Asianet Suvarna News Asianet Suvarna News

ನಾನು ಹೊಡೆದಿದ್ರೆ ಐಶ್ವರ್ಯಾ ಬದುಕ್ತಿರ್ಲಿಲ್ಲ: ಸಲ್ಲು

ಸಿನಿಮಾ ರಂಗದಲ್ಲಿ ಹೆಚ್ಚಾಗಿದೆ #MeToo ಅಭಿಯಾನ | ಎಲ್ಲಾ ಕಡೆ  #MeToo ಅಭಿಯಾನದ ಕಾವು ಹೆಚ್ಚಾಗಿದೆ | ಸಲ್ಮಾನ್ ಖಾನ್ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ | ಸಲ್ಮಾನ್ ಖಾನ್ ನಿಜವಾಗಿಯೂ ಐಶ್ವರ್ಯಾಗೆ ಹೊಡೆದಿದ್ದರಾ? 

Aishwarya Rai would not survive if i hit her says Salman Khan
Author
Bengaluru, First Published Oct 9, 2018, 6:02 PM IST

ನವದೆಹಲಿ (ಅ. 09): ಬಾಲಿವುಡ್ ಅಂಗಳದಲ್ಲಿ #MeToo ಅಭಿಯಾನದ ಕಾವು ಹೆಚ್ಚಾಗಿದೆ. ಕಂಗನಾ ರಾಣಾವತ್ ಸೇರಿದಂತೆ ಸಾಕಷ್ಟು ಮಂದಿ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಏತನ್ಮಧ್ಯೆ ಸಲ್ಮಾನ್ ಖಾನ್ ತಮ್ಮ ಮಾಜಿ ಪ್ರೇಯಸಿ ಐಶ್ವರ್ಯ ರೈ ಬಗ್ಗೆ ಮಾತನಾಡಿರುವ ವಿಡಿಯೋ ಕ್ಲಿಪ್ಪಿಂಗ್ ಎಲ್ಲಾ ಕಡೆ ಸರ್ಕ್ಯೂಲೇಟ್ ಆಗುತ್ತಿದೆ. 

#MeToo ಅಭಿಯಾನ ಜೋರು: ಹುದ್ದೆ ತ್ಯಜಿಸಿದ ಹಿರಿಯ ಪತ್ರಕರ್ತ!

ನನಗೆ  ಸಲ್ಮಾನ್ ಖಾನ್ ಹೊಡೆದಿದ್ದ ಎಂದು ಈ ಹಿಂದೆ ಐಶ್ವರ್ಯಾ ರೈ ಮಾಡಿರುವ ಆರೋಪಕ್ಕೆ ಸಲ್ಮಾನ್ ಖಾನ್ ಉತ್ತರಿಸಿದ್ದಾರೆ. ಒಂದು ವೇಳೆ ನಾನು ನಿಜವಾಗಿಯೂ ಹೊಡೆದಿದ್ದರೆ ಆ ’ಮಹಿಳೆ’ ಖಂಡಿತಾ ಬದುಕುತ್ತಿರಲಿಲ್ಲ ಎಂದಿದ್ದಾರೆ. 

ನಮ್ಮಿಬ್ಬರ ನಡುವೆ ಬ್ರೇಕ್ ಆದಾಗ ಸಲ್ಮಾನ್ ನನ್ನನ್ನು ಮಾತನಾಡಲು ಕರೆದಿದ್ದ. ಆ ವೇಳೆ ತುಂಬಾ ಬಾಲಿಶವಾಗಿ ಮಾತನಾಡಿದ್ದ. ಹೊಡೆಯಲು ಕೂಡಾ ಮುಂದಾಗಿದ್ದ. ಅದೃಷ್ಟವಶಾತ್ ನನಗೇನೂ ಆಗಿರಲಿಲ್ಲ. ಏನೂ ಆಗಿಲ್ಲವೆಂಬಂತೆ ಹೊರ ನಡೆದೆ ಎಂದು ಐಶ್ವರ್ಯಾ ರೈ ಹೇಳಿದ್ದಾರೆ. 

Follow Us:
Download App:
  • android
  • ios