ಆಟೋ ಡ್ರೈವರ್‌ಗೆ ಸೆಲ್ಫಿ ಕೊಡಲು ನಿರಾಕರಿಸಿದ ಮಲೈಕಾ; ವಿಡಿಯೋ ನೋಡಿ ಫ್ಯಾನ್ಸ್ ಹೇಳಿದ್ದೇನು?

ಆಟೋ ಡ್ರೈವರ್‌ಗೆ ಸೆಲ್ಫಿ ಕೊಡಲು ನಿರಾಕರಿಸಿದ ಮಲೈಕಾ ವಿಡಿಯೋ ವೈರಲ್ ಆಗಿದೆ. ಮಲೈಕಾ ವರ್ತನೆಗೆ ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. 

Malaika Arora walks away rejecting an auto driver request for a selfie sgk

ಮಲೈಕಾ ಅರೋರಾ ಬಾಲಿವುಡ್‌ನ ಫೇಮಸ್ ಸೆಲೆಬ್ರಿಟಿಗಳಲ್ಲಿ ಒ್ಬಬರು. ಸಿನಿಮಾ ಮಾಡದಿದ್ದರೂ ಮಲೈಕಾ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದಾರೆ. ಅರ್ಜುನ್ ಕಪೂರ್ ಜೊತೆ ಪ್ರೀತಿಯಲ್ಲಿರುವ ಮಲೈಕಾ ಸದ್ಯದಲ್ಲಿ ಮದುವೆ ಆಗ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಲೇ ಇದೆ. ಆದರೆ ಈ ಬಗ್ಗೆ ಮಲೈಕಾ ಅಥವಾ ಅರ್ಜುನ್ ಕಪೂರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಇಬ್ಬರೂ ಸದಾ ಪ್ರವಾಸದಲ್ಲಿ ಬ್ಯುಸಿಯಾಗಿರುತ್ತಾರೆ, ಜೊತೆಗೆ ಮಲೈಕಾ ಸದಾ ಪಾಪರಾಜಿಗಳ ಕ್ಯಾಮರಾಗೆ ಸರೆಯಾಗುತ್ತಿರುತ್ತಾರೆ. ಜಿಮ್, ವರ್ಕೌಟ್ ಅಂತ ಓಡಾಡುವ ಮಲೈಕಾ ಸದಾ ಸುದ್ದಿಯಲ್ಲಿರುತ್ತಾರೆ. 

ಸದ್ಯ ಮಲೈಕಾ ಅವರ ಒಂದು ವಿಡಿಯೋ ಈಗ ವೈರಲ್ ಆಗಿದ್ದು ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಮಲೈಕಾ ಅರೋರಾರನ್ನು ನೋಡಿದ ಆಟೋ ಡ್ರವೈರ್ ತುಂಬಾ ಆಸೆಯಿಂದ ಸೆಲ್ಫಿ ಕ್ಲಿಕ್ಕಿಸಿಕೊಳ್ಳು ಓಡಿ ಬಂದರು. ಮಲೈಕಾ ಜೊತೆ ಸೆಲ್ಫಿ ಕೇಳುವ ಮೊದಲು ತನ್ನ ಕೂದಲನ್ನೂ ಸರಿ ಮಾಡಿಕೊಂಡರು. ಬಟ್ಟೆ ಸರಿ ಪಡಿಸಿಕೊಂಡರು. ಆದರೆ ಮಲೈಕಾ ಹಾಗೆ ನೋಡುತ್ತಲೇ ಸೆಲ್ಫಿ ಕೊಡದೆ ಮುಂದೆ ಸಾಗಿದರು. ಮಲೈಕಾ ಅವರ ಈ ನಡೆ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.  

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈಲಕಾ ಅವರ ವರ್ತನೆಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಬರುತ್ತಿದೆ. ಇನ್ನು ಸ್ವಲ್ಪ ಕಾದು ಸೆಲ್ಫಿ ಕೊಡಬಹುದಿತ್ತು ಎಂದು ಹೇಳುತ್ತಿದ್ದಾರೆ. ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಅಭಿಮಾನಿಗಳ ದೊಡ್ಡ ನಸಾಗಿರುತ್ತದೆ. ಆದರೆ ಅವರ ಹೀಗೆ ಮಾಡಬಾರದಿತ್ತು ಎಂದು ಹೇಳಿದ್ದಾರೆ. ಮಲೈಕಾ ವಿರುದ್ಧ ಅಸಮಾಧಾನ ಹೊರ ಹಾಕಿ ಅನೇಕರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. 

'ಸೆಕ್ಸ್ ಸಿಂಬಲ್' ಎಂದು ಕರೆಯಲ್ಪಡುವ ಬಗ್ಗೆ ಕೊನೆಗೂ ಮೌನ ಮುರಿದ ಮಲೈಕಾ; 'ನನಗೆ ಯಾವುದೇ ತಕರಾರಿಲ್ಲ' ಎಂದ ನಟಿ

ಮಲೈಕಾ ಟ್ರೋಲ್‌ಗಳಿಗೆ, ಟೀಕೆಗಳಿಗೆ ಹೆಚ್ಚು ತಲೆಕಿಡಿಸಿಕೊಳ್ಳುವುದಿಲ್ಲ. ಯಾರ್ ಏನೆ ಹೇಳಿದ್ರು ತಾವು ಇರೋದೆ ಹಾಗೆ ಎನ್ನುವ ರೀತಿ ಇರುತ್ತಾರೆ ಮಲೈಕಾ. ನಟಿ, ಡಾನ್ಸರ್ ಫ್ಯಾಷನ್ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ತರಹೇವಾರಿ ಡ್ರೆಸ್‌ಗಳಲ್ಲಿ ಮಿಂಚುವ ನಟಿ ಆಗಾಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ. ರ್ಯಾಂಪ್ ವಾಕ್, ಹೊಸ ಫೋಟೋ ಶೂಟ್ ಮೂಲಕ ಮಲೈಕಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.

ಖಾನ್ ಸರ್‌ನೇಮ್ ತೆಗಿಬಾರದೆಂದು ವಾರ್ನಿಂಗ್ ಬಂದಿತ್ತು; ವಿಚ್ಛೇದನ ಬಳಿಕ ಎದುರಾದ ಸಮಸ್ಯೆ ಬಿಚ್ಚಿಟ್ಟ ಮಲೈಕಾ

ಮಲೈಕಾ ಅರೋರಾ ಸದ್ಯ ಸಿನಿಮಾಗಿಂತ ಹೆತ್ಚಾಗಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ರಿಯಾಲಿಟಿ ಶೋಗಳಿಗೆ ಮಲೈಕಾ ಜಡ್ಜ್ ಆಗಿದ್ದಾರೆ. ಅನೇಕ ಡಾನ್ಸಿಂಗ್ ಶೋಗೆ ಮಲೈಕಾ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಮೈಲಕಾ ಒಟಿಟಿಯಲ್ಲಿ ಮೂವಿಂಗ್ ಇನ್ ವಿತ್ ಮಲೈಕಾ ಶೋ ನಡೆಸಿಕೊಡುತ್ತಿದ್ದಾರೆ.    

Latest Videos
Follow Us:
Download App:
  • android
  • ios