ರೆಡ್ ಗೌನ್ನಲ್ಲಿ ಮಿಂಚಿದ ಮಲೈಕಾ ಅರೋರಾ: ಅರ್ಜುನ್ ಭಾಯ್ ಎಷ್ಟು ಲಕ್ಕಿ ಎಂದ ಫ್ಯಾನ್ಸ್
ರೆಡ್ ಗೌನ್ನಲ್ಲಿ ಮಲೈಕಾ ಅರೋರಾ ಮಿಂಚಿದ್ದಾರೆ.ಮಲೈಕಾ ಹಾಟ್ ಲುಕ್ಗೆ ಅರ್ಜುನ್ ಭಾಯ್ ಎಷ್ಟು ಲಕ್ಕಿ ಎಂದ ಫ್ಯಾನ್ಸ್ ಹೇಳುತ್ತಿದ್ದಾರೆ.
ಮಲೈಕಾ ಅರೋರಾ ಬಾಲಿವುಡ್ನ ಫೇಮಸ್ ಸೆಲೆಬ್ರಿಟಿಗಳಲ್ಲಿ ಒ್ಬಬರು. ಸಿನಿಮಾಗಳಿಲ್ಲದಿದ್ದರೂ ಮಲೈಕಾ ಸಿಕ್ಕಾಪಟ್ಟೆ ಫೇಮಸ್. ಅರ್ಜುನ್ ಕಪೂರ್ ಜೊತೆ ಪ್ರೀತಿಯಲ್ಲಿರುವ ಮಲೈಕಾ ಸದ್ಯದಲ್ಲಿ ಮದುವೆ ಆಗ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದೆ. ಆದರೆ ಈ ಬಗ್ಗೆ ಮಲೈಕಾ ಅಥವಾ ಅರ್ಜುನ್ ಕಪೂರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಇಬ್ಬರೂ ಸದಾ ಪ್ರವಾಸ, ಸಮಾರಂಭ ಅಂತ ಜೊತೆಯಲ್ಲೇ ಓಡಾಡಿಕೊಂಡಿದ್ದಾರೆ. ಇಬ್ಬರೂ ಸದಾ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗುತ್ತಿರುತ್ತಾರೆ. ಜಿಮ್, ವರ್ಕೌಟ್ ಅಂತ ಓಡಾಡುವ ಮಲೈಕಾ ಸದಾ ಸುದ್ದಿಯಲ್ಲಿರುತ್ತಾರೆ.
ಫಿಟ್ನೆಸ್ ಫ್ರೀಕ್ ಮಲೈಕಾ ಸಿಕ್ಕಾಪಟ್ಟೆ ಹಾಟ್ ಲುಕ್ನಲ್ಲೇ ಸದಾ ಕಾಣಿಸಿಕೊಳ್ಳುತ್ತಾರೆ. ಮಲೈಕಾ ತನ್ನ ಲುಕ್ ಮೂಲಕವೇ ಅಭಿಮಾನಿಗಳನ್ನು ಮೋಡಿ ಮಾಡುತ್ತಿರುತ್ತಾರೆ.
ಮಲೈಕಾ ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ರೆಡ್ ಗೌನ್ನಲ್ಲಿ ಮಲೈಕಾ ಮಿಂಚಿದ್ದಾರೆ. ಎದೆ ಸೀಳು ತೋರಿಸುವ ಡ್ರೆಸ್ ನಲ್ಲಿ ಮಲೈಕಾ ಕಾಣಿಸಿಕೊಂಡಿದ್ದಾರೆ.
ಮಲೈಕಾ ಲುಕ್ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅರ್ಜುನ್ ಭಾಯ್ ಎಷ್ಟು ಲಕ್ಕಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಸಿಕ್ಕಾಪಟ್ಟೆ ಹಾಟ್ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಉರ್ಫಿ ಜಾವೇದ್ ಸಹೋದರಿ ಎಂದು ಹೇಳುತ್ತಿದ್ದಾರೆ.
ನಟಿ ಮಲೈಕಾ ಅರೋರಾ ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದು ದೂರ ಆದ ಬಳಿಕ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದಾರೆ. ಇಬ್ಬರ ಪ್ರೀತಿ ಪ್ರೇಮದ ವಿಚಾರ ಗುಟ್ಟಾಗಿ ಉಳಿದಿಲ್ಲ. ಸದಾ ಒಟ್ಟಿಗೆ ಕಾಣಿಸಿಕೊಳ್ಳುವ ಈ ಜೋಡಿ ಯಾವಾಗ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.