Asianet Suvarna News Asianet Suvarna News

ಲವ್ ಯೂ ಮಗನೇ, ಅಪ್ಪಂಗೆ ಏನೂ‌ ಆಗಲ್ಲ, ಡೋಂಟ್ ವರಿ: ಕಿರಿಕ್ ಕೀರ್ತಿ ಭಾವನಾತ್ಮಕ ಪೋಸ್ಟ್

ಜೊತೆಯಲ್ಲಿ ಅಪ್ಪ ಇದ್ರೆ ಜಗತ್ತನೇ ಗೆಲ್ಲಬಹುದು. ಆದ್ರೆ ಅಪ್ಪನಿಗೆ ಏನಾದ್ರೂ ಆದ್ರೆ  ಒಂಟಿತನ ಕಾಡುತ್ತದೆ. ಇದೀಗ ಅಂತಹವುದೇ ಭಾವನಾತ್ಮಕ ಘಟನೆಯೊಂದನ್ನು ಕಿರಿಕ್ ಕೀರ್ತಿ ಹಂಚಿಕೊಂಡಿದ್ದಾರೆ.

Kirik keerthi emotional post in social media about father son relationship mrq
Author
First Published Aug 14, 2024, 11:41 AM IST | Last Updated Aug 14, 2024, 11:41 AM IST

ಬೆಂಗಳೂರು: ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ತಮ್ಮ ಮೇಲೆ ಮಗನ ಪ್ರೀತಿ ಎಷ್ಟಿದೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಬೆಳಗ್ಗೆಯೇ ತನ್ನ ಬಳಿ ಬಂದ ಮಗ ಅವಿಷ್ಕಾರ್ ಕಣ್ಣೀರು ಹಾಕಿದ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಮಗ ಅವಿಷ್ಕಾರ್ ರಾತ್ರಿ ಕನಸು ಕಂಡಿದ್ದು, ಅದರಲ್ಲಿ ತಂದೆ ಕೀರ್ತಿಗೆ ಅಪಾಯವುಂಟು ಆಗಿರುತ್ತದೆ. ಹಾಗಾಗಿ ಬೆಳಗ್ಗೆ ಎದ್ದಕೂಡಲೇ ಅಪ್ಪನನ್ನು ನೋಡಲು ಅವಿಷ್ಕಾರ್ ಬಂದಿದ್ದಾನೆ. ರೂಮ್‌ಗೆ ಬಂದ ಅವಿಷ್ಕಾರ್ ಅಪ್ಪನನ್ನು ಅಪ್ಪಿಕಂಡು ಕಣ್ಣೀರು ಹಾಕಿದ್ದಾನೆ. ಮಗನ ಕಣ್ಣೀರು ಕೀರ್ತಿ ಎದೆ ಮೇಲೆಲ್ಲಾ ಸುರಿಯುತ್ತಿತ್ತು. ಮಗನಿಗೆ ಸಮಾಧಾನ ಮಾಡಿದರೂ, ಆವಿಷ್ಕಾರ್ ಮಾತ್ರ ತಾನೇ ದೇವರ ಪೂಜೆ ಮಾಡಿ ಅಪ್ಪನಿಗೆ ಏನು ಆಗದಿರಲಿ ಎಂದು ಬೇಡಿಕೊಂಡಿದ್ದಾನೆ. ಮಗ ಪೂಜೆ ಮಾಡುತ್ತಿರುವ ಫೋಟೋವನ್ನು ಸಹ ಕಿರಿಕ್ ಕೀರ್ತಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕಿರಿಕ್ ಕೀರ್ತಿ ಪೋಸ್ಟ್ 

ಬೆಳಗ್ಗೆ ಆರೂವರೆ, ನಾನು ಗಾಢ ನಿದ್ದೆಯಲ್ಲಿದ್ದೆ. ನನ್ನ ಮಗ ಆವಿಷ್ಕಾರ್ ಬಂದು ಜೋರಾಗಿ ಅಳುತ್ತಾ ನನ್ನ ಬಿಗಿದಪ್ಪಿದ್ದ. ಅಮ್ಮ ಕೂಡ ನನ್ನ ಎಬ್ಬಿಸಿದ್ರು. ಎದ್ದು ನೋಡಿದ್ರೆ ಮಗನ ಕಣ್ಣೀರು ನನ್ನ ಎದೆಯ ಮೇಲೆಲ್ಲಾ ಸುರೀತಾ ಇದೆ.'ಯಾಕೆ ಮಗನೇ? ಏನಾಯ್ತು?' ಅಂತ ಕೇಳಿದೆ. ಅಪ್ಪ, ಕೆಟ್ಟ ಡ್ರೀಮ್ ಬಂದಿತ್ತು ಅಂದ. 'ಏನ್ ಡ್ರೀಮ್ ಬಂತು ಮಗನೇ' ಅಂತ ಕೇಳಿದೆ. 'ನಿಮಗೆ ದೊಡ್ಡ ಆಕ್ಸಿಡೆಂಟ್ ಆಗಿತ್ತು. ಹಾಸ್ಪಿಟಲ್ ಸೇರಿಸಿದ್ರು. ನಂಗಿಷ್ಟ ಇಲ್ಲ ಆ ಡ್ರೀಮ್ ಅಂತ ಬಿಕ್ಕಳಿಸೋಕೆ ಶುರು ಮಾಡ್ದ. ನಂಗೂ ದುಃಖ ಉಮ್ಮಳಿಸಿದ್ರೂ ಹಂಗೆಲ್ಲಾ ಏನಾಗಲ್ಲ ಮಗನೇ. ಅಪ್ಪ ಇಲ್ಲೇ ಇದ್ದಾರಲ್ಲ ಅಂತ ಎದೆಗಪ್ಪಿಕೊಂಡೆ ಅತ್ತು ಅತ್ತು ಸಮಾಧಾನ ಆದ ನಂಗೊಂದು ಮುತ್ತು ಕೊಟ್ಟು ಹೋದ. ಅದಾದ ಮೇಲೆ ಸ್ನಾ‌ನ ಮುಗಿಸಿದವನು 'ಅಪ್ಪಂಗೆ ಏನೂ ಆಗಬಾರದು ಅಂತ ನಾನೇ ಪೂಜೆ ಮಾಡ್ತೀನಿ' ಅಂತ ಹೇಳಿ ದೇವರ ಕೋಣೆ ಸೇರಿಕೊಂಡ. ಅವನೇ ದೀಪ ಹಚ್ಚಿ, ಗಂಟೆ ಬಾರಿಸ್ತಾ ಅಗರಬತ್ತಿ ಬೆಳಗಿದ. ನನ್ನ ಮಗ,ನನ್ನ ಭಾಗ್ಯ ಅನಿಸಿಬಿಡ್ತು. ಲವ್ ಯೂ ಮಗನೇ. ಅಪ್ಪಂಗೆ ಏನೂ‌ ಆಗಲ್ಲ. ಡೋಂಟ್ ವರಿ.

ಈ ಪೋಸ್ಟ್‌ಗೆ ನೆಟ್ಟಿಗರು ಕಮೆಂಟ್ ಮಾಡಿದ್ದು, ಕೀರ್ತಿ ಸರ್... ನೀವು ನಿಮ್ಮ ಮಗನ್ನ ಎಷ್ಟು ಪ್ರೀತಿ ಮಾಡ್ತೀರಾ? ಯಾಕೆ ಈ ಮಾತು ಕೇಳ್ದೆ ಅಂದ್ರೆ ಅದೇನೋ ಗೊತ್ತಿಲ್ಲ. ಮದ್ವೆ ಆದ್ಮೇಲೆ ಹೆಂಡ್ತಿ ಜೊತೆನೂ ಅಷ್ಟು close ಆಗಿಲ್ಲ adre ಮಗನ್ನ ಅಷ್ಟು ಅಚ್ಕೋಬಿಟ್ಟೀನಿ ನಾನು ಅದ್ಕೆ ಕೇಳ್ದೆ ಕೆಟ್ಟ dream ನಂಗು ಬೀಳ್ತೀರುತ್ತೆ ಎಂದು ಹೇಳಿದ್ದಾರೆ. ಬಿಗ್‌ಬಾಸ್ ಸೀಸರ್ 10ರ ವಿನ್ನರ್ ಕಾರ್ತಿಕ್, ಅಪ್ಪನ ಹೀರೋಗೆ ಅಪ್ಪನೇ ಹೀರೋ  ಎಂದು ಕಮೆಂಟ್ ಮಾಡಿದ್ದಾರೆ.

ನೋಡ್ರೋ... ನಮ್ಮಕ್ಕ ಅದೃಷ್ಟ ಕಣ್ರೋ... ಅಪಶಕುನ ಅಲ್ಲ... ಅಶ್ವಿನಿ ಪರ ಫ್ಯಾನ್ಸ್​ ಬ್ಯಾಟಿಂಗ್​...

ಅಯ್ಯೋ ಕಂದ ನಿನ್ನ ಪಪ್ಪನ ಹಿಂದೆ ಯಾವಾಗ್ಲೂ ದೇವರು ಇರ್ತಾನೆ ಅವನು ದೇವರ ಮಗ ನಿನ್ನಂತ ಒಳ್ಳೆಯ ಮಗನನ್ನು ಬಿಟ್ಟು ಅವ್ನೆಲ್ಲು ಹೋಗಲ್ಲ ಕೆಟ್ಟ ಕನಸು ಮರೆತು ಸ್ಕೂಲ್ ಗೆ ಹೋಗು ಬಂಗಾರ. ನಿಮ್ ಮಗನನ್ನು ಪಡೆಯೋಕೆ ನೀವು ತುಂಬಾ ಪುಣ್ಯ ಮಾಡಿದ್ದೀರಿ ಅಣ್ಣ.  ಕನಸಲ್ಲಿ ತೀರಿಕೊಂಡರೆ ಆಯಸ್ಸು ಜಾಸ್ತಿ ಅಂತೆ. ಅಯ್ಯೋ ಮುದ್ದು ಕಂದ ಏನೂ ಆಗಲ್ಲ ನಿಮ್ಮಪ್ಪನಿಗೆ ದೇವರಿದ್ದಾರೆ. ಅಪ್ಪ ಮಗ ಯಾವಾಗ್ಲೂ ಖುಷಿ ಖುಷಿಯಾಗಿರಿ. ನಿಮ್ಮ ಹಿತೈಷಿ ಬೇರೆ ಯಾರು ಅಲ್ಲ, ನಿಮ್ಮ ಮಗನೇ... ಸರ್. ಕನ್ನಡಿಗರ ಪ್ರೀತಿ ಇರುವವರಿಗೆ ನಿಮಗೆ ಏನೂ ಆಗಲ್ಲ ಬಿಡಿ ಸರ್ ಎಂದು ನೆಟ್ಟಿಗರು ಅಪ್ಪ-ಮಗನ ಬಾಂಧವ್ಯದ ಬಗ್ಗೆ ಕಮೆಂಟ್ ಮಾಡಿದ್ದಾರೆ.

ಕಿರಿಕ್ ಕೀರ್ತಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿಯೂ ಕಿರಿಕ್ ಕೀರ್ತಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬಿಗ್‌ಬಾಸ್ ಶೋ ಬಳಿಕ ರಾಜಾರಾಣಿ ಶೋನಲ್ಲಿ ಸ್ಪರ್ಧಿಯಾಗಿದ್ದರು. ಕಿರಿಕ್ ಕೀರ್ತಿ ಮತ್ತು ಅರ್ಪಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡು ಪ್ರತ್ಯೇಕವಾಗಿದ್ದಾರೆ.

ಮಗ ಹೇಳಿದ ಒಂದು ಮಾತಿನಿಂದ ನಾನು ನೆಮ್ಮದಿಯಿಂದ ಇರುವೆ; ಡಿವೋರ್ಸ್‌ ಬಗ್ಗೆ ಮೌನ ಮುರಿದ ಕಿರಿಕ್ ಕೀರ್ತಿ

Latest Videos
Follow Us:
Download App:
  • android
  • ios