ಭಾರತದ ವಿರುದ್ಧದ ಉಗ್ರ ದಾಳಿಯ ಬಳಿಕವೂ ಮೌನವಾಗಿರುವ ಬಾಲಿವುಡ್ ಖಾನ್ ನಟರ ದೇಶಭಕ್ತಿ ಪ್ರಶ್ನಾರ್ಹವಾಗಿದೆ. ಫಲಕ್ ನಾಜ್ ಸೇರಿದಂತೆ ಅನೇಕರು ಖಾನ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಲ್ಮಾನ್ ಖಾನ್‌ರ ಟ್ವೀಟ್ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಖಾನ್ ಚಿತ್ರಗಳ ಬಹಿಷ್ಕಾರಕ್ಕೆ ಒತ್ತಾಯ ಕೇಳಿಬಂದಿದೆ. ಪಾಕಿಸ್ತಾನಿ ನಟರ ದೇಶಪ್ರೇಮವನ್ನು ಮಾದರಿಯಾಗಿ ಉಲ್ಲೇಖಿಸಲಾಗುತ್ತಿದೆ.
ಸಿನಿಮಾಗಳಲ್ಲಿ ಕೋಟಿಕೋಟಿ ಪಡೆದು ದೇಶಪ್ರೇಮದ ನಟನೆ ಮಾಡಿ, ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವನ್ನೇ ಪಡೆದುಕೊಳ್ಳುವ ಖಾನ್ ನಟರ ಬಂಡವಾಳ ಇದಾಗಲೇ ಬಟಾ ಬಯಲಾಗಿ ಹೋಗಿದೆ. 'ಆಪರೇಷನ್ ಸಿಂದೂರ' ಆರಂಭವಾಗಿ ಇಷ್ಟು ದಿನವಾದರೂ ಒಂದೇ ಒಂದು ಮಾತನ್ನು ಬಾಲಿವುಡ್ನ ಈ ನಟರ ಬಾಯಿಯಿಂದ ಹೊರ ಬಂದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇಷ್ಟೆಲ್ಲಾ ಟ್ರೋಲ್ ಆಗುತ್ತಿದ್ದರೂ, ಪಾಕಿಸ್ತಾನದ ವಿರುದ್ಧ ಇವರಿಗೆ ಬಾಯಿಯೇ ಬರುತ್ತಿಲ್ಲ. ನಿನ್ನೆಯಷ್ಟೇ ಬಾಲಿವುಡ್ ನಟಿ ಫಲಕ್ ನಾಜ್ ಅವರು ಕೂಡ ಬಾಲಿವುಡ್ನ ಮುಸ್ಲಿಮ್ ನಟರ ವಿರುದ್ಧ ಕಿಡಿ ಕಾರಿದ್ದರು. 'ಥೂ ನಿಮ್ಮ ಜನ್ಮಕ್ಕೆ... ಸ್ವಲ್ಪನಾದ್ರೂ ನಾಚಿಕೆ ಇದ್ಯಾ? ನಿಮ್ಮನ್ನು ಇಂಡಸ್ಟ್ರಿಯ ಸಹೋದರರು ಎನ್ನಲು ನಾಚಿಕೆ ಆಗುತ್ತದೆ. ನಿಮ್ಮನ್ನು ನೀವು ಏನು ಅಂದುಕೊಂಡಿರುವಿರಿ? ಭಾರತದ ಅನ್ನ ಉಂಡು, ಇಂಥ ಸನ್ನಿವೇಶದಲ್ಲಿಯೂ ಒಂದೂ ಮಾತು ನಿಮ್ಮ ಬಾಯಿಂದ ದೇಶದ ಪರವಾಗಿ ಬರಲ್ಲ ಅಲ್ವಾ? ಎಲ್ಲಿ ನಿಮ್ಮ ಪಾಕಿಸ್ತಾನದ ಅಭಿಮಾನಿಗಳಿಗೆ ತೊಂದರೆ ಆಗತ್ತೆ ಎನ್ನುವ ಯೋಚನೆ ನಿಮಗೆ. ನನಗೂ ಪಾಕಿಸ್ತಾನದ ಫ್ಯಾನ್ಸ್ ಇದ್ದಾರೆ. ಆದರೆ ದೇಶಭಕ್ತಿ ಮೊದಲು ಅನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ನಿಮ್ಮನ್ನು ಈ ದೇಶದ ಮುಸ್ಲಿಮರು ಎನ್ನುವುದಕ್ಕೆ ನಾಚಿಕೆಯಾಗುತ್ತದೆ. ಈ ದೇಶದಲ್ಲಿ ಮುಸ್ಲಿಮರನ್ನು ಜನರು ಯಾಕೆ ನಂಬುವುದಿಲ್ಲ ಎಂದು ಯಾವಾಗಲೂ ಎನ್ನಿಸುತ್ತಿತ್ತು. ಈಗ ಅದು ಅರ್ಥವಾಗಿದೆ. ನಿಮ್ಮನ್ನು ನೋಡಿಯೇ ಎಲ್ಲರ ನಂಬಿಕೆಯೂ ಹೊರಟು ಹೋಗಿದೆ...' ಎನ್ನುತ್ತಲೇ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ, ಇದರ ನಡುವೆಯೇ ಸಲ್ಮಾನ್ ಖಾನ್ ಈಗ ಎಲ್ಲಿ ಅಭಿಮಾನಿಗಳು ತಮ್ಮ ವಿರುದ್ಧ ತಿರುಗಿ ಬೀಳುತ್ತಾರೋ ಎನ್ನುವ ಕಾರಣಕ್ಕೆ, ಒಂದು ಟ್ವೀಟ್ ಮಾಡಿ ಈಗ ಮತ್ತಷ್ಟು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಉಗ್ರರ ದಾಳಿಯ ಬಗ್ಗೆಯಾಗಲೀ, ಆಪರೇಷನ್ ಸಿಂದೂರದ ಬಳಿಕ ಪಾಕಿಸ್ತಾನದ ನೀಚ ಕೃತ್ಯದ ಬಗ್ಗೆಯಾಗಲೀ, ಹೋಗಲಿ ಕೊನೆಯ ಪಕ್ಷ ಭಾರತವನ್ನು ಸಪೋರ್ಟ್ ಮಾಡಿ, ನಮ್ಮ ಯೋಧರಿಗೆ ಶಹಬ್ಬಾಸ್ಗಿರಿ ಕೊಡುವುದಾಗಲೀ... ಹೂಂ... ಹೂಂ... ಯಾವುದೂ ಇಲ್ಲ. ಈಗ ಒಂದು ಟ್ವೀಟ್ ಮಾಡಿದ್ದಾರೆ. ಅದೇನೆಂದರೆ, 'ಕದನವಿರಾಮ ಘೋಷಣೆಯಾಗಿದ್ದಕ್ಕೆ ಥ್ಯಾಂಕ್ ಗಾಡ್' ಎಂದಿದ್ದಾರೆ. ಅಷ್ಟೇ. ಇನ್ನು ಇವರ ಬಗ್ಗೆ ಜಾಲತಾಣದಲ್ಲಿ ಉರಿ ಹೊತ್ತಿಕೊಳ್ಳದೇ ಇರುತ್ತದೆಯಾ? ಹಿಗ್ಗಾಮುಗ್ಗಾ ಟ್ರೋಲ್ಗೆ ಒಳಗಾದ ಬಳಿಕ ಈಗ ಅವರು ಈ ಟ್ವೀಟ್ ಡಿಲೀಟ್ ಮಾಡಿದ್ದಾರೆ!
Operation Sindoor: ಥೂ ನಿಮ್ಮ ಜನ್ಮಕ್ಕೆ... ನಾಚಿಕೆ ಆಗಲ್ವಾ? ನಟರ ಜನ್ಮ ಜಾಲಾಡಿದ ನಟಿ ಫಲಕ್ ನಾಜ್!
ಇದರ ನಡುವೆಯೇ ನಿಮಗೆ ದೇಶಪ್ರೇಮ ಕಿಂಚಿತ್ತು ಇದ್ದರೆ, ಈ ಎಲ್ಲಾ ನಟರ ಚಿತ್ರಗಳನ್ನು ಬೈಕಾಟ್ ಮಾಡುವ ತಾಕತ್ತು ಇದ್ಯಾ ಎನ್ನುವ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ. ಜಾಲತಾಣಗಳಲ್ಲಿ ದೇಶಪ್ರೇಮದ ಮಾತನಾಡುವವರು, ಗಡಿಯಲ್ಲಿ ನಿಂತು ಯುದ್ಧವಂತೂ ಮಾಡಲು ಸಾಧ್ಯವಿಲ್ಲ. ಆದರೆ ಇಂಥ ಸಂಕಷ್ಟಕಾಲದಲ್ಲಿಯೂ ಭಾರತದ ಪರವಾಗಿ ಒಂದೇ ಒಂದು ಮಾತನಾಡದ ಇಂಥವರ ಚಿತ್ರಗಳನ್ನು ಬೈಕಾಟ್ ಮಾಡುವ ಮೂಲಕ ಅವರಿಗೆ ತಕ್ಕ ಶಾಸ್ತಿ ನೀಡಬಹುದಲ್ಲವೆ ಎನ್ನುವುದು ಇವರ ಪ್ರಶ್ನೆ. ಆದರೆ ಬೈಕಾಟ್ ಟ್ರೆಂಡ್ ಎಷ್ಟು ದಿನ ಇರುತ್ತದೆ, ಇನ್ನೊಂದು ಚಿತ್ರ ಬಿಡುಗಡೆಯಾದರೆ, ಅದು ಭಾರತದಲ್ಲಿಯೇ ಎಷ್ಟು ಸಹಸ್ರಕೋಟಿ ಬಾಚಿಕೊಳ್ಳುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ದೇಶಪ್ರೇಮದಂಥ ಮಾತು ಬಂದಾಗಲೂ ಇದೇ ರೀತಿಮಾಡಬೇಡಿ ಎಂದು ಕೆಲವರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕನ್ನಡದ ವಿರುದ್ಧ ಮಾತನಾಡಿದ ಸೋನು ನಿಗಮ್ಗೆ ಏನಾಯ್ತೋ, ಈ ಬಾಲಿವುಡ್ ಖಾನ್ಗಳಿಗೂ ಅದೇ ರೀತಿ ಆಗಬೇಕು ಎನ್ನುವುದು ಅವರ ಮಾತು.
'ಪಾಕಿಸ್ತಾನದ ನಟರನ್ನು ಒಮ್ಮೆ ನೋಡಿ. ಅವರೂ ಬಾಲಿವುಡ್ನಲ್ಲಿ ಕೆಲಸ ಮಾಡಿದ್ದಾರೆ. ನಾನೂ ಕೆಲವರ ಫಾಲೋವರ್ ಆಗಿದ್ದೇನೆ. ಅವರಿಗೂ ಭಾರತದ ಋಣ ಇದೆ. ಆದರೆ ದೇಶದ ಮಾತು ಬಂದಾಗ, ಅವರು ತಮ್ಮ ದೇಶದ ಪರವಾಗಿ ನಿಂತಿದ್ದಾರೆ. ಅವರನ್ನು ನೋಡಿಯೂ ನಿಮಗೆ ನಾಚಿಕೆ ಆಗಲ್ವಾ? ಏನ್ರೀ ನೀವೆಲ್ಲಾ... ಅಲ್ಲಿಯ ಅಭಿಮಾನಿಗಳು ಎಲ್ಲಿ ಕಡಿಮೆಯಾಗಿಬಿಡುತ್ತಾರೆಯೋ ಎನ್ನುವ ಕಾರಣಕ್ಕೆ ಗಪ್ಚುಪ್ ಇದ್ದೀರಲ್ಲ, ನಾಚಿಕೆ ಆಗಲ್ವಾ' ಎಂದು ಹಿಗ್ಗಾಮುಗ್ಗಾ ಥಳಿಸಿದ್ದರು ನಟಿ ಫಲಕ್.
ಆಪರೇಷನ್ ಸಿಂದೂರ: ಬಾಲಿವುಡ್ ಖಾನ್ಗಳು ಬಹುದೂರ ! ವೈರಲ್ ಆಯ್ತು ವಾಜಪೇಯಿ ಹೇಳಿದ್ದ ಮಾತು...


