Asianet Suvarna News Asianet Suvarna News

ಪತ್ನಿ ಯಾರೆಂದೇ ಸೈಫ್​ಗೆ ಕನ್​ಫ್ಯೂಸ್​! ಕರೀನಾ ಅಂದ್ಕೊಂಡು ಇನ್ನೊಬ್ಬಳ ಹಿಡಿದುಕೊಳ್ಳಲು ಮುಂದಾದ ನಟ

ಕರೀನಾ ಕಪೂರ್​ ಎಂದು ತಿಳಿದು ಮತ್ತೊಬ್ಬಳ ಹಿಡಿಯಲು ಮುಂದಾದ ಸೈಫ್​ ಅಲಿ ಖಾನ್​. ವೈರಲ್​ ವಿಡಿಯೋಗೆ ನಟನ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.
 

Saif Ali Khan mistaken another lady as  Kareena Kapoor and  went ahead to catch her suc
Author
First Published Dec 19, 2023, 5:35 PM IST

 ಬಾಲಿವುಡ್​ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಅವರ ಜೋಡಿ.  ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್​ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್​ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್​ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್​ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್​ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದವರು. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. 

ಇದೀಗ ಈ ದಂಪತಿ ಸುಖಿ ಸಂಸಾರ ನಡೆಸುತ್ತಿದ್ದಾರೆ. ಆದರೆ ಇದೀಗ ವೈರಲ್​ ಆಗಿರೋ ವಿಡಿಯೋ ಒಂದರಲ್ಲಿ ಸೈಫ್​ ಅಲಿ ಖಾನ್​ ಕರೀನಾ ಕಪೂರ್​ ಎಂದುಕೊಂಡು ಬೇರೊಬ್ಬಳನ್ನು ಹಿಡಿದುಕೊಳ್ಳಲು ಮುಂದಾಗಿ, ನಂತರ ಒಹ್​ ಎಂದುಕೊಂಡು ಕರೀನಾರನ್ನು ಹಿಡಿದುಕೊಂಡರು. ಅಸಲಿಗೆ ಆ ಮಹಿಳೆ ಮತ್ತು ಕರೀನಾ ಇಬ್ಬರೂ ಕೆಂಪು ಮತ್ತು ಬಿಳಿಯ ಬಣ್ಣದ ಸುಮಾರು ಒಂದೇ ರೀತಿಯ ಬಟ್ಟೆ ಹಾಕಿಕೊಂಡಿದ್ದರಿಂದ ನಟನಿಗೆ ಕನ್​ಫ್ಯೂಸ್​ ಆಯಿತು. ಮಕ್ಕಳ ಜೊತೆ ಏರ್​ಪೋರ್ಟ್​ನಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ನೆಟ್ಟಿಗರು ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ. ಎರಡು ಮದ್ವೆ ಬೇಜಾರು ಬಂದಿರಬೇಕು. ಮತ್ತೊಬ್ಬಳಿಗಾಗಿ ಹುಡುಕಾಟ ನಡೆಸಿರಬೇಕು ಎಂದು ನಟನ ಕಾಲೆಳೆಯುತ್ತಿದ್ದಾರೆ. ಇನ್ನೊಬ್ಬಳು ಚಿಕ್ಕ ವಯಸ್ಸಿನವಳು, ಕರೀನಾಗೆ ವಯಸ್ಸಾಯ್ತು. ಅದಕ್ಕಾಗಿಯೇ ಗೊತ್ತಿದ್ದರೂ ಬೇರೊಬ್ಬ ಯುವತಿಯ ಕೈ ಹಿಡಿಯಲು ನೋಡಿರಬೇಕು ಎಂದು ತಮಾಷೆ ಮಾಡುತ್ತಿದ್ದಾರೆ. 

ರಾಹುಲ್​ ಗಾಂಧಿಯನ್ನು ಮದ್ವೆಯಾಗುವೆ ಎಂದಿದ್ದ ನಟಿ ಶೆರ್ಲಿನ್ ಈಗ 2ನೇ ಪತ್ನಿ ಬಗ್ಗೆ ಮಾತಾಡಿದ್ದಾರೆ ಕೇಳಿ...!

ಅಷ್ಟಕ್ಕೂ ಸೈಫ್​ ಮತ್ತು ಕರೀನಾ ಮದುವೆಯ ವಿಷಯವೇ ಬಲು ರೋಚಕವಾದದ್ದು. ನಟ ಸೈಫ್​ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್​ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು!  ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ  ದಾಂಪತ್ಯದ  ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್‌ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್​ ಅಲಿ ಖಾನ್​ ಅವರಿಗೆ ಅಮೃತಾ ಸಿಂಗ್​ ಮತ್ತು ಕರೀನಾ ಕಪೂರ್​ ಈ ಇಬ್ಬರು  ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್​ (Sara Ali Khan), ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​  ಅಲಿ ಖಾನ್​.  

ಇದೀಗ ಕರೀನಾ ಕಪೂರ್​ ತಾವು ಸೈಫ್​ ಅಲಿ ಖಾನ್​ ಅವ್ರನ್ನು ಮದ್ವೆಯಾಗಿರುವ ಕಾರಣವನ್ನು ಬಹಿರಂಗಗೊಳಿಸಿದ್ದಾರೆ. ಅದೇನೆಂದರೆ ಸೈಫ್​ ಅಲಿ ಖಾನ್​ ಅವರನ್ನು ಕರೀನಾ ಮದುವೆಯಾಗಿದ್ದು, ಮಕ್ಕಳನ್ನು ಹೆರುವುದಕ್ಕಾಗಿಯಂತೆ! ಹೌದು. ಹೀಗೆಂದು ಖುದ್ದು ಕರೀನಾ ಡರ್ಟಿ ಎಂಬ ಮ್ಯಾಗಜೀನ್​ಗೆ ಸಂದರ್ಶನ ಕೊಟ್ಟಿದ್ದರು. ಮದುವೆಯಾಗುವ ಮೊದಲು ಸೈಫ್​ ಮತ್ತು ಕರೀನಾ ಸುಮಾರು  5 ವರ್ಷ ಲಿವಿಂಗ್ ಟುಗೆದರ್​ನಲ್ಲಿದ್ದರು. ಈ ಕುರಿತೂ ಈ ಹಿಂದೆ ಕರೀನಾ ಹೇಳಿಕೊಂಡಿದ್ದರು.  ತಾವು ಮದುವೆಯಾಗುವ ಮೊದಲು ಐದು ವರ್ಷ ಸೈಫ್​ ಜೊತೆ ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದೆ.  ಆಗ ನನಗೆ ಮಕ್ಕಳನ್ನು ಮಾಡಿಕೊಳ್ಳುವ ಆಸೆಯಾಯಿತು.  ಅದಕ್ಕಾಗಿ ಮದುವೆಯಾದೆವು. ನಮಗಿಬ್ಬರಿಗೂ ಮಕ್ಕಳು ಬೇಕು ಎನಿಸಿದ ಕಾರಣ ಮದುವೆಯಾದೆವು. ಇಲ್ಲದಿದ್ದರೆ ಮದುವೆಯಾಗದೆಯೇ ಜೊತೆಗಿರುತ್ತಿದ್ದೆವು. ಮಕ್ಕಳನ್ನು ಹೆರುವ ಉದ್ದೇಶವಿಲ್ಲದಿದ್ದರೆ ಇಬ್ಬರೂ ಲಿವ್​ ಇನ್​ನಲ್ಲಿ ಖುಷಿಯಾಗಿದ್ದೆವು. ಅಷ್ಟಕ್ಕೂ  ನಾವು ನಮ್ಮ ರಿಲೇಷನ್​ಶಿಪ್​​ನಲ್ಲಿ ಮುಂದಿನ ಹಂತಕ್ಕೆ ಹೋಗಿದ್ದು ಮಕ್ಕಳನ್ನು ಮಾಡಿಕೊಳ್ಳಲು  ಮಾತ್ರ ಎಂದಿದ್ದರು. ಇದು ಕೂಡ ಸಕತ್​ ಟ್ರೋಲ್​ ಆಗಿತ್ತು. 

ದಾವೂದ್​ಗೆ ಬಾಲಿವುಡ್​ ಲಿಂಕ್​? ಆತ್ಮಕಥೆಯಲ್ಲಿ ನಟ ರಿಷಿ ಕಪೂರ್​ ಬಹಿರಂಗಪಡಿಸಿದ್ದರೊಂದು ಸತ್ಯ!

Follow Us:
Download App:
  • android
  • ios