ಲಾಕ್‌ಡೌನ್ ಟೈಂನಲ್ಲಿ ಬಾಲಿವುಡ್ ನಟ ಸಲ್ಮಾನ್‌ ಖಾನ್ ತಮ್ಮ ಪಾನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಸಾಂಗ್ ಶೂಟಿಂಗ್‌ನಲ್ಲಿ ಬ್ಯುಸಿ ಇದ್ರು. ಇದೀಗ ಫಾರ್ಮ್‌ಘೌಸ್‌ನ ಹಸಿರು ಮಡಿಲಲ್ಲಿ ಸುತ್ತಾಡುತ್ತಿದ್ದಾರೆ.

ಸಲ್ಮಾನ್‌ಖಾನ್ ಬಾಡಿಗಾರ್ಡ್ ಶೇರಾ ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಸಲ್ಮಾನ್ ಹಸಿರಿನ ಮಧ್ಯೆ ವಿಹರಿಸ್ತಿರೋದನ್ನು ನೋಡಬಹುದು.

ಇಬ್ಬರು ಗರ್ಲ್ ಫ್ರೆಂಡ್ ಜೊತೆ ಫಾರ್ಮ್ ಹೌಸಲ್ಲಿ ಕ್ವಾರಂಟೈನ್ ಆದ ಸಲ್ಮಾನ್ ಮಾಡಿದ ಕೆಲಸ!

ಮಳೆ ಬಂದು ನಿಂತು ಹೋದ ಸಂದರ್ಭ ಸಣ್ಣದಾಗಿ ತೊರೆ ನೀರು ಹರಿಯುವ ಕಿರು ದಾರಿಯಲ್ಲಿ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾ ಸಲ್ಮಾನ್ ಹೆಜ್ಜೆ ಹಾಕಿದ್ದಾರೆ. ಫಾಲೋಯಿಂಗ್ ದ ಲೆಜೆಂಡ್, ಮಯ್ ಮಾಲೀಕ್'(ಲೆಜೆಂಡ್‌ನ್ನು ಅನುಸರಿಸುತ್ತಿದ್ದೇನೆ, ನನ್ನ ಮಾಲೀಕ) ಎಂದು ಬರೆದುಕೊಂಡು ಶೇರಾ ವಿಡಿಯೋ ಶೇರ್ ಮಾಡಿದ್ದಾರೆ.

 
 
 
 
 
 
 
 
 
 
 
 
 

Following the Legend........ My Maalik @Beingsalmankhan #Salmankhan #Legend #Sheraa #Beingsheraa

A post shared by Being Sheraa (@beingshera) on Jul 10, 2020 at 2:53am PDT

ಸಲ್ಮಾನ್ ವಿಡಿಯೋ ನೋಡಿದ ಅಭಿಮಾನಿಗಳು ಲವ್‌ ಯೂ ಸಲ್ಮಾನ್ ಭಾಯ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ವಿಡಿಯೋ ಶೇರ್ ಮಾಡಿರುವುದಕ್ಕಾಗಿ ಶೇರಾಗೆ ಥ್ಯಾಂಕ್ಸ್ ಹೇಳಿದ್ದಾರೆ.

ಸಲ್ಲು ಫಾರ್ಮ್‌ ಹೌಸ್‌ನಲ್ಲಿ ಜಾಕ್ವೆಲಿನ್; ಪ್ರತಿ ಕ್ಷಣವೂ ರೆಕಾರ್ಡ್‌!

ಈ ಸಂದರ್ಭ ಸಲ್ಮಾನ್‌ ಖಾನ್ ಜೊತೆ ಯಾರೆಲ್ಲ ಇದ್ದರೆಂಬುದು ಸ್ಪಷ್ಟವಾಗಿಲ್ಲ. ಸ್ವಲ್ಪ ದೂರಲ್ಲಿ ಕೆಲವರು ನಡೆಯುತ್ತಿರುವುದು ಕಾಣಬಹುದು. ಸಲ್ಮಾನ್ ಗರ್ಲ್‌ಫ್ರೆಂಡ್ ಎನ್ನಲಾಗುವ ಲುಲಿಯಾ ವಂತೂರ್ ಕೂಡಾ ಕೆಲವೊಂದು ವಿಡಿಯೋ ಹಾಗೂ ಫೋಟೋ ಶೇರ್ ಮಾಡಿದ್ದಾರೆ. ಮಾರ್ಚ್‌ನಲ್ಲಿ ಲಾಕ್‌ಡೌನ್ ಆರಮಭವಾದಾಗಿನಿಂದಲೂ ಲುಲಿಯಾ ಸಲ್ಮಾನ್ ಜೊತೆ ಇದ್ದಾರೆ ಎನ್ನಲಾಗುತ್ತಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"