Asianet Suvarna News Asianet Suvarna News

ಡೇಟಿಂಗ್ ಸುದ್ದಿ ಬೆನ್ನೆಲ್ಲೇ ಮದ್ವೆಯಾಗಿ 10 ವರ್ಷ ಆಯ್ತೆಂದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ!

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಮ್ಮ ಮದುವೆ ಕುರಿತ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಉದ್ಯಮಿಯೊಬ್ಬರ ಜೊತೆ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗಿತ್ತು.

Bollywood actress kriti sanon reacts dating rumours with businessman mrq
Author
First Published Aug 14, 2024, 7:45 PM IST | Last Updated Aug 14, 2024, 7:45 PM IST

ಮುಂಬೈ: ಸಿನಿಮಾ ಕಲಾವಿದರ ಖಾಸಗಿ ವಿಷಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಅದರಲ್ಲಿ ನಟ-ನಟಿಯರ ಮದುವೆ ಕುರಿತ ವಿಷಯಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಕಳೆದ ಒಂದೂವರೆ ವರ್ಷದಿಂದ ಬಾಲಿವುಡ್ ಅಂಗಳದಲ್ಲಿ ಗಟ್ಟಿಮೇಳ ನಾದ ಕೇಳಿಸುತ್ತಿದೆ. ಇತ್ತೀಚೆಗಷ್ಟೇ ನಟಿ ಸೋನಾಕ್ಷಿ ಸಿನ್ನಾ ಗೆಳಯನನ್ನು ಮದುವೆಯಾಗಿದ್ದರು. ಇದರ ಬೆನ್ನಲ್ಲೇ ಜಾಹ್ನವಿ ಕಪೂರ್, ಕೃತಿ ಸನನ್ ಸೇರಿದಂತೆ ಹಲವು ನಟಿಯರ ಪ್ರೇಮಕತೆಗಳು ಮುನ್ನಲೆಗೆ ಬರುತ್ತಿವೆ. ಮಿಮಿ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತೆ ಕೃತಿ ಸನನ್ ಉದ್ಯಮಿಯೊಬ್ಬರ ಜೊತೆ ರಿಲೇಶನ್‌ಶಿಪ್‌ ನಲ್ಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. 

ಉದ್ಯಮಿ ಕಬೀರ್ ಬಹಿಯಾ ಮತ್ತು ಕೃತಿ ಸನನ್ ಪ್ರೀತಿಸುತ್ತಿದ್ದಾರೆ ಎಂದು ಕೆಲ ಫೋಟೋಗಳು ಕಳೆದ 15 ದಿನಗಳಿಂದ ವೈರಲ್ ಆಗಿವೆ. ಕಬೀರ್ ಬಹಿಯಾ ಲಂಡನ್ ವಾಸಿಯಾಗಿದ್ದು, ಇಬ್ಬರ ನಡುವಿನ ವಯಸ್ಸಿನ 10 ವರ್ಷ ಆಗಿದೆ. ಇದೀಗ ಈ ಎಲ್ಲಾ ವದಂತಿಗಳ ಬಗ್ಗೆ ಕೃತಿ ಸನನ್ ಮೌನ ಮುರಿದಿದ್ದಾರೆ. ವ್ಯಂಗ್ಯವಾಗಿ ಹೌದು, ನನಗೆ ಮದುವೆಯಾಗಿ 10 ವರ್ಷ ಆಯ್ತು ಎಂದು ವದಂತಿಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.  

ಸಂದರ್ಶನವೊಂದರಲ್ಲಿ ಡೇಟಿಂಗ್ ಸುದ್ದಿ ಬಗ್ಗೆ ಮಾತನಾಡಿದ ಕೃತಿ ಸನನ್, ಇದೆಲ್ಲವೂ ಸುಳ್ಳು ಎಂದಿದ್ದಾರೆ. ನಾನು ಮದುವೆ ಆಗುತ್ತಿದ್ದೇನೆ ಎಂಬ ಸುದ್ದಿ ತುಂಬಾ ಬೇಸರವನ್ನುಂಟು ಮಾಡಿದೆ. ಈ ಸುದ್ದಿ ಹರಡುತ್ತಿದ್ದಂತೆ ಕುಟುಂಬಸ್ಥರು ಮತ್ತು ಆಪ್ತರು ಫೋನ್ ಮತ್ತು ಮೆಸೇಜ್ ಮಾಡಿ ಕೇಳುತ್ತಿದ್ದಾರೆ. ಈ ರೀತಿಯ ವದಂತಿಗಳನ್ನು ಹರಡಿದಾಗ ತುಂಬಾ ಕೋಪ ಬರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. 

ಈ ರೀತಿಯ ಸುದ್ದಿಗಳು ಕುಟುಂಬದ ಮೇಲೆಯೂ ಪರಿಣಾಮ ಬೀರುತ್ತವೆ. ಪೋಷಕರೇ ನಮ್ಮನ್ನ ಈ ಬಗ್ಗೆ ಕೇಳಲು ಹಿಂಜರಿಯುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಈ ಬಗ್ಗೆ ಕೇಳುವ ಆಪ್ತರಿಗೆ ಇದು ಸುಳ್ಳು ಎಂದು ಹೇಳುವ ಕೆಲಸ ಮಾಡಬೇಕಾಗಿದೆ. ಹಾಗಾಗಿ ಇಂತಹ ಸುದ್ದಿಗಳಿಂದ ಮನಸ್ಸಿಗೆ ಬೇಸರ ಉಂಟಾಗುತ್ತದೆ ಎಂದು ಎಲ್ಲಾ ವದಂತಿಗಳ ಬಗ್ಗೆ ಕೃತಿ ಸನನ್ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಈ ರೀತಿ ಸುದ್ದಿ ಹಬ್ಬಿಸದಂತೆಯೂ ಮನವಿ ಮಾಡಿಕೊಂಡಿದ್ದಾರೆ. 

ಕದ್ದು ಮುಚ್ಚಿ ಸಿಗರೇಟ್‌ ಸೇದಲು ಹೋಗಿ ಜನರಿಗೆ ಸಿಕ್ಕಾಕೊಂಡ 'ಆದಿಪುರುಷ್‌' ನಟಿ ಕೃತಿ; ಪೋಸ್ಟ್ ವೈರಲ್!

ಈ ಹಿಂದೆಯೂ ಹಲವು ನಟರ ಜೊತೆ ಕೃತಿ ಸನನ್ ಹೆಸರು ಕೇಳಿ ಬಂದಿತ್ತು. ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿಯೇ ಟೈಗರ್ ಶ್ರಾಫ್ ಜೊತೆ ಡೇಟ್‌ನಲ್ಲಿದ್ದಾರೆ ಎಂದು ವರದಿಯಾಗಿತ್ತು. ಇದಾದ ಬಳಿಕ ಆದಿಪುರುಷ ಸಿನಿಮಾ ವೇಳೆ ಪ್ರಭಾಸ್ ಮತ್ತು ಕೃತಿ ಸನನ್ ಪ್ರೀತಿಸುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ನಾವಿಬ್ಬರು ಕಲಾವಿದರು ಮತ್ತು ಒಳ್ಳೆಯ ಸ್ನೇಹಿತರು ಎಂದು ಇಬ್ಬರು ಸ್ಪಷ್ಟನೆ ನೀಡಿದ್ದಾರೆ. 

2021ರಲ್ಲಿ ಬಿಡುಗಡೆಯಾದ ಮಿಮಿ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಮತ್ತು ಫಿಲಂ ಫೇರ್ ಅವಾರ್ಡ್ ಪಡೆದುಕೊಂಡಿದ್ದಾರೆ. ಹೀರೋಪಂತಿ, ಬರೇಲಿ ಕಿ ಬರ್ಫಿ, ದಿಲ್‌ವಾಲೇ, ಹೌಸ್‌ಫುಲ್-4, ಆದಿಪುರುಷ, ಭೇಡಿಯಾ, ಕ್ರೂ, ತೇರಿ ಬಾತೋಂ ಮೇ ಐಸಾ ಉಲ್ಜಾ ಜಿಯಾ, ರಾಬ್ತಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೃತಿ ಸನನ್ ನಟಿಸಿದ್ದಾರೆ. 

ಇಂಗ್ಲೆಂಡ್‌ ಮೂಲದ ಮಿಲಿಯನೇರ್‌ ಬಲೆಗೆ ಬಿದ್ದ ಕೃತಿ ಸನನ್‌, ಯಾರು ಗೊತ್ತಾ ಈಕೆಯ ಬಾಯ್‌ಫ್ರೆಂಡ್‌?

Bollywood actress kriti sanon reacts dating rumours with businessman mrq

Latest Videos
Follow Us:
Download App:
  • android
  • ios