Asianet Suvarna News Asianet Suvarna News
breaking news image

ಶೂಟಿಂಗ್ ಸೆಟ್‌ನಲ್ಲಿ ಐಶ್ವರ್ಯಾ ರೈಯನ್ನು ಯಾರೂ ಮುಟ್ಟಬಾರದು ಎಂದಿದ್ದ ಸಲ್ಮಾನ್ ಖಾನ್‌!

ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಜೋಡಿ ತೆರೆ ಮೇಲೆ ಮೋಡಿ ಮಾಡಿದಂತೆ, ತೆರೆ ಹಿಂದೆಯೂ ಸುದ್ದಿಯಲ್ಲಿತ್ತು. ಹತ್ತು ಹಲವು ಬಿಸಿ ಸುದ್ದಿಗಳು ಈ ಜೋಡಿಯ ಬಗ್ಗೆ ಹರಿದಾಡುತ್ತಲೇ ಇದ್ದವು. ಇತ್ತೀಚಿನ ವರದಿಯೊಂದರ ಪ್ರಕಾರ, ಸಿನಿಮಾ ಶೂಟಿಂಗ್ ಸಮಯದಲ್ಲಿ ಸಲ್ಮಾನ್ ಖಾನ್, ಐಶ್ವರ್ಯಾ ರೈಯನ್ನು ಯಾರೂ ಸಹ ಮುಟ್ಟಬಾರದು ಎಂದು ಸೂಚಿಸಿದ್ದರಂತೆ.

Salman Khan Once Asked Sanjay Leela Bhansali Not To Touch Aishwarya Rai During A Song Shoot Vin
Author
First Published May 1, 2024, 10:44 AM IST

ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಜೋಡಿ ತೆರೆ ಮೇಲೆ ಮೋಡಿ ಮಾಡಿದಂತೆ, ತೆರೆ ಹಿಂದೆಯೂ ಸುದ್ದಿಯಲ್ಲಿತ್ತು. ಹತ್ತು ಹಲವು ಬಿಸಿ ಸುದ್ದಿಗಳು ಈ ಜೋಡಿ ಹರಿದಾಡುತ್ತಲೇ ಇದ್ದವು. ಇತ್ತೀಚಿನ ವರದಿಯೊಂದರ ಪ್ರಕಾರ, ಸಿನಿಮಾ ಶೂಟಿಂಗ್ ಸಮಯದಲ್ಲಿ ಸಲ್ಮಾನ್ ಖಾನ್ ಯಾರೂ ಸಹ ಐಶ್ವರ್ಯಾ ರೈನ್ನು ಮುಟ್ಟಬಾರದು ಎಂದು ಸೂಚಿಸಿದ್ದರು ಎಂಬುದು ತಿಳಿದುಬಂದಿದೆ. ಸಲ್ಮಾನ್ ಖಾನ್ ಐಶ್ವರ್ಯಾ ರೈಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆಗಿನ ಸಿನಿಮಾದ ಶೂಟಿಂಗ್ ಸಮಯದಲ್ಲಿ ಸಲ್ಲು ಮಿಯಾ ಯಾರೂ ಸಹ  ಐಶ್ವರ್ಯಾ ರೈ ಅವರನ್ನು ಮುಟ್ಟಬಾರದು ಎಂದು ಸೂಚಿಸಿದ್ದರಂತೆ.

ಹಮ್ ದಿಲ್ ದೇ ಚುಕೆ ಸನಮ್ ಚಿತ್ರದಲ್ಲಿ ಐಶ್ವರ್ಯಾ ರೈ ಅವರ ತಾಯಿಯಾಗಿ ನಟಿಸಿರುವ ಖ್ಯಾತ ಹಿರಿಯ ನಟಿ ಸ್ಮಿತಾ ಜಯಕರ್ ಅವರು ಸಲ್ಮಾನ್ ಮತ್ತು ಐಶ್ವರ್ಯಾ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ಸೆಟ್‌ನಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ಮಧ್ಯೆ ಪ್ರೀತಿಯಾಗಿತ್ತು. ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಐಶ್ವರ್ಯಾ ರೈ ಅವರನ್ನು ಮುಟ್ಟಬೇಡಿ ಎಂದು ಸಲ್ಮಾನ್ ಖಾನ್ ನೇರವಾಗಿ ಕೇಳಿಕೊಂಡಿದ್ದರು ಎಂದು ಸ್ಮಿತಾ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಒಂದು ಹಾಡಿನ ಚಿತ್ರೀಕರಣದ ವೇಳೆ ಸಲ್ಮಾನ್ ನೇರವಾಗಿ ಸಂಜಯ್‌ಗೆ ತನ್ನ ಆಗಿನ ಗೆಳತಿ ಐಶ್ವರ್ಯಾಳನ್ನು ಮುಟ್ಟಬೇಡಿ ಎಂದು ಕೇಳಿಕೊಂಡಿದ್ದನ್ನು ಸ್ಮಿತಾ ಬಹಿರಂಗಪಡಿಸಿದ್ದಾರೆ.

ಸಲ್ಮಾನ್‌ಖಾನ್‌ನನ್ನು ಐಶ್ವರ್ಯಾ ದೂರ ಮಾಡಿದ್ದೇಕೆ..? ಕಾರಣ ಬಿಚ್ಚಿಟ್ಟ ನಟಿ

ಸಲ್ಮಾನ್ ಖಾನ್‌ ಹೆಸರು ಹಲವಾರು ಬಾಲಿವುಡ್ ನಟಿಯರೊಂದಿಗೆ ಕೇಳಿ ಬಂದಿದ್ದರೂ ಐಶ್ವರ್ಯಾ ರೈ ಜೊತೆಗಿನ ಭಾಂಧವ್ಯ ಯಾವಾಗಲೂ ಹೆಚ್ಚು ಸುದ್ದಿಯಲ್ಲಿರುತ್ತದೆ. ತೆರೆ ಮೇಲೆ ಮೋಡಿ ಮಾಡಿದ ಈ ಜೋಡಿ ಬಗ್ಗೆ ತೆರೆ ಹಿಂದೆಯೂ ಕುಛ್ ಕುಛ್ ನಡೆಯುತ್ತಿತ್ತು ಎಂಬ ಸುದ್ದಿ ಹರಿದಾಡುತ್ತಿತ್ತು. ವರ್‌ಗ್ರೀನ್ ಸೂಪರ್‌ ಹಿಟ್ ಆಗಿದ್ದ ಜೋಡಿಯ ಮಧ್ಯೆ  ಜಗಳವಾಗಿ ಇಬ್ಬರೂ ಬೇರೆ ಬೇರೆಯಾಗಿದ್ದರು.

2001ರಲ್ಲಿ ಅವರ ನಡುವೆ ಬಿರುಕು ಪ್ರಾರಂಭವಾಗಿದ್ದು. ನವೆಂಬರ್ ಸಲ್ಮಾನ್ ಒಮ್ಮೆ ಐಶ್ವರ್ಯಾ ಅವರ ಅಪಾರ್ಟ್ಮೆಂಟ್‌ಗೆ ಬಂದು ಒಳಗೆ ಬಿಡಲು ನಿರಂತರವಾಗಿ ಬಾಗಿಲು ಬಡಿಯುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು. ಸಲ್ಮಾನ್‌ ಬನ್ನನ್ನು ದೈಹಿಕವಾಗಿ ನಿಂದಿಸಿದ್ದಾರೆ. ಮನೆಯೊಳಗೆ ಬಿಡದಿದ್ದಲ್ಲಿ, ಸುಸೈಡ್‌ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಗಿ ಐಶ್ವರ್ಯಾ ಆರೋಪಿಸಿದ್ದರು. ಸಲ್ಮಾನ್ ಆರೋಪವನ್ನು ನಿರಾಕರಿಸುತ್ತಲೇ ಇದ್ದರು.

ಸಲ್ಮಾನ್‌ ಖಾನ್‌ ತನ್ನ ಮಾಜಿ ಗರ್ಲ್‌ಫ್ರೆಂಡ್‌ ಸೋಮಿ ಅಲಿಗೆ ಹೆಲ್ಪ್‌ ಮಾಡಲು ಐಶ್ವರ್ಯಾಗೆ ತಿಳಿಸದೆ ಯುಎಸ್‌ಗೆ ತೆರಳಿದ ಕಾರಣದಿಂದ ಸಿಟ್ಟಾಗಿ ಅವರ ರಿಲೇಷನ್‌ಶಿಪ್‌ ಹಾಳಾಯಿತು ಎಂದು ಕೆಲವು ವರದಿಗಳಿವೆ. 2002ರಲ್ಲಿ ಐಶ್ವರ್ಯಾ ಅವರ ಬ್ರೇಕ್‌ಅಪ್‌ ಅನ್ನು ಕನ್ಫರ್ಮ್‌ ಮಾಡಿದರು. 'ಸಲ್ಮಾನ್ ನಂಗೆ ಫೋನ್‌ಮಾಡಿ ಅಸಂಬಂದ್ಧವಾಗಿ ಮಾತಾನಾಡುತ್ತಿದ್ದ. ನನ್ನ ಕೋಸ್ಟಾರ್‌ಗಳ ಜೊತೆ ಆಫೇರ್‌ ಹೊಂದಿರುವಾದಾಗಿ ಸಹ ಅನುಮಾನ ಪಡುತ್ತಿದ್ದ. ಕೆಲವೊಮ್ಮೆ ನನ್ನ ಮೇಲೆ ಕೈ ಮಾಡುತ್ತಿದ್ದ, ಆದೃಷ್ಟದಿಂದ ಯಾವುದೇ ಕಲೆಗಳು ಉಳಿಯಲಿಲ್ಲ ಮತ್ತು ನಾನು ಏನು ಆಗದ ರೀತಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ' ಎಂದೂ ಆರೋಪಿಸಿದ್ದಳು.

ನಾನು ಹೊಡೆದಿದ್ರೆ ಐಶ್ವರ್ಯಾ ಬದುಕ್ತಿರ್ಲಿಲ್ಲ: ಸಲ್ಲು

Latest Videos
Follow Us:
Download App:
  • android
  • ios