Asianet Suvarna News Asianet Suvarna News

ರಾಹುಲ್​ ಗಾಂಧಿಯನ್ನು ಮದ್ವೆಯಾಗುವೆ ಎಂದಿದ್ದ ನಟಿ ಶೆರ್ಲಿನ್ ಈಗ 2ನೇ ಪತ್ನಿ ಬಗ್ಗೆ ಮಾತಾಡಿದ್ದಾರೆ ಕೇಳಿ...!

ಟ್ರೋಲ್​ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಶೆರ್ಲಿನ್​ ಚೋಪ್ರಾ, 2ನೇ ಪತ್ನಿಯಾಗಿ ಹೋಗುವ ಅವಕಾಶ ಸಿಕ್ಕರೆ ಏನು ಮಾಡ್ತಾರೆ ಎಂದು ಹೇಳಿದ್ದಾರೆ ಕೇಳಿ...  
 

Sherlyn Chopra telling what she would do if   got a chance to become a second wife suc
Author
First Published Dec 19, 2023, 12:47 PM IST

ಎದೆ ಭಾಗಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು ಧಾರಾಳವಾಗಿ ಪ್ರದರ್ಶನ ಮಾಡುತ್ತಿರುವ ಕೆಲವು ನಟಿಯರ ಪೈಕಿ ಮೊದಲ ಸ್ಥಾನದಲ್ಲಿರುವವರು ನಟಿ ಶೆರ್ಲಿನ್​ ಚೋಪ್ರಾ. ಇನ್ನೋರ್ವ ಡ್ರಾಮಾ ಕ್ವೀನ್​ ರಾಖಿ ಸಾವಂತ್​ ಸ್ನೇಹಿತೆಯೆಂದು ಪೋಸ್​ ಕೊಟ್ಟು ಕೊನೆಗೆ ಆಕೆಯ ಗಂಡ ಆದಿಲ್​ ಖಾನ್​ ದುರ್ರಾನಿಯ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದ ಶೆರ್ಲಿನ್​, ಅಂಗಾಂಗ ಪ್ರದರ್ಶನದಿಂದಲೇ ಸದ್ದು ಮಾಡುತ್ತಿರುವ ನಟಿ. ಯಾವುದೇ ಸಂಕೋಚವಿಲ್ಲದೇ ತನ್ನ ಖಾಸಗಿ ಜೀವನದ ಕುರಿತು ಮಾತನಾಡಿದ್ದ ಶೆರ್ಲಿನ್​,  ಹಣಕ್ಕಾಗಿ ಹಲವು ಜನರೊಂದಿಗೆ ಮಲಗಿರುವುದಾಗಿ ಹೇಳಿಕೊಂಡಿದ್ದರು.   'ನಾನು ಈ ಹಿಂದೆ ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ, ನಿಮ್ಮನ್ನು ನಿರಾಶೆಗೊಳಿಸಿದ್ದಕ್ಕಾಗಿ ಕ್ಷಮಿಸಿ, ಆದರೆ ನಾನು ಇನ್ನು ಮುಂದೆ ಹಣಕ್ಕಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ' ಎಂದು ಹೇಳಿದ್ದರು. ಅದೇ ಇನ್ನೊಮ್ಮೆ,  ರಾಹುಲ್ ಗಾಂಧಿಯವರನ್ನು ಮದುವೆಯಾಗಲು ರೆಡಿ ಎಂದು ಮಾಧ್ಯಮಗಳ ಮುಂದೆ ಹೇಳಿದ್ದ ನಟಿ,   ಒಂದು ಕಂಡೀಷನ್​ ಹಾಕಿದ್ರು. ಅದೇನೆಂದ್ರೆ,  ರಾಹುಲ್ ಗಾಂಧಿಯವರನ್ನು ಮದ್ವೆಯಾಗಲು ರೆಡಿ. ಆದ್ರೆ  ನನ್ನ ಸರ್​ನೇಮ್​ ಮಾತ್ರ ಗಾಂಧಿ ಆಗಲ್ಲ, ಚೋಪ್ರಾನೇ ಆಗಿರುತ್ತದೆ. ಈ ಕಂಡೀಷನ್​ಗೆ ಒಪ್ಪಿದ್ರೆ ನಾನು ರೆಡಿ ಎಂದಿದ್ದರು.
 
ಅದಾದ ಬಳಿಕ,  ಉದ್ಯಮಿಯೊಬ್ಬರ ವಿರುದ್ಧ  ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಸುದ್ದಿಯಾಗಿದ್ದರು, ಪತ್ರಿಕಾಗೋಷ್ಠಿ ಕರೆದಿದ್ದ ನಟಿ, ತಮ್ಮ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಸವಿಸ್ತಾರವಾಗಿ ಹೇಳಿಕೆ ನೀಡಿದ್ದರು. ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ (Sunil Lodha) ತಮ್ಮ ವಿರುದ್ಧ ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿರುವ ಬಗ್ಗೆ ಅವರು ಹೇಳಿದ್ದರು. ವಿಡಿಯೋ ಚಿತ್ರೀಕರಣಕ್ಕೆ ಹಣ ನೀಡುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದು, ಅದನ್ನು ವಿರೋಧಿಸಿದಾಗ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ  ನಟಿ ದೂರಿನಲ್ಲಿ ತಿಳಿಸಿದ್ದರು.  

ರಾಹುಲ್ ಗಾಂಧಿ ಮದ್ವೆಯಾಗಲು ರೆಡಿ, ಆದ್ರೆ ಒಂದು ಕಂಡೀಷನ್;ಸಂಚಲನ ಸೃಷ್ಟಿಸಿದ ಶೆರ್ಲಿನ್ ಚೋಪ್ರಾ!

ಇವೆಲ್ಲಾ ಹೈಡ್ರಾಮಾ ನಡುವೆಯೇ ಇದೀಗ ಮದುವೆಯ ಕುರಿತು ನಟಿ ಮಾತನಾಡಿದ್ದಾರೆ. 36 ವರ್ಷದ ಶೆರ್ಲಿನ್​ಗೆ ಈಗ ಮದುವೆಯಾಗುವುದಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ. ಇದಾಗಲೇ ಹಲವು ನಟರ ಜೊತೆ ಅದರಲ್ಲಿಯೂ ವಿವಾಹಿತರ ಜೊತೆ ಈಕೆಯ ಹೆಸರು ಥಳಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಇದಾಗಲೇ ತಾವು ಹಲವರ ಜೊತೆ ಮಲಗಿದ್ದರ ಬಗ್ಗೆಯೂ ನಟಿ ಹೇಳಿಕೊಂಡಿದ್ದ ಕಾರಣದಿಂದ ಎರಡನೆಯ ಪತ್ನಿಯಾಗಿ ಹೋಗುವುದಾದರೆ ಏನು ಮಾಡುವಿರಿ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ನಟಿ, ಯಾರದ್ದೋ ಮನೆಯನ್ನು ಹಾಳು ಮಾಡಿ ಸಂಸಾರ ಒಡೆದು ಎರಡನೆಯ ಪತ್ನಿಯಾಗಿ ಹೋಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಈಕೆಯ ಈ ಮಾತಿಗೆ ಹಲವು ಕಮೆಂಟಿಗರು ಕಾಲೆಳೆದಿದ್ದಾರೆ. ಮಹಾತಾಯಿ ನಿನ್ನನ್ನು ಎರಡನೆಯ ಪತ್ನಿಯಲ್ಲ, ಯಾವ ಪತ್ನಿಯಾಗಿ ಸ್ವೀಕರಿಸುವ ಗಂಡಸರೂ ಬಹುಶಃ ಇರಲಿಕ್ಕಿಲ್ಲ ಎಂದು ಹಲವರು ಹೇಳಿದ್ದರೆ, ನೀನು ಪತ್ನಿಯಾಗಲು ಲಾಯಕ್ಕೇ ಇಲ್ಲ, ನೀನು ಏನಿದ್ದರೂ... ಎನ್ನುವ ಮೂಲಕ ಹಲವರ ಜೊತೆ ಮಲಗಿದ್ದ ಬಗ್ಗೆ ವಿಷಯ ಕೆದಕಿದ್ದಾರೆ. ಇನ್ನು ಕೆಲವರು ಮೊದಲು ಸರಿಯಾದ ರೀತಿಯಲ್ಲಿ ಡ್ರೆಸ್​ ಮಾಡಿಕೊಳ್ಳುವುದನ್ನು ಕಲಿತುಕೋ, ಆಮೇಲೆ ಮದ್ವೆಯಾಗುವ ಬಗ್ಗೆ ಮಾತನಾಡು ಎಂದಿದ್ದಾರೆ. ಈಕೆ ಮದ್ವೆಯಾಗಿ ಸಂಸಾರ ನಡೆಸುವ ರೀತಿಯಲ್ಲಿ ಯಾರಿಗಾದ್ರೂ ಕಾಣಿಸುತ್ತದೆಯೇ ಎಂದು ಇನ್ನು ಹಲವರು ಪ್ರಶ್ನಿಸಿದ್ದಾರೆ. ಹೀಗೆ ಸಾವಿರಾರು ಕಮೆಂಟಿಗರು ನಟಿಗೆ ಹಲವಾರು ರೀತಿಯಲ್ಲಿ ತಿವಿದು ಪ್ರತಿಕ್ರಿಯೆ ನೀಡಿದ್ದಾರೆಯೇ ವಿನಾ, ಎರಡನೆಯ ಪತ್ನಿಯಾಗುವ ಬಗ್ಗೆ ನಟಿ ಕೊಟ್ಟ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದವರು ಯಾರೂ ಇಲ್ಲ ಎಂದೇ ಹೇಳಬಹುದು. ಅಂದಹಾಗೆ ನಟಿ ಹಿಂದೊಮ್ಮೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರನ್ನು ಮದ್ವೆಯಾಗುವುದಾಗಿ ಹೇಳಿಕೆ ನೀಡಿದ್ದರು. 

ಪಾಪ ನಟಿ ಶೆರ್ಲಿನ್‌ ಚೋಪ್ರಾ ಎಡವಿ ಬಿದ್ರೆ ಪ್ಲಾಸ್ಟಿಕ್‌ ಬೀಳೋದಮ್ಮಾ ಹುಷಾರ್‌ ಅನ್ನೋದಾ ನೆಟ್ಟಿಗರು?

 

Follow Us:
Download App:
  • android
  • ios