2 ವರ್ಷ ಕಡಿಮೆ ಇರೋ ಅರ್ಬಾಜ್‌ನೇ ಬಿಟ್ಟಿದ್ದಾಳೆ ಅರ್ಜುನ್ ಕಪೂರ್ ಯಾವ ಲೆಕ್ಕ?: ಮಲೈಕಾ ಕಾಲೆಳೆದ ನೆಟ್ಟಿಗರು!
2017ರಲ್ಲಿ ಅರ್ಬಾಜ್ ಖಾನ್ ಜೊತೆ ವಿಚ್ಛೇದನ ಪಡೆದ ಮಲೈಕಾ ಅರೋರಾ. ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿ ಫುಲ್ ಬ್ಯುಸಿ....
ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಹಲವು ವರ್ಷಗಳಿಂದ ಚಾಟಿಂಗ್- ಡೇಟಿಂಗ್ ಆಂಡ್ ಲವಿಂಗ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಬಾಯ್‌ಫ್ರೆಂಡ್ ಅರ್ಜುನ್ ಸೆಮಿ ನ್ಯೂಡ್ ಫೋಟೋ ಅಪ್ಲೋಡ್ ಮಾಡಿ ಬಿಗ್ ಹೆಡ್‌ಲೈನ್ಸ್ ಕ್ರಿಯೇಟ್ ಮಾಡಿದ್ದಾರೆ. ಪ್ರೈವೆಟ್ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇವರಿಬ್ಬರ ನಡುವೆ 11 ವರ್ಷ ವಯಸ್ಸಿನ ಅಂತ ಇರುವುದಕ್ಕೆ ಟ್ರೋಲ್ ಕೂಡ ಆಗುತ್ತಾರೆ.
ಬಿಸಿ ಬಿಸಿ ಫೋಟೋ ನಡುವೆ ಮಲೈಕಾ ಹಳೆ ಸಂದರ್ಶನದ ವಿಡಿಯೋ ವೈರಲ್ ಅಗುತ್ತಿದೆ. ಸಾಜಿದ್ ಖಾನ್ ನಡೆಸುತ್ತಿದ್ದ ಕಾರ್ಯಕ್ರಮಕ್ಕೆ ಮಲೈಕಾ ಅತಿಥಿಯಾಗಿ ಭೇಟಿ ನೀಡಿದ್ದರು. ಈ ವೇಳೆ ತನಗಿಂತ 11 ವರ್ಷ ಕಿರಿಯ ಹುಡುಗನನ್ನು ಪ್ರೀತಿಸುವುದು ಮದುವೆಯಾಗುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು. ಸಂದರ್ಶನ ನಡೆದು ತುಂಬಾ ವರ್ಷ ಆಗಿದೆ ಆದರೆ ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ.
ರೆಡ್ ಗೌನ್‌ನಲ್ಲಿ ಮಿಂಚಿದ ಮಲೈಕಾ ಅರೋರಾ: ಅರ್ಜುನ್ ಭಾಯ್ ಎಷ್ಟು ಲಕ್ಕಿ ಎಂದ ಫ್ಯಾನ್ಸ್
'ಅರ್ಬಾಜ್ ಖಾನ್‌ನ ಮದುವೆಯಾಗಿದ್ದೀರಾ..ವಯಸ್ಸಿನ ಲೆಕ್ಕ ನೋಡಿದ ಅರ್ಬಾಜ್ ನಿಮಗಿಂತ ತುಂಬಾ ಚಿಕ್ಕವರು. ಹೇಗೆ ಅನಿಸುತ್ತಿದೆ?' ಎಂದು ಪ್ರಶ್ನೆ ಮಾಡಿದರು ಆಗ ಮಲೈಕಾ 'ಚೆನ್ನಾಗಿದೆ ನನಗೆ ಖುಷಿಯಾಗುತ್ತಿದೆ' ಎಂದು ಉತ್ತರಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಅರ್ಜುನ್ ಕಪೂರ್‌ಗೂ ಎಚ್ಚರಿಕೆ ಕೊಟ್ಟಿದ್ದಾರೆ. ಅರ್ಬಾಜ್ ಮಲೈಕಾಗಿಂತ 2 ವರ್ಷ ಕಿರಿಯವನಾಗಿದ್ದರೂ ಆಕೆಗಿಂತ ಡಬಲ್ ಹಣ ಮಾಡಿದ್ದಾರೆ ಯಾಕೆ ಸಾಜಿದ್ ಖಾನ್ ಹಾಸ್ಯ ಮಾಡುತ್ತಿದ್ದಾರೆ? ಸಲ್ಮಾನ್ ಖಾನ್ ಮತ್ತು ಅಕ್ಷಯ್ ಕುಮಾರ್ ಮಗಳ ವಯಸ್ಸಿನ ಹುಡುಗಿಯರನ್ನು ನಾಯಕಿ ಮಾಡಿಕೊಳ್ಳುತ್ತಾರೆ ಅದು ತಿಳಿಯುವುದಿಲ್ಲ ಎಂದು ಆಗ ನೆಟ್ಟಿಗರು ಕಾಮೆಂಟ್ ಮಾಡಿದ್ದರು.
ಕೇವಲ 2 ವರ್ಷ ಕಡಿಮೆ ಇರುವ ಅರ್ಬಾಜ್ ಖಾನ್‌ನ ಬಿಟ್ಟಿದ್ದಾರೆ ಅಂದ್ರೆ ಅರ್ಜುನ್ ಕಪೂರ್ ನೀನು ಯಾವ ಲೆಕ್ಕಾ? ಮೊದಲು ಈಕೆಯನ್ನು ಬಿಟ್ಟು ನಿನ್ನ ವಯಸ್ಸಿಗೆ ತಕ್ಕ ಹುಡುಗಿಯನ್ನು ಆಯ್ಕೆ ಮಾಡಿಕೋ ಎಂದು ನೆಟ್ಟಿಗರು ಎಚ್ಚರಿಕೆ ನೀಡುತ್ತಿದ್ದಾರೆ.
ಆಟೋ ಡ್ರೈವರ್‌ಗೆ ಸೆಲ್ಫಿ ಕೊಡಲು ನಿರಾಕರಿಸಿದ ಮಲೈಕಾ; ವಿಡಿಯೋ ನೋಡಿ ಫ್ಯಾನ್ಸ್ ಹೇಳಿದ್ದೇನು?
ಖ್ಯಾತ ಟಿವಿ ಸೆಲೆಬ್ರಿಟಿ ಮಲೈಕಾ ತಮ್ಮ ವೃತ್ತಿಜೀವನದಲ್ಲಿ ಬಹಳ ಸಮಯದವರೆಗೆ ಇಷ್ಟವಿಲ್ಲದ tag line ಇಟ್ಟುಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಜನರು ತಮ್ಮ ಬಗ್ಗೆ ಹೇಗೆ ಯೋಚಿಸುತ್ತಾರೆ ಎಂಬುದು ನನಗೆ ಬೇಸರ ತಂದಿದೆ. ಮತ್ತು ಅದರಿಂದ ಅವರು ನಿರಂತರವಾಗಿ ಆಂತರಿಕ ಕಲಹಗಳೊಂದಿಗೆ ವ್ಯವಹರಿಸುತ್ತಾರೆ! ಎಂದು ಬ್ರೈಡ್ಸ್ ಟುಡೆಗೆ ನೀಡಿದ ಸಂದರ್ಶನದಲ್ಲಿ, ಮಲೈಕಾ ಮಾತನಾಡಿದ್ದಾರೆ. "ಜನರು ನಮ್ಮನ್ನು ಬಾಂಬ್ಶೆಲ್ ಎಂದು ಗ್ರಹಿಸಿದಾಗ, ಯಾರೂ ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಬಗ್ಗೆ ಬಹಳ ಸಮಯದಿಂದಲೂ ನಂಗೆ ನೋವು ಕಾಡುತ್ತಲೇ ಇದೆ. ಜನರು ನನ್ನನ್ನು ಒಂದೇ ದೃಷ್ಟಿಕೋನದಲ್ಲಿ ನೋಡುತ್ತಾರೆಂದು ತಿಳಿದು ಬಹಳ ಬೇಸರವಾಯಿತು. ನನ್ನ ಬಗ್ಗೆ ಯೋಚಿಸಿದಾಗ ಜನರಿಗೆ ಬರಿ 'ಉತ್ತಮ ದೇಹ' ಮತ್ತು 'ಒಳ್ಳೆಯ ಮುಖ' ಮಾತ್ರ ನೆನಪಾಗುವುದು; ಇವೆಲ್ಲದರಿಂದ ದೂರವಿರಲು ನಾನು ನನ್ನ ಒಳಿತಿಗಾಗಿ ಬಹಳಷ್ಟು ಬೇರೆ ಬೇರೆ ಕೆಲಸ ಮಾಡಿದ್ದೇನೆ.
'ನನಗೆ ಆತ್ಮವಿಶ್ವಾಸವು ಎಂದಿಗೂ ಸಮಸ್ಯೆಯಾಗಿರಲಿಲ್ಲ. ನನ್ನಲ್ಲಿ ಹೇರಳವಾಗಿರುವ ಒಂದು ವಿಷಯವಿದ್ದರೆ ಅದು ಆತ್ಮವಿಶ್ವಾಸ ಎಂಬುವುದು ಚೆನ್ನಾಗಿ ಬಲ್ಲೆ. ನಾನು ಶಾಂತ ಸ್ವಭಾವದವಳು. ಬುದ್ಧಿವಂತೆಯೂ ಹೌದು. ಇದಿಲ್ಲದಿದ್ದರೆ ನಾನು ಖಂಡಿತವಾಗಿಯೂ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ನನಗೆ ನೆನಪಿದೆ ನಾನು ನಿರಂತರವಾಗಿ ಆಂತರಿಕ ಕಲಹಗಳನ್ನು ಎದುರಿಸುತ್ತಿದ್ದೆ. ಹೀಗೆ ಹೇಳುತ್ತಾ, ನಾನು ಹುಟ್ಟು ಹಸ್ಲರ್ ಮತ್ತು ನಾನು ಹಸ್ಲರ್ ಆಗಿಯೇ ಸಾಯುತ್ತೇನೆ’’ ಎಂದು ಹೇಳಿಕೊಂಡರು.