Asianet Suvarna News Asianet Suvarna News

ಆನ್​ಲೈನ್​ನಲ್ಲಿ ಶಾರುಖ್​ ಖಾನ್​ರನ್ನು ಖರೀದಿ ಮಾಡಿದ್ರಾ? ಸಲ್ಮಾನ್​ ಖಾನ್​ಗೆ ನೆಟ್ಟಿಗರ ಪ್ರಶ್ನೆ!

ನಕಲಿ ಶಾರುಖ್​ ಖಾನ್​ ಜೊತೆ ಸಲ್ಮಾನ್​ ಖಾನ್​ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ನೆಟ್ಟಿಗರು ಹೇಳ್ತಿರೋದೇನು ನೋಡಿ...
 

Shah Rukh Khan doppelganger Salman Khan was seen making fun of Shah Rukh suc
Author
First Published Nov 28, 2023, 4:40 PM IST

 ಈ ವರ್ಷ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಜೋಡಿ ಎರಡು ಚಿತ್ರಗಳಲ್ಲಿ ಮೋಡಿ ಮಾಡಿದೆ.  ಈ ಹಿಂದೆ ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ಅವರನ್ನು ಬೆಂಬಲಿಸುವ ಟೈಗರ್ ಪಾತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಇದಾದ ನಂತರ ಟೈಗರ್ 3 ಚಿತ್ರದಲ್ಲಿ ಶಾರುಖ್ ಖಾನ್ ಪಠಾಣ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವೆರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದು, ಭಾರೀ ಲಾಭವನ್ನೂ ಗಳಿಸಿವೆ. ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಸಿನಿಮಾದ ಬಗ್ಗೆ ಹೇಳುವುದಾದರೆ,  ಅದು ಬಿಡುಗಡೆಯಾಗಿ 16 ದಿನಗಳು ಕಳೆದಿವೆ. ಸಲ್ಲು ಭಾಯಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಿದೆ. ಆದರೆ, ಟೈಗರ್-3 ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. 16ನೇ ದಿನಕ್ಕೆ ಚಿತ್ರ ಗಳಿಸಿದ್ದು ಕೇವಲ 2 ಕೋಟಿ ರೂ. ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಇದರ ನಡುವೆಯೇ ಸಲ್ಮಾನ್​ ಖಾನ್​ ಮತ್ತು ಶಾರುಖ್​ ಖಾನ್​ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಆದರೆ ಇಲ್ಲಿ ಅಸಲಿ ಸಲ್ಮಾನ್​ ಖಾನ್​ ಜೊತೆ ನಕಲಿ ಶಾರುಖ್​ ಖಾನ್​​ ಇದ್ದಾರೆ. ಶಾರುಖ್​ ಖಾನ್​ ಅವರನ್ನೇ ಹೋಲುವ ವ್ಯಕ್ತಿಯ ಜೊತೆ ಸಲ್ಮಾನ್​ ಖಾನ್​ ರೀಲ್ಸ್​ ಶೇರ್​ ಮಾಡಿಕೊಂಡಿದ್ದಾರೆ. ಅಸಲಿಗೆ ಅವರು, ಸೆಲೆಬ್ರಿಟಿ ಫೋಟೋಗ್ರಫರ್ ವೊಂಪಾಲಾ.  ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಲ್ಮಾನ್ ಖಾನ್ ಅವರ ವಿಡಿಯೋ  ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು   ಶಾರುಖ್ ಖಾನ್ ಅವರ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಶಾರುಖ್​ ಖಾನ್​ ಅವರಂತೆಯೇ ಮಾತನಾಡಿರುವ ಅವರು,  ಸಲ್ಮಾನ್ ಖಾನ್ ಅವರನ್ನು ಟೈಗರ್ ಎಂದು ಕರೆದಿದ್ದಾರೆ.

ವಿಶ್ವ ಕಪ್​ ಫೈನಲ್​ನಲ್ಲಿ ಹೃದಯ ಗೆದ್ದ ಶಾರುಖ್​ ಖಾನ್​! ಆಶಾ ಭೋಸ್ಲೆ ಜತೆಗಿನ ವಿಡಿಯೋ ವೈರಲ್

ಶಾರುಖ್​ ಖಾನ್​ರಂತೆ  ಮುಖಭಾವವನ್ನು ಮಾಡಿ ಮಾತನಾಡಿದ್ದನ್ನು ನೋಡಿ ಸಲ್ಮಾನ್​ ಖಾನ್​ ಅವರಿಗೆ ನಗು ತಡೆದುಕೊಳ್ಳಲಾಗಲಿಲ್ಲ. ಸಿಕ್ಕಾಪಟ್ಟೆ ನಕ್ಕಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ಸಕತ್​ ಇಷ್ಟಪಡುತ್ತಿದ್ದಾರೆ. ಇಂಥ ತಮಾಷೆಗಳೆಲ್ಲಾ ಸಲ್ಮಾನ್​ ಖಾನ್​ರಿಂದ ಮಾತ್ರ ಸಾಧ್ಯ ಎಂದು ಹಲವರು ಹೇಳುತ್ತಿದ್ದರೆ,  ಶಾರುಖ್​ ಖಾನ್​ ಅವರನ್ನು ಸಲ್ಮಾನ್​ ಖಾನ್​ ಆನ್​ಲೈನ್​ನಲ್ಲಿ ಪರ್ಚೇಸ್​ ಮಾಡಿದ್ದಾರೆ ಎನಿಸುತ್ತಿದೆ. ಇದೇ ಕಾರಣಕ್ಕೆ ಇಂಥ ಶಾರುಖ್​ ಖಾನ್​ ಸಿಕ್ಕಿದ್ದಾರೆ ಎಂದು ಸಲ್ಲುಭಾಯಿ ಫ್ಯಾನ್ಸ್​ ಕಾಲೆಳೆಯುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ಆನ್​ಲೈನ್​ ಮಾರುಕಟ್ಟೆ ಹೆಸರು ಹೇಳಿದ್ದಾರೆ. ಕೆಲವರು ಅಮೇಜಾನ್​ ಎಂದೂ ಇನ್ನು ಕೆಲವು ಮೀಶೂ ಎಂದೂ ಹೇಳಿದ್ದಾರೆ. ಶಾರುಖ್​ ಅವರನ್ನು ಎಷ್ಟಕ್ಕೆ ಖರೀದಿ ಮಾಡಿದ್ರಿ ಎಂದು ತಮಾಷೆ ಮಾಡುತ್ತಿದ್ದಾರೆ.

ಇನ್ನು ಕೆಲವರು ಪಠಾಣ್​ ಮತ್ತು ಜವಾನ್​ನಂತೆ ನಿಮ್ಮ ಚಿತ್ರ ಗಳಿಕೆ ಮಾಡಿಲ್ಲ ಎಂದು ಶಾರುಖ್​ ಖಾನ್​ ಮೇಲೆ ಹೀಗೆ ಸೇಡು ತೀರಿಸಿಕೊಂಡ್ರಾ ಎಂದು ಸಲ್ಮಾನ್​ ಖಾನ್​ರ ಕಾಲೆಳೆಯುತ್ತಿದ್ದಾರೆ. ಈ ಹಿಂದೆ ಕೆಲ ಕಾರಣಗಳಿಂದ ಈ ಇಬ್ಬರೂ ದೂರ ದೂರ ಆಗಿದ್ದರು. ಬಹಳ ವರ್ಷಗಳ ಬಳಿಕ ಇವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರ ಮನೆಯ ಗಣೇಶೋತ್ಸವದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು.

ಗಾಯಕ ಗಿಪ್ಪಿ ಗ್ರೆವಾಲ್ ಬಂಗಲೆ ಮೇಲೆ ಗುಂಡಿನ ದಾಳಿ: ನಟ ಸಲ್ಮಾನ್​ ಖಾನೇ ಟಾರ್ಗೆಟ್​?   

 
 
 
 
 
 
 
 
 
 
 
 
 
 
 

A post shared by Voompla (@voompla)

Follow Us:
Download App:
  • android
  • ios