Asianet Suvarna News Asianet Suvarna News

ಕರೀನಾಳ ಟ್ಯಾಟೂ ಅಳಿಸಿದ ಬೆನ್ನಲ್ಲೇ ಸೈಫ್​ ರಹಸ್ಯ ಖಾತೆ ಬಹಿರಂಗ! 5ನೇ ಖಾನ್​ ಸೃಷ್ಟಿಸಲು ಸ್ಕೆಚ್ಚಾ ಎಂದ ಫ್ಯಾನ್ಸ್​

ಕರೀನಾಳ ಟ್ಯಾಟೂ ಅಳಿಸಿದ ಬೆನ್ನಲ್ಲೇ ಸೈಫ್​ ರಹಸ್ಯ ಖಾತೆಯೊಂದು ಬಹಿರಂಗಗೊಂಡಿದೆ. ಇದು ತಿಳಿಯುತ್ತಲೇ ಟ್ರೋಲಿಗರು ಏನೆಲ್ಲಾ ಪ್ರಶ್ನೆ ಕೇಳ್ತಿದ್ದಾರೆ ನೋಡಿ! 
 

Saif Ali Khan Spills The Beans On Having A Secret Instagram Account trollers reacts suc
Author
First Published Jun 30, 2024, 5:14 PM IST

ಬಾಲಿವುಡ್​ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಅವರ ಜೋಡಿ.  ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್​ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್​ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್​ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್​ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್​ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದವರು. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. 

 ಕೆಲ ದಿನಗಳಿಂದ ಸೈಫ್​ ಮತ್ತು ಕರೀನಾ ನಡುವೆ ಎಲ್ಲವೂ ಸರಿಯಿಲ್ಲವೇ ಎನ್ನುವ ಸಂಶಯವೂ ಕಾಡುತ್ತಿದೆ. ಇದಕ್ಕೆ ಕಾರಣ,  ಸೈಫ್​ ಅಲಿ ಖಾನ್​ ಅವರು ಇಷ್ಟುದಿನ ತಮ್ಮ ಕೈ ಮೇಲೆ ಕರೀನಾ ಕಪೂರ್​ ಟ್ಯಾಟೂ ಹಾಕಿಸಿಕೊಂಡಿದ್ದರು. ಅದನ್ನು ಅಳಸಿ ಹಾಕಿದ್ದಾರೆ. ಅದರ ಜಾಗದಲ್ಲಿ ತ್ರಿಶೂಲದ ಟ್ಯಾಟೂ ಕಾಣಿಸಿಕೊಂಡಿದೆ. ಇದಕ್ಕೆ ಸಕತ್​ ಟ್ರೋಲ್​ ಆಗುತ್ತಿದ್ದು, ಕರೀನಾ ಕಪೂರ್​ ಸಹವಾಸ ಸಾಕಾಗಿ, ಮತ್ತೊಂದು ಮದ್ವೆ ಆಗಲು ಹೊರಟ್ರಾ ಸೈಫ್​ ಅಲಿ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಇದು ಅವರ ಮುಂಬರುವ ಚಿತ್ರದ ಪ್ರಚಾರ ಇರಬಹುದು ಎಂದು ಹೇಳುತ್ತಿದ್ದರೂ, ಈ ಬಗ್ಗೆ ನಟನಿಂದ ಸ್ಪಷ್ಟನೆ ಬರಬೇಕಿದೆ. ಇದರ ನಡುವೆಯೇ ಇದೀಗ ರಹಸ್ಯ ಖಾತೆಯೊಂದು ಬೆಳಕಿಗೆ ಬಂದಿದೆ. ಈ ಕುರಿತು ಖುದ್ದು ಸೈಫ್​ ಅಲಿ ಮಾಹಿತಿ ನೀಡಿದ್ದಾರೆ. ಅದೇನೆಂದರೆ, ಸೈಫ್​ ಅಲಿ ಖಾನ್​ ಬಳಿ ರಹಸ್ಯವಾಗಿರುವ ಇನ್​ಸ್ಟಾಗ್ರಾಮ್​  ಖಾತೆಯೊಂದು ಇದೆಯಂತೆ!

ಹಸಿಬಿಸಿ ದೃಶ್ಯ ಎಂದ್ರು, ಬಟ್ಟೆ ಬಿಚ್ಚಿ ಹೀರೊ ಜೊತೆ ಮಲಗಿದೆ... ಅದ್ರಲ್ಲೇನಿದೆ? ನಟಿ ದರ್ಶನಾ ಓಪನ್​ ಮಾತು...

ಹೌದು. ಇಂದು ಅಂದರೆ ಜೂನ್​ 30 ವಿಶ್ವ ಸಾಮಾಜಿಕ ಮಾಧ್ಯಮ ದಿನ. ಇದರ ಅಂಗವಾಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟ ಈ ವಿಷಯವನ್ನು ಹೇಳಿದ್ದಾರೆ.  "ನನ್ನ ಬಳಿ Instagram ಅಪ್ಲಿಕೇಶನ್ ಮತ್ತು ರಹಸ್ಯ ಖಾತೆಯೂ ಇದೆ. ನಾನು ಕೆಲವೊಮ್ಮೆ ಅಷ್ಟೇ ಇದರ ಬ್ರೌಸ್ ಮಾಡುತ್ತೇನೆ, ಆದರೆ ಅದನ್ನು ಹೆಚ್ಚು ಆನಂದಿಸುವುದಿಲ್ಲ. ಮತ್ತು ಪ್ರತಿ ಬಾರಿ ನಾನು ಅದನ್ನು ಸ್ವಲ್ಪ ಸಮಯದವರೆಗೆ ಬ್ರೌಸ್ ಮಾಡುತ್ತೇನೆ. ಅದನ್ನು ಡಿಲೀಟ್​ ಮಾಡಬೇಕು ಎಂದು ಮನಸ್ಸು ಮಾಡುತ್ತೇನೆ, ಆದರೆ ಅದನ್ನು ಹಾಗೆಯೇ ಇಟ್ಟುಕೊಂಡಿದ್ದೇನೆ" ಎಂದಿದ್ದಾರೆ.  ಆದರೆ ಈ ರಹಸ್ಯ ಖಾತೆಯಲ್ಲಿ ಏನಿದೆ, ಅದನ್ನು ಯಾಕೆ ಇಟ್ಟುಕೊಂಡಿದ್ದಾರೆ ಎನ್ನುವುದನ್ನು ನಟ ಬಹಿರಂಗಪಡಿಸಿಲ್ಲ. ಅದಕ್ಕಾಗಿಯೇ ಇದೀಗ ನಟ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಕರೀನಾ ಕಪೂರ್​ರಿಂದ ಇಬ್ಬರು ಖಾನ್​ಗಳನ್ನು ಹುಟ್ಟಿಸಿದ ಬಳಿಕ ಮತ್ತೊಂದಕ್ಕೆ ಗಾಳ ಹಾಕಲು ಈ ರಹಸ್ಯ ಖಾತೆ ಪ್ರಯೋಜನಕ್ಕೆ ಬರುತ್ತದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. 

ಅಂದಹಾಗೆ, ನಟ ಸೈಫ್​ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್​ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು!  ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ  ದಾಂಪತ್ಯದ  ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್‌ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್​ ಅಲಿ ಖಾನ್​ ಅವರಿಗೆ ಅಮೃತಾ ಸಿಂಗ್​ ಮತ್ತು ಕರೀನಾ ಕಪೂರ್​ ಈ ಇಬ್ಬರು  ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್​ (Sara Ali Khan), ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​  ಅಲಿ ಖಾನ್​.  ಈಗ ಐದನೇ ಖಾನ್​ ಹುಟ್ಟಿಸಲು ರೆಡಿನಾ ಅಂತ ಕೇಳೋದಾ ಟ್ರೋಲಿಗರು? 

ನಿವೇದಿತಾ ಡಿವೋರ್ಸ್​ ಬೆನ್ನಲ್ಲೇ ಗಂಡನ ಹೊಗಳಿ ಅಮ್ಮನ ರೀಲ್ಸ್: ಚಂದನ್​ ಶೆಟ್ಟಿಗೆ ಟಾಂಗ್​ ಕೊಟ್ರಾ ಮಾಜಿ ಅತ್ತೆ?
 

Latest Videos
Follow Us:
Download App:
  • android
  • ios