ಸಲ್ಮಾನ್ ಖಾನ್ ಕೆರಿಯರ್‌ನ ಅತಿ ದೊಡ್ಡ ಫ್ಲಾಪ್ ಸಿನಿಮಾ, ಹಾಲಿವುಡ್ ಹೀರೋಯಿನ್ ಇದ್ರೂ ಸಿನಿಮಾ ಗಳಿಸಿದ್ದು ಇಷ್ಟ್ ಕಡಿಮೆನಾ?
ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಲ್ಲೊಬ್ಬರು ಸಲ್ಮಾನ್ ಖಾನ್. ಚಿತ್ರರಂಗದಲ್ಲಿ ಸಲ್ಲು ಭಾಯ್ ಎಂದೇ ಕರೆಯಲ್ಪಡುವ ಸಲ್ಮಾನ್ ಖಾನ್ ಅಭಿನಯದ ಸಿನಿಮಾಗಳ ಕಲೆಕ್ಷನ್ ಕೋಟಿ ಕೋಟಿ ದಾಟುತ್ತದೆ. ಆದ್ರೆ ಬಾಲಿವುಡ್‌ನ ಬಿಗ್ಗೆಸ್ಟ್ ಫ್ಲಾಪ್ ಸಿನಿಮಾ ಮಾಡಿದವರು ಇದೇ ಸಲ್ಮಾನ್ ಖಾನ್. ಆದ್ರೆ ಆ ಸಿನಿಮಾ ಗಳಿಸಿದ್ದೆಷ್ಟು ಗೊತ್ತಾ?
ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಲ್ಲೊಬ್ಬರು ಸಲ್ಮಾನ್ ಖಾನ್. ಸಿನಿಮಾದಲ್ಲಿ ಹಿನ್ನಲೆ ಡ್ಯಾನ್ಸರ್ ಆಗಿ ಅಭಿನಯಿಸಿ ನಂತರ ನಾಯಕ ನಟನಾಗಿ ಹಲವಾರು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಸಲ್ಲು ಭಾಯ್ ಎಂದೇ ಕರೆಯಲ್ಪಡುವ ಸಲ್ಮಾನ್ ಖಾನ್ ಅಭಿನಯದ ಸಿನಿಮಾಗಳ ಕಲೆಕ್ಷನ್ ಕೋಟಿ ಕೋಟಿ ದಾಟುತ್ತದೆ. ಆದ್ರೆ ಬಾಲಿವುಡ್‌ನ ಬಿಗ್ಗೆಸ್ಟ್ ಫ್ಲಾಪ್ ಸಿನಿಮಾ ಮಾಡಿದವರು ಇದೇ ಸಲ್ಮಾನ್ ಖಾನ್. ಈ ಸಿನಿಮಾ ನಿರ್ದೇಶಿಸಿದ ಡೈರೆಕ್ಟರ್ ಹೀನಾಯ ಸೋಲಿನ ಸಿನಿಮಾ ನೀಡಿದ ನಂತರ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದರು. ಮತ್ತೆ ಯಾವತ್ತೂ ನಿರ್ದೇಶನಕ್ಕೆ ಅವಕಾಶ ಸಿಗಲ್ಲಿಲ್ಲ.
ಸಲ್ಮಾನ್ ಖಾನ್ ಬಿಗ್ಗೆಸ್ಟ್ ಫ್ಲಾಪ್ ಸಿನಿಮಾ ಮಾರಿಗೋಲ್ಡ್
ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕಳೆದ 30 ವರ್ಷಗಳಿಂದ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಹೊಸ ಚಿತ್ರ 'ಟೈಗರ್ 3' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದ್ರೆ ಬಾಕ್ಸ್ ಆಫೀಸ್‌ನಲ್ಲಿ 1 ಕೋಟಿ ಬ್ಯುಸಿನೆಸ್ ಕೂಡ ಮಾಡಲಾಗದ ಸಲ್ಮಾನ್ ಖಾನ್ ಚಿತ್ರವೊಂದಿದೆ. ಅದುವೇ ಮಾರಿಗೋಲ್ಡ್. ಆ ಚಿತ್ರ ಸೋತ ನಂತರ ನಾಯಕಿಗೆ ಮತ್ತೆ ಬಾಲಿವುಡ್‌ನಲ್ಲಿ ಕೆಲಸ ಸಿಗಲಿಲ್ಲ. ನಿರ್ದೇಶಕರು ಕೂಡಾ ಮತ್ತೆ ಯಾವುದೇ ಸಿನಿಮಾ ನಿರ್ದೇಶನ ಮಾಡಲ್ಲಿಲ್ಲ.
ಬಾಲಿವುಡ್‌ನ ಟಾಪ್ ನಟರು ರಿಜೆಕ್ಟ್ ಮಾಡಿದ್ದ ಸಿನ್ಮಾ ಬಾಕ್ಸಾಫೀಸ್ ಹಿಟ್; 4 ರಾಷ್ಟ್ರೀಯ ಪ್ರಶಸ್ತಿ ಪಡೆದ ಹೆಗ್ಗಳಿಕೆ
ಅಮೆರಿಕದ ನಿರ್ದೇಶಕ ವಿಲ್ಲಾರ್ಡ್ ಕ್ಯಾರೊಲ್ ಸಲ್ಮಾನ್ ಖಾನ್ ಜೊತೆ ಮಾರಿಗೋಲ್ಡ್ ಸಿನಿಮಾ ಮಾಡಿದ್ದಾರೆ. ಇದರಲ್ಲಿ ನಾಯಕಿಯ ಪಾತ್ರವನ್ನು ಎಲ್ಲೀ ಲಾರ್ಟರ್ ನಿರ್ವಹಿಸಿದ್ದಾರೆ. ಅವರು 'ರೆಸಿಡೆಂಟ್ ಈವಿಲ್' ಮತ್ತು 'ಫೈನಲ್ ಡೆಸ್ಟಿನೇಶನ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ‘ಮಾರಿಗೋಲ್ಡ್’ ರೊಮ್ಯಾಂಟಿಕ್-ಡ್ರಾಮಾ ಚಿತ್ರವಾಗಿದ್ದು, ಇದು 2007ರಲ್ಲಿ ಬಿಡುಗಡೆಯಾಯಿತು. ಅಮೆರಿಕಾದ ನಟಿಯೊಬ್ಬರು ಭಾರತಕ್ಕೆ ಪ್ರವಾಸಕ್ಕೆ ಬರುತ್ತಾರೆ, ಅವರು ಭಾರತದ ರಾಜಕುಮಾರನನ್ನು ಭೇಟಿಯಾಗುತ್ತಾರೆ ಎಂದು ಇದರಲ್ಲಿ ತೋರಿಸಲಾಗಿತ್ತು. ಆದರೆ ಜನರು ಈ ಚಿತ್ರವನ್ನು ಇಷ್ಟಪಡಲಿಲ್ಲ.
ಈ ಚಿತ್ರ ಭಾರತದಲ್ಲಿ 1 ಕೋಟಿ ರೂಪಾಯಿ ಗಳಿಸಲು ಸಾಧ್ಯವಾಗಲಿಲ್ಲ
ಸಲ್ಮಾನ್ ಖಾನ್ ಅಭಿನಯದ 'ಮಾರಿಗೋಲ್ಡ್' ಚಿತ್ರ ವಿಮರ್ಶಕರಿಂದ ನಕಾರಾತ್ಮಕ ವಿಮರ್ಶೆಗಳನ್ನು ಪಡೆದಿಯಿತು. ಗಳಿಕೆಯ ವಿಷಯದಲ್ಲಿ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ತುಂಬಾ ಕೆಟ್ಟ ಸ್ಥಿತಿಯಲ್ಲಿತ್ತು. ಈ ಸಿನಿಮಾ ಭಾರತದಲ್ಲಿ ಗಳಿಸಿದ್ದು ಕೇವಲ 90 ಲಕ್ಷ ರೂಪಾಯಿ. ಇದು ಇಲ್ಲಿಯವರೆಗೆ ಸಲ್ಮಾನ್ ಖಾನ್ ಅವರ ಅತ್ಯಂತ ಕಡಿಮೆ ಗಳಿಕೆ ಮಾಡಿದ ಚಿತ್ರವೆಂದು ಗುರುತಿಸಲ್ಪಟ್ಟಿದೆ.
ಆನ್ಲೈನ್ನಲ್ಲಿ ಶಾರುಖ್ ಖಾನ್ರನ್ನು ಖರೀದಿ ಮಾಡಿದ್ರಾ? ಸಲ್ಮಾನ್ ಖಾನ್ಗೆ ನೆಟ್ಟಿಗರ ಪ್ರಶ್ನೆ!
ಚಿತ್ರರಂಗವನ್ನೇ ತೊರೆದಿದ್ದ ನಿರ್ದೇಶಕರು
‘ಮಾರಿಗೋಲ್ಡ್’ ಚಿತ್ರದ ಫ್ಲಾಪ್ ನಂತರ ನಿರ್ದೇಶಕ ವಿಲ್ಲಾರ್ಡ್ ಕ್ಯಾರೊಲ್ ಸಿನಿಮಾ ಲೋಕಕ್ಕೆ ವಿದಾಯ ಹೇಳಿದ್ದಾರೆ. ಕಳೆದ 16 ವರ್ಷಗಳಿಂದ ಒಂದೇ ಒಂದು ಸಿನಿಮಾ ಮಾಡಿಲ್ಲ. ಅದೇ ಸಮಯದಲ್ಲಿ, ಚಿತ್ರದ ನಟಿ ಅಲಿ ಲಾರ್ಟರ್ ಈಗ ಹಾಲಿವುಡ್‌ನ ದೊಡ್ಡ ಮುಖವಾಗಿದ್ದಾರೆ. 'ಮಾರಿಗೋಲ್ಡ್' ಚಿತ್ರದ ಫ್ಲಾಪ್ ನಂತರ ಮತ್ತೆ ಬಾಲಿವುಡ್‌ನಲ್ಲಿ ಕೆಲಸ ಮಾಡದಿದ್ದರೂ, ಅವರು ನಿರಂತರವಾಗಿ ಅನೇಕ ಹಾಲಿವುಡ್ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಟಿವಿ ಶೋ 'ಹೀರೋಸ್' ಮತ್ತು 'ರೆಸಿಡೆಂಟ್ ಈವಿಲ್' ನ ಮುಂದುವರಿದ ಭಾಗದಲ್ಲಿ ಕ್ಲೇರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.