.. ಅಲ್ಲೇ ಇರೋದು ಮ್ಯಾಟರ್.. ಸದ್ಯ ಸಿಕಂದರ್ ಪ್ರಮೋಶನ್‌ ಸಲುವಾಗಿ ಒಟ್ಟೊಟ್ಟಿಗೇ ಓಡಾಡುತ್ತಿದ್ದಾರೆ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ. ಅದು ಸಹಜ ಕೂಡ ಬಿಡಿ.. ಆದರೆ, ರಶ್ಮಿಕಾ ಕಾರಿನ ಬಳಿ ಬಂದಾಗ, ಸ್ವತಃ ನಟ ಸಲ್ಮಾನ್ ಖಾನ್ ಅವರು ರಶ್ಮಿಕಾಗೆ ಬಾಗಿಲು ಓಪನ್ ಮಾಡಿ ಒಳಗೆ ಕುಳಿತುಕೊಳ್ಳಲು ಸಹಾಯ ಮಾಡಿದ್ದಾರೆ. ಜೊತೆಗೆ, ಚಿಕ್ಕ ಮಗುವನ್ನು ಕಾಪಾಡಿದಂತೆ ರಶ್ಮಿಕಾರನ್ನು ನೋಡಿಕೊಳ್ಳುವ ಸಲ್ಲೂ ಪರಿಯನ್ನು ಹಲವರು ಕೊಂಡಾಡಿದ್ದಾರೆ. 

ಆದರೆ, ಅಚ್ಚರಿ ಎಂಬಂತೆ, ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಬಗ್ಗೆ ನೆಗೆಟೀವ್ ಅಭಿಪ್ರಾಯಗಳೇ ಹೆಚ್ಚಿವೆ. ಸಲ್ಮಾನ್‌ ಖಾನ್, ರಶ್ಮಿಕಾ ಸೇರಿದಂತೆ ಚಿತ್ರದ ಪಾತ್ರಧಾರಿಗಳು ಎಲ್ಲರೂ ತಮ್ಮತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದರೂ ಕೂಡ, ಸಿನಿಮಾದಲ್ಲಿ ಬಹಳಷ್ಟು ಕೊರತೆಗಳು ಎದ್ದು ಕಾಣಿಸುತ್ತಿವೆ ಎಂಬ ಮಾತು ಕೇಳಿಬರುತ್ತಿದೆ. ಕಥೆ-ಚಿತ್ರಕಥೆ ಹಾಗೂ ಸಂಭಾಷಣೆಯಲ್ಲಿ ನಿರ್ದೇಶಕರಾದ ಎಆರ್ ಮುರುಗದಾಸ್ ಅವರು ಎಡವಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಸಲ್ಲೂ ಜೊತೆಗಿನ ರಶ್ಮಿಕಾ ಮಂದಣ್ಣರ ಬಾಲಿವುಡ್ ಸಿನಿಮಾ ಗೆಲ್ಲುತ್ತಾ ಅಥವಾ ಸೋಲುತ್ತಾ ಎಂಬುದನ್ನು ತಿಳಿಯಲು ಇನ್ನೂ ಕೆಲವು ದಿನಗಳು ಕಾಯಲೇಬೇಕು. 

ಸಲ್ಮಾನ್ ಖಾನ್‌ ಪರಿಸ್ಥಿತಿ ಡಾ ರಾಜ್‌ಕುಮಾರ್‌ಗೂ ಬಂದಿತ್ತು; ಆದ್ರೆ ಅಣ್ಣಾವ್ರು ಕೊಟ್ಟ ಪ್ರತಿಕ್ರಿಯೆ ಹೇಗಿತ್ತು?

View post on Instagram