Asianet Suvarna News Asianet Suvarna News

ಹಸಿಬಿಸಿ ದೃಶ್ಯ ಎಂದ್ರು, ಬಟ್ಟೆ ಬಿಚ್ಚಿ ಹೀರೊ ಜೊತೆ ಮಲಗಿದೆ... ಅದ್ರಲ್ಲೇನಿದೆ? ನಟಿ ದರ್ಶನಾ ಓಪನ್​ ಮಾತು...

ಹಸಿಬಿಸಿ ದೃಶ್ಯಗಳಲ್ಲಿ ಯಾವುದೇ ಮುಜುಗರವಿಲ್ಲದೇ ಬಟ್ಟೆ ಬಿಚ್ಚಿ ಶೂಟಿಂಗ್​ ಮಾಡಿರುವ ಬಹುಭಾಷಾ ನಟಿ ದರ್ಶನಾ, ಈಗ ಅಂಥ ಶೂಟಿಂಗ್​ ಕುರಿತು ಹೇಳಿದ್ದೇನು?
 

There is no point in saying that I want clothes in that scene Darshana opens up about intimate scene suc
Author
First Published Jun 28, 2024, 6:02 PM IST

ಇಂದು ಬಟ್ಟೆ ಬಿಚ್ಚಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ನಟಿಯರಿಗೆ ವಿಶೇಷ ಏನೂ ಅಲ್ಲ ಎನ್ನಿಸುತ್ತಿದೆ. ಅದನ್ನು ವೀಕ್ಷಕರು ಕೂಡ ಸಿಕ್ಕಾಪಟ್ಟೆ ಇಷ್ಟಪಟ್ಟು, ರಾತ್ರೋರಾತ್ರಿ ಅಂಥ ನಟಿಯರನ್ನು ನ್ಯಾಷನಲ್​ ಕ್ರಷ್​ ಕೂಡ ಮಾಡಿಬಿಡುತ್ತಾರೆ ಎನ್ನುವುದಕ್ಕೆ ಅನಿಮಲ್​ ಚಿತ್ರದ ತೃಪ್ತಿ ಡಿಮ್ರಿನೇ ಸಾಕ್ಷಿ. ಕೆಲ ವರ್ಷಗಳಿಂದ ದೇಹ ಪ್ರದರ್ಶನವನ್ನಷ್ಟೇ ಬಂಡವಾಳ ಮಾಡಿಕೊಂಡಿದ್ದ ಹಲವು ನಟಿಯರು ಈಗ ಚಿತ್ರಕ್ಕೆ ಅಗತ್ಯವಿದ್ದರೆ ಬಟ್ಟೆ ಬಿಚ್ಚುವಲ್ಲಿ ತಪ್ಪೇನಿದೆ ಎಂದು ಬಹಿರಂಗವಾಗಿ ಕೇಳುವುದು ಇದೆ. ಅದೇ ಮಾತನ್ನೀಗ ಹೇಳಿದ್ದಾರೆ ಬಹುಭಾಷಾ ನಟಿ, ಕರ್ಲಿ ಹೇರ್​ ಬ್ಯೂಟಿ ಎಂದೇ ಫೇಮಸ್​ ಆಗಿರೋ ದರ್ಶನಾ ರಾಜೇಂದ್ರನ್​.

ಮಾಲಿವುಡ್​ನಲ್ಲಿ ಖ್ಯಾತಿ ಗಳಿಸಿರುವ ದರ್ಶನಾ ಅವರು ಇದಾಗಲೇ ತೆಲುಗುವಿನಲ್ಲಿಯೂ ನಟಿಸಿದ್ದಾರೆ. ನಟನೆ ಮೂಲಕ ಗಮನ ಸೆಳೆದ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರುತ್ತಿವೆ. ‘ವೈರಸ್​’, ‘ಸೀ ಯೂ ಸೂನ್​’, ‘ಜಯ ಜಯ ಜಯ ಜಯ ಹೇ’, ‘ಹೃದಯಂ’ ಮುಂತಾದ ಇವರ ಸಿನಿಮಾಗಳು ಹಿಟ್​ ಆಗಿವೆ. ನಟಿಸಿದ್ದು ಕೆಲವೇ ಚಿತ್ರಗಳಾದರೂ ಅವರು ಯಶಸ್ಸು ಕಂಡಿವೆ. ಇದು ಅವರಿಗೆ ಪ್ಲಸ್​ ಪಾಯಿಂಟ್​ ಆಗಿದೆ. ಅದರಲ್ಲಿಯೂ ಮಾಲಿವುಡ್​ನ ಹೃದಯಂ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ. ಅದರಲ್ಲಿನ ಅಭಿನಯಕ್ಕೆ ಸಿನಿ ಪ್ರೇಮಿಗಳು ಮನಸೋತಿದ್ದಾರೆ. ತೆಲಗುವಿನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿಯೂ ಅವಕಾಶಕ್ಕಾಗಿ ನಟಿ ಕಾಯುತ್ತಿರುವ ಬೆನ್ನಲ್ಲೇ ಇದೀಗ ಇಂಟಿಮೇಟ್​ ಸೀನ್​ ಕುರಿತು ಓಪನ್​ ಆಗಿ ಮಾತನಾಡಿದ್ದಾರೆ ನಟಿ. 

ಅರ್ಜುನ್ ಕಪೂರ್​ ಜೀವನ ನಾನು ಹಾಳು ಮಾಡಿದ್ನಾ? ರಸ್ತೆಯಲ್ಲಿ ಹೋಗ್ತಿರೋನನ್ನು ಎಳ್ಕೊಂಡು ಬಂದು ಇಟ್ಕೊಂಡ್ನಾ ಅಥ್ವಾ...
  
 ಇತ್ತೀಚೆಗೆ ಅವರ ಪ್ಯಾರಡೈಸ್​ ಚಿತ್ರ ಬಿಡುಗಡೆಯಾಗಿತ್ತು.  ರೋಷನ್ ಮ್ಯಾಥ್ಯೂಸ್ ಅವರ ಜೊತೆ ದರ್ಶನಾ ತೆರೆ ಹಂಚಿಕೊಂಡಿದ್ದಾರೆ.  ಶ್ರೀಲಂಕಾದ ನಿರ್ದೇಶಕ ಪ್ರಸನ್ನ ವಿತಾನಗೆ ಅವರು ಇದರ ನಿರ್ದೇಶಕರು. ಈ ಸಂದರ್ಭದಲ್ಲಿ ನಟಿ ನೀಡಿದ್ದ  ಸಂದರ್ಶನವೊಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರಲ್ಲಿ ನಟಿ ಇಂಟಿಮೇಟ್​ ಸೀನ್​, ಹಸಿಬಿಸಿ ದೃಶ್ಯಗಳ ಕುರಿತು ಮಾತನಾಡಿದ್ದಾರೆ.  

ಅಷ್ಟಕ್ಕೂ ಅವರಿಗೆ ಪ್ರಶ್ನೆ ಇದ್ದುದು, ಆಶಿಕ್ ಅಬು ನಿರ್ದೇಶನದ ‘ಆನುಂಪೆನ್ನುಂ ’ ಚಿತ್ರದ ಕುರಿತು. ಆರ್. ದರ್ಶನ್ ಅವರು ಬರೆದಿರುವ ‘ಪೆನ್ನುಂಚೆರು ಕನುಂ ’  ಸಣ್ಣ ಕಥೆಯನ್ನಾಧರಿಸಿದ ಚಿತ್ರವಿದು. ಆಶಿಕ್ ಅಬು ಸಿನಿಮಾ ಮಾಡಿದ್ದಾರೆ.  ಇದರಲ್ಲಿ ನಟಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಟ್ಟೆ ಇಲ್ಲದೇ ಇದರಲ್ಲಿ ನಟಿಸಿರುವ ಬಗ್ಗೆ ನಟಿಗೆ ಕೇಳಿದ ಪ್ರಶ್ನೆಗೆ ಅವರು ಯಾವುದೇ ಮುಜುಗರವಿಲ್ಲದೇ ಉತ್ತರ ನೀಡಿದ್ದಾರೆ.  ಇದರಲ್ಲಿ ಇಂಟಿಮೇಟ್​ ಸೀನ್​ ಇರುವ ಬಗ್ಗೆ ನಿರ್ದೇಶಕರು ಹೇಳಿದ್ದರು. ಆ ಕಥೆ ಕೇಳಿದಾಗ ಬಟ್ಟೆ ಇಲ್ಲದೇ ಬರಬೇಕು ಎನ್ನುವುದು ತಿಳಿಯಿತು. ಚಿತ್ರಕ್ಕಾಗಿ ಹೀಗೆ ಮಾಡುವಲ್ಲಿ ತಪ್ಪೇನು ಎಂದು ಅಂದುಕೊಂಡೆ. ಈ ಚಿತ್ರದ ಶೂಟಿಂಗ್​ ಮಾಡುವಾಗ ಬಟ್ಟೆ ಧರಿಸಬೇಕು ಎಂದು ನನಗೇನೂ ಅನ್ನಿಸಲಿಲ್ಲ. ಬಟ್ಟೆ ಇಲ್ಲದೇ ಶೂಟಿಂಗ್​ ಮುಗಿಸಿ ಬಂದೆ ಎಂದಿದ್ದಾರೆ. ಇಂಥ ದೃಶ್ಯ ಇರುವಾಗ ಹಾಗೆ ಮಾಡುವುದು ನಟಿಯಾದವಳ ಕರ್ತವ್ಯ ಎಂದೂ ಸೇರಿಸಿದ್ದಾರೆ.   ಅಷ್ಟಕ್ಕೂ ನಿರ್ದೇಶಕ ಆಶಿಕ್, ಛಾಯಾಗ್ರಾಹಕ ಶೈಜುಕಾ ಮತ್ತು ನನ್ನ ಸಹ ನಟ ರೋಷನ್ ಮೇಲೆ ನನಗೆ ನಂಬಿಕೆ ಇದ್ದುದರಿಂದ ಬಟ್ಟೆ ಬಿಚ್ಚಿದೆ ಎಂದಿದ್ದಾರೆ.  

ಅಕುಲ್​- ಅನುಶ್ರೀ ರೊಮಾನ್ಸ್​​: ವಿಡಿಯೋ ನೋಡಿ ಒನ್ಸ್​ ಮೋರ್​ ಒನ್ಸ್​ ಮೋರ್​ ಅಂತಿರೋ ಅಭಿಮಾನಿಗಳು

Latest Videos
Follow Us:
Download App:
  • android
  • ios