Asianet Suvarna News Asianet Suvarna News

ಮಗನಿಗೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದ್ದು ಕರೀನಾ.. ಹಾಗಾಗಿ ಆ ಪ್ರಶ್ನೆಗಳನ್ನ ಕೇಳ್ತಾನೆ ಎಂದ ಸೈಫ್ ಅಲಿ ಖಾನ್

ನಮ್ಮ ಮಗನಿಗೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದ್ದು ಕರೀನಾ ಕಪೂರ್. ಹಾಗಾಗಿಯೇ ಮಗ ನನ್ನ ಬಳಿ ಕ್ರೈಸ್ತ ಧರ್ಮದ ಕುರಿತು ಹಲವು ಪ್ರಶ್ನೆಗಳನ್ನು ಕೇಳುತ್ತಾನೆ ಎಂದು ಸೈಫ್ ಅಲಿ ಖಾನ್ ಹೇಳುತ್ತಾರೆ.

Saif Ali khan said Kareena Kapoor introduced Christianity to son taimur mrq
Author
First Published Aug 15, 2024, 12:25 PM IST | Last Updated Aug 15, 2024, 12:25 PM IST

ಮುಂಬೈ: ಕಾಫಿ ವಿಥ್ ಕರಣ್ ಶೋನಲ್ಲಿ ಸೈಫ್ ಅಲಿ ಖಾನ್ ಮಗ ತೈಮೂರು ಬಗ್ಗೆ ಮಾತನಾಡಿರುವ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್, ನಿಮ್ಮ ಮಗ ಕೇಳುವ ತಮಾಷೆ ಪ್ರಶ್ನೆಗಳು ಏನು ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಸೈಫ್ ಆ ರೀತಿ ಯಾವುದೇ ಪ್ರಶ್ನೆಗಳನ್ನು ಕೇಳಲ್ಲ ಅಂತಾರೆ. ಆಗ ನನ್ನ ಮಗ ಮತ್ತು ತೈಮೂರು ಇಬ್ಬರು ಉತ್ತಮ ಗೆಳೆಯರು. ತೈಮೂರು ನನ್ನ ಮಗನನ್ನು ಯಶ್-ಜೀ ಎಂದು ಕರೆಯುತ್ತಾನೆ ಎಂಬ ವಿಷಯನ್ನು ಕರಣ್ ಜೋಹರ್ ಹಂಚಿಕೊಂಡರು. ಆಗ ತೈಮೂರು ಜೀಸಸ್‌ ಹೇಗೆ ಮರಣ ಹೊಂದುತ್ತಾರೆ? ಯಾಕೆ ಅವರನ್ನ ಆ ರೀತಿ ಶಿಲುಬೆಗೆ ಏರಿಸ್ತಾರೆ ಎಂಬ ಪ್ರಶ್ನೆಗಳನ್ನು ಕೇಳುತ್ತಾನೆ. ಇಂತಹ ಪ್ರಶ್ನೆಗಳಿಗೆ ನಾವು ಮೊದಲು ತಿಳಿದುಕೊಂಡು ಉತ್ತರ ನೀಡಬೇಕಾಗುತ್ತದೆ ಎಂದು ಸೈಫ್ ಅಲಿ ಖಾನ್ ಹೇಳುತ್ತಾರೆ.

ಸೈಫ್ ಉತ್ತರಕ್ಕೆ ಆಶ್ಚರ್ಯ ವ್ಯಕ್ತಪಡಿಸುವ ಕರಣ್, ಪುಣ್ಯಕ್ಕೆ ಈ ಪ್ರಶ್ನೆಗಳನ್ನು ಅವನು ಕರೀನಾ ಕಪೂರ್‌ಗೆ ಕೇಳಿಲ್ಲ ಅಲ್ಲವಾ ಎಂದು ನಗೆ ಚಟಾಕಿ ಹಾರಿಸುತ್ತಾರೆ. ಇದಕ್ಕೆ ಪ್ರತ್ಯತ್ತುರ ನೀಡುವ ಸೈಫ್, ಮಗನಿಗೆ ಕ್ರೈಸ್ತ ಧರ್ಮವನ್ನು ಪರಿಚಯಿಸಿದ್ದೇ ಕರೀನಾ ಕಪೂರ್ ಎಂಬ ವಿಷಯವನ್ನು ಬಹಿರಂಗಪಡಿಸಿದರು. ಸಿಂಧಿ ಕುಟುಂಬದಲ್ಲಿ ಜನಿಸಿದ ಕರೀನಾ ಕಪೂರ್, ಕ್ರೈಸ್ತ ಧರ್ಮವನ್ನು ಪಾಲನೆ ಮಾಡುತ್ತಾರೆ. 

ಕರೀನಾ ಧರ್ಮ ಪಾಲನೆ ರಹಸ್ಯ ಬಿಚ್ಚಿಟ್ಟಿದ್ದ ಕೇರ್ ಟೇಕರ್ ಲಲಿತಾ

ಹಿಂದೂ ಕುಟುಂಬದಲ್ಲಿ ಜನಿಸಿದ ನಟಿ ಕರೀನಾ ಕಪೂರ್ ಮದುವೆಯಾಗಿದ್ದು, ಎರಡು ಮಕ್ಕಳ ತಂದೆ ನಟ ಸೈಫ್ ಅಲಿ ಖಾನ್. ಇಬ್ಬರ ಮದುವೆ 2012ರಲ್ಲಿ ನಡೆದಿದ್ದು, ಕರೀನಾ-ಸೈಫ್ ದಂಪತಿಗೆ ತೈಮೂರು ಮತ್ತು ಜೇಹ್ ಎಂಬ ಎರಡು ಮುದ್ದಾದ ಮಕ್ಕಳಿವೆ. ತೈಮೂರು ಮತ್ತು ಜೇಹ್ ಇಬ್ಬರನ್ನು ನೋಡಿಕೊಳ್ಳುತ್ತಿದ್ದ ಕೇರ್‌ಟೇಕನ್ ಲಲಿತಾ ಡಿ. ಸಿಲ್ವಾ ಕೆಲ ವಿಷಯಗಳನ್ನು ಹಂಚಿಕೊಂಡಿದ್ದರು. ಹಿಂದೂ ಕುಟುಂಬದಲ್ಲಿ ಜನಿಸಿ, ಮುಸ್ಲಿಂ ನಟನನ್ನ ಜೊತೆ ವೈವಾಹಿಕ ಬಂಧನಕ್ಕೊಳಗಾಗಿರುವ ಕರೀನಾ ಕಪೂರ್ ಯಾವ ಧರ್ಮವನ್ನು ಅನುಸರಿಸುತ್ತಾರೆ ಎಂಬ ರಹಸ್ಯವನ್ನು ಹೇಳಿದ್ರು. 

ತೈಮೂರು ಮತ್ತು ಜೇಹ್  ಇಬ್ಬರಿಗೂ ಕೆಲ ವರ್ಷ ಕೇರ್‌ಟೇಕರ್ ಆಗಿ ಲಲಿತಾ ಕೆಲಸ ಮಾಡಿದ್ದಾರೆ. ತಾಯಿಯಾಗಿ ಕರೀನಾ ಕಪೂರ್ ತನ್ನ ಮಕ್ಕಳಿಗೆ ಹೇಗೆ ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ಇದೇ ವೇಳೆ ಕರೀನಾ ಕಪೂರ್ ಯಾವ ಧರ್ಮದತ್ತ ಹೆಚ್ಚು ಆಕರ್ಷಿತರಾಗಿದ್ದಾರೆ ಅಂತಾನೂ ಲಲಿತಾ ಹೇಳಿದ್ದರು.

ಲವ್ ಯೂ ಮಗನೇ, ಅಪ್ಪಂಗೆ ಏನೂ‌ ಆಗಲ್ಲ, ಡೋಂಟ್ ವರಿ: ಕಿರಿಕ್ ಕೀರ್ತಿ ಭಾವನಾತ್ಮಕ ಪೋಸ್ಟ್

ಕರೀನಾ ಕಪೂರ್ ಅವರ ತಾಯಿ ಬಬಿತಾ ಕಪೂರ್ ಪಂಜಾಬ್ ಮೂಲದ ಹಿಂದೂ ಸಿಂಧಿ ಕುಟುಂಬದವರು. ಆದರೆ ಬಬಿತಾ ಕಪೂರ್ ಕ್ರೈಸ್ತ ಧರ್ಮವನ್ನು ಅನುಸರಣೆ ಮಾಡುತ್ತಿದ್ದರು. ಕರೀನಾ ಕಪೂರ್ ಸಹ ತಾಯಿಯಂತೆ  ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ ಎಂದು ಲಲಿತಾ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಿಮಗೆ ಇಷ್ಟವಿದ್ದರೆ ನನ್ನ ಮಕ್ಕಳಿಗಾಗಿ ಧಾರ್ಮಿಕ ಸ್ತೋತ್ರಗಳನ್ನು ಕೇಳಿಸಿ ಎಂದು ಕರೀನಾ ಕಪೂರ್ ಹೇಳುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಪಂಜಾಬಿಯ ಏಕ್ ಓಂಕಾರ ಹಾಡು ಕೇಳಿಸಲು ಹೇಳುತ್ತಿದ್ದರು. ತಮ್ಮ ಮಕ್ಕಳ ಸುತ್ತಲೂ ಸಕಾರಾತ್ಮಕ ವಾತಾವರಣ ನಿರ್ಮಿಸಬೇಕು ಎಂಬುದನ್ನು ತಾಯಿಯಾಗಿ ಕರೀನಾ ಕಪೂರ್ ತಿಳಿದುಕೊಂಡಿದ್ದರು. 

ಸೈಫ್‌ ಅಲಿ ಖಾನ್‌ಗೆ ಎರಡನೇ ಪತ್ನಿಯಾದ ಕರೀನಾ 

ಸೈಫ್‌ ಅಲಿ ಖಾನ್ ಮತ್ತು ಕರೀನಾ ಕಪೂರ್ ಇಬ್ಬರ ನಡುವಿನ ವಯಸ್ಸಿನ ಅಂತರ 10 ವರ್ಷ ಆಗಿದೆ. 1991ರಲ್ಲಿ 21 ವರ್ಷದ ಸೈಫ್ ಅಲಿ ಖಾನ್, 34 ವರ್ಷದ ಅಮೃತರಾನ್ನು ಮದುವೆಯಾಗಿದ್ದರು. ಸೈಫ್-ಅಮೃತಾ ದಂಪತಿಗೆ ಸಾರಾ ಮತ್ತು ಇಬ್ರಾಹಂ ಎಂಬ ಇಬ್ಬರು ಮಕ್ಕಳಿದ್ದಾರೆ. 2004ರಲ್ಲಿ ಸೈಫ್‌ ಅಲಿ ಖಾನ್ ಮತ್ತು ಅಮೃತಾ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದಾರೆ. ಸೈಫ್ ಪುತ್ರಿ ಸಾರಾ ಅಲಿ ಖಾನ್ ಈಗಾಗಲೇ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಕರೀನಾ ಕಪೂರ್ ಇಂದಿಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಅಂದ್ರೆ ಸಿನಿಮಾ ನಾಯಕ ನಟಿಯ ಲೀಡ್‌ ರೋಲ್‌ನಲ್ಲಿ ಕರೀನಾ ಕಾಣಿಸಿಕೊಳ್ಳುತ್ತಾರೆ. 

ಡೇಟಿಂಗ್ ಸುದ್ದಿ ಬೆನ್ನೆಲ್ಲೇ ಮದ್ವೆಯಾಗಿ 10 ವರ್ಷ ಆಯ್ತೆಂದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ!

Latest Videos
Follow Us:
Download App:
  • android
  • ios